ಮಹೇಶ : ಎಲ್ಲರೊಂದಿಗೆ ಸದಾ ನಸುನಗುತ್ತಾ ಮಾತನಾಡುತ್ತಿರಬೇಕು, ಅದುವೇ ಶಿಷ್ಟಾಚಾರ ಅನ್ನುತ್ತದೆ ಲೋಕಾರೂಢಿಯ ಪ್ರಪಂಚ.
ಸತೀಶ : ಹೌದು, ಇದರಲ್ಲಿ ತಪ್ಪೇನು ಬಂತು?
ಮಹೇಶ : ಆದರೆ ಅಪ್ಪಿತಪ್ಪಿಯೂ ಹೆಂಡತಿ ಮುಂದೆ, ಪಕ್ಕದ ಮನೆಯವಳನ್ನು ಕಂಡು ಮಂದಹಾಸ ಬೀರಬಾರದು, ಇಲ್ಲದಿದ್ದರೆ ಆ ವಾರ ಪೂರ್ತಿ ಹಳಸಿದ ಕ್ಯಾಂಟೀನ್ ಊಟವೇ ಗಟ್ಟಿ!
ಕಾರ್ಖಾನೆ ಒಂದರ ವಾಚ್ ಮೆನ್ ಕೆಲಸಕ್ಕಾಗಿ ಸಂದರ್ಶನ ನಡೆಯುತ್ತಿತ್ತು.
ಸಂದರ್ಶಕ : ಈ ವಿಶ್ವದ 2 ಅತಿ ಅಪಾಯಕಾರಿ ಅಸ್ತ್ರಗಳು ಯಾವುವು?
ಗುಂಡಪ್ಪ : ಹೆಂಡತಿಯ ಕಣ್ಣೀರು, ಗರ್ಲ್ಸ ಫ್ರೆಂಡ್ ಳ ಮಂದಹಾಸ!
ಕೆಲವೇ ವರ್ಷಗಳಲ್ಲಿ ಗುಂಡಪ್ಪ ಆ ಕಾರ್ಖಾನೆಯ ಸೆಕ್ಯೂರಿಟಿ ಗಾರ್ಡ್ ಗಳಿಗೆ ಚೀಫ್ ಆಗಿಹೋದ!
ಪತ್ನಿ : ಇಂದಿನ ಸಂಜೆ ಎಂಥ ರೊಮ್ಯಾಂಟಿಕ್ ಆಗಿದೆ. ಒಂದು ಒಳ್ಳೆ ಹಾಡು ಹೇಳಬಾರದೇ?
ಪತಿ : ನೀಲ ಮೇಘ ಗಾಳಿ ಬೀಸಿ ತೂರಾಡೋ ಹಾಗೆ...
ಪತ್ನಿ : ಆಹಾ.... ಹಾಗೇ ಮುಂದುವರಿಸಿ....
ಪತಿ : ತೂರಾಡೋ ಹಾಗೆ.... ತೂರಾಡೋ ಹಾಗೆ....
ಪತ್ನಿ : ಏನು ಕರ್ಮ ಇದು? ತೂರಾಡೋದೇ ಆಗೋಯ್ತು. ಮುಂದೆ ಏನಾಯ್ತು ಅಂತ ಹೇಳಬಾರದೇ?
ಪತಿ : ತೂರಾಡಿ ತೂರಾಡಿ ರಸ್ತೆ ಬದಿ, ಚರಂಡಿಯಲ್ಲಿ ಬಿದ್ದ ಅಂತ!
ಒಮ್ಮೆ ಬ್ಯಾಚುಲರ್ ಗುಂಡನಿಗೆ ರಾತ್ರಿ 10 ಗಂಟೆಯಲ್ಲಿ ಬಹಳ ಹಸಿವಾಯಿತೆಂದು ಬೆಂಗಳೂರಿನ ಎಲ್ಲಾ ಹೋಟೆಲ್ ಗಳಲ್ಲೂ ತಡಕಾಡಿದ ಯಾವುದು ನೋಡಿದರೂ ವೆಯ್ಟಿಂಗೇ! ಹೀಗೆ ಹತ್ತಾರು ಹೋಟೆಲ್ ಹತ್ತಿಳಿಯುವುದರಲ್ಲಿ 10.45 ಆಗ್ಹೋಯ್ತು.
ಹೀಗಾದರೆ ಲಾಭವಿಲ್ಲ ಅಂತ ಗುಂಡ ಐಡಿಯಾ ಹೂಡಿದ. ಅವನು ಯಾವ ಹೋಟೆಲ್ ಗೆ ಹೋಗಿ ನೋಡಿದರೂ ಅಲ್ಲಿ ಬಾಯ್ ಫ್ರೆಂಡ್ ಗರ್ಲ್ ಫ್ರೆಂಡ್ ಗಳೇ ಕುಳಿತಿದ್ದರು. ಆ ಮೂತಿಗಳನ್ನು ನೋಡಿದರೇನೇ ಇವರು ದಂಪತಿಗಳಲ್ಲ ಎಂದು ಅವನಿಗೆ ಅರ್ಥವಾಗಿತ್ತು. ಮಾಡ್ತೀನಿ ತಾಳು ಎಂದು ಮನದಲ್ಲೇ ನಿರ್ಧರಿಸಿದ.
ತಕ್ಷಣ ತನ್ನ ಮೊಬೈಲ್ ತೆಗೆದವನೇ 4-6 ಫ್ರೆಂಡ್ಸ್ ಗೆ, ಅಲ್ಲಿದ್ದ ಎಲ್ಲರಿಗೂ ಜೋರಾಗಿ ಕೇಳಿಸುವಂತೆ ಹೇಳತೊಡಗಿದ, ``ಹಲೋ ಗುರು ಕಿರಣ್, ಶಶಿ, ರವಿ, ಸೋಮು.... ಇದೇನೋ ನಿನ್ನ ಗರ್ಲ್ ಫ್ರೆಂಡ್ ಇಲ್ಲಿ ಯಾವನ ಜೊತೆಯಲ್ಲೋ ಕುಳಿತು ಡಿನ್ನರ್‌ಹೊಡೀತಾವ್ಳೆ.....?'' ಅವನ ಮಾತು ಮುಗಿದ 5 ನಿಮಿಷಗಳಲ್ಲೇ ಅಲ್ಲಿದ್ದ ಬಹುತೇಕ ಟೇಬಲ್ ನ ಮಾಡರ್ನ್ ಮಾಲತಿಯರು ಎದ್ದು ಕಣ್ಮರೆ ಆಗಿದ್ದರು.
ಗುರೂಜಿ : ಬಹು ದಿನಗಳಿಂದ ನಾವು ಮಾತನಾಡದೇ ಹೋದರೆ ಅದಕ್ಕೆ `ಮೌನ ವ್ರತ' ಎಂದು ಅರ್ಥ.
ಭಕ್ತಗಣ : ಹೌದೇ? ನಮ್ಮಲ್ಲಿ ಅದಕ್ಕೆ `ವಿವಾಹಿತ' ಅಂತ ಅರ್ಥ!
ನಾಗೇಶ್ : ಅಲ್ಲಯ್ಯ.... ಮನೇಲಿ ಸದಾ ನೀವು ಗಂಡ ಹೆಂಡ್ತಿ ನಗ್ತಾ ನಗ್ತಾ ಇರ್ತೀರಿ.... ನಿಮ್ಮನ್ನು ಕಂಡರೆ ಎಷ್ಟು ಹೊಟ್ಟೆ ಉರಿಯುತ್ತೆ ಗೊತ್ತಾ? ಅದು ಸರಿ, ನಿಮ್ಮ ಸಂತೋಷದ ಹಿಂದಿನ ರಹಸ್ಯವೇನು?
ಸುರೇಶ್ : ದಿನಾ ಮನೇಲಿ ಪಾತ್ರಿ ತೊಳೆಯೋನು ನಾನೇ.... ಆಗ ನನ್ನ ಹೆಂಡತಿ ದೂರದಿಂದ ನನ್ನತ್ತ ಪಾತ್ರೆ ಎಸೆಯುತ್ತಾಳೆ, ಅದು ನನಗೆ ತಗುಲಿದರೆ ಅವಳು ಖುಷಿಯಿಂದ ನಗ್ತಾಳೆ. ತಗುಲದೆ ಕೆಳಗೆ ಬಿದ್ದರೆ ನಾನು ಖುಷಿಯಾಗಿ ನಗ್ತೀನಿ, ಅಷ್ಟೆ!