ರಾಜಸ್ಥಾನಿನ ಕೋಟಾ ಜಿಲ್ಲೆಯಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಅತಿ ಹೆಚ್ಚಾದಾಗ, ಸರ್ಕಾರ ಅದನ್ನು ಬಲು ಚಾತುರ್ಯದಿಂದ ತನ್ನ ಸಮರ್ಥಕ ಮೀಡಿಯಾಗಳ ನೆರವಿನಿಂದ, ತಾಯಿತಂದೆ ಹೇರುತ್ತಿರುವ ಒತ್ತಡ ಅತ್ಯಧಿಕ ಹಾಗೂ ಅಲ್ಲಿನ ಟ್ರೇನಿಂಗ್‌ ಸೆಂಟರ್‌ ಗಳೇ ಕಿಲ್ಲಿಂಗ್‌ ಸೆಂಟರ್‌ ಗಳಾಗಿವೆ ಎಂದು ಗೂಬೆ ಕೂರಿಸಿ ಕೈ ತೊಳೆದುಕೊಂಡಿದೆ. ಈ ಕೋಟಾ ಜಿಲ್ಲೆಯ 15-22 ವರ್ಷದ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಯುವಜನತೆ, ತಾಯಿ ತಂದೆಯರಿಂದ ದೊಡ್ಡ ಮೊತ್ತ ವಸೂಲಿ ಮಾಡಿ ಪರೀಕ್ಷೆಗಳ ತಯಾರಿಗಾಗಿ ಅಹರ್ನಿಶಿ ಹೋರಾಡುತ್ತಾರೆ. ಉತ್ತಮ ಅಂಕ ಗಳಿಸಿ, ಉಚ್ಚ ಮಟ್ಟದ ಕಾಲೇಜ್‌ ಸೇರುವುದೇ ಅವರ ಗುರಿ.

ಇಂಥ ಯುವಜನತೆಯ ಪೋಷಕರು ತಮ್ಮ ಮಕ್ಕಳು ಏಳಿಗೆಯ ದಾರಿ ಹಿಡಿಯಲಿ ಎಂಬ ಒಂದೇ ಉದ್ದೇಶಕ್ಕಾಗಿ ಹೊಟ್ಟೆ ಬಟ್ಟೆ ಕಟ್ಟಿ, ಸಾಲ ಸೋಲ ಮಾಡಿ, ದೊಡ್ಡ ಮೊತ್ತದ ಬಂಡವಾಳವನ್ನು ಇಂಥ ಟ್ರೇನಿಂಗ್‌ ಸೆಂಟರ್‌ ಗಳಿಗೆ ಸುರಿಯುತ್ತಾರೆ. ಈ ಸಲುವಾಗಿ ಎಷ್ಟೋ ಮಂದಿ ತಮ್ಮ ಸ್ವಂತ ಮನೆಮಠ, ಹೊಲಗದ್ದೆ ಮಾರಿಕೊಂಡರೂ ಇದ್ದಾರೆ. ಇತರ ದೂರದ ಗ್ರಾಮಗಳಿಂದ ಬರುವ ಹೆಣ್ಣುಮಕ್ಕಳು 6-8 ತಿಂಗಳ ನಗರ ವಾಸಕ್ಕಾಗಿ ತಾಯಿಯನ್ನೂ ಕರೆತಂದು, ದುಬಾರಿ ಬಾಡಿಗೆ ತೆತ್ತು ಇಕ್ಕಟ್ಟಾದ ಗಲ್ಲಿಗಳಲ್ಲಿ ಹೇಗೋ ದಿನ ತಳ್ಳುತ್ತಾರೆ.

ಇಲ್ಲಿನ ಪ್ರಧಾನ ಸಮಸ್ಯೆ ಎಂದರೆ, ಎಷ್ಟು ವಿದ್ಯಾರ್ಥಿಗಳು ಪಿಯುಸಿ ಮುಗಿಸಿ ಸೀಟುಗಳಿಗಾಗಿ ಧಾವಿಸುತ್ತಾರೋ, ಅಸಲಿಗೆ ಕಾಲೇಜಿನಲ್ಲಿ ಅಷ್ಟು ಸೀಟು ಲಭ್ಯವಿಲ್ಲ. ಕಾಂಗ್ರೆಸ್‌ ಸರ್ಕಾರವೇನೋ ಸಮಾಜವಾದಿ ದೃಷ್ಟಿಕೋನದಿಂದ ಅಲ್ಲಿ ಪಿಯು ಕಾಲೇಜುಗಳನ್ನು ನಾಯಿಕೊಡೆಗಳಂತೆ ಬೆಳೆಯಲು ಬಿಟ್ಟಿತು. ದುಬಾರಿ ಸಂಬಳ ತೆತ್ತು ಶಿಕ್ಷಕರ ನೇಮಿಸಿತು. ದೊಡ್ಡ ಕಟ್ಟಡಗಳು ಇದ್ದ. ನಂತರ ಬಂದ ಬಿಜೆಪಿ ಸರ್ಕಾರ ಅದೃಷ್ಟಕ್ಕೆ ಇಂಬುಕೊಟ್ಟಾಗ, ಈ ಸರ್ಕಾರಿ ಕಾಲೇಜುಗಳು ಗಬ್ಬೆದ್ದು ಹೋದವು. ಈ ಸ್ಥಳಗಳಲ್ಲಿ ಆಂಗ್ಲ ಖಾಸಗಿ ಶಾಲೆಗಳದ್ದೇ ದರ್ಬಾರು ನಡೆಯತೊಡಗಿತು. ಇಂತೂ ಸಾಮಾನ್ಯರ ಪಾಲಿಗೆಟುಕದ ಗಗನಕುಸುಮಗಳು! ಮುಗಿಬಿದ್ದ ಮಧ್ಯಮ ವರ್ಗದ ಜನ ಇದಕ್ಕೆ ಮಕ್ಕಳನ್ನು ಸೇರಿಸಿದರು.

ನಮ್ಮ ದೇಶದಲ್ಲಿ ಪ್ರತಿ ವರ್ಷ ಪಿಯು ಮುಗಿಸುವವರ ಸಂಖ್ಯೆ 1 ಕೋಟಿಗೂ ಮೀರಿದ್ದು. 2022ರಲ್ಲಿ 1 ಕೋಟಿ 43 ಲಕ್ಷ ಪಿಯು ಪರೀಕ್ಷೆಗೆ ಕುಳಿತು, ಅದರಲ್ಲಿ 1 ಕೋಟಿ 24 ಲಕ್ಷ ಮಂದಿ ಪಾಸಾದರು.

ಇಷ್ಟೂ ಮಂದಿಗೆ ಮುಂದೆ ಉಚಿತ ಅಥವಾ ಅಪೇರ್ಡಿಬಿಲಿಟಿ ದೃಷ್ಟಿಯಿಂದ ಉನ್ನತ ವ್ಯಾಸಂಗ ಮುಂದುವರಿಸುವಂತೆ ಮಾಡಲು ಸರ್ಕಾರಕ್ಕೆ ತಾಕತ್ತಿದೆಯೇ? ಸರ್ಕಾರ ಇಂಥ ವಿಷಯದ ಕಡೆ ಗಮನ ಹರಿಸುವುದೇ ಇಲ್ಲ. ಏಕೆಂದರೆ ಆಡಳಿತ ನಡೆಸುವವರು ಇಷ್ಟೂ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಹೊಂದಲಿ ಎಂದು ಬಯಸುವುದೇ ಇಲ್ಲ. ಹೀಗಾಗಿ ಇಂಥ ಉನ್ನತ ವ್ಯಾಸಂಗದ ಕಡಿಮೆ ಫೀಸಿನ ಮೆಡಿಕಲ್ ಕಾಲೇಜುಗಳಲ್ಲಿ ಕೇವಲ 8,500 ಸೀಟುಗಳು ಮಾತ್ರ ಲಭ್ಯ ಹಾಗೂ ಖಾಸಗಿ ಕಾಲೇಜುಗಳಲ್ಲಿ 47,415 ಸೀಟು ಲಭ್ಯ, ಅದೂ ಲಕ್ಷಾಂತರ ಖರ್ಚು ಮಾಡಿದರೆ ಮಾತ್ರ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ