ಪೋರ್ನ್ ಚಿತ್ರಗಳ ತಯಾರಿಯ ಆರೋಪದಡಿ ಜೇಲು ಕಂಡು ಬಂದ ಗೆಹನಾ, ತನ್ನನ್ನು ತಾನು ನಿರಪರಾಧಿ ಎಂದೇ ಭಾವಿಸುತ್ತಾಳೆ. ಈಕೆಯ ರೀಲ್ ರಿಯಲ್ ಲೈಫ್ ಕುರಿತು ಒಂದಿಷ್ಟು ತಿಳಿಯೋಣವೇ….?
ಏಕ್ತಾ ಕಪೂರ್ ಳ ವೆಬ್ ಸೀರೀಸ್ `ಗಂದೀ ಬಾತ್’ನಲ್ಲಿ ಕೆಲಸ ನಿರ್ವಹಿಸಿ, ಗೆಹನಾ ವಸಿಷ್ಠ್ ತನ್ನ ಬೋಲ್ಡ್ ವೆಬ್ ಸೀರೀಸ್ ಸಾಲಿಡ್ ಬೋಲ್ಡ್ ಚಟುವಟಿಕೆಗಳಿಂದ ಸದಾ ಚರ್ಚೆಯಲ್ಲಿರುತ್ತಾಳೆ. ಕಂಪ್ಯೂಟರ್ ಸೈನ್ಸ್ ಡಿಗ್ರಿ ಪಡೆದಿರುವ ಈಕೆ, ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಹಾಗೂ ಉಮೇಶ್ ಕಾಮತ್ ಜೊತೆ ಸೇರಿ ಪೋರ್ನ್ ಚಿತ್ರಗಳ ತಯಾರಿಯ ಆರೋಪದಲ್ಲಿ 3 ತಿಂಗಳ ಸೆರೆವಾಸ ಅನುಭವಿಸಿದ್ದಾಳೆ. ಇದಲ್ಲದೆ ಈಕೆ ಬಾಲಿವುಡ್ ಹಾಗೂ ಹಲವು ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿದ್ದಾಳೆ. ಜೊತೆಗೆ ಹಿಂದಿ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾಳೆ.
ಈಕೆಯ ಕುಟುಂಬದವರೆಲ್ಲ ಸುಶಿಕ್ಷಿತರು. ತಾಯಿ ಡಾಕ್ಟರ್, ತಂದೆ ಹಾಗೂ ಇಬ್ಬರು ಅಣ್ಣಂದಿರು ಎಂಜಿನಿಯರ್ಸ್! ಈಕೆ ಪೋರ್ನ್ ಚಿತ್ರಗಳ ಹೆಮ್ಮಾರಿ ಎಂಬ ಆರೋಪದ ಕುರಿತಾಗಿ ನಮ್ಮ ಪ್ರತಿನಿಧಿ ನಡೆಸಿದ ಸಂಭಾಷಣೆಯ ಮುಖ್ಯಾಂಶಗಳು :
ಏಕ್ತಾಳ `ಗಂದೀ ಬಾತ್’ ವೆಬ್ ಸೀರೀಸ್ ನಿಂದ ನೀನು ಖ್ಯಾತಳಾದೆ. ಇಂಥ ಕೆಟ್ಟ ವಿಚಾರದ ಪ್ರಾಜೆಕ್ಟ್ ನಂತರ ನೀನು ಉತ್ತಮ ಹಾಗೂ ಅಧಮ ಪ್ರಾಜೆಕ್ಟ್ ಗಳನ್ನು ಮಾಡಿದ್ದುಂಟೇ?
ನನಗೆ ಈ ಸೀರೀಸ್ ನ ಆಫರ್ ಬಂದು, ಇದರ ಸ್ಕ್ರಿಫ್ಟ್ ಓದಿದಾಗ, ತಕ್ಷಣ ಇದು ಚೆನ್ನಾಗಿಲ್ಲ ಎಂದೇ ಅನಿಸಿತು. ಏಕೆಂದರೆ ಇದರಲ್ಲಿ ನಾನು ಒಬ್ಬ ಮುದುಕನ ಜೊತೆ ಬೋಲ್ಡ್ ಸೀನ್ಸ್ ನಲ್ಲಿ ನಟಿಸಬೇಕಿತ್ತು. ಇದು ನನಗೆ ಖಂಡಿತಾ ಹಿಡಿಸಲಿಲ್ಲ, ಹೀಗಾಗಿ ಬೇಡ ಎಂದು ರಿಜೆಕ್ಟ್ ಮಾಡಿದೆ. ನಂತರ ನಿರ್ದೇಶಕರು ನನಗೆ ಮುದುಕನ ದೃಶ್ಯವೇ ಇರೋದಿಲ್ಲ ಎಂದು ಕನ್ವಿನ್ಸ್ ಮಾಡಿಸಿದರು. ಆದರೂ ನಾನು ಈ ಪಾತ್ರ ಬೇಡ ಎಂದೇ ತಿರಸ್ಕರಿಸಿದೆ. ಏಕೆಂದರೆ ಹಿಂದೆ ನಾನೆಂದೂ ಇಂಥ ಬೋಲ್ಡ್ ಸೆಕ್ಸಿ ಪಾತ್ರ ಮಾಡಿದ್ದಿಲ್ಲ! ಕೊನೆಗೆ ನಾನು ಈ ಪಾತ್ರ ಒಪ್ಪದಿದ್ದರೆ, ಬಾಲಾಜಿ ಟೆಲಿ ಫಿಲ್ಮ್ ಮುಂದೆ ನನಗೆ ಬೇರಾವ ಅವಕಾಶವನ್ನೂ ನೀಡುವುದಿಲ್ಲ ಎಂದು ಘೋಷಿಸಿತು.
ಹೀಗಾಗಿ ವಿಧಿಯಿಲ್ಲದೆ ನಾನು ಒಪ್ಪಬೇಕಾಯಿತು. ಇದಕ್ಕೆ ಮೊದಲು ನಾನು ಇಂಥ ಮೈ ನವಿರೇಳಿಸುವ ಚುಂಬನದ ದೃಶ್ಯಗಳಲ್ಲಿ ಪಾಲ್ಗೊಂಡಿದ್ದೇ ಇಲ್ಲ! ಈ ಸೀರೀಸ್ ನಲ್ಲಿ ನನಗೆ ಹೀರೋ ಆದವನು ಪೌರಾಣಿಕ ಧಾರಾವಾಹಿಗಳಲ್ಲಿ ರಾಕ್ಷಸನ ಪಾತ್ರ ವಹಿಸುತ್ತಿದ್ದ ನಟ. ಆತನೂ ಇಂಥ ಪಾತ್ರ ಮಾಡೇ ಇರಲಿಲ್ಲವಂತೆ. ಹೀಗಾಗಿ ನಮ್ಮಿಬ್ಬರಿಗೂ ಈ ದೃಶ್ಯದಲ್ಲಿ ಬೆವರು ಕಿತ್ತು ಬಂತು! ಏನು ಮಾಡುವುದೆಂದು ಗೊತ್ತಾಗಲಿಲ್ಲ. ಒಟ್ಟಾರೆ ಡೈರೆಕ್ಟರ್ ಹೇಳಿದಂತೆ ನಾವು ನಟಿಸಿದೆವು. ವಿಡಂಬನೆ ಎಂದರೆ ಈ ಸೀರೀಸ್ ನಿಂದಲೇ ಜನ ನನ್ನನ್ನು ಗುರುತಿಸುವಂತಾಯಿತು ಹಾಗೂ ನಾನು ಫೇಮಸ್ ಆದೆ.
ಮೊದಲ ಸಲ ನೀನು ಬೋಲ್ಡ್ ಶಾಟ್ ನಲ್ಲಿ ಕಾಣಿಸಿಕೊಂಡಾಗ ನಿನ್ನ ಪ್ರತಿಕ್ರಿಯೆ ಹೇಗಿತ್ತು?
`ಗಂದೀ ಬಾತ್’ಗಾಗಿಯೇ ನಾನು ಮೊದಲು ಇಂಥ ದೃಶ್ಯದಲ್ಲಿ ನಟಿಸಿದ್ದು. ಆರಂಭದಲ್ಲಿ ಬಲು ಸಂಕೋಚ, ಭಯದ ಕಾರಣ ನನ್ನ ಸ್ಥಿತಿ ಅಧ್ವಾನವಾಗಿತ್ತು. ಇಂಥ ಸೆಕ್ಸಿ ಶಾಟ್ ನೋಡುವವರಿಗೆ ಮಜಾ ಎನಿಸಬಹುದು, ಆದರೆ ಅಂಥ ದೃಶ್ಯದಲ್ಲಿ ನಟಿಸುವುದು ಎಂಥ ಮುಜುಗರ ಎಂಬುದು ಅನುಭವಿಸಿದವರಿಗೇ ಗೊತ್ತು! ಏಕೆಂದರೆ ಆ ಸಂದರ್ಭದಲ್ಲಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್, ಮೇಕಪ್ ಆರ್ಟಿಸ್ಟ್….. ಎಲ್ಲರೂ ತುದಿಗಾಲಲ್ಲಿ ನಿಂತು ಬೇಗ ಶೂಟ್ ಮುಗಿಸಬೇಕು ಅಂತಿರ್ತಾರೆ. ಡೈರೆಕ್ಟರ್ ಅಂತೂ ಸದಾ ಸಿಡಿಗುಟ್ಟುತ್ತಾ ಸರಿಯಾಗಿ ಮಾಡಿ, ಹೀಗೆ ಮಾಡಿ, ಹಾಗೆ ಮಾಡಿ, ಇದೆಂಥ ದರಿದ್ರದ ಕಿಸ್ಸು….. ಅಂತೆಲ್ಲ ರೇಗಾಡುತ್ತಿರುತ್ತಾರೆ. ಎಷ್ಟು ಸಾಧ್ಯವೋ ಅಷ್ಟು ಮಾಡುವುದು, ಆಗದೇ ಹೋದರೆ ಗುಡ್ ಬೈ ಅಂತ ಅಂದುಕೊಂಡೆ.
ಆದರೆ ನನ್ನ ಅದೃಷ್ಟಕ್ಕೆ ಈ ವೆಬ್ ಸೀರೀಸ್ ಹಿಟ್ ಆಗಬೇಕೇ? ಈ ಕಾರಣ ಮುಂದೆ ನನಗೆ ಹೆಚ್ಚಿನ ಅವಕಾಶಗಳು ಸಿಗತೊಡಗಿದವು.
ಎಷ್ಟೋ ಸಲ ಕಲಾವಿದರು ಇಂಥ ಇಂಟಿಮೇಟ್ ಸೀನ್ ಮಾಡುವಾಗ ನಿಜವಾದ ಪ್ರೇಮದಲ್ಲಿ ಮುಳುಗಿ ಹೋಗ್ತಾರಂತೆ. ನಿನಗೂ ಹೀಗೇ ಆಯ್ತೇನು?
ಹೌದು, ಇಂಥ ಸೀನ್ಸ್ ಮಾಡುವಾಗ ನಮ್ಮ ಎದುರಿನ ವ್ಯಕ್ತಿ ಬಹಳ ಒಳ್ಳೆಯವನು ಎನಿಸುತ್ತೆ. ಹೀಗಾಗಿ ಎಷ್ಟೋ ಜನ ಸೀರೀಸ್ ಮುಗಿದ ಮೇಲೂ ತಮ್ಮ ಅಫೇರ್ ಮುಂದುವರಿಸುತ್ತಾರೆ. ಇಂಥ ದೃಶ್ಯಗಳನಲ್ಲಿ ನಟಸಿದ ನಂತರ ಅದು ಕೆಟ್ಟದ್ದೇನಲ್ಲ ಅಂತ ನಿಮಗೆ ಅನಿಸಿದರೆ, ಗುಡ್ ಅನಿಸುವುದೇನೂ ತಪ್ಪಲ್ಲ! ಇಂಥ ದೃಶ್ಯಗಳಲ್ಲಿ ಎದುರಿನ ವ್ಯಕ್ತಿ ಪರ್ಸನಲಿ ಲೈಕ್ ಆಗಲೇಬೇಕು ಅಂತೇನಿಲ್ಲ. ಆದರೆ ಯಾರನ್ನು ನಾವು ಮನದಲ್ಲೇ ಆಸೆ ಪಡುತ್ತಾ, ಇರುತ್ತೇವೋ, ಅಂಥವರ ಜೊತೆ ಹೀಗೆ ನಟಿಸುವಾಗ, ನಾವು ಪ್ರೇಮ ಕಾಮಗಳಲ್ಲಿ ಮುಳುಗಿ ಹೋಗುತ್ತೇವೆ, ಇದು ಎಷ್ಟೋ ಮಂದಿಯ ಅನುಭವ!
ಯಾವ ಹೀರೋನಾದ್ರೂ ನಿನ್ನ ಜೊತೆ ಇಂಥ ದೃಶ್ಯಗಳಲ್ಲಿ ನಟಿಸುವಾಗ ಔಟ್ ಆಫ್ ಕಂಟ್ರೋಲ್ ಆಗಿದ್ದುಂಟೇ?
ಹೀರೋಗಳಿಗೆ ಅದನ್ನು ಬಿಟ್ಟರೆ ಬೇರೇನು ಕೆಲಸ? ಆಗಾಗ ನಮ್ಮಂಥ ನಟಿಯರು, ಎದುರಿಗೆ ಕ್ಯಾಮೆರಾ ಇದೆ, ತುಸು ನೆಟ್ಟಗೆ ನಡೆದುಕೋ ಅಂತ ಹೇಳಬೇಕಾಗುತ್ತೆ! ಆದರೆ ಒಂದೆರಡು ಕ್ಷಣ ಮೈ ಮರೆತರೂ, ಮೀಡಿಯಾದವರು ಇದನ್ನೇ ಅಬ್ಬರ ಮಾಡುತ್ತಾರೆ ಎಂದು ಅವರಿಗೂ ಗೊತ್ತು, ಹೀಗಾಗಿ ತಕ್ಷಣ ಎಚ್ಚೆತ್ತುಕೊಳ್ಳುತ್ತಾರೆ.
ಈಗ ನಿನ್ನ ಇಮೇಜ್ ಕೇವಲ ಬಿಚ್ಚಮ್ಮನದ್ದಾಗಿದೆ. ಇಂಥದ್ದೇ ಪಾತ್ರ ಮಾಡಿ ಮಾಡಿ ಟೈಪ್ಡ್ ಕಾಸ್ಟ್ ಅಂತ ಅನಿಸುತ್ತಿಲ್ಲವೇ?
ಇಲ್ಲ ಬಿಡಿ, ನನಗೆ ಅಂಥ ಭಯವಿಲ್ಲ, ಐ ಡೋಂಟ್ ಕೇರ್! ಇಂದಿನ ಸಿನಿಮಾಗಳಲ್ಲಿ ಸ್ಟಾರ್ ಮುಖ್ಯವಲ್ಲ, ಅದರ ಸಾರಾಂಶವೇ ಸಕ್ಸಸ್ ಆಗೋದು ಅನ್ನೋದು ಎಲ್ಲರಿಗೂ ಗೊತ್ತು. ಮಡಿವಂತಿಕೆಯ ದೃಷ್ಟಿಯಲ್ಲಿ ಗೊಣಗಿದರೂ, ಜನ ಖಂಡಿತಾ ಇಂಥದ್ದನ್ನು ಇಷ್ಟಪಟ್ಟು ನೋಡ್ತಾರೆ ಅನ್ನೋದು ಕಟು ಸತ್ಯ. ಈ ಕಾರಣದಿಂದಲೇ ನಾನು ಇಂಥ ಪಾತ್ರ ನಿರ್ವಹಿಸಿ, ಹಣ ಹೆಸರು ಎರಡೂ ಪಡೆದುಕೊಂಡೆ! ನಿರ್ಮಾಪಕ, ನಿರ್ದೇಶಕರ ನೆರವಿಲ್ಲದೆ ನಾನೇ ಇಂಥ 72 ನಟನಟಿಯರನ್ನು ಪರಿಚಯಿಸಿದ್ದೇನೆ. ಇಂಥದ್ದಕ್ಕೆಲ್ಲ ನಾನೆಂದೂ ಪಶ್ಚಾತ್ತಾಪ ಪಡಲಾರೆ, ನಾನು ಮಾಡಿದ್ದೆಲ್ಲ ಪ್ರೊಫೆಶನ್!
ನಿನ್ನ ಬಗ್ಗೆ ಪೋರ್ನ್ ಫಿಲ್ಮ್ ತಯಾರಿಯ ಆರೋಪ ಇದೆಯಲ್ಲ….? ಈ ಕುರಿತಾಗಿ 3 ತಿಂಗಳು ಜೇಲಿಗೆ ಹೋಗಿ ಬಂದಿರುವೆ. ಈ ಕುರಿತು ಏನು ಹೇಳಬಯಸುವೆ?
ಈ ಬಗ್ಗೆ ನಾನು ಹೇಳುವುದು ಒಂದೇ ಮಾತು, ನಾನು ಪೋರ್ನ್ ಫಿಲ್ಮ್ ನಲ್ಲಿ ನಟಿಸಿದವಳೂ ಅಲ್ಲ…. ಅಂಥ ಚಿತ್ರ ತಯಾರಿಸಿದವಳೂ ಅಲ್ಲ! ನನ್ನನ್ನು ಬೇಕೆಂದೇ ಈ ಜಾಲದಲ್ಲಿ ಸಿಲುಕಿಸಲಾಗಿದೆ. ನನ್ನ ಬಳಿ ನನ್ನ ನಿರಪರಾಧಿತ್ವಕ್ಕೆ ಬೇಕಾದ ಸಾಕ್ಷಿಗಳಿವೆ. ಕೋರ್ಟ್ ನಲ್ಲಿ ಕೇಸ್ ನಡೆಯುವಾಗ ಅವನ್ನೆಲ್ಲ ಹೊರತರುವೆ. ಈ ಸಂದರ್ಭದಲ್ಲಿ ಈ ಕುರಿತು ನಾನು ಹೆಚ್ಚಿಗೆ ಹೇಳಲಾರೆ. ಕೋರ್ಟ್ ನಲ್ಲಿ ಈ ಕೇಸ್ ಇನ್ನೂ ಸಂಪೂರ್ಣ ಇತ್ಯರ್ಥ ಆಗಿಲ್ಲ, ಎಳೆದಾಡುತ್ತಿದ್ದಾರೆ. ಒಂದಂತೂ ಸತ್ಯ, ಕಾನೂನಿಗೆ ವಿರುದ್ಧವಾಗಿ ನಾನಂತೂ ಯಾವ ಕೆಟ್ಟ ಕೆಲಸವನ್ನೂ ಮಾಡಿಲ್ಲ! ಬೋಲ್ಡ್ ಸಿನಿಮಾಗಳಲ್ಲಿ ನಟಿಸೋದು, ತಯಾರಿಸೋದನ್ನು ಎಲ್ಲರೂ ಮಾಡ್ತಾರೆ, ನಾನೂ ಮಾಡಿದ್ದೀನಿ. ಅದರಲ್ಲೇನು ತಪ್ಪು?
ಜೇಲ್ ನಿಂದ ಹೊರಬಂದ ನಂತರ ನಿನ್ನ ಸಹವರ್ತಿಗಳ ವ್ಯವಹಾರ ಹೇಗಿತ್ತು?
ಆ ಸಂದರ್ಭದಲ್ಲಿ ಎಲ್ಲರೂ ನನಗೆ ಸಪೋರ್ಟ್ ಮಾಡಿದರು. ಅವರು ನನ್ನ ಫ್ರೆಂಡ್ಸ್, ಫಿಲ್ಮಿ ಇಂಡಸ್ಟ್ರಿಯವರೇ ಇರಬಹುದು. ನನ್ನ ಕುಟುಂಬದವರೂ ಸಹಕರಿಸಿದ್ದಾರೆ. ಜೇಲ್ ನ ವ್ಯವಹಾರವಾದ್ದರಿಂದ ಬೇಲ್, ವಕೀಲರ ಖರ್ಚು ಇತ್ಯಾದಿಗಳಿಗೆ ಮನೆಯವರು ಬಹಳ ಹೆಣಗಿದ್ದಾರೆ. ಆಗ ನನ್ನ ಅಕೌಂಟ್ ಸಹ ಫ್ರೀಝ್ ಆಗಿತ್ತು. ಎಲ್ಲರೂ ಬಹಳ ಹೆಲ್ಪ್ ಮಾಡಿದ್ದಾರೆ. ಆ ಸಂದಭದಲ್ಲಿ ನನ್ನ ಸಹವರ್ತಿಗಳೆಲ್ಲ ಸೇರಿ ನನ್ನ ಬರ್ತ್ ಡೇ ಸಹ ಆಚರಿಸಿದ್ದಾರೆ. ನಾನು ಎಷ್ಟೇ ಗಂದೀ ಸಿನಿಮಾಗಳಲ್ಲಿ ನಟಿಸಿದ್ದರೂ, ನನ್ನ ನಿಯತ್ತು ಸರಿಯಾಗಿದೆ ಎಂದು ಎಲ್ಲರಿಗೂ ಗೊತ್ತು. ನಾನು ಎಲ್ಲರಿಗೂ ಎಷ್ಟೋ ಸಹಾಯ ಮಾಡಿದ್ದೆ, ಹೀಗಾಗಿ ಅವರೂ ನನಗೆ ಸಪೋರ್ಟ್ ಮಾಡಿದರು.
ನಿನ್ನ ಲವ್ ಸ್ಟೇಟಸ್ ಬಗ್ಗೆ ಒಂದಿಷ್ಟು…….?
ಸದ್ಯಕ್ಕಂತೂ ನಾನು ಸಿಂಗಲ್! ಮದುವೆ ಕುರಿತು ಇನ್ನೂ ಸೀರಿಯಸ್ ಆಗಿಲ್ಲ, ಮನೆಯವರು ಹುಡುಗನ್ನ ಹುಡುಕುತ್ತಾರೆ ಬಿಡಿ. ಒಂದಂತೂ ನಿಜ, ನನಗೂ ಅಫೇರ್ಸ್ ಇತ್ತು, ಆದರೆ ಯಾವುದೂ ಬಹಳ ದಿನ ನಡೆಯಲಿಲ್ಲ. ಈ ಅಫೇರ್ಸ್ ನಲ್ಲಿ ದಕ್ಷಿಣದ ಒಬ್ಬ ಹೆಸರಾಂತ ನಟನೂ ಇದ್ದಾನೆ, ಹೆಸರು ಬೇಡ ಬಿಡಿ! ಅವನೊಂದಿಗೆ ಬಹಳ ದಿನ ಅಫೇರ್ ಇತ್ತು. ಆ ರೀತಿ ನಾನು ದಕ್ಷಿಣದ ಚಿತ್ರಗಳಲ್ಲಿ ಖಾಯಂ ಆಗಿದ್ದೆ. ನಾನು ಆತನೊಂದಿಗೆ ಸೆಟಲ್ ಆಗುವ ಕನಸು ಕಂಡಿದ್ದೆ, ಆದರೆ ಅವನು ಮಹಾ ಕುಡುಕ, ಹೀಗಾಗಿ ನಾನೇ ಬ್ರೇಕ್ ತಗೊಂಡೆ. ಇದಾದ ಮೇಲೆ ಮುಂಬೈನ ಒಬ್ಬ ಹುಡುಗನ ಜೊತೆ ಅಫೇರ್ ನಡೀತಿದೆ, ನೋಡೋಣ….. ಇದು ಹೇಗೆ ಮುಂದುವರಿಯುತ್ತೋ ಗೊತ್ತಿಲ್ಲ.
ಆದರೆ ಅವನೊಂದಿಗೂ ನನ್ನ ಮದುವೆ ನಡೆಯೋ ಹಾಗಿಲ್ಲ. ಅವನ ಮನೆಯರು ನನ್ನನ್ನು ಸೊಸೆಯಾಗಿ ಸ್ವೀಕರಿಸಲು ಸಿದ್ಧರಿಲ್ಲ, ಇವನು ಅವರನ್ನು ಬಿಟ್ಟು ಬರಲಾರ. ನೋಡೋಣ….. ಮುಂದೆ ಹೇಗೋ ಏನೋ!
ನೀನು ಏಕ್ತಾ ಕಪೂರ್ ಳ ಹಲವು ಧಾರಾವಾಹಿಗಳಲ್ಲಿ ನಟಿಸಿರುವೆ. ಆದರೆ ಇತ್ತೀಚೆಗೆ ನೀನು ಏಕ್ತಾ ಧಾರಾವಾಹಿಗಳಲ್ಲಿ ಇಲ್ಲವೇ ಇಲ್ಲವಲ್ಲ…..?
ಏಕ್ತಾ ನನ್ನನ್ನು `ಲಾಕ್ ಅಪ್ ರಿಯಾಲಿಟಿ ಶೋ’ಗಾಗಿ ಆರಿಸಿದ್ದಳು. ಇದಕ್ಕಾಗಿ ಆಡಿಶನ್, ಇತರ ಟೆಸ್ಟ್ ಸಹ ಮುಗಿದಿತ್ತು. ಹಣ ಸಹ ಡೀಲ್ ಆಗಿತ್ತು. ಆದರೆ…. ಏನಾಯ್ತೋ ಏನೋ…… ಬಹಳ ದಿನ ಕಾದರೂ ಅವರ ಕಡೆಯಿಂದ ಶೂಟಿಂಗ್ ಗೆ ಕರೆ ಬರಲೇ ಇಲ್ಲ. ಬೇಡ ಅಂತ ಸ್ಪಷ್ಟವಾಗಿ ರಿಜೆಕ್ಟ್ ಮಾಡಿಲ್ಲ. ಈ ಕಾಯುವಿಕೆಯಲ್ಲೇ ನನ್ನ ಸಮಯ ಹಾಳಾಯ್ತು.
– ಪ್ರತಿನಿಧಿ