ರಾಘವೇಂದ್ರ ಅಡಿಗ ಎಚ್ಚೆನ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಜೈಲಿನಿಂದ ಹೊರ ಬಂದ ತಕ್ಷಣ ಅವರ ಜೊತೆ ನಾನೇ ಸಿನಿಮಾ ಮಾಡೋದು ಎಂದು ಸ್ಯಾಂಡಲ್ವುಡ್ ಸ್ಟಾರ್ ನಿರ್ದೇಶಕ ಜೋಗಿ ಪ್ರೇಮ್ ಅವರು ಹೇಳಿದ್ದಾರೆ.
ಜೋಗಿ ಪ್ರೇಮ್ ಅವರು ತಮ್ಮ ಸಿನಿಮಾಗಳ ನಿರ್ದೇಶನದಲ್ಲಿ ಬ್ಯುಸಿ ಇದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಜೊತೆಗಿನ ಬಹುನಿರೀಕ್ಷಿತ ಕೆಡಿ ಮೂವಿ ಬಗ್ಗೆ ಇನ್ನಷ್ಟು ಅಪ್ಡೇಟ್ಸ್ ಬರಬೇಕಿದೆ. ಕೆಡಿ ಮೂವಿಯ ಸಾಂಗ್ ಈಗಾಗಲೇ ಜನರ ಮೆಚ್ಚುಗೆ ಗಳಿಸಿದೆ. ಇದರ ನಡುವೆ ಜೋಗಿ ಪ್ರೇಮ್ ಅವರು ಲೈಫ್ ಟುಡೇ ಸಿನಿಮಾಕ್ಕಾಗಿ ಒಂದು ಒಳ್ಳೆಯ ಹಾಡು ಹಾಡಿದ್ದಾರೆ. ಸಿನಿಮಾದ ಸಾಂಗ್ ಹಾಡಿದ ಬಳಿಕ ಜೋಗಿ ಪ್ರೇಮ್ ಅವರು ದರ್ಶನ್ ಬಗ್ಗೆ ಮಾತನಾಡಿದ್ದಾರೆ.
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದಾರೆ. ಈ ಬಗ್ಗೆ ಪ್ರಸಾರ ಆಗುತ್ತಿರುವ ಸುದ್ದಿಗಳ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್ ಅವರು ಮಾತನಾಡಿದ್ದಾರೆ. ‘ದರ್ಶನ್ ಸುದ್ದಿಯನ್ನು ಮಿಲಿಯನ್ಗಟ್ಟಲೆ ಜನರು ನೋಡುತ್ತಾರೆ. ದರ್ಶನ್ ಅವರಿಗೆ ನೋವಿದೆ. ಕೆಲವರದ್ದು ಸೇಡಿಸ್ಟ್ ಮನಸ್ಥಿತಿ. ದರ್ಶನ್ ಅವರ ನೋವು ನೋಡಿ ಕೆಲವರಿಗೆ ಖುಷಿ ಆಗುತ್ತದೆ. ಅಂಥವರ ಮನಸ್ಥಿತಿಯನ್ನು ದೇವರೇ ಬದಲಾಯಿಸಬೇಕು’ ಎಂದು ಜೋಗಿ ಪ್ರೇಮ್ ಅವರು ಹೇಳಿದ್ದಾರೆ.
ನಿರ್ದೇಶಕ ಪ್ರೇಮ್, ದರ್ಶನ್ ಅವರ ಸ್ಥಿತಿಯ ಬಗ್ಗೆ ಮಾತನಾಡಿದರು. ಈಗ ಎರಡನೇ ಬಾರಿ ಜೈಲಿಗೆ ಹೋಗುವ ಮುಂಚೆ ಸಹ ದರ್ಶನ್ ಅವರನ್ನು ಭೇಟಿ ಆಗಿದ್ದನ್ನು ನೆನಪು ಮಾಡಿಕೊಂಡರು. ಜೈಲಿಗೆ ಹೋಗುವ ಎರಡು ದಿನಕ್ಕೆ ಮುಂಚೆ ಸಹ ಭೇಟಿ ಆಗಿದ್ದೆ. ಅವರ ನೋವು ಅವರಿಗೆ ಗೊತ್ತಿರುತ್ತದೆ. ಆದರೆ ಕೆಲವರು ಇರುತ್ತಾರೆ ಎಲ್ಲದರಲ್ಲೂ ಮಜಾ ತೆಗೆದುಕೊಳ್ಳುವವರು. ಅವರಿಗೆ ಏನೂ ಮಾಡಲು ಆಗಲ್ಲ, ಒಳ್ಳೆಯದಾಗಲಿ ಎಂದು ಹಾರೈಸಬಹುದಷ್ಟೆ ಎಂದರು.
ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ದರ್ಶನ್ ಅವರು ಸದ್ಯ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ. ಡೆವಿಲ್ ಮೂವಿ ಶೂಟಿಂಗ್ ಪೂರ್ಣಗೊಳಿಸಿರುವ ದರ್ಶನ್, ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಜೈಲಿಗೆ ಹೋಗಿದ್ದಾರೆ. ಬಳ್ಳಾರಿ ಜೈಲಿಗೆ ಕಳುಹಿಸಬೇಕು ಎನ್ನುವ ಅರ್ಜಿ ಕೋರ್ಟ್ನಲ್ಲಿದ್ದು ಈ ಬಗ್ಗೆ ಇಂದು ಸಂಜೆ ಅಂತಿಮ ತೀರ್ಮಾನ ಹೊರ ಬೀಳಬಹುದು.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ