ರಾಜಸ್ಥಾನಿನ ಕೋಟಾ ಜಿಲ್ಲೆಯಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಅತಿ ಹೆಚ್ಚಾದಾಗ, ಸರ್ಕಾರ ಅದನ್ನು ಬಲು ಚಾತುರ್ಯದಿಂದ ತನ್ನ ಸಮರ್ಥಕ ಮೀಡಿಯಾಗಳ ನೆರವಿನಿಂದ, ತಾಯಿತಂದೆ ಹೇರುತ್ತಿರುವ ಒತ್ತಡ ಅತ್ಯಧಿಕ ಹಾಗೂ ಅಲ್ಲಿನ ಟ್ರೇನಿಂಗ್‌ ಸೆಂಟರ್‌ ಗಳೇ ಕಿಲ್ಲಿಂಗ್‌ ಸೆಂಟರ್‌ ಗಳಾಗಿವೆ ಎಂದು ಗೂಬೆ ಕೂರಿಸಿ ಕೈ ತೊಳೆದುಕೊಂಡಿದೆ. ಈ ಕೋಟಾ ಜಿಲ್ಲೆಯ 15-22 ವರ್ಷದ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಯುವಜನತೆ, ತಾಯಿ ತಂದೆಯರಿಂದ ದೊಡ್ಡ ಮೊತ್ತ ವಸೂಲಿ ಮಾಡಿ ಪರೀಕ್ಷೆಗಳ ತಯಾರಿಗಾಗಿ ಅಹರ್ನಿಶಿ ಹೋರಾಡುತ್ತಾರೆ. ಉತ್ತಮ ಅಂಕ ಗಳಿಸಿ, ಉಚ್ಚ ಮಟ್ಟದ ಕಾಲೇಜ್‌ ಸೇರುವುದೇ ಅವರ ಗುರಿ.

ಇಂಥ ಯುವಜನತೆಯ ಪೋಷಕರು ತಮ್ಮ ಮಕ್ಕಳು ಏಳಿಗೆಯ ದಾರಿ ಹಿಡಿಯಲಿ ಎಂಬ ಒಂದೇ ಉದ್ದೇಶಕ್ಕಾಗಿ ಹೊಟ್ಟೆ ಬಟ್ಟೆ ಕಟ್ಟಿ, ಸಾಲ ಸೋಲ ಮಾಡಿ, ದೊಡ್ಡ ಮೊತ್ತದ ಬಂಡವಾಳವನ್ನು ಇಂಥ ಟ್ರೇನಿಂಗ್‌ ಸೆಂಟರ್‌ ಗಳಿಗೆ ಸುರಿಯುತ್ತಾರೆ. ಈ ಸಲುವಾಗಿ ಎಷ್ಟೋ ಮಂದಿ ತಮ್ಮ ಸ್ವಂತ ಮನೆಮಠ, ಹೊಲಗದ್ದೆ ಮಾರಿಕೊಂಡರೂ ಇದ್ದಾರೆ. ಇತರ ದೂರದ ಗ್ರಾಮಗಳಿಂದ ಬರುವ ಹೆಣ್ಣುಮಕ್ಕಳು 6-8 ತಿಂಗಳ ನಗರ ವಾಸಕ್ಕಾಗಿ ತಾಯಿಯನ್ನೂ ಕರೆತಂದು, ದುಬಾರಿ ಬಾಡಿಗೆ ತೆತ್ತು ಇಕ್ಕಟ್ಟಾದ ಗಲ್ಲಿಗಳಲ್ಲಿ ಹೇಗೋ ದಿನ ತಳ್ಳುತ್ತಾರೆ.

ಇಲ್ಲಿನ ಪ್ರಧಾನ ಸಮಸ್ಯೆ ಎಂದರೆ, ಎಷ್ಟು ವಿದ್ಯಾರ್ಥಿಗಳು ಪಿಯುಸಿ ಮುಗಿಸಿ ಸೀಟುಗಳಿಗಾಗಿ ಧಾವಿಸುತ್ತಾರೋ, ಅಸಲಿಗೆ ಕಾಲೇಜಿನಲ್ಲಿ ಅಷ್ಟು ಸೀಟು ಲಭ್ಯವಿಲ್ಲ. ಕಾಂಗ್ರೆಸ್‌ ಸರ್ಕಾರವೇನೋ ಸಮಾಜವಾದಿ ದೃಷ್ಟಿಕೋನದಿಂದ ಅಲ್ಲಿ ಪಿಯು ಕಾಲೇಜುಗಳನ್ನು ನಾಯಿಕೊಡೆಗಳಂತೆ ಬೆಳೆಯಲು ಬಿಟ್ಟಿತು. ದುಬಾರಿ ಸಂಬಳ ತೆತ್ತು ಶಿಕ್ಷಕರ ನೇಮಿಸಿತು. ದೊಡ್ಡ ಕಟ್ಟಡಗಳು ಇದ್ದ. ನಂತರ ಬಂದ ಬಿಜೆಪಿ ಸರ್ಕಾರ ಅದೃಷ್ಟಕ್ಕೆ ಇಂಬುಕೊಟ್ಟಾಗ, ಈ ಸರ್ಕಾರಿ ಕಾಲೇಜುಗಳು ಗಬ್ಬೆದ್ದು ಹೋದವು. ಈ ಸ್ಥಳಗಳಲ್ಲಿ ಆಂಗ್ಲ ಖಾಸಗಿ ಶಾಲೆಗಳದ್ದೇ ದರ್ಬಾರು ನಡೆಯತೊಡಗಿತು. ಇಂತೂ ಸಾಮಾನ್ಯರ ಪಾಲಿಗೆಟುಕದ ಗಗನಕುಸುಮಗಳು! ಮುಗಿಬಿದ್ದ ಮಧ್ಯಮ ವರ್ಗದ ಜನ ಇದಕ್ಕೆ ಮಕ್ಕಳನ್ನು ಸೇರಿಸಿದರು.

ನಮ್ಮ ದೇಶದಲ್ಲಿ ಪ್ರತಿ ವರ್ಷ ಪಿಯು ಮುಗಿಸುವವರ ಸಂಖ್ಯೆ 1 ಕೋಟಿಗೂ ಮೀರಿದ್ದು. 2022ರಲ್ಲಿ 1 ಕೋಟಿ 43 ಲಕ್ಷ ಪಿಯು ಪರೀಕ್ಷೆಗೆ ಕುಳಿತು, ಅದರಲ್ಲಿ 1 ಕೋಟಿ 24 ಲಕ್ಷ ಮಂದಿ ಪಾಸಾದರು.

ಇಷ್ಟೂ ಮಂದಿಗೆ ಮುಂದೆ ಉಚಿತ ಅಥವಾ ಅಪೇರ್ಡಿಬಿಲಿಟಿ ದೃಷ್ಟಿಯಿಂದ ಉನ್ನತ ವ್ಯಾಸಂಗ ಮುಂದುವರಿಸುವಂತೆ ಮಾಡಲು ಸರ್ಕಾರಕ್ಕೆ ತಾಕತ್ತಿದೆಯೇ? ಸರ್ಕಾರ ಇಂಥ ವಿಷಯದ ಕಡೆ ಗಮನ ಹರಿಸುವುದೇ ಇಲ್ಲ. ಏಕೆಂದರೆ ಆಡಳಿತ ನಡೆಸುವವರು ಇಷ್ಟೂ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಹೊಂದಲಿ ಎಂದು ಬಯಸುವುದೇ ಇಲ್ಲ. ಹೀಗಾಗಿ ಇಂಥ ಉನ್ನತ ವ್ಯಾಸಂಗದ ಕಡಿಮೆ ಫೀಸಿನ ಮೆಡಿಕಲ್ ಕಾಲೇಜುಗಳಲ್ಲಿ ಕೇವಲ 8,500 ಸೀಟುಗಳು ಮಾತ್ರ ಲಭ್ಯ ಹಾಗೂ ಖಾಸಗಿ ಕಾಲೇಜುಗಳಲ್ಲಿ 47,415 ಸೀಟು ಲಭ್ಯ, ಅದೂ ಲಕ್ಷಾಂತರ ಖರ್ಚು ಮಾಡಿದರೆ ಮಾತ್ರ!

ಅದೇ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ 15,53,809 ಸೀಟುಗಳಿದ್ದು, ಅಂಥ ಸಂಸ್ಥೆಗಳಲ್ಲಿ ಅತಿ ಕಷ್ಟದಿಂದ 10-12 ಸಾವಿರ ಸೀಟು ಲಭ್ಯವಿದ್ದು, ಅಲ್ಲಿಯೂ 10-15 ಲಕ್ಷ ಫೀಸ್‌ ತೆರಬೇಕಾಗುತ್ತದೆ!

ಸರ್ಕಾರಿ ಕಲಾ ಕಾಲೇಜುಗಳ ಸ್ಥಿತಿಯಂತೂ ಇದಕ್ಕಿಂತ ಘನಘೋರ! ಅಲ್ಲಿನ ಆಂಗ್ಲ ಶಿಕ್ಷಣವಂತೂ ದೇವರಿಗೇ ಪ್ರೀತಿ! ಭಾರತೀಯ ಭಾಷೆ, ತತ್ವಶಾಸ್ತ್ರ, ವಾಣಿಜ್ಯ ಯಾವುದನ್ನೂ ಕೇಳಬೇಡಿ. ಇಲ್ಲಿ ದಾಖಲಾತಿ ಏನೋ ನಡೆಯ್ತುದೆ, ಮಿಕ್ಕದ್ದೆಲ್ಲ ಖೋತಾ! ಇವು ಸಹ 1 ಕೋಟಿ 44 ಲಕ್ಷ ಯುವಜನತೆಗೆ ಎಲ್ಲಿಂದ ಸಾಕಾದೀತು? ಉತ್ತಮ ಕಾಲೇಜುಗಳ ಕೊರತೆ ಇಷ್ಟು ತೀವ್ರವಾಗಿದ್ದರೆ ದೋಷ ಪೋಷಕರದ್ದೋ, ಟ್ರೇನಿಂಗ್‌ ಸಂಸ್ಥೆಗಳದ್ದೋ? ಇಂಥ ಖಾಸಗಿ ಸಂಸ್ಥೆಗಳು, ಸರ್ಕಾರಿ, ಖಾಸಗಿ ಶಾಲೆಗಳ ಅಸಹಾಯಕ, ಬುನಾದಿರಹಿತ ಶಿಕ್ಷಣದ ಗ್ಯಾಪ್‌ ತುಂಬುತ್ತಿವೆಯಷ್ಟೆ. ಈ ಗ್ಯಾಪ್‌ ಉಂಟಾಗಿದ್ದೇ ಸರ್ಕಾರದ ಕೊಡುಗೆಯಿಂದ. ಅದು ಟ್ಯಾಕ್ಸ್ ಸಂಗ್ರಹಿಸುವ ಅಧಿಕಾರಿಗಳ ದೊಡ್ಡ ದಂಡೇ ಇರಿಸಿಕೊಂಡು ರೈಡ್‌ ಮಾಡಿಸುತ್ತದೆಯೇ ಹೊರತು ಶಿಕ್ಷಣ ಸರಿಯಿದೆಯೇ ಎಂದು ಯೋಚಿಸುವುದಿಲ್ಲ.

ಶಿಕ್ಷಣ ಈ ರೀತಿ ಮಾಫಿಯಾ ಆಗಲು ಸರ್ಕಾರವೇ ಹೊಣೆ. ಒಂದು ಕಡೆ ಉನ್ನತ ಸಂಸ್ಥೆಗಳ ಕೊರತೆ, ಮತ್ತೊಂದು ಕಡೆ ಸರ್ಕಾರಿ ಶಾಲೆಗಳ ಹೀನಾಯ ಶಿಕ್ಷಣ. ಸರ್ಕಾರಿ ಶಾಲೆಯ ಫೇಲಾದರೇ ನೂಹ್‌ ನಂಥ ಯಾತ್ರೆಗಳಲ್ಲಿ ಧರ್ಮದ ಹೆಸರಲ್ಲಿ ತಲೆ ಒಡೆಯಲು ಮುಂದಾಗುತ್ತಾರೆ. ಅಂಥವರಿಗೆ ಕೆರಿಯರ್‌ ರೂಪಿಸಿಕೊಳ್ಳುವ ಅವಕಾಶ ಸಿಕ್ಕಿದ್ದರೆ ಮೂಢನಂಬಿಕೆಗಳ ಮಹಾಪೂರದ ಕಾಡಿ, ಮಂದಿರಗಳ ಮೆರವಣಿಗೆ, ಧರ್ಮ ಯಾತ್ರೆಗಳು ಎಷ್ಟೋ ಕಡಿಮೆ ಆಗುತ್ತಿತ್ತು.

ಪೋಷಕರು ಸರ್ಕಾರದ ಈ ಕೈಲಾಗದತನಕ್ಕೆ ಬಲಿಯಾಗುತ್ತಿದ್ದಾರೆ. ಟ್ರೇನಿಂಗ್‌ ಸಂಸ್ಥೆಗಳು, ಸರ್ಕಾರ ಅರೆ ಸುಟ್ಟುಬಿಟ್ಟ ರೊಟ್ಟಿಗಳನ್ನು ನೀಟಾಗಿ ಬೇಯಿಸಿಕೊಡುವೆ ಎಂದು ನಂಬಿಸಿ, ತಾನು ಮಾತ್ರ ಹಣ ಗಳಿಸುತ್ತಿದೆ, ಮಧ್ಯಮ ವರ್ಗ ಅಸಲಿಗೆ ಸುಟ್ಟುಹೋಗುತ್ತಿದೆ! ಇಂಥ ಸಂಸ್ಥೆಗಳು ನಿಯಂತ್ರಣ ಸಡಿಲ ಬಿಟ್ಟರೆ, ಅದರ ಫೀಸ್‌ ಹೆಚ್ಚುತ್ತದೆ ಅಥವಾ ಅದರ ವಿದ್ಯಾರ್ಥಿಗಳು ಹಿಂದುಳಿಯುತ್ತಾರೆ.

ಕೆಲವು ಪರೀಕ್ಷೆಗಳ ಫಲಿತಾಂಶದ ಮರುದಿನ, ಎಲ್ಲಾ ಪೇಪರ್‌ ಗಳಲ್ಲೂ ಇಂಥ ಸಂಸ್ಥೆಗಳ ಜಾಹೀರಾತು ತುಂಬಿ ತುಳುಕುತ್ತಿದ್ದು, ಅದರಲ್ಲಿ ಪಾಸಾದ ಯುವಜನತೆಯ ಫೋಟೋ ಇರುತ್ತದೆ. ಹೊಸಬರಿಗೆ, ನೀವು ಇರುವಂತೆಯೇ ಲಕ್ಷಾಂತರ ಖರ್ಚು ಮಾಡಿ ಯಶಸ್ವಿಗಳಾಗಿ ಎಂದು ಆಮಿಷ ಒಡ್ಡಲು! ಈ ದುಃಸ್ಥಿತಿ ತಂದವರು ಪೋಷಕರೋ, ಖಾಸಗಿ ಕೋಚಿಂಗ್‌ ಸಂಸ್ಥೆಗಳೋ? ಅವರಿಬ್ಬರೂ ಅಲ್ಲ…. ಕೇವಲ ಸರ್ಕಾರ ಮಾತ್ರ! 1 ಕೋಟಿ 44 ಲಕ್ಷ ಯುವಜನತೆಗೆ ಉತ್ತಮ ಆದಾಯ ಗಳಿಸಲು ಸ್ಕಾಲರ್ ಗಳಾಗಿಸುತ್ತಿಲ್ಲ, ಕೇವಲ ತನ್ನ ಸ್ವಾರ್ಥ ಕಾಯ್ದುಕೊಳ್ಳುತ್ತಿದೆ.

ಪ್ರತಿ ತಿಂಗಳೂ 2 ಲಕ್ಷ ಕೋಟಿ ಬಾಚುವುದೊಂದೇ ಚಿಂತೆ. ಅದರಿಂದ ಮಂದಿರ ಏಳುತ್ತದೆ. ಉತ್ತಮ ಟಾರು ರಸ್ತೆ ಒದಗಿಸಿ, ಶ್ರೀಮಂತರು ತಮ್ಮ ದುಬಾರಿ ಕಾರುಗಳನ್ನು ಹಾಯಾಗಿ ಓಡಾಡಿಸಲಿ ಅಂತ.

ಇಲ್ಲಿ ಪೋಷಕರದು ಖಂಡಿತಾ ತಪ್ಪಲ್ಲ. ಈ ಸರ್ಕಾರ ಅವರಿಗೇನು ಕೊಡುತ್ತಿದೆಯೋ ಅವರು ಹಾಗೆ ಇರುತ್ತಾರೆ. ಅವರು ತಮ್ಮ ವಯಸ್ಕ ಮಕ್ಕಳ ಜೀವನವನ್ನು ಪೊಳ್ಳು ಸಿದ್ಧಾಂತಗಳಿಗಾಗಿ ಬಲಿದಾನ ಮಾಡುತ್ತಿದ್ದಾರೆ, ಆದರೆ ಹಾಗೆ ಆಗಬಾರದು. ತಮ್ಮ ಖರ್ಚಿನ ಸಲುವಾಗಿ ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಈ ಒತ್ತಡದಿಂದಾಗಿ ಯುವಜನತೆ ಆತ್ಮಹತ್ಯೆ ಮಾಡಿಕೊಂಡರೆ, ಸರ್ಕಾರ ನಡುವೆ ಎಲ್ಲೋ ಏನೋ ಒಂದಿಷ್ಟು ಕಾನೂನಿನ ಬ್ಯಾಂಡ್‌ ಏಡ್‌ ಹಾಕಿ ಕಣ್ಣೊರೆಸುವ ನಾಟಕವಾಡುತ್ತದೆ.

ಪೋಷಕರು ಇಂಥ ಗಿಲ್ಟ್ ನಿಂದ ದೂರ ಇರಬೇಕು, ತಮ್ಮ ಮಕ್ಕಳ ಭವಿಷ್ಯ ಸುಧಾರಿಸುವಂಥ ಕ್ರಮ ಕೈಗೊಳ್ಳುವ ಕಡೆ ಮಾತ್ರ ಗಮನಹರಿಸಬೇಕು. ಮಕ್ಕಳ ಹಠಕ್ಕಾಗಿ ಇಂಥ ದುಬಾರಿ ಕಾಲೇಜು ಎಡತಾಕಿ, ಅವರ ಖುಷಿ ಕಂಡು ಇಂದು ಸಂತಸಪಟ್ಟರೆ, ಮುಂದಿನ 50 ವರ್ಷ ಅವರು ಅಳುತ್ತಲೇ ಇರಬೇಕು.

students_kota-2

ಹೆಂಗಸರ ಬಾಯಿ ಮುಚ್ಚಿಸುವುದಕ್ಕಾಗಿ!

ಕಾಶ್ಮೀರ ಹಾಗೂ 3 ಬಾರಿ ತಲಾಕ್‌ ಹೇಳುವ ಪ್ರಕರಣಗಳ ಹಾಗೇ ಯೂನಿಫಾರ್ಮ್ ಸಿವಿಲ್ ‌ಕೋಡ್‌ ನ ವಿಷಯ ಕಂದಾಚಾರಿ ಹಿಂದೂಗಳಿಗೆ ಬಲು ಇಷ್ಟವಾಗುತ್ತದೆ. ಮುಸ್ಲಿಂ ಗಂಡಸರು 3-4 ಸಲ ಮದುವೆಯಾಗಿ ಮೋಜು ಉಡಾಯಿಸುತ್ತಿದ್ದಾರೆ, ಮಕ್ಕಳು ಹೆಚ್ಚಿಸುತ್ತಿದ್ದಾರೆ ಅನಿಸುತ್ತದೆ. ಕಾನೂನಿನಡಿ ಮುಸ್ಮಾನರಿಗೆ ಒಂದೇ ಮದುವೆಯ ಲಿಮಿಟ್‌ ಬಂದುಬಿಟ್ಟರೆ, ಈ ಸಮಾಜದ ಯಾವ ಧರ್ಮದವರೇ ಆಗಲಿ, 2 ಸಲ ಮದುವೆ ಆಗುವುದನ್ನು ತಪ್ಪಿಸದು, ಎಂಬುದನ್ನು ಮರೆತುಬಿಡುತ್ತಾರೆ. ಮುಸ್ಲಿಮರ ಮೊದಲ ಪತ್ನಿ ದುಡಿಯುವ, ಮನೆ ನಡೆಸುವ ತನ್ನ ಪತಿಯನ್ನು ಜೇಲಿಗೆ ಕಳುಹಿಸಿ, ತಾನೂ ಒಬ್ಬಂಟಿ ಆಗುತ್ತಾಳೆ ಎಂಬುದನ್ನು ಕಡೆಗಣಿಸುತ್ತಾರೆ.

ಪ್ರತಿ ಸಮಾಜದಲ್ಲೂ ಸುಧಾರಣೆ ಎಂಬುದು ಆಗುತ್ತಿರಬೇಕು. ಈ ವಿಶ್ವ ತಾರ್ಕಿಕ, ಸಮಾನತೆಯ ಗುರಿಯೆಡೆಗೆ ಧಾವಿಸುತ್ತಿರಬೇಕು. ಆದರೆ ಇಂದಿನ ಹಿಂದೂ ಕೌಟುಂಬಿಕ ಕಾನೂನು ಇನ್ನೂ ಪೌರಾಣಿಕ ನಿಯಮಗಳನ್ನೇ ಅನುಸರಿಸುತ್ತಿದೆ. ಈ ಭಾಗವನ್ನು ಮುಟ್ಟುವ ಯತ್ನವನ್ನೂ ಮಾಡುವುದಿಲ್ಲ, ಏಕೆಂದರೆ ಇದರಲ್ಲಿ ಧರ್ಮನಿಷ್ಠರ ದೈನಂದಿನ ಆದಾಯದ ಸಾಲು ಅಡಗಿದೆ.

ಜಾತಕಗಳ ಹೊಂದಾಣಿಕೆ ಇಲ್ಲದೆ ಇಂದಿಗೂ ಹಿಂದೂ ಕುಟುಂಬಗಳು ಮದುವೆ ಮಾಡಿಸುತ್ತಿವೆಯೇ? ಖುಷಿ ಖುಷಿಯಾಗಿ ಇತರ ಜಾತಿಗಳವರ ಜೊತೆ ಮದುವೆ ಮಾಡಿಸುತ್ತಿವೆಯೇ? 1956-2005ರವರೆಗಿನ ಕಾನೂನು ಅನುಸರಿಸಿ ಎಷ್ಟು ಮಂದಿ ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಪಾಲು ಸಿಕ್ಕಿದೆ?

ಇವತ್ತಿಗೂ ಸಹ ಹಿಂದೂ ಕುಟುಂಬಗಳು ಗಂಡು ಮಗುವೇ ಬೇಕು ಎಂದು ಬಯಸುತ್ತಿಲ್ಲವೇ? ಎಷ್ಟು ಮಂದಿ ವಿವಾಹಿತೆಯರು ಪತಿ ತೊರೆದಾಗ ಇಂದಿಗೂ ತವರಿಗೆ ಮರಳುತ್ತಿಲ್ಲವೇ? ಸಮಾನತೆಯ ಮಾತು ಎತ್ತಿ ಹಿಡಿಯುವವರು, ಬಡ ಹಿಂದೂ ದಲಿತ ಕುಟುಂಬಗಳಲ್ಲಿ ಇಂದಿಗೂ 2 ಕ್ಕಿಂತ ಹೆಚ್ಚು ಮಕ್ಕಳಾಗುತ್ತಿಲ್ಲ ಎಂದು ಸಾಬೀತು ಪಡಿಸಬಲ್ಲರೇ?

ಕಾನೂನಿನಲ್ಲಿ ಬದಲಾವಣೆ ಎಂಬುದು ಸಮಾಜದ ಬೇಡಿಕೆಯಿಂದ ಮಾತ್ರ ಆಗಬೇಕು. ಈ ವಿಜ್ಞಾನ ಯುಗದಲ್ಲೂ ಚೇರ್ಮನ್‌ ಪೂಜೆ ಪುನಸ್ಕಾರ ನಂಬುತ್ತಾ, ಯಶಸ್ವಿ ಚಂದ್ರಯಾನ-3 ಪ್ರಾಜೆಕ್ಟ್ ನ ಧನ್ಯವಾದವನ್ನು ಯಾವುದೋ ಮಂದಿರಕ್ಕೆ ಸಲ್ಲಿಸುವುದು, ನಮ್ಮ ಪ್ರಧಾನಮಂತ್ರಿ ಆ ಸ್ಥಾನಕ್ಕೆ ಹಿಂದೂ ದೇವತೆ ಶಿವನ ಹೆಸರಿಡುವುದು, ನಾವು ಎಂಥ ಆಧುನಿಕತೆ ಸಮಾನತೆಯ ಮಾತನಾಡುತ್ತಿದ್ದೇವೆ ಎಂದು ಸೂಚಿಸುತ್ತದೆ!

3 ಬಾರಿ ತಲಾಕ್‌ ಹೇಳುವವರ ವಿರುದ್ಧ ಕಾನೂನು ರೂಪುಗೊಂಡಾಗ, ಹಿಂದೂಗಳ ಹೃದಯಕ್ಕೆ ತಂಪೆರೆದಂತಾಯಿತು. ಆದರೆ ಇದರಿಂದ ಮುಸ್ಲಿಂ ಹೆಂಗಸರಿಗೆ ಬಂದ ಕಷ್ಟ ಪಾರಾಯಿತು ಎಂದು ಅಂಕಿಅಂಶ ಯಾರಾದರೂ ಇಟ್ಟಿದ್ದಾರಾ? ಅದೇ ಹಿಂದೂ ಹೆಂಗಸರು ಕಾನೂನಿನ ನೆರವಿದ್ದರೂ, ವಿಚ್ಛೇದನ ನೀಡುವ/ನೀಡದಿರುವ ವಿಷಯವಾಗಿ ವರ್ಷಗಳ ಕಾಲ ಕೋರ್ಟಿನ ಕಟಕಟೆಗೆ ಎಡತಾಕುತ್ತಿದ್ದರೆ ಇದೆಂಥ ಸಮಾನತೆ?

ಇಂದು ಹಿಂದೂ ಹೆಂಗಸರಿಗೆ ಸಾಮಾಜಿಕ ಸುಧಾರಣೆಯ ಅಗತ್ಯವಿದೆ. ಇಂದು ಅವರು ತಲೆ ಮೇಲೆ ಕಲಶ ಹೊತ್ತು ಉರಿಬಿಸಿಲಲ್ಲಿ, ಬರಿಗಾಲಲ್ಲಿ ನಡೆಯುವ ಕಷ್ಟ ತಪ್ಪಬೇಕು. ಮನೆಗೆಲಸ ಬಿಟ್ಟು ಮಂದಿರದಲ್ಲಿ ಕುಳಿತು ಭಜನೆ ಮಾಡುವ ಕಷ್ಟ ತಪ್ಪಬೇಕು. ವಿಧವೆ, ವಿಚ್ಛೇದಿತೆ ಆದಾಗ ಸಮಾಜದಿಂದ ಬಹಿಷ್ಕೃತೆ ಆಗಬಾರದು. ಅಣ್ಣ ತಮ್ಮಂದಿರಂತೆ ಸಮಾನ ಆಸ್ತಿ ಬರಲಿ ಎಂದಾಗ ಇವಳಿಗೆ ಮನೆಮುರಕಿ ಎಂಬ ಪಟ್ಟ ಬೇಡ. ಅದೇ ಅಣ್ಣ ತಮ್ಮ ಕಿತ್ತಾಡಿ ಮನೆ ಮುರಿದರೆ ಕೇಳುವವರಿಲ್ಲ.

ನಮ್ಮ ದೇಶದಲ್ಲಿ ಪಿತೃಪ್ರಧಾನ ಸಮಾಜವಿದ್ದರೆ, ಬಹುಸಂಖ್ಯಾತರಾದ ಕಾರಣ, ಹಿಂದೂ ಸಮಾಜದಲ್ಲಿ ಕೇವಲ ಕೆಲವೇ ಮಂದಿ ಹೆಂಗಸರು ಮಾತ್ರ ಸುಖಿಗಳು. ಒಂದು ಭ್ರಾಂತಿಯನ್ನು ಪೂರೈಸಲು, ಒಂದು ಕಂದಕವನ್ನು ಮತ್ತಷ್ಟು ಅಗಲಿಸುವ ತಂತ್ರವಾಗಿದೆ. ಇಂಥ ಸುಧಾರಣೆಯನ್ನು ಮುಸ್ಲಿಂ ಹೆಂಗಸರು ಕೇಳಬೇಕು. ಅವರುಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸಬೇಕು. ಆದರೆ ಹಿಂದೂ ಹೆಣ್ಣು ಸುಶಿಕ್ಷಿತಳಾಗಿಯೂ ವ್ರತ, ಮಂದಿರ ಎನ್ನುತ್ತಿದ್ದರೆ ಅಂಥ ಶಿಕ್ಷಣದಿಂದ ಏನು ಲಾಭ?

ಈ ತಂತ್ರ, ಕೇವಲ ಹೆಂಗಸರ ಬಾಯಿ ಮುಚ್ಚಿಸುವುದಕ್ಕಾಗಿ ಅಷ್ಟೇ! ಈ ಗೊಂದಲದಲ್ಲಿ ಹಿಂದೂ ಕಾನೂನುಗಳ ಸುಧಾರಣೆಯ ವಿಷಯ ಅಲ್ಲಿಗೇ ಮೊಟಕು. ಯಾರು ಹಿಂದೂ ಸುಧಾರಣೆಯ ಮಾತನಾಡುತ್ತಾರೋ, ಅವರನ್ನು ಹಿಂದೂ ವಿರೋಧಿಗಳೆಂದೇ ಬಿಂಬಿಸಲಾಗುತ್ತದೆ. ಇಂಥ ಹೆಂಗಸರು ಅರ್ಬನ್‌ ನಕ್ಸಲ್, ದೇಶದ್ರೋಹಿ ಎನಿಸುತ್ತಾರೆ. ಏಕೆಂದರೆ ಅವರು ಪುರಾಣಕಾಲದ ನಿಯಮ ವಿರೋಧಿಸುತ್ತಾರೆ. ಇದರ ಜೀವಂತ ಉದಾಹರಣೆ, ಪ್ರಧಾನಿಗಳ ಹೊಸ ಸಂಸದ್‌ ಭವನದ ಉದ್ಘಾಟನೆಯಂದು ನಡೆದದ್ದು ಎಲ್ಲರಿಗೂ ಗೊತ್ತಿದೆ.

ಯೂನಿಫಾರ್ಮ್ ಮ್ಯಾನೋಬಿಲಿಟಿ ಎಕ್ಸ್ ಪೆಕ್ಟೆಬಿಲಿಟಿ ಕೋಡ್‌, ಅಸಲಿಗೆ ತರ್ಕವಿಜ್ಞಾನಿಗಳ ಆಧಾರದಿಂದ ನಡೆಯಬೇಕಿದೆ.

ಸಾಲದ ಜಾಲ ದುಬಾರಿ ಆದೀತು

ಸಿನಿಮಾಗಳಲ್ಲಿ ತೋರಿಸಲಾಗುವ ಅತಿ ದುಬಾರಿ ಸೆಟ್‌ ಹಿಂದೆ ಅತಿ ದೊಡ್ಡ ಪರಿಶ್ರಮವಿದೆ. ಪ್ರತಿ ಚಿತ್ರದಲ್ಲೂ ಆರ್ಟ್‌ ಡೈರೆಕ್ಟರ್‌ ಗೆ ಅತಿ ಮಹತ್ವ ಇರುತ್ತದೆ. ನಿತಿನ್‌ ದೇಸಾಯಿಯವರ `1942 ಎ ಲವ್ ಸ್ಟೋರಿ, ಹಂ ದಿಲ್ ‌ದೇ ಚುಕೆ ಸನಂ, ಲಗಾನ್‌, ದೇವದಾಸ್‌, ಜೋಧಾ ಅಕ್ಬರ್‌’ ಇತ್ಯಾದಿ ಚಿತ್ರಗಳ ಸೆಟ್‌ ರೂಪಿಸಿ, ಬಾಲಿವುಡ್‌ ನಲ್ಲಿ ದೊಡ್ಡ ಹೆಸರು ಮಾಡಿಕೊಂಡರು. ಆದರೆ ಯಶಸ್ಸು ತಲೆಗೇರಿದಾಗ, ಸಾಮಾನ್ಯವಾಗಿ ಜನ ನೆಲದ ಮೇಲೆ ನಡೆಯುವುದೇ ಕಡಿಮೆ.

ಈತ 2005ರಲ್ಲಿ ಮುಂಬೈನ ಕರ್ಝತ್‌ ರಸ್ತೆ ಬಳಿ 52 ಎಕರೆಯ ಒಂದು ಭವ್ಯ ಸ್ಟುಡಿಯೋ ನಿರ್ಮಿಸಿದರು, ರಾತ್ರೋರಾತ್ರಿ ತಾವು ಸಹಸ್ರ ಕೋಟ್ಯಧಿಪತಿ ಆಗುತ್ತೇವೆಂದು ಬೀಗಿದರು. ಇಲ್ಲಿ ಅನೇಕ ಚಿತ್ರ, ಧಾರಾವಾಹಿಗಳ ಶೂಟಿಂಗ್‌ ನಡೆಯಿತು. ಆದರೆ ಯಶಸ್ವಿಯಾಗಲು ಒಂದು ವ್ಯಾವಹಾರಿಕ, ಉದ್ಯಮಶೀಲ ಬುದ್ಧಿ ಬೇಕು. ಅತಿ ಎತ್ತರದ ಕನಸು ಕಾಣುತ್ತಾ, ಒಂದಿಷ್ಟು ಯಶಸ್ಸು ಗಳಿಸಿದ ತಕ್ಷಣ, ಜನ ತಮ್ಮ ಮಿತಿ ಮರೆಯುತ್ತಾರೆ. ನಿತಿನ್‌ ದೇಸಾಯಿ ಮಾಡಿದ್ದೂ ಅದೇ!

58ರ ಈತ 252 ಕೋಟಿ ರೂ.ಗಳ ಸಾಲದ ಹೊರೆ ಹೊರುವಂತಾಯಿತು. ತಮ್ಮ ಎಲ್ಲಾ ಆಸ್ತಿ ಮಾರಿದರೂ ಈ ಸಾಲದಿಂದ ಮುಕ್ತಿ ಇಲ್ಲ ಎಂದು ಗೊತ್ತಾಯಿತು. ಹೀಗಾಗಿ ಈ ಮೇಧಾವಿ, ಇನೋವೇಟಿವ್ ‌ಆರ್ಟ್‌ ಡೈರೆಕ್ಟರ್‌, ಸಾಲಗಾರರ ಕಾಟ ತಡೆಯಾಗದೆ ಆತ್ಮಹತ್ಯೆಗೆ ಶರಣಾದರು.

ಯಶಸ್ಸಿನ ಕುರಿತು ಹೆಮ್ಮೆ ಪಡುವುದು ತಪ್ಪಲ್ಲ, ಆದರೆ ಅದರಲ್ಲಿ ಅಂಧರಾಗುವುದು ತಪ್ಪು. ಇಂಥ ಮೇಧಾವಿಗಳು ಕಾಗದದ ಮೇಲೆ ಕನಸಿನ ಮಹಲು ಕಟ್ಟಿ ತೋರಿಸುತ್ತಾರೆ. ಇದು ಥೇಟ್‌ ಹಸಿ ಕಟ್ಟಿಗೆ, ಪ್ಲೈಬೋರ್ಡ್‌, ಪಿಶಿಪಿ ಮಹಲುಗಳಂತೆಯೇ ಇರುತ್ತದೆ. ಸಾಲ ಕೊಳ್ಳುವಾಗ ಅದರಿಂದ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದೇ ಭಾವಿಸುತ್ತಾರೆ. ಆದರೆ ವ್ಯಾವಹಾರಿಕ ಬುದ್ಧಿ ಕಾಲ್ಪನಿಕ ಸೆಟ್‌ ಗಳಲ್ಲಿ ಕಳೆದು ಹೋಗಿರುತ್ತದೆ.

ಇದು ನಮ್ಮ ದೇಶದ ಎಲ್ಲಾ ಕಡೆ ನಡೆಯುವಂಥದ್ದೇ. ಕೋಟ್ಯಂತರ ಮಂದಿ ಕೇಲ ದೂರಾಲೋಚನೆಯಲ್ಲೇ ಗಾಳಿಗೋಪುರ ಕಟ್ಟುತ್ತಾರೆ. ನಮ್ಮ ದೇಶದ ಔದ್ಯೋಗಿಕ ಕ್ಷೇತ್ರ ಡೋಲಾಯಮಾನವಾಗಿ ತೂಗುತ್ತಿದೆ. ಹೀಗಾಗಿ ನಿತಿನ್‌ ದೇಸಾಯಿ, ಕಾಫಿ ಡೇ ಸಿದ್ಧಾರ್ಥ್‌ ರಂಥವರಿಗೆ ಕೊರತೆ ಇಲ್ಲ. ಬ್ಯಾಂಕುಗಳೇನೋ ಕೈ ತುಂಬಾ ಸಾಲ ನೀಡುತ್ತವೆ, ಆದರೆ ಅದನ್ನು ತೀರಿಸುವ ಬಗೆ ಅರಿಯದ ಮಂದಿ, ಕೊನೆಗೆ ಸಾವಿಗೆ ಶರಣಾಗುತ್ತಾರೆ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ