ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ ಅರ್ಜೆಂಟೀನಾದ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಭಾರತಕ್ಕೆ ಇಂದು ಭೇಟಿ ನೀಡುತ್ತಿದ್ದಾರೆ.

ಭಾರತದ ಫುಟ್ಬಾಲ್ ಪ್ರಿಯರ ಜೀವಮಾನದ ಕನಸು ನನಸಾಗಲಿದೆ. ಹೈದರಾಬಾದ್​ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೆಸ್ಸಿ ತಮ್ಮ ಅದ್ಭುತ ಪ್ರದರ್ಶನ ಪ್ರದರ್ಶಿಸಲಿದ್ದಾರೆ. ಈ ಪ್ರವಾಸದ ಭಾಗವಾಗಿ, ಅವರು ಕೋಲ್ಕತ್ತಾ, ಮುಂಬೈ, ನವದೆಹಲಿ ಮತ್ತು ಹೈದರಾಬಾದ್‌ಗೆ ಭೇಟಿ ನೀಡಲಿದ್ದಾರೆ.

2011ರ ನಂತರ ಮೊದಲ ಬಾರಿಗೆ ಮೆಸ್ಸಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಇದು ಮೆಸ್ಸಿ ಅವರ ಭಾರತದ ಎರಡನೇ ಭೇಟಿಯಾಗಿದೆ. ಈ ಪ್ರವಾಸದಲ್ಲಿ ಯಾವುದೇ ಸ್ಪರ್ಧಾತ್ಮಕ ಫುಟ್​ಬಾಲ್ ಪಂದ್ಯಗಳನ್ನು ಆಯೋಜನೆ ಮಾಡಿಲ್ಲ. ಈ ಬಾರಿ, ‘ಗೋಟ್ ಇಂಡಿಯಾ ಟೂರ್ 2025’ ಅಡಿಯಲ್ಲಿ ಕೋಲ್ಕತ್ತಾದಲ್ಲಿ ಶನಿವಾರ ಪ್ರಾರಂಭವಾಗಿ ಸೋಮವಾರ ದೆಹಲಿಯಲ್ಲಿ ಕೊನೆಗೊಳ್ಳಲಿದೆ.

ಈ ಪ್ರವಾಸದಲ್ಲಿ ಮೆಸ್ಸಿ ಯಾವುದೇ ಪಂದ್ಯವನ್ನು ಆಡುವುದಿಲ್ಲ. ಅವರ ಪ್ರವಾಸವು ಪ್ರಚಾರ ಮತ್ತು ವಾಣಿಜ್ಯ ಉದ್ದೇಶದಿಂದ ನಿಯೋಜನೆಗೊಂಡಿದೆ.

ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಸಂಘಟಕರು 78,000 ಆಸನಗಳನ್ನು ತೆರೆದಿದ್ದು, ಶನಿವಾರ ಬೆಳಗ್ಗೆ 45 ನಿಮಿಷಗಳ ಪ್ರದರ್ಶನದ ಟಿಕೆಟ್ ಬೆಲೆ 7,000 ರೂಪಾಯಿಗೆ ಏರಿದೆ. ಕೋಲೊತ್ತಾ, ಹೈದರಾಬಾದ್, ಮುಂಬಯಿ ಮತ್ತು ದಿಲ್ಲಿಗೆ ಭೇಟಿ ನೀಡಲಿರುವ ಮೆಸ್ಸಿ, 72 ಗಂಟೆಗಳಿಗಿಂತ ಕಡಿಮೆ ಕಾಲ ಭಾರತಕ್ಕೆ ಭೇಟಿ ನೀಡಲಿದ್ದಾರೆ.

ಉದ್ಯಮಿಗಳು, ಚಿತ್ರನಟರೊಂದಿಗೆ ಸಭೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಯೋಜಿತ ಸಭೆ ನಡೆಸಲಿದ್ದಾರೆ. ನಾಳೆ ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಪಂದ್ಯ ನಡೆಯಲಿದೆ. ಈ ವೇಳೆ ಸೂರ್ಯಕುಮಾರ್ ಯಾದವ್ ಹಾಗೂ ಶುಬ್ಮನ್ ಗಿಲ್​​ರನ್ನು ಭೇಟಿಯಾಗುವ ಸಾಧ್ಯತೆ ಇದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ