CATEGORY : SOCIETY

 

URL : SARAKARA

 

 

ಈಗ ಎಲ್ಲೆಲ್ಲೂ ಲಿವ್ ‌ಇನ್‌ ರಿಲೇಶನ್‌ ಶಿಪ್‌ ಕುರಿತು ಪರ/ವಿರೋಧದ ಮಾತುಗಳು ಕೇಳಿ ಬರುತ್ತಿರುತ್ತಿ. ಆದರೆ ಈ ಸಂಬಂಧ ಹಲವು ಅಪಾಯಗಳಿಂದ ತುಂಬಿದೆ ಎಂಬುದು ಸುಳ್ಳಲ್ಲ. ಏಕೆಂದರೆ ಈ ಕುರಿತು ಕಾನೂನಿನ ವ್ಯವಸ್ಥೆ ಹೇಗಿದೆ ಅಂದ್ರೆ, ಯಾವುದೇ ಹಕ್ಕಾಗಲಿ, ಕಾನೂನುಬದ್ಧ ವಿವಾಹದಿಂದ ಮಾತ್ರ ಸಿಗಲಿದೆ. ಈ ಲಿವ್ ‌ಇನ್‌ ಗೆ ಕಾನೂನಿನ ಚೌಕಟ್ಟು ನೀಡಲು ಸರ್ಕಾರ ಖಂಡಿತಾ ಸಿದ್ಧವಿಲ್ಲ, ಕೋರ್ಟುಗಳೂ ಸಹ, ಇಂಥ ಜೋಡಿಗಳು ಪರಸ್ಪರ ಯಾವುದೇ ಕಾಂಟ್ರಾಕ್ಟ್ ಮಾಡಿಕೊಳ್ಳುವಂತಿಲ್ಲ.

ಗುಜರಾತ್‌ ನ `ಮೈತ್ರಿ ಕರಾರ್‌’ ಒಂದು ಹಳೆಯ ಪದ್ಧತಿ, ನಮ್ಮಲ್ಲಿನ ಕೂಡಾಳಿ ಹಾಗೆ. ಆದರೆ ಇದಕ್ಕೂ ಕಾನೂನಿನ ಅಸ್ತು ಇಲ್ಲ. ಏಕೆಂದರೆ ಸೋಶಿಯಲ್ ಪಾಲಿಸಿಗಳ ವಿರುದ್ಧ ಮಾಡಿಕೊಳ್ಳಲಾದ ಕಾಂಟ್ರಾಕ್ಟ್ ಗೆ ಯಾವುದೇ ಮಾನ್ಯತೆ ಇಲ್ಲ.

ಹ್ಞಾಂ, ಇಂದಿನ ಆಧುನಿಕ ಜೋಡಿಗಳು ಹೀಗೇ ಬದುಕಲು ಬಯಸಿದರೆ, ಇದು ಕಾನೂನುಬಾಹಿರ ಅಂತೂ ಖಂಡಿತಾ ಅಲ್ಲ. ಇಬ್ಬರೂ ಪ್ರಾಪ್ತ ವಯಸ್ಕರಾಗಿದ್ದು ತಾವಾಗಿ ಇಷ್ಟಪಟ್ಟರೆ, ಹೀಗೆ ಬದುಕಬಹುದು. ಇವರಲ್ಲಿ ಒಬ್ಬರೇನಾದರೂ ವಿವಾಹಿತರಾಗಿದ್ದರೆ, ಅವರ ಸಂಗಾತಿ ಅಡಲ್ಟ್ರಿ ಹಕ್ಕು ಮೀರಲಾಗಿದೆ ಎಂದು ವಿಚ್ಛೇದನ ಕೋರಬಹುದು.

ಇಲ್ಲಿ ಸಮಸ್ಯೆ ಶುರುವಾಗಿದ್ದು, ಒಬ್ಬ ವಿವಾಹಿತೆ ಗಂಡನನ್ನು ಬಿಟ್ಟು, ಮತ್ತೊಬ್ಬನೊಡನೆ ಲಿವ್ ‌ಇನ್‌ ನಲ್ಲಿದ್ದು, ಮಗು ಪಡೆದಾಗ! ಆಕೆ ಮಗುವಿನ ಬರ್ತ್‌ ಸರ್ಟಿಫಿಕೇಟ್‌ ನಲ್ಲಿ ಲಿವ್ ‌ಇನ್‌ ಪಾರ್ಟ್‌ ನರ್‌ಬಯಲಾಜಿಕಲ್ ಫಾದರ್‌ ಹೆಸರು ಬರಲಿ ಎಂದು ಕೋರಿದಾಗ, ಮುಂಬೈನ ಮುನಿಸಪಲ್, ಫ್ಯಾಮಿಲಿ ಕೋರ್ಟ್‌ ಮ್ಯಾಜಿಸ್ಟ್ರೇಟ್ ಅಥವಾ ಹೈಕೋರ್ಟ್‌ ಸಹ ಒಪ್ಪಲಿಲ್ಲ. ಇದಕ್ಕೆ ಕಾರಣ, ಮದುವೆಯಿಂದ ಹುಟ್ಟಿದ ಮಗು, ಕಾನೂನುಬದ್ಧವಾಗಿ ತಂದೆಗೆ ಸೇರುತ್ತದೆ, ಆಕೆ ಯಾರಿಂದ ಟೆಸ್ಟ್ ಟ್ಯೂಬ್‌ ಬೇಬಿ ಪಡೆದಳೆಂಬುದು ಇಲ್ಲಿ ಮುಖ್ಯವಲ್ಲ. ಹಿಂದೆಲ್ಲ ಇದು ನಿಯೋಗದ ಹೆಸರಿನಲ್ಲಿ ಹೇಗೋ ನಡೆಯುತ್ತಿತ್ತು, ಆದರೆ ಈಗ ಸ್ಪರ್ಮ್ ಡೋನರ್ಸ್‌ ಹೆಚ್ಚಿರುವುದರಿಂದ, ಮಗು ಅನೈತಿಕ ಸಂತಾನ ಆಗಬಾರದೆಂದು, ವಿವಾಹಿತ ಪತಿಯನ್ನೇ ತಂದೆ ಎಂದು ಪರಿಗಣಿಸಲಾಗುತ್ತದೆ. ಆ ಮಗುವಿಗೆ ಈ ತಂದೆಯ ಆಸ್ತಿ ಖಂಡಿತಾ ಕಾನೂನುಬದ್ಧವಾಗಿ ದಕ್ಕುತ್ತದೆ.

ಆ ಮಗುವಿನ ಪಾಲನೆ ಪೋಷಣೆ ಈ ತಂದೆಯದೇ ಜವಾಬ್ದಾರಿ. ಇಲ್ಲಿ ಬಯಲಾಜಿಕಲ್ ಫಾದರ್‌ ನ ಪಾತ್ರ ಗೌಣ. ಹೀಗೆ ಎಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ, ಇಂಥ ದಂಪತಿ ವಿಚ್ಛೇದನ ಎದುರಿಸುವಾಗ, ಆ ಪತಿ, ಈ ಮಕ್ಕಳು ತನ್ನದಲ್ಲ ಎಂದು ವಾದಿಸಬಹುದು. ವಾಸ್ತವದಲ್ಲಿ ಅಲ್ಲದಿದ್ದರೂ, ನೈತಿಕ ಹೊಣೆ ಹೊರಲೇಬೇಕಾಗುತ್ತದೆ.

ಲಿವ್ ಇನ್‌ ಬಯಸುವ ಹುಡುಗಿಯರು ಡೊಮೆಸ್ಟಿಕ್‌ ವೈಲೆನ್ಸ್ ನಿಂದಲೂ ಸಂರಕ್ಷಣೆ ಸಿಗಲಾರದು. ಇವರಿಬ್ಬರಲ್ಲಿ ಜಗಳವಾಗಿ ಅವನು ಇವಳನ್ನು ಹೊಡೆದುಬಡಿದರೆ, ಪೊಲೀಸರು ಇದರ ಮೇಲೆ ಡೊಮೆಸ್ಟಿಕ್‌ ವೈಲೆನ್ಸ್ ಆ್ಯಕ್ಟ್ ಕ್ರಮ ಕೈಗೊಳ್ಳಲಾಗದು ಎಂದೇ ಕೈ ಚೆಲ್ಲುತ್ತಾರೆ. ಹೋಗಲಿ ಅಂತ ಸಾಧಾರಣ ವೊಕದ್ದಮೆ ಹೂಡಬಹುದು, ಇದರಲ್ಲಿ ಅವನಿಗೆ ತಕ್ಷಣ ಜೈಲೇನೂ ಆಗದು. ಹೈಕೋರ್ಟ್‌ ನ ನ್ಯಾಯಾಧೀಶರಲ್ಲಿ ಕೆಲವರು ಇದಕ್ಕೆ ಪರವಾದರೆ, ಬಹಳಷ್ಟು ಮಂದಿ ವಿರೋಧ.

ಇಂಥ ಸಂಬಂಧದಿಂದಾಗಿ ಇಬ್ಬರು ಕಡೆಯ ನೆಂಟರೂ ದೂರವಾಗುತ್ತಾರೆ. ಸಾವು ನೋವಾದಾಗಲೂ ಇಬ್ಬರೂ ಒಂಟಿಯಾಗಿಯೇ ತಮ್ಮವರನ್ನು ಭೇಟಿ ಆಗಬೇಕಾಗುತ್ತದೆ. ಇಂಥವರ ಮನೆಗೆ ವಿವಾಹಿತ ನೆಂಟರಿಷ್ಟರು ಬರುವುದೂ ಅಪರೂಪ, ಏಕೆಂದರೆ ಭಾರತೀಯ ಸಮಾಜದಲ್ಲಿ ಈಗಲೂ ಇಂಥವರನ್ನು ಗುಂಡ್ರುಗೋವಿಗಳೆಂದೇ ಪರಿಗಣಿಸಲಾಗುತ್ತದೆ.

ಈ ಕುರಿತಾಗಿ ಏನಾದರೂ ಗಟ್ಟಿ ಕಾನೂನು ಮಾಡಲು ಸಾಧ್ಯವಿಲ್ಲವೇ? ಈ ಕುರಿತಾಗಿ ಬಹುತೇಕರು, ಮಾಡುವುದು ಬೇಡ ಅಂತಾರೆ. ಏಕೆಂದರೆ ಕಾನೂನುಬದ್ಧ ಲಿವ್ ಇನ್‌, ಮದುವೆಯ ತರಹವೇ ಆಗುತ್ತದೆ, ಅವರವರ ಮರ್ಜಿಯಿಂದಲ್ಲ! ಅಬ್ಬಬ್ಬಾ ಅಂದ್ರೆ ಒಂದು ಕಾಂಟ್ರಾಕ್ಟ್ ಗೆ ಒಪ್ಪಿಸಬಹುದು, ಇಂದು ಪ್ರಸ್ತುತವಿರುವ ಕಾಂಟ್ರಾಕ್ಟ್ ಆ್ಯಕ್ಟ್ ಅಡಿಯಲ್ಲೇ ಇವರು ಬದುಕಬೇಕಾಗುತ್ತದೆ. ಈ ಒಪ್ಪಂದದ ಪ್ರಕಾರ, ಹೆಣ್ಣು, ಸಂಗಾತಿ ತನ್ನನ್ನು ರೇಪ್‌ ಮಾಡಿದ ಎನ್ನುವಂತಿಲ್ಲ. ಒಂದಾಗಿದ್ದಾಗ ಕೊಂಡ ಸಾಮಗ್ರಿಗಳನ್ನು, ಬಿಟ್ಟಾಗ ಸಮಾನವಾಗಿ ಹಂಚಿಕೊಳ್ಳುವಂತೆ ಆಗಬೇಕು. ಈ ಒಪ್ಪಂದದ ಪ್ರಕಾರವೇ, ಈ ಸಂದರ್ಭದಲ್ಲಿ ಹುಟ್ಟಿದ ಮಕ್ಕಳ ಖರ್ಚು, ವಿಸಿಟಿಂಗ್‌ ಹಕ್ಕು ಸಮಾನ ಆಗಬೇಕು, ಮಗು ಕೇವಲ ತಾಯಿಯ ಹೊಣೆ ಮಾತ್ರವಲ್ಲ.

ನಮ್ಮ ಪುರಾಣಗಳಲ್ಲೂ ಇಂಥ ಸಂಬಂಧಗಳಿಗೆ ಕೊರತೆ ಇಲ್ಲ. ವಿಶ್ವಾಮಿತ್ರ-ಮೇನಕೆಯರ ಸಂತಾನವಾದ ಶಕುಂತಲೆ ಇರಲಿ, ದುಷ್ಯಂತ-ಶಕುಂತಲೆಯರ ಮಗನಾದ ಭರತನಿಗೂ ಅದೇ ಗತಿ. 3 ವರ್ಷಗಳವರೆಗೂ ಅವನನ್ನು ಕಂಡೇ ಇರದ ದುಷ್ಯಂತ, ವಾರಸುದಾರರಿಲ್ಲದ ಕಾರಣ ಭರತನನ್ನು ಸ್ವೀಕರಿಸುತ್ತಾನೆ. ನಮ್ಮ ಘನ ಸರ್ಕಾರ, ಇವನ ಹೆಸರಿನಿಂದಾದ ಭಾರತ ಉಳಿಸಿಕೊಂಡು, ಇಂಡಿಯಾ ಬೇಡ ಎನ್ನುತ್ತಿದೆ!

ಇಂಥ ಲಿವ್ ಇನ್‌ ಖಂಡಿತಾ ಪಾಪವಲ್ಲ. ಇದು ಅನೈತಿಕ ಅಲ್ಲ, ಸಮಾಜೇತರ ಅಲ್ಲ. ಹ್ಞಾಂ, ಒಂದು ಮಟ್ಟಿಗೆ ಅವ್ಯವಹಾರಿಕ. ಹುಡುಗಿಗೆ ಹೆಚ್ಚಿನ ಧೈರ್ಯವಿದ್ದರೆ, ತಪ್ಪೇ ಇಲ್ಲ. `ಜಾನ್‌’ ಚಿತ್ರದಲ್ಲಿ ಶಾರೂಖ್‌ ಪಾತ್ರ ಇಂಥದ್ದೇ ಹುಡುಗಿ ಜೊತೆ ಮದುವೆ ಆಗುತ್ತದೆ, ಅವಳಿಗೆ ಇಂಥ ಸಂಬಂಧದಿಂದ ಈಗಾಗಲೇ ಒಬ್ಬ ಮಗಳಿರುತ್ತಾಳೆ.

ಈ ಮುಂಚೆ ಬಂದಿದ್ದ ಅಮಿತಾಬ್ ‌ಅಭಿಷೇಕ್‌ ರ `ಪಾ’ ಚಿತ್ರದಲ್ಲೂ ವಿದ್ಯಾಬಾಲನ್‌ ಇಂಥದ್ದೇ ಸಂಬಂಧದಿಂದ ಮಗನನ್ನು ಪಡೆಯುತ್ತಾಳೆ, ವೀಕ್ಷಕರು ಏನೂ ಆಕ್ಷೇಪಿಸಲಿಲ್ಲ. ಇದು ಸಭ್ಯ ಉದಾರ ಸಮಾಜದ ಗುರುತು, ಕಂದಚಾರಿಗಳು ಮಾತ್ರ ಇದನ್ನು ವಿರೋಧಿಸುತ್ತಾರೆ. ವ್ಯಾಲೆಂಟೈನ್ಸ್ ಡೇನಂದು ದೊಣ್ಣೆ ತಂದು, ಇಂಥ ಜೋಡಿಗಳನ್ನು ಥಳಿಸಿ, ಬಲವಂತದ ಮದುವೆ ಮಾಡಿಸುತ್ತಾರೆ.

ಅಸಲಿಗೆ ಮುಸ್ಲಿಂ ಸಮಾಜಕ್ಕೆ ಬೇಕಾಗಿಲ್ಲ. ಅವರ ಕಾನೂನು ಸದಾ ಸ್ತ್ರೀಪರವಾಗಿದೆ, ಕನಿಷ್ಠ 1956ಕ್ಕೆ ಮೊದಲು ಹಿಂದೂ ಸನಾತನ ವಿವಾಹ ಹಾಗೂ ಸಾಂಪ್ರದಾಯಿಕ ಕಾನೂನಿನಂತಲ್ಲ. ಅವರಲ್ಲಿನ ಓಪನ್‌ ಮ್ಯಾರೇಜ್‌ ಪದ್ಧತಿ, ಒಂದು ವಿಧದಲ್ಲಿ ಲಿವ್ ‌ಇನ್‌ ಸಂಬಂಧಕ್ಕೆ ಕಾನೂನಿನ ಚೌಕಟ್ಟು ಒದಗಿಸುತ್ತದೆ. ಆದರೆ ನಮ್ಮ ಸನಾತನ ಸರ್ಕಾರ ಎಂದೂ ಹೆಂಗಸರ ಪರವಾಗಿ ಕಾನೂನು ರಚಿಸದು! ಸೀತೆ ದೇವಿಯೇ ಆಗಿದ್ದರೂ, ಲಕ್ಷ್ಮಣರೇಖೆ ಮೀರುವಂತಿಲ್ಲ.

ಮದುವೆಯ ಮಾರ್ಗ ಸುಲಭವೇನಲ್ಲ

ಇತ್ತೀಚೆಗೆ ಮದುವೆ ಆಗಬಯಸುವ ಯುವಜನತೆ, ತುಸು ಹೆಚ್ಚು ವಿವೇಕ, ಜಾಗೃತಿ ಇರಿಸಿಕೊಂಡೇ ಮುಂದುವರಿಯಬೇಕು. ಇತ್ತೀಚೆಗೆ ಆಗ್ರಾದಲ್ಲಿ ನಡೆದ ಘಟನೆ. ಅಲ್ಲಿನ ಪೊಲೀಸ್‌ ಠಾಣೆ ತಲುಪಿದ ನವ ವಿವಾಹಿತ ಪತಿಯೊಬ್ಬ, ತನ್ನ ಹೊಸ ಪತ್ನಿ  ಮನೆಯಲ್ಲಿದ್ದ ಹಣಒಡವೆ ದೋಚಿಕೊಂಡು ಪರಾರಿ ಆಗಿದ್ದಲ್ಲದೆ, ತವರಿನವರ ಬೆಂಬಲದಿಂದ ಈಗ ಮಾಜಿ ಪ್ರೇಮಿ ಜೊತೆ ವಾಸಿಸುತ್ತಿದ್ದಾಳಂತೆ.

ಮದುವೆಗೆ ಮೊದಲೇ ಇವನಿಗೆ, ಹುಡುಗಿ ಹಿಂದೆ ಒಬ್ಬ ಮಜ್ನು ಇದ್ದಾನೆ ಎಂಬ ಬಗ್ಗೆ ತಿಳಿಸಲಾಗಿತ್ತಂತೆ. ಆದರೆ ಈತ ನಿಶ್ಚಯವಾದ ಮದುವೆ ಮುರಿಯಲು ಬಯಸಲಿಲ್ಲ. ಯೌವನದ ಹುಚ್ಚು ಹೊಳೆಗೆ ಬಿದ್ದಿದ್ದ ಈತ, ಪತ್ನಿಯ ತಪ್ಪುಗಳನ್ನು ದೊಡ್ಡದಾಗಿ ಭಾವಿಸಲಿಲ್ಲ.

ಹಲವು ತಿಂಗಳ ನಂತರ ಆ ಪತ್ನಿಗೆ ಪ್ರೇಮಿಯೂ ಬೇಕಾಗಲಿಲ್ಲ ಅಂತ ತವರಿಗೆ ಮರಳಿದಳು. ಇದೀಗ ಇವರಿಬ್ಬರೂ ಠಾಣೆ ಠಾಣೆ ತಿರುಗಾಡುತ್ತಿದ್ದಾರೆ. ಪೊಲೀಸರು ಈ ಪತಿ ಪತ್ನಿಯರಲ್ಲಿ ಯಾರನ್ನು ಬಂಧಿಸಲಿದ್ದಾರೋ ತಿಳಿಯದಾಗಿದೆ.

ಇದೇ ತರಹ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ, ಭಾವನ ಹಿಂದೆ ಬಿದ್ದ ನಾದಿನಿ (ಅವನ ಪತ್ನಿಯ ತಂಗಿ), ಮದುವೆ ಆದ ಮೇಲೆ ತನ್ನ ಅನೈತಿಕ ಸಂಬಂಧ ಮುಂದುವರಿಸಲು, ಭಾವನ ಕೈಯಿಂದಲೇ ಗಂಡನನ್ನು ಕೊಲ್ಲಿಸಿದಳು. ಇದರಿಂದ ತನ್ನಕ್ಕನ ಗತಿ ಏನಾದೀತೆಂದು ಅವಳು ಚಿಂತಿಸಲೂ ಇಲ್ಲ. ಅವಳಿಗೆ ಭಾವನ ಹುಚ್ಚು ಪ್ರೇಮ ಕಾಮಗಳು ಮಾತ್ರ ಬೇಕಿತ್ತು.

ಹೀಗಾಗಿ ಇಂದಿನ ಯುವಜನತೆ, ಮದುವೆಗೆ ಮೊದಲು, ಭಾವಿ ಸಂಗಾತಿಗೆ ಯಾರುಯಾರ ಜೊತೆ ಎಂತೆಂಥ ಸಂಬಂಧ ಇತ್ತು ಎಂಬುದನ್ನು ಕ್ಲಿಯರ್‌ ಆಗಿ ತಿಳಿದುಕೊಳ್ಳಬೇಕು. ಆದರೆ ಈಗಿನ ಕಾಲದಲ್ಲಿ ಗಂಡಿಗೆ ಹೆಣ್ಣೇ ಸಿಗುತ್ತಿಲ್ಲ ಅಂತಿರುವಾಗ, ಇದನ್ನೆಲ್ಲ ಕೂಲಂಕಷವಾಗಿ ವಿಚಾರಿಸುತ್ತಾ ಕೂರಲು ಯಾರಿಗೂ ಪುರಸತ್ತಿಲ್ಲ. ತಾನೇ ಹುಡುಕಿದರೂ, ಹಿರಿಯರೇ ಗೊತ್ತುಪಡಿಸಿದರೂ ಇಂದಿನ ಮದುವೆಗಳಲ್ಲಿ ರಿಸ್ಕ್ ತಪ್ಪಿದ್ದಲ್ಲ.

ಭಾರತದಲ್ಲಿ ಇತ್ತೀಚೆಗೆ 1500ಕ್ಕೂ ಹೆಚ್ಚು ಮ್ಯಾಟ್ರಿಮೋನಿಯಲ್ ಸೈಟ್ಸ್ ಅಭಿವೃದ್ಧಿಗೊಂಡಿವೆ. ಎಷ್ಟೋ ಮಂದಿ ಗಂಡುಗಳು ಹಲವು ಹನ್ನೊಂದು ಸೈಟ್‌ ಗಳಲ್ಲಿ ತಮ್ಮ ಹೆಸರು ನೊಂದಾಯಿಸಿರುತ್ತಾರೆ. ಈ ರೀತಿ ಕೋಟಿಗಟ್ಟಲೆ ಯುವಜನತೆ ಸಂಗಾತಿ ಹುಡುಕುತ್ತಿದ್ದಾರೆ. ಇದಕ್ಕಾಗಿ ಅವರು ಸಾವಿರಾರು ರೂ. ಖರ್ಚು ಮಾಡುತ್ತಾರೆ. ತಮ್ಮನ್ನು ತಾವು ಅಪ್‌ ಗ್ರೇಡ್‌ ಮಾಡಿಕೊಳ್ಳಲು ಅಹರ್ನಿಶಿ ಹೋರಾಡುತ್ತಾರೆ. ಇಂಥ ಸೈಟ್ಸ್ ವಾರ್ಷಿಕ 20 ಸಹಸ್ರ ಕೋಟಿಗೂ ಹೆಚ್ಚು ಬಾಚಿಕೊಳ್ಳುತ್ತಿವೆ. ಆಧುನಿಕ ವಿಧಾನದಲ್ಲಿ ಸಂಗಾತಿ ಹುಡುಕಲು ಇದೂ ಒಂದು ಮಾಧ್ಯಮ.

ವಿವಾಹಕ್ಕೆ ಮೊದಲು ಸೂಕ್ತವಾಗಿ ವಿಚಾರಿಸಿಕೊಳ್ಳದಿದ್ದರೆ, ಮೇಲಿನ 2 ಕೇಸುಗಳಂತೆ ಎಡವಟ್ಟು ತಪ್ಪದು. ಭವಿಷ್ಯದ ದಿನಗಳಲ್ಲಿ ಸದಾ ಕೋರ್ಟು, ಠಾಣೆ, ಜೈಲು, ವಕೀಲರಿಗೆ ಫೀಸು ಎಂದು ಗೋಳಾಡುವುದೇ ಆಗಿಹೋಗುತ್ತದೆ. ವೈವಾಹಿಕ ಕೇಂದ್ರಗಳು ಇದರ ಲಾಭ ಪಡೆಯುತ್ತಾ ಬೇಕಾದಷ್ಟು ಮೋಸ ಮಾಡುತ್ತವೆ. ಕಮೀಶನ್‌ಆಧಾರದಲ್ಲಿ ಕೆಲಸ ಮಾಡುವ ಇವು, ದೇಶಾದ್ಯಂತ ಕಬಂಧ ಬಾಹು ಚಾಚಿಕೊಂಡಿವೆ.

ಹೀಗೆ ಯುವಜನತೆಯಲ್ಲೇ ಇಷ್ಟು ಕೊರತೆ ಇರುವಾಗ, ಪುಣ್ಯಕ್ಕೆ ಯಾರು `ಹ್ಞೂಂ’ ಅಂದಿದ್ದರೋ ಅವರ ಹಿಂದಿನ ಜಾತಕವನ್ನೆಲ್ಲ ಯಾರು ಹುಡುಕಾಡಲು ಹೋಗುತ್ತಾರೆ? ಏನೋ ಒಂದಿಷ್ಟು ಡಿಟೆಕ್ಟಿವ್ ಏಜೆನ್ಸಿಗಳಿದ್ದು, ಅವು ಫ್ರಾಡ್‌ ಮಾಡುವಲ್ಲಿ ಹಿಂದುಳಿದಿಲ್ಲ. ನಕಲಿ ರಿಪೋರ್ಟ್ಸ್ ನೀಡಿ, ಸದಾ ಹಣ ಹೀರುತ್ತವೆ. ಪತಿ ಪತ್ನಿ ಪರಸ್ಪರ ಹಿಂದಿನ ಇತಿಹಾಸ ಕೆಣಕುತ್ತಾ ಕೂತರೆ, ಸಂಬಂಧ ಹುಳಿ ಹುಳಿಯಾಗುತ್ತದೆ.

ವೈವಾಹಿಕ ಅಪರಾಧಗಳಿಗಾಗಿ ಪೀನಲ್ ಕೋಡ ಕಲಂ 415, 416, 417, 419 ಇತ್ಯಾದಿಗಳಿದ್ದು, ಈ ಕಾನೂನಿನ ನಿಯಮಗಳು ಕೇವಲ ಪುಸ್ತಕದ ಬದನೆಕಾಯಿಗಳಾಗಿವೆ. ಇದರ ಶಿಸ್ತಿನ ಕಟ್ಟಳೆಗಳಂತೆ ಸಮಾಜದಲ್ಲಿ ಏನೂ ನಡೆಯುವುದಿಲ್ಲ. ಕೋರ್ಟುಗಳು ಎಲ್ಲವನ್ನೂ ಸರಿಪಡಿಸಲು ಆಗುವುದೂ ಇಲ್ಲ. ಕೋರ್ಟ್‌ ಕಛೇರಿ ವ್ಯವಹಾರದಿಂದ ಎರಡೂ ಪಕ್ಷಗಳ ಮನಃಸ್ಥಿತಿ ಇನ್ನಷ್ಟು ಹಳಸುತ್ತದೆ. ಸಂಬಂಧ ಸುಧಾರಿಸುವ ಬದಲು ಇಗೋ ಕ್ಲಾಶ್‌ ಮತ್ತಷ್ಟು ಹೆಚ್ಚುತ್ತದೆ.

ಮದುವೆಯನ್ನು ಎಷ್ಟೇ ಪವಿತ್ರ ಬಂಧ ಎಂದೆಲ್ಲ ಬಣ್ಣಿಸಿಕೊಂಡರೂ, ಧರ್ಮದ ಲೇಪ ಅಂಟಿಸಿದರೂ, ಪೌರಾಣಿಕ ಕಾಲದಿಂದ ಆಧುನಿಕ ದಿನಗಳವರೆಗೂ, ವಿವಾಹದ ಸಂಬಂಧ ಮೊದಲ ದಿನದಿಂದ ಹೆಚ್ಚು ಪ್ರಗಾಢ, ವಿಶ್ವಸನೀಯ ಆಗುತ್ತದೆ ಎಂಬ ಗ್ಯಾರಂಟಿ ಏನೂ ಇಲ್ಲ. ಇದನ್ನು ಪರಸ್ಪರ ಪತ್ನಿ ಪತ್ನಿ ಏರ್ಪಡಿಸಿಕೊಳ್ಳಬೇಕಷ್ಟೆ. ಪ್ರತಿ ಮದುವೆಯಲ್ಲೂ ಹತ್ತು ಹನ್ನೊಂದು ಲೋಪದೋಷ ಇದ್ದೇ ಇರುತ್ತದೆ. ಇದನ್ನು ಅರೇಂಜ್ಡ್ ಯಾ ಲವ್ ಮ್ಯಾರೇಜ್‌ ಗಳಲ್ಲಿ ಯಾರೂ ಕೂಲಂಕಷ ಪರೀಕ್ಷಿಸಲಾಗದು.

ಇಂದಿನ ಯುವ ಜನತೆಗೆ ನಿಜಕ್ಕೂ ಇದೊಂದು ಸವಾಲೇ ಸರಿ. ಯಾವ ಸಂಗತಿ ಕೆದಕಲು ಹೋದರೂ, ಏನೋ ಒಂದು ಮುಳ್ಳು ಚುಚ್ಚದೇ ಇರದು. ನಮ್ಮ ದೇಶದಲ್ಲಂತೂ ಜಾತಿ, ಕುಲ, ಗೊತ್ರ, ಭಾಷೆ, ಧರ್ಮಗಳೆಂಬ ನೂರಾರು ಅಡಚಣೆಗಳಿವೆ. 140 ಕೋಟಿಗೂ ಮೀರಿದ ಜನಸಂಖ್ಯೆ ಇರುವ ಈ ನಮ್ಮ ದೇಶದಲ್ಲಿ, ಮನ ಬಯಸಿದ ಸಂಗಾತಿ ಸಿಗುವುದು ಸುಲಭದ ಮಾತಲ್ಲ. ಇಷ್ಟಾದರೂ ಮದುವೆಗಳಂತೂ ನಡೆಯುತ್ತಿವೆ. ಕೋಟ್ಯಂತರ ಹಣ ಖರ್ಚು ಆಗುತ್ತಲೇ ಇದೆ….

ಮಂದಿರದ ಹೆಸರಲ್ಲಿ ಸುಳ್ಳಿನ ಆಸರೆ

ಹಿಂದೂ ಮುಸ್ಲಿಂ ಹೆಸರಲ್ಲಿ ಹೋರಾಟ ಸಾಲದೆಂಬಂತೆ ಈಗ ಹಿಂದೂ ಸಿಖ್ಖರ ಕದನ ತಾರಕಕ್ಕೇರಿದೆ. ಯಾವ ಪತ್ನಿ ತನ್ನ ಪತಿಗೆ, ತನ್ನದೇ ಅಣ್ಣತಮ್ಮಂದಿರ ಆಸ್ತಿ ಲಪಟಾಯಿಸಲು ಒತ್ತಾಯಿಸುತ್ತಾಳೋ, ಅವಳ ಅಣ್ಣತಮ್ಮ ಇವಳ ಪತಿಯ ಆಸ್ತಿ ಹೊಡೆಯಲು ಹುನ್ನಾರ ನಡೆಸದಿರುತ್ತಾರೆಯೇ? ಅನಗತ್ಯ ಜಗಳಗಳಿಗೆ ವಿಷದ ಬೀಜ ಬಿತ್ತಿದರೆ, ಅದರಿಂದ ವಿಷಮಯ ಫಸಲಷ್ಟೇ ಬಂದೀತು, ಪೌಷ್ಟಿಕ ಧಾನ್ಯವಲ್ಲ. ಇಂದು ಭಾರತದಲ್ಲಿ ಹೆಂಗಸರು ತಮ್ಮ ತಂದೆಯ ಆಸ್ತಿಯಲ್ಲಿ ಹಕ್ಕು ಬೇಕೆಂದು ಹೋರಾಡುತ್ತಿದ್ದರೆ, ಇಂಥವರಿಗೆ ತಮ್ಮ ನಾದಿನಿಯರು ನಾಳೆ ಇದೇ ಕೆಲಸ ಮಾಡುತ್ತಾರೆ ಎಂಬುದು ನೆನಪಿರಬೇಕು. ಯಾವುದೇ ಸಮಸ್ಯೆ ಇದ್ದರೂ, ಅದನ್ನು ಮನೆಯ 4 ಗೋಡೆಗಳ ಮಧ್ಯೆ ಪ್ರೀತಿಯಿಂದ ಚರ್ಚಿಸಿ ಸರಿಪಡಿಸಿಕೊಳ್ಳಬೇಕೇ ಹೊರತು, ಕೋರ್ಟಿನ ಗೊಡವೆ ಏಕೆ? ಪರರ ಮನೆಗೆ ಹಚ್ಚಿದ ಬೆಂಕಿ ತಮ್ಮ ಮನೆ ಸುಡದೆ ಇರುತ್ತದೆಯೇ?

ಭಾರತದ ಹಿಂದೂ ಕಂದಾಚಾರಿಗಳು ಮನಸ್ಸು ತೆರೆದು ಸಂತಸ ವ್ಯಕ್ತಪಡಿಸಿಕೊಂಡರು. ಮುಸ್ಮಾನರು, ದಲಿತರು, ಶೂದ್ರರಿಗೆ ಪಾಠ ಕಲಿಸುವ ಸರ್ಕಾರ ಮಂದಿರದ ಹೆಸರಲ್ಲಿ ಸುಳ್ಳಿನ ಆಸರೆ ಪಡೆದು ಬೃಹದಾಕಾರ ಬೆಳೆದುಬಿಟ್ಟಿದೆ, ಇದರಿಂದ ಹಿಂದಿನ ಪೌರಾಣಿಕ ದಿನಗಳು ಮರಳಿ ಬಂದಾವು…. ಇದರಲ್ಲಿ ಕೆಳಜಾತಿ ಇರುವುದೇ ಸೇವೆಗೆ ಎಂದಾಗುತ್ತದೆ. ಈ ಕಂದಾಚಾರಿಗಳಿಗೆ ಹೆಂಗಸರೂ ಅಷ್ಟೇ ಸಹಕಾರ ನೀಡುತ್ತಾರೆ. ಆದರೆ ಈ ಕಾರಣದಿಂದ ಬೀಗ ಹಾಕದೆಯೇ ಇವರನ್ನು ಮನೆಗಳಲ್ಲಿ ಬಂಧಿಸಲಾಗುತ್ತದೆ ಎಂಬುದನ್ನು ಇವರು ಮರೆಯುತ್ತಾರೆ. ಇವರ ಟ್ಯಾಲೆಂಟ್ ಕೇವಲ ತಂಬೋಲ ಆಡಲು ಮಾತ್ರ ಸೀಮಿತ.

ಹಿಂದೂ ಮುಸ್ಲಿಮರ ಜಗಳದಿಂದ ಶುರುವಾದ ಬೆಂಕಿ ಅನ್ಯ ಧರ್ಮಗಳನ್ನೂ ದಹಿಸಲಾರಂಭಿಸಿದೆ. ಕೆನಡಾದಲ್ಲಿರುವ ಲಕ್ಷಾಂತ ಸಿಖ್ಖರು  ಕೂಲಿಗೆಂದು ಹೋದರು, ಅಲ್ಲೀಗ ಸಾವಿರಾರು ಎಕರೆಗಳ ಮಾಲೀಕರಾಗಿದ್ದಾರೆ. ಭಾರತದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು, ನಕ್ಸಲರು, ದೇಶ ದ್ರೋಹಿಗಳಾಗಿ ಮಾಡುತ್ತಿರುವಂತೆ, ತಮ್ಮ ಖಲಿಸ್ತಾನದ ಗುರಿಯಿಲ್ಲದ ಬೇಡಿಕೆಗಾಗಿ ಹೋರಾಡುತ್ತಿದ್ದಾರೆ.

ಪಂಜಾಬ್‌ ರಾಜ್ಯದಲ್ಲಿ ಖಲಿಸ್ತಾನದ ಪರಿಕಲ್ಪನೆ ಒಳಗೊಳಗೇ ರೂಪುಗೊಳ್ಳುತ್ತಿದೆಯೋ ಏನೋ ಸ್ಪಷ್ಟತೆ ಇಲ್ಲ, ಆದರೆ ಒಂದಂತೂ ನಿಜ, ಬಿಜೆಪಿ ಇದರಲ್ಲಿ ಮೂಗು ತೂರಿಸಿದೆ. ಇದರೊಂದಿಗೆ ಅಲ್ಲಿನ ಪ್ರಕಾಶ್‌ ಸಿಂಗ್‌ ಬಾದ್‌ ಪಕ್ಷದ ಅಕಾಲಿ ದಳ ಧೂಳು ಸೇರಿದೆ, ಅದು ಹಿಂದೂ ಮುಸ್ಲಿಂ ವಿವಾದಕ್ಕೆ ಇಂಬು ನೀಡುತ್ತಿತ್ತು. ಪಂಜಾಬ್‌ ಫ್ರಸ್ಟ್ರೇಶನ್‌ ನಲ್ಲಿ ಡ್ರಗ್ಸ್ ಮಾರ್ಗ ಹಿಡಿದಿದೆ. ಭಾರತದ ಹೊರಗಿರುವ ಸಿಖ್ಖರು ಖುಲ್ಲಂಖುಲ್ಲ ಖಲಿಸ್ತಾನದ ಕನಸು ಕಾಣುತ್ತಿದ್ದಾರೆ. ಈ ಕಾರಣದಿಂದಲೇ ಭಾರತ ಕೆನಡಾ ಸಂಬಂಧ ಬಹಳ ಹದಗೆಡುತ್ತಿದೆ. ಹೀಗಾಗಿ ಅಮೆರಿಕಾ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ನ್ಯೂಝಿಲೆಂಡ್‌ ತಮ್ಮ ಸೋದರದೇಶ ಕೆನಡಾ ಪರವಾಗಿ ನಿಂತಿವೆ. ಖಲಿಸ್ತಾನದ ಕಹಳೆ ಈ ದೇಶಗಳಲ್ಲೂ ಇಷ್ಟರಲ್ಲಿ ಮೊಳಗಲಿದೆ.

ಇದರ ನಿವಾರಣೆ ಕೇವಲ ನೀನಾ ನಾನಾ ಎಂದು ಕೈ ಕೈ ಮಿಲಾಯಿಸುವುದರಿಂದ ಆಗದು. ಯಾರಿಗೆ ಅಭಿಪ್ರಾಯ ಭೇದವಿದೆಯೋ ಅವರನ್ನು ಒಂದೆಡೆ ಕೂರಿಸಿ, ತಣ್ಣಗೆ ಏನಾದರೂ ಸವಿಯಲು ಕೊಟ್ಟು, ನಂತರ ಮಾತುಕತೆಯಿಂದ ಪರಿಹರಿಸಬೇಕು. ಆದರೆ ಸದಾ ಲಾಠಿ ಹಿಡಿದು ಹೋರಾಡುವ ಮನೋಭಾವ ಜಗಳ ಪರಿಹರಿಸದು. ಇಲ್ಲಿನ ಜನತೆ, ಇದರ ಸರ್ಕಾರ ಎರಡಕ್ಕೂ ಅದು ಬೇಕಿಲ್ಲ. ಯಾರು ಪಾರ್ಟಿಗಳಲ್ಲಿ, ಕಿಟೀಗಳಲ್ಲಿ, ವಾಟ್ಸ್ ಆ್ಯಪ್‌ ಮೆಸೇಜುಗಳ ಮೂಲಕ ಹಿಂದೂ ಮುಸ್ಲಿಮರನ್ನು ಬೇರ್ಪಡಿಸುವರೋ, ತಾವೇ ಕೈಯಾರೆ ದೇಶ ತುಂಡರಿಸುತ್ತಿದ್ದೇವೆ ಎಂಬುದನ್ನು ಮರೆಯಬಾರದು. ಇದು ಪಕ್ಕದ ಮನೆಯರತ್ತ ಪಟಾಕಿ ಎಸೆಯುವ ಮನೋಭಾವ ಆಗಿದೆ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ