ಆಹಾ… ಎಂತಹ ಅವಕಾಶ ! : ಸಿಂಗಾಪುರದ ಇಪ್ಲೇನೆಟ್ ನ್ನು ಈ ಸಲ ಹೆರಿಟೇಜ್ ಪೇಜೆಂಟ್ ಪ್ರಸ್ತುತಪಡಿಸುತ್ತಿದ್ದಾಳೆ. ಇದರಲ್ಲಿ ಸುಂದರಿಯರಾದ ಮಿಸ್ಸು, ಮಿಸ್ಸೆಸ್ಸು ಇಬ್ಬರೂ ಸ್ಪರ್ಧಿಸಬಹುದಂತೆ! ಮದುವೆ ಆದ ಮೇಲೆ ಸೌಂದರ್ಯವೇನೂ ಮಾಸುವುದಿಲ್ಲ, ಆದರೂ ಮಿಸ್ಸು ಮಿಸ್ಸೆಸ್ಸುಗಳ ಪೈಪೋಟಿ ತಪ್ಪಿದ್ದಲ್ಲ! ಈ ಪೇಜೆಂಟ್ಸ್ ದೆಹಲಿ, ಕಾಠ್ಮಂಡು ಮೂಲದವರಾಗಿದ್ದು ಇದೀಗ ಸಿಂಗಾಪುರದಲ್ಲಿ ಸ್ವಿಮ್ ಸೂಟ್ ನಲ್ಲಿ ಅಂತಿಮ ಆಯ್ಕೆ ನಡೆಯಲಿದೆ. ನೀವು ಹೀಗೆ ಬಳಕುವ ಬಳ್ಳಿಯಂತಿದ್ದರೆ, ಒಂದು ಕೈ ಏಕೆ ಪ್ರಯತ್ನಿಸಬಾರದು?
ಡಿಸೈನ್… ಸೌಂದರ್ಯ ಯಾವುದು ನೋಡುವುದು? : ಹ್ಯಾಂಡ್ ಕ್ರಾಫ್ಟೆಡ್ ಡ್ರೆಸೆಸ್ ಅಮೆರಿಕಾದಲ್ಲೂ ಜನಪ್ರಿಯ. ಇದರಲ್ಲಿ ಅತಿ ಫೇಮಸ್ ಅಂದ್ರೆ ಕೋಕೋ ಡೇ ಚೋಂ! ಇವಳ ಡಿಸೈನ್ಸ್ ನೇಚರ್, ಸನ್, ಅರ್ಥ್, ವಾಟರ್ ನಿಂದ ಪ್ರೇರಿತನಂತೆ. ಈ ಕೆಳಗಿನ 2 ಡ್ರೆಸ್ ಗಳಂತೂ ಯಾವುದರಿಂದಾದರೂ ಪ್ರೇರಿತ ಆಗಿರಲಿ, ಅತ್ಯಾಕರ್ಷಕ ಎಂಬುದರಲ್ಲಿ 2 ಮಾತಿಲ್ಲ.
ಯುದ್ಧವಲ್ಲ…. ಶಾಂತಿ ಮುಖ್ಯ! : ಇಂದು ಮತ್ತೆ ವಿಶ್ವದಲ್ಲಿ ಎಲ್ಲೆಲ್ಲೂ ವರ್ಲ್ಡ್ ವಾರ್, ಕೋಲ್ಡ್ ವಾರ್ ಗಳ ಭೀತಿ ಕಾಡುತ್ತಿದೆ. ಇಸ್ರೇಲ್ ಪ್ಯಾಲೆಸ್ಟೈನ್ ನಡುವೆ ಸತತ ಯುದ್ಧ ನಡೆಯುತ್ತಲೇ ಇದೆ. ರಷ್ಯಾ ಯೂಕ್ರೇನಿನ ಯುದ್ದ ಅತ್ತಲಾಗಿನ್ನೂ ಮುಗಿದಿಲ್ಲ, ಅಷ್ಟರಲ್ಲಿ ಇವು ಶುರುವಾಗಿವೆ. ಸಾಲದ್ದೆಂದು ಚೀನಾ ತೈವಾನ್ ಭಾರತಗಳತ್ತ ಕೆಂಗಣ್ಣು ಬೀರುತ್ತಿದೆ. ಇಷ್ಟು ಮಾತ್ರವಲ್ಲ…. ಭಾರತ ಕೆನಡಾ ಸಹ ಡಿಪ್ಲೋಮ್ಯಾಟಿಕಲಿ ಹೂಂಕರಿಸುತ್ತಿವೆ. ಇದು ಮುಂದಕ್ಕೆ ಹೇಗೆ ತಿರುಗುತ್ತೋ ಗೊತ್ತಿಲ್ಲ. ಕೆನಡಾ ಸಿಖ್ ಭಯೋತ್ಪಾದಕರಿಗೆ ನೆರವು ನೀಡುತ್ತಾ, ಅಲ್ಲೇ ಏನೋ ನಡೆಸುವ ಹುನ್ನಾರದಲ್ಲಿದೆ, ಇಷ್ಟು ದಿನ ಪಾಕಿಸ್ತಾನ ಮಾಡಿದ್ದೂ ಅದನ್ನೇ! ಹೀಗಿರುವಾಗ ಈಗ ಬೇಕಿರುವುದು ಶಾಂತಿ ಮಾತ್ರ.
ಆಸ್ಟ್ರೇಲಿಯಾದ ಸಿಡ್ನಿ ಒಪೇರಾದ ನಾಟಕ : `ತೈಜಿ ಮ್ಯಾನ್ಸ್’ ಈ ಭಾವನೆಯನ್ನು ಅಕ್ಷರಶಃ ಹೊರ ಹೊಮ್ಮಿಸಿದೆ. ಇದೇ ಇಂದಿನ ಡಿಮ್ಯಾಂಡ್. ಮಾರ್ಶಲ್ ಆರ್ಟ್, ಸಂಗೀತ, ನೃತ್ಯಗಳಿಂದ ಶಾಂತಿಯ ಕಹಳೆ ಮೊಳಗಿಸಬಹುದು. ಈ ಒಪೇರಾ ಗ್ರೂಪ್ ಇದೇ ಅಭಿಪ್ರಾಯ ವ್ಯಕ್ತಪಡಿಸಲು ವಿಶ್ವದೆಲ್ಲೆಡೆ ಪ್ರದರ್ಶನ ನೀಡುತ್ತಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿ ಆಗುತ್ತದೋ…? ವಿಶ್ವದೆಲ್ಲೆಡೆಯ ಮುಖಂಡರು ತಮ್ಮ ಮೂಗಿನ ನೇರಕ್ಕೇ ಚಿಂತಿಸುತ್ತಾ, ತಂತಮ್ಮ ಬ್ಯಾಲೆಟ್ ಬಾಕ್ಸಿನಿಂದ ಅಧಿಕಾರ ಸ್ಥಾಪಿಸಲು ಯತ್ನಿಸುತ್ತಿದ್ದಾರೆ!
ಇಂದು ನಾವು ಬ್ಯೂಟಿಫುಲ್ ಆಗಬಲ್ಲೆವು! : ಜನ ತಾವು ಸ್ಮಾರ್ಟ್ ಆಗಿ ಇರಬಯಸಿದರೆ, ಅದರಲ್ಲಿ ಹೆಣ್ಣು ಮುಂದು, ಗಂಡು ಹಿಂದೇಕೆ ಉಳಿಯಬೇಕು? ಹೀಗಾಗಿಯೇ `ಸ್ಕಿನ್ ಫ್ರಂ ಸ್ಕ್ರಾಚ್’ ಬ್ರಾಂಡ್ ಇದೀಗ ಗಂಡಸರಿಗಾಗಿ ಹೇರ್ ರಿಮೂವ್ ಕ್ರೀಂ ಟ್ರೀಟ್ ಮೆಂಟ ಶುರು ಮಾಡಿದೆ. ಇವೆಲ್ಲ 100% ನ್ಯಾಚುರಲ್ ಅಂತಾರೆ. ಅದು ಎಷ್ಟು ಮಾತ್ರ ನಿಜವೇ? ಒಂದಂತೂ ನಿಜ, ಈಗ ಗಂಡಸರೂ ಗಂಟೆಗಟ್ಟಲೆ ಕನ್ನಡಿ ಮುಂದೆ ನಿಲ್ಲಲು ಹೆಂಗಸರಿಗೆ ಪೈಪೋಟಿ ಕೊಡುವಂತಾಗಿದೆ. ಮೆನ್ ಪಾರ್ಲರ್ಸ್ ಗೆ ಬೇಡಿಕೆ ಹೆಚ್ಚಿದರೆ ಆಶ್ಚರ್ಯವಿಲ್ಲ.
ವೀಕ್ಷಕರ ನಿರೀಕ್ಷೆಯಲ್ಲಿ : ಕೊರೋನಾ ನಂತರ ನಮ್ಮಲ್ಲಿ ಜನ ಥಿಯೇಟರ್ ಗೆ ಸಿನಿಮಾ ನೋಡಲು ಹೋಗೋದು ಮಾಮೂಲಾಗಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳೂ ಇದೀಗ ಹಣ ಬಾಚುತ್ತಿವೆ. ಆದರೆ ಡಿಜಿಟಲ್ ಕನೆಕ್ಷನ್ ಪರ್ಫೆಕ್ಟ್ ಎನಿಸಿರುವ ಅಮೆರಿಕಾದಲ್ಲಿ, ಹೊಚ್ಚ ಹೊಸ ಚಿತ್ರಗಳು ಮೊಬೈಲ್, ಕಂಪ್ಯೂಟರ್, ಟಿವಿಗಳಲ್ಲಿ ರಾರಾಜಿಸುತ್ತಿವೆ. ಆದರೆ ಅಲ್ಲಿನ ಚಿತ್ರಮಂದಿರಗಳು ಮಾತ್ರ ಬಿಕೋ ಎಂದು ಖಾಲಿ ಹೊಡೆಯುತ್ತಾ ವೀಕ್ಷಕರಿಗಾಗಿ ಕಾದು ಕುಳಿತಿವೆ. ಅಲ್ಲಿನ ಒಂದು ಥಿಯೇಟರಂತೂ ಯುವಜನತೆಗೆ ಇದರ ಮಜಾ ನೆನಪಿಸಲೆಂದೇ ಟಿಕೆಟ್ ದರವನ್ನು ಬೇಕೆಂದೇ 50% ಕಡಿತ ಮಾಡಿವೆ. ನಮ್ಮಲ್ಲಿ ಆಹಾರ ಈಗಲೂ ದುಬಾರಿ, ಆದರೆ ಅಲ್ಲಿ ಹಾಗಲ್ಲ. ಅಲ್ಲಿ ಎಂದೂ ಅಗ್ಗದ ಆಹಾರ ಸಿಗುವುದೇ ಇಲ್ಲ, ಹಾಗಾಗಿ ಜನ ತಲೆ ಕೆಡಿಸಿಕೊಳ್ಳೋಲ್ಲ.
ಕೇವಲ ಕಾಗದದ ಹುಲಿಗಳು : ಲೆಬನಾನ್ ನಲ್ಲೂ ಹೆಂಗಸರಿಗೆ ವೋಟ್ ಚಲಾಯಿಸುವ ಹಕ್ಕು ದೊರತದ್ದು ಇತ್ತೀಚೆಗೆ….. ಅಂದ್ರೆ 1995ರಲ್ಲಿ! ಈಗಲೂ ಅಲ್ಲಿನ ರಾಜಕೀಯದಲ್ಲಿ ಹೆಂಗಸರ ಪಾತ್ರ ಅತ್ಯಲ್ಪ. ನಮ್ಮಲ್ಲಿ ಮಹಿಳಾ ಆರಕ್ಷಣಾ ಕಾನೂನೇನೋ ರೂಪುಗೊಂಡಿದೆ, ಇದು ಜಾರಿಗೆ ಬರಲು ಮುಂದಿನ 10 ವರ್ಷ ಬೇಕಾದೀತು. ವಿಶ್ವದೆಲ್ಲೆಡೆ ಹೆಣ್ಣಿನ ಹಕ್ಕುಗಳ ಬಗ್ಗೆ ಭಾಷಣ ಬಿಗಿಯಾಗುತ್ತದೆ, ಆದರೆ ಕೈಗೆ ಮಾತ್ರ `ವುಮೆನ್ಸ್ ಡೇ’ ಹೆಸರಿನ ಲಾಲಿಪಾಪ್ ಮಾತ್ರ ಕೊಡುತ್ತಾರಷ್ಟೆ.
ಜಾದೂ ಅಲ್ಲ ಇದು ಕಲೆ! : ಆಸ್ಟ್ರೇಲಿಯಾ ಫರ್ಮೆಂಟ್ ನಗರದಲ್ಲಿ ಬೀದಿ ಸರ್ಕಸ್ ನಮ್ಮಲ್ಲಿನ ಕೋತಿ ಆಡಿಸುವವರ ಪ್ರದರ್ಶನದಷ್ಟೇ ಜನಪ್ರಿಯ. ಇಲ್ಲಿನವರು ಎಷ್ಟೋ ವರ್ಷಗಳ ಹಳೆಯದನ್ನೇ ತೋರಿಸುತ್ತಿದ್ದರೆ, ಅತ್ತ ಯೂರೋಪ್, ಅಮೆರಿಕಾ, ಆಸ್ಟ್ರೇಲಿಯಾದ ಸರ್ಕಸ್ ನವರು ನಿತ್ಯ ನವನವೀನ ವರಸೆ ತೋರಿಸುತ್ತಿದ್ದಾರೆ. ಇವರ ಟೆಕ್ನಿಕ್ಸ್ ಕಂಡು ವಿಶ್ವವೇ ಬೆರಗಾಗಿದೆ! ಈ ಇವೆಂಟ್ ನಲ್ಲಿ ಕುರ್ಚಿ ಮೇಲೆ ಕುಳಿತ ಕಲಾವಿದ, ಕೆಳಗೆ ಬೀಳುವುದೇ ಇಲ್ಲ. ಈತ ಗುರುತ್ವಾಕರ್ಷಣೆಯ ಶಕ್ತಿಗೇ ಸವಾಲು ಒಡ್ಡಿದಂತಿದೆ!