ಅಗ್ರ ಪಂಕ್ತಿಯಲ್ಲಿರುವ ಗ್ಲೋಬಲ್ ಗ್ಯಾಸ್‌ ಕಂಪನಿ ಲಿಂಡೆ, ಇತ್ತೀಚೆಗೆ ಎನ್‌ ಕೋರ್‌ ಎಂಬ ಕಾರ್ಯಕ್ರಮ ಲಾಂಚ್‌ ಮಾಡಿದೆ. ಬಹಳ ವರ್ಷಗಳ ನಂತರ ತಮ್ಮ ಕೆರಿಯರ್‌ ಗೆ ವಾಪಸ್ಸು ಮರಳು ಪ್ರೊಫೆಶನಲ್ ಮಹಿಳೆಯರಿಗೆಂದೇ ಇದನ್ನು ವಿಶೇಷವಾಗಿ ರೂಪಿಸಲಾಗಿದೆ.

ಎನ್‌ ಕೋರ್‌ ಕಾರ್ಯಕ್ರಮದ ಮುಖ್ಯ ಉದ್ದೇಶ, ಪ್ರೊಫೆಶನಲ್ ಮಹಿಳೆಯರ ಪ್ರತಿಭೆ ಹಾಗೂ ಸಾಮರ್ಥ್ಯದ ಬಳಕೆ ಪುನಃ ಆಗಬೇಕು, ಅದು ವರ್ತಮಾನದ ಬ್ರೇಕ್‌ ನಲ್ಲಿದ್ದು, ಮತ್ತೆ ಅಂಥದ್ದೇ ಕೌಶಲವನ್ನು ಹಿಂಪಡೆಯಲು, ತರಬೇತಿ ಹೊಂದುವ ಹುಡುಕಾಟದಲ್ಲಿ ಇರುವವರಿಗೆಂದೇ ಇದೆ. ಎನ್‌ ಕೋರ್‌ ತರಬೇತಿ ಕಾರ್ಯಕ್ರಮ ವರ್ಕ್‌ ಪೇರ್ಸ್‌ ನಡುವೆ ಲಿಂಗಭೇದ ಆಗದಂತೆ, ಸಮಾವೇಶಿತ ಶಕ್ತಿ ಹೆಚ್ಚಿಸುವುದಕ್ಕಾಗಿ, ಕಂಪನಿಯು ಪ್ರತಿಬದ್ಧತೆಯನ್ನು ಪ್ರದರ್ಶಿಸುತ್ತದೆ.

ಈ ಕಾರ್ಯಕ್ರಮ ಆಪರೇಶನ್‌, ಡಿಸ್ಟ್ರಿಬ್ಯೂಶನ್‌, ಸೇಲ್ಸ್ ಹಾಗೂ ಫೈನಾನ್ಸ್ ನಂಥ ವಿಭಿನ್ನ ಡೊಮೇನ್‌ ಗಳಲ್ಲಿ ವ್ಯಾಪಕ ಕಲಿಕೆಯ ಅನುಭವ ಒದಗಿಸುತ್ತದೆ. ಇದು ಅಭ್ಯರ್ಥಿಗಳನ್ನು ಅನುಭವಿ ಪ್ರೊಫೆಶನಲ್ಸ್ ಆಗಿಸಿ, ಕೆಲಸ ನಿರ್ವಹಿಸಲು ಅನುಮತಿ ನೀಡುತ್ತದೆ. ಎನ್‌ ಕೋರ್‌ ತರಬೇತಿ ಕಾರ್ಯಕ್ರಮ ಯಾ ಪ್ರೊಫೆಷನಲ್ ಮಹಿಳೆಯರ ಸಾಮರ್ಥ್ಯ ಹಾಗೂ ಕೌಶಲಗಳ ಲಾಭ ಹೆಚ್ಚಿಸುವ ಪ್ರಯಾಸ ಪಡುತ್ತದೆ ಎಂದರೆ, ಅಂಥವರು ವಿಭಿನ್ನ ಕಾರಣಗಳಿಂದ ತಾತ್ಕಾಲಿಕವಾಗಿ ತಮ್ಮ ಕೆಲಸಗಳಿಂದ ದೂರ ಉಳಿದಿರುತ್ತಾರೆ. ಈ ಕಾರ್ಯಕ್ರಮದ ಭಾಗಿಗಳಾಗಲು, ಅಭ್ಯರ್ಥಿಗಳು ತಮ್ಮ ಹಿಂದಿನ ಕೆಲಸದಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು.

ಪ್ರಸ್ತುತವಿದೆ, ಲಿಂಡೆ ಇಂಡಿಯಾದ ಮಾನವ ಸಂಪನ್ಮೂಲ ಅಧಿಕಾರಿ (ಎಚ್‌ಆರ್‌ಹೆಡ್‌) ನೀತಾ ಚಕ್ರವರ್ತಿ ಜೊತೆ ನಡೆಸಲಾದ ಮಾತುಕಥೆಯ ಸಾರಾಂಶ :

ನೌಕರಿಯಿಂದ ಬ್ರೇಕ್ಪಡೆದ ನಂತರ ಮತ್ತೆ ಕೆಲಸ ಶುರು ಮಾಡಲು ಮಹಿಳೆಯರಿಗೆ ಎಂತೆಂಥ ಸಮಸ್ಯೆ ಎದುರಿಸಬೇಕಾಗುತ್ತದೆ?

ಇಂದಿನ ಸ್ಪೀಡ್‌ ಲೈಫ್‌ ಸ್ಟೈಲ್ ‌ಹಾಗೂ ಟೆಕ್ನಾಲಜಿ ಓರಿಯೆಂಟೆಡ್‌, ಓಡು ಯುಗದ ವಿಶ್ವದಲ್ಲಿ, ಸತತ ಮುಂದುವರಿಯುವ ಒತ್ತಡ ಇರುತ್ತದೆ. ಪರಿಣಾಮವಾಗಿ, ಬಹುಪಾಲು ಮಹಿಳೆಯರಿಗೆ, ತಾವು ತಮ್ಮ ಕೆರಿಯರ್‌ ನತ್ತ ಉದಾಸೀನರಾದೆವು ಹಾಗೂ ಜೊತೆಯವರು ಬಹಳ ಮುಂದುವರಿದಿದ್ದಾರೆ ಎನಿಸುತ್ತದೆ. ಅಂತಹ ಮತ್ತೊಂದು ಪ್ರಬಲ ಸಮಸ್ಯೆ ಅಂದ್ರೆ, ಉದ್ಯಮಗಳಿಗೆ ಸಂಬಂಧಿಸಿದ ವಿಕಾಸ. ಖಂಡಿತವಾಗಿಯೂ ಮಹಿಳೆಯರ ಈ ಭಯವನ್ನು ಇಂತಿಷ್ಟೆ ಎಂದು ಅಳೆಯಲಾಗದು, ಇವರ ಕೆರಿಯರ್‌ ಬ್ರೇಕ್‌ ನ್ನು ಭಾವಿ ಉದ್ಯೋಗದಾತರು ಸಕಾರಾತ್ಮಕವಾಗಿ ಹೇಗೆ ತೆಗೆದುಕೊಳ್ಳುವರೋ ಹೇಳಲಾಗದು.

ಲಿಂಗಭೇದ ಅಸಮಾನತೆ ಆಗದಂತೆ ಹಾಗೂ ಮಹಿಳೆಯರ ಪ್ರಗತಿಗಾಗಿ ಲಿಂಡೆ ಹೇಗೆ ಕೆಲಸ ಮಾಡುತ್ತದೆ?

ಲಿಂಡೆ ಸಕ್ರಿಯ ರೂಪದಲ್ಲಿ ಸಮಾವೇಶಿತ ಹಾಗೂ ಸಮಕಾಲೀನ ಸಿಬ್ಬಂದಿ ನೀತಿಗಳು, ಕೆರಿಯರ್‌ ವಿಕಾಸ ಕಾರ್ಯಕ್ರಮಗಳು, ಜೆಂಡರ್‌ ಸೆನ್ಸಿಟಿವಿಟಿ ಟ್ರೇನಿಂಗ್‌, ಎಂಪ್ಲಾಯಿ ರಿಸೋರ್ಸ್‌ ಗ್ರೂಪ್‌, ನಿಷ್ಪಕ್ಷ ರೆಕ್ರೂಟ್‌ ಮೆಂಟ್‌ ಪ್ರಕ್ರಿಯೆ ಮುಂತಾದ ಉಪಾಯಗಳ ಮಾಧ್ಯಮದಿಂದ ಲಿಂಗಭೇದವಿಲ್ಲದ ಸಮಾನತೆ ಹಾಗೂ ಮಹಿಳೆಯರ ಪ್ರಗತಿಗೆ ಪೂರಕವಾಗಿದೆ. ಈ ವ್ಯಾಪಕ ದೃಷ್ಟಿಕೋನದಿಂದಾಗಿ ಲಿಂಡೆ, ಒಂದು ಸಮಾವೇಶಿತ ವಾತಾವರಣ ರೂಪಿಸಲು ಪ್ರತಿಬದ್ಧವಾಗಿದೆ. ಇಲ್ಲಿ ಮಹಿಳೆಯರು ಉತ್ಕೃಷ್ಟತೆ ಪಡೆಯುತ್ತಾರೆ ಹಾಗೂ ಮುಂದಿನ ಜಾಬ್‌ ನಲ್ಲಿ ಅದರ ಶ್ರೇಷ್ಠ ಪ್ರದರ್ಶನ ನೀಡುತ್ತಾರೆ.

ಲಿಂಡೆ ಕಂಪನಿಯ ಎನ್ಕೋರ್ಪ್ರೋಗ್ರಾಮ್ ಕುರಿತು ವಿವರಿಸಿ. ಇದು ಮಹಿಳೆಯರಿಗೆ ಹೇಗೆ ಉಪಯುಕ್ತ?

ಯಾವ ಪ್ರೊಫೆಶನಲ್ ಮಹಿಳೆಯರು ತಮ್ಮ ಕೆರಿಯರ್‌ ಕುರಿತಾಗಿ ತುಸು ಹಿಂಜರಿದಿದ್ದಾರೋ ಅವರಿಗೆ ಬೆಂಬಲ ನೀಡುವಲ್ಲಿ ಎನ್ ಕೋರ್‌ ಲಿಂಡೆ ಮುಂದಿದೆ. ಇಂಥವರು ತಮ್ಮ ಕೆರಿಯರ್‌ ನಿಂದ 35 ವರ್ಷ ಬ್ರೇಕ್‌ ಪಡೆದಿರುತ್ತಾರೆ. ಎನ್‌ ಕೋರ್‌ ಇಂಥ ಮಹಿಳೆಯರ ನೆರವಿಗೆಂದೇ ಒಂದು ತರಬೇತಿ ಕಾರ್ಯಕ್ರಮ ರೂಪಿಸಿದೆ, ಸ್ಪೆಷಲಿ ಕೆರಿಯರ್‌ ನಿಂದ ಬ್ರೇಕ್‌ ಪಡೆದವರಿಗಾಗಿ. ಇಂಥವರಿಗೆ ಕೆರಿಯರ್‌ ಓರಿಯೆಂಟೆಡ್‌ ತರಬೇತಿ ನೀಡುವುದೇ ಲಿಂಡೆಯ ಮುಖ್ಯ ಗುರಿ. ಇದರಿಂದ ಮುಂದೆ ಅವರ ಜಾಬ್‌ ಗೆ ಸಹಾಯವಾಗಿ ಉತ್ತಮ ಕೆರಿಯರ್‌ ರೂಪಿಸಿಕೊಳ್ಳಲು ಅನುಕೂಲ ಆಗಲಿದೆ.

ಎನ್‌ ಕೋರ್‌ ಒಂದು ವ್ಯಾಪಕ ಕಾರ್ಯಕ್ರಮವಾಗಿದ್ದು, 12-18 ತಿಂಗಳ ಕಾಲಾವಧಿಯದಾಗಿದೆ. ಇಲ್ಲಿ ಮಹಿಳೆಯರಿಗೆ ವಿಶಿಷ್ಟ ಜವಾಬ್ದಾರಿಗಳನ್ನು ಪ್ರಬಂಧನಗೊಳಿಸುವ ತರಬೇತಿ ಹಾಗೂ ಕುಶಲತೆ ಒದಗಿಸಲಾಗುತ್ತದೆ. ಆಗ ಅವರು ತಮ್ಮ ಮುಂದಿನ ಕೆರಿಯರ್‌ ನಲ್ಲಿ ಬಲಾಢ್ಯರಾಗಿ, ಉತ್ತಮ ನೌಕರಿ ಹೊಂದಬಹುದಾಗಿದೆ. ತಮ್ಮ ಕೆರಿಯರ್‌ ನ ಸೆಕೆಂಡ್‌ ಇನಿಂಗ್ಸ್ ನಲ್ಲಿ ಹೆಚ್ಚಿನ ಸಾಮರ್ಥ್ಯ ಪ್ರದರ್ಶಿಸಬಹುದು.

ಒಬ್ಬ ಮಹಿಳೆಯಾಗಿ ನೀವು ನಿಮ್ಮ ಕಾರ್ಯಸ್ಥಳದಲ್ಲಿ ಎಂದಾದರೂ ವಿಶೇಷ ತೊಂದರೆ ಎದುರಿಸಿದ್ದುಂಟೆ? ಮನೆ ಆಫೀಸು ಎರಡನ್ನೂ ಸಂಭಾಳಿಸುವುದು ಎಷ್ಟು ಕಷ್ಟಕರ ಆಯ್ತು?

ಪ್ರತಿಯೊಂದು ಕಾರ್ಯಸ್ಥಳದ ಅನುಭವ ವಿಭಿನ್ನವೇ ಆಗಿರುತ್ತದೆ. ಎಷ್ಟೋ ಸಲ ಅದು ಆಯಾ ಸಂಸ್ಥೆಗಳ ಸಂಸ್ಕೃತಿಯನ್ನು ಆಧರಿಸಿರುತ್ತದೆ. ಒಬ್ಬ ಮಹಿಳೆಯಾಗಿ ಪ್ರೊಫೆಶನಲ್ ಜವಾಬ್ದಾರಿಗಳ ನಡುವೆ ಉತ್ತಮ ಸಮತೋಲನ ಸಾಧಿಸುವುದು ಅಂದ್ರೆ ಒಂದು ಸವಾಲೇ ಸರಿ. ನನ್ನ ಪ್ರಕಾರ ಮನೆಯಲ್ಲಿ ಒಂದು ಉತ್ತಮ ಸಪೋರ್ಟ್‌ ಸಿಸ್ಟಮ್ ಇರಬೇಕು, ಕೆಲಸದಲ್ಲಿ ಕ್ರಿಯಾಶೀಲತೆ ಹಾಗೂ ಕೆರಿಯರ್‌ ನಲ್ಲಿ ಮುಂದುವರಿಯಬೇಕು ಎಂಬ ಬಲವಾದ ಇಚ್ಚೆ, ಇವೆಲ್ಲವನ್ನೂ ಸುಲಭವಾಗಿ ನಿಭಾಯಿಸಲು ನನಗೆ ನೆರವಾಯಿತು.

ಎಷ್ಟೋ ಮಹಿಳೆಯರು ತಮ್ಮ ಕಾರ್ಯಸ್ಥಳಗಳಲ್ಲಿ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ. ಅಂದ್ರೆ ಅಸಮ ವೇತನ, ಲಿಂಗಭೇದದ ಪೂರ್ವಾಗ್ರಹ, ಏಳಿಗೆಯ ಸೀಮಿತ ಅವಕಾಶ, ಕೆಲಸ ಮತ್ತು ಕೌಟುಂಬಿಕ ಜವಾಬ್ದಾರಿಗಳ ನಡುವೆ ಬ್ಯಾಲೆನ್ಸ್ ಹೊಂದಲು ಸಂಘರ್ಷ ಇತ್ಯಾದಿ. ಮನೆ ಆಫೀಸು ಎರಡನ್ನೂ ಸಂಭಾಳಿಸುವುದು ಕಠಿಣ ಕಾರ್ಯವೇ ನಿಜ. ಇದಕ್ಕಾಗಿ ಪ್ರಭಾವಶಾಲಿ ಟೈಂ ಮ್ಯಾನೇಜ್‌ ಮೆಂಟ್‌, ಸಪೋರ್ಟ್‌ ಸಿಸ್ಟಮ್, ಕ್ರಿಯಾಶೀಲ ಕಾರ್ಯ ವ್ಯವಸ್ಥೆಯ ಅವಶ್ಯಕತೆ ಇರುತ್ತದೆ.

ಪ್ರತಿಯೊಬ್ಬ ಮಹಿಳೆಯ ಅನುಭವ, ಅವರ ಸಂಸ್ಕೃತಿ, ಕೆಲಸದ ಇಂಡಸ್ಟ್ರಿ, ವೈಯಕ್ತಿಕ ಪರಿಸ್ಥಿತಿ ಇತ್ಯಾದಿ ಎಲ್ಲವೂ ವಿಭಿನ್ನವಾಗಿರುತ್ತವೆ ಎಂಬುದರ ಕಡೆ ಮಹತ್ವಪೂರ್ಣ ಗಮನಹರಿಸಬೇಕಾಗುತ್ತದೆ. ಎಷ್ಟೋ ಮಹಿಳೆಯರು ಸಶಕ್ತ ಸಪೋರ್ಟ್‌ ನೆಟ್‌ ವರ್ಕ್ಸ್, ಸರಿಯಾದ ಸಂಭಾಷಣಾ ಚಾತುರ್ಯ, ಪ್ರಾಥಮಿಕ ನಿರ್ಧಾರ ಕೈಗೊಳ್ಳುವಿಕೆ ಹಾಗೂ ಕಾರ್ಯಜೀವನ ಸಮತೋಲನಕ್ಕೆ ಒತ್ತು ನೀಡುವ ಕಾರ್ಯಸ್ಥಳ ರೀತಿ ನೀತಿಗಳ ಹುಡುಕಾಟದ ಮಾಧ್ಯಮದಿಂದ, ಈ ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸಬೇಕಾಗುತ್ತದೆ.

ನೀವು ಸಹ ಲಿಂಡೆಯ ಯಶಸ್ವಿ ಕಥೆಯ ಒಂದು ಭಾಗವಾಗಬೇಕೇ? ಹಾಗಾದರೆ ಇಂದೇ ಅಪ್ಲೈ ಮಾಡಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ