ಮದುವೆಗೆ ಬೇಕಾದ ಬೇರೆಲ್ಲ ತಯಾರಿ, ಶಾಪಿಂಗ್ ಇತ್ಯಾದಿಗಳನ್ನು ಇಂದಿನ ಆಧುನಿಕ ಹುಡುಗಿಯರು ಸಹಜವಾಗಿಯೇ ಬೇಗ ಬೇಗ ಮುಗಿಸುತ್ತಾರೆ. ಆದರೆ ಮದುವೆಯ ಮುಖ್ಯ ಘಟ್ಟವಾದ ಸೆಕ್ಸ್ ಕುರಿತು ಎಷ್ಟು ಮಹಾ ತಿಳಿದುಕೊಂಡಿರುತ್ತಾರೆ? ಏಕೆಂದರೆ ಸೆಕ್ಸ್ ಕುರಿತು ಇವರಿಗೆ ಹೆಚ್ಚು ವೈಜ್ಞಾನಿಕ, ಟೆಕ್ನಿಕಲ್ ಮಾಹಿತಿ ಇರುವುದಿಲ್ಲ. ಇಂದಿನ ಹುಡುಗಿಯರು ಸುಶಿಕ್ಷಿತರು, ಆಧುನಿಕರು ಕೆಲಸಕ್ಕೂ ಹೋಗುತ್ತಾರೆ.... ಎಂಬುದೆಲ್ಲ ಸರಿಯೇ! ಕೆಲವರು ಅದರ ಬಗ್ಗೆ ಚೆನ್ನಾಗಿಯೇ ತಿಳಿದಿದೆ ಎಂದು ಸಹ ಹೇಳಿಕೊಳ್ಳುತ್ತಾರೆ. ಇದಕ್ಕಾಗಿ ಸೆಕ್ಸ್ ಎಜುಕೇಶನ್, ವಿಡಿಯೋ, ಇಂಟರ್ ನೆಟ್, ಸೆಲೆಕ್ಟೆಡ್ ಸೈಟ್ಸ್, ಪೋರ್ನ್ ಫಿಲ್ಮ್ ಇತ್ಯಾದಿಗಳನ್ನು ಒಂದು ಹಂತದವರೆಗೆ ತಿಳಿಯಬೇಕಾಗುತ್ತದೆ.
ಸೆಕ್ಸ್ ಕುರಿತ ಮಾಹಿತಿಯ ಈ ಮೂಲಗಳು, ಸಾಮಾನ್ಯವಾಗಿ ಉತ್ತೇಜನ ನೀಡುತ್ತವೇನೋ ನಿಜ, ಆದರೆ ಇದರಿಂದ ತಿಳಿವಳಿಕೆ ಹೆಚ್ಚದು ಅಥವಾ ಸೆಕ್ಸ್ ಗಾಗಿ ನಿಶ್ಚಿಂತ ಗ್ಯಾರಂಟಿ ನೀಡಿ. ಸೆಕ್ಸ್ ನ್ನು ಪೂರ್ತಿ ಅರಿತಿದ್ದೇವೆ ಎಂದು ಬೊಬ್ಬೆ ಹೊಡೆಯುವುದು ಭ್ರಮೆಯೇ ಸರಿ. ಇದೊಂದು ತರಹ ವ್ಯವಸಾಯದ ತರಹ, ಅದು ವಿಜ್ಞಾನ ಮತ್ತು ಕಲೆ, ಎರಡೂ ಹೌದು! ಯಾವ ರೀತಿ ವ್ಯವಸಾಯದಲ್ಲಿ ಭೂಮಿಯ ಪರಿಪಕ್ವತೆ, ಬಿತ್ತನೆ, ಬೆಳೆಯ ಜವಾಬ್ದಾರಿ... ಇತ್ಯಾದಿ ಎಲ್ಲಾ ಅರಿತಿರಬೇಕೋ, ಹಾಗೆಯೇ ಸೆಕ್ಸ್ ಕುರಿತ ಜ್ಞಾನ ಸಹ. ಅದೂ ಕೇವಲ ಅವರಿವರ ಮಾತು ಕೇಳುವುದರಿಂದ ಬಾರದು. ಪೇಪರ್ ವರ್ಕ್ ನಲ್ಲಿ ಇದು ಸೈನ್ಸ್ ಆದರೆ, ಅನುಭವದಲ್ಲಿ ಅದು ಆರ್ಟೇ ಸರಿ!
ಜೀವನದ ಆನಂದ ಪ್ರಾಪ್ತಿ
ಹಿಂದಿಗಿಂತ ಎಲ್ಲರ ಜೀವನಶೈಲಿ ಇಂದು ಅತಿ ಕಠಿಣಕರವಾಗಿ ಜರುಗುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ಜೀವನಾನುಭಾವದ ಸೆಕ್ಸ್ ನಲ್ಲೂ ಅನೇಕ ಜಟಿಲತೆ, ಕಾಂಪ್ಲಿಕೇಶನ್ಸ್ ಎದುರಾಗುತ್ತವೆ. ಇದಂತೂ ಅತ್ಯಂತ ವೈಯಕ್ತಿಕ ವಿಚಾರ. ಹೀಗಾಗಿ ಸಹಜವಾಗಿ ನಾಲ್ವರ ಬಳಿ ಇದನ್ನು ಕೇಳಿ ತಿಳಿಯಲು ಕಷ್ಟಕರ, ಮುಜುಗರ ಎನಿಸುತ್ತದೆ. ಇದು ತಾನಾಗಿಯೇ ಸರಿ ಹೋಗುತ್ತದೆ ಎಂದೂ ತಿಳಿಯುವ ಹಾಗಿಲ್ಲ. ಇಂದಿನ ತರುಣಿಯರಿಗೆ ಸೆಕ್ಸ್ ಕುರಿತ ಮಾಹಿತಿ ಯಾವ ಮೂಲದಿಂದ ಸಿಗುತ್ತದೋ, ಅದು ಖಂಡಿತಾ ವೈಜ್ಞಾನಿಕಲ್ಲ. ಹೀಗಾಗಿಯೇ ಇಂದಿನ ತರುಣಿಯರು ಅಗತ್ಯಕ್ಕೆ ತಕ್ಕಂತೆ ಈ ವಿಷಯದಲ್ಲಿ ಮಾನಸಿಕವಾಗಿ ಸಿದ್ಧರಿರುವುದಿಲ್ಲ. ಇದರಿಂದ ದಾಂಪತ್ಯ ಸುಖದಲ್ಲಿ ಆನಂದ ಮರೀಚಿಕೆ ಆದೀತು.
ಯಾವ ತರುಣಿಯನ್ನೇ ಆಗಲಿ, ನೀನು ಸೆಕ್ಷುಯಲಿ ತಯಾರಿದ್ದೀಯಾ ಎಂದು ಕೇಳಿದರೆ, ಆಕೆ ಇದಕ್ಕೆ ಎಷ್ಟು ಪ್ರಾಮಾಣಿಕವಾಗಿ ಉತ್ತರ ಕೊಡಬಲ್ಲಳೋ ಹೇಳಲಾಗದು. ಇದಕ್ಕೆ ಕಾರಣ, ಸೆಕ್ಸ್ ಕುರಿತ ಬೇಸಿಕ್ ಜ್ಞಾನ ಇಲ್ಲದಿರುವುದು. ಎಷ್ಟೋ ಮಂದಿ ಇದನ್ನು ಮದುವೆಯ ನಂತರದ ಬಾಬತ್ತು ಎಂದು ತಳ್ಳಿ ಹಾಕುತ್ತಾರೆ. ಅದು ತಂತಾನೇ ಸರಿಹೋಗುತ್ತದೆ ಎಂದು ನಿರ್ಲಕ್ಷಿಸುತ್ತಾರೆ.
ಅನಗತ್ಯ ಲಾಸ್
ಯಾವುದೇ ಕೆಲಸ ಸರಿಯಾದ ಮಾಹಿತಿ ಇಲ್ಲದೆ ನಡೆದರೆ, ಅದೆಂದೂ ಪರಿಪೂರ್ಣ ಎನಿಸದು. ಹಾಗೆಯೇ ಸೆಕ್ಸ್ ಕುರಿತ ಮಾನಸಿಕತೆಯದು. ಇದರ ಹೊಣೆ ಕೇವಲ ಪತಿಯದು ಎಂದು ಭಾವಿಸುತ್ತಾರೆ. ಇದರ ಬಗ್ಗೆ ಏನೂ ತಿಳಿಯದೆ, ಹೇಗೋ ಬಂದದ್ದು ಆಗುತ್ತದೆ ಬಿಡು, ಎಂದುಕೊಂಡರೆ ವೈವಾಹಿಕ ಜೀವನದ ಒಂದು ದೊಡ್ಡ ಸುಖ, ತಂತಾನೇ ಕಳೆದುಕೊಂಡಂತೆ ಆಗುತ್ತದೆ. ನಮ್ಮ ಸಮಾಜದಲ್ಲಿ ಎಂದೂ ಯಾವ ಮಟ್ಟದಲ್ಲೂ ಹೆಣ್ಣುಮಕ್ಕಳು ಸೆಕ್ಷುಯಲಿ ಮೆಚೂರ್ಡ್ ಆಗುವಂಥ ಅವಕಾಶ ಕಲ್ಪಿಸಿಯೇ ಇಲ್ಲ ಎನ್ನಬಹುದು. ಬದಲಿಗೆ ಅವರನ್ನು ಆ ವಿಷಯದಲ್ಲಿ ಭಯಪಡಿಸುವ ಮಂದಿಯೇ ಹೆಚ್ಚು.





