ನಮ್ಮ ಸಮಾಜದಲ್ಲಿ ಎಷ್ಟೋ ರೂಢಿವಾದಿ ಆಲೋಚನೆಗಳು ಕ್ರಮೇಣ ಕಡಿಮೆಯಾಗುತ್ತಿವೆ. ಮದುವೆಗೆ ಮೊದಲು ವಧೂವರರು ಭೇಟಿ ಆಗಬಾರದು ಎಂಬುದೂ ಒಂದಾಗಿತ್ತು. ಆದರೆ ಆಧುನಿಕ ವಿಚಾರಧಾರೆಗಳಿಂದ ಪ್ರೀ ವೆಡ್ಡಿಂಗ್ ಶೂಟಿಂಗ್ ಚಾಲನೆಗೆ ಬಂದಿದೆ. ಆದರೂ ಕಟ್ಟಾ ಸಂಪ್ರದಾಯಸ್ಥರು ತಮ್ಮ ಮನೆಯ ಮದುಮಕ್ಕಳು ಹೀಗೆಲ್ಲ ಫೋಟೋ ತೆಗೆಸಿಕೊಳ್ಳಬಾರದು ಎಂದೇ ಹೇಳುತ್ತಾರೆ. ಇಷ್ಟಾದರೂ ಇಂದಿನ ಆಧುನಿಕ ಯುವ ಜೋಡಿ ತಮ್ಮ ಜೀವನದ ಪ್ರತಿಯೊಂದು ಹಂತವನ್ನೂ ಫೋಟೋ ಫ್ರೇಮ್ ನಲ್ಲಿ ಸೆರೆಹಿಡಿದಿಟ್ಟುಕೊಳ್ಳಬೇಕೆಂದು ಬಯಸುತ್ತಾರೆ. ಹೀಗಾಗಿಯೇ ತಮ್ಮ ಸಂತೋಷವನ್ನು ಇಮ್ಮಡಿಸಿಕೊಳ್ಳಲು ಪ್ರೀ ವೆಡ್ಡಿಂಗ್ ಶೂಟ್ ಅತ್ಯಗತ್ಯ ಎಂದು ಭಾವಿಸುತ್ತಾರೆ.

ಈ ರೀತಿ ಮದುವೆಗೆ ಮೊದಲಿನಿಂದಲೇ ಇಬ್ಬರೂ ಪರಸ್ಪರ ನಿಕಟರಾಗಲು ಬಯಸುತ್ತಾರೆ. ಇದಕ್ಕಾಗಿ ಸ್ಟೈಲಿಶ್, ಕಂಫರ್ಟೆಬಲ್ ಡ್ರೆಸ್ ಹಾಗೂ ಡಿಫರೆಂಟ್ ಲೊಕೇಶನ್ಸ್ ಆರಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ, ಸಂಗಾತಿಯನ್ನು ಸಮರ್ಪಕವಾಗಿ ಅರಿಯುವುದೇ ಆಗಿರುತ್ತದೆ. ಇದರಿಂದ ಪರಸ್ಪರರ ಸಾಂಗತ್ಯ ಹೆಚ್ಚು ನಿಕಟವಾಗಿ, ಆಳವಾದ ಆತ್ಮೀಯತೆ ಬೆಳೆಯುತ್ತದೆ. ಇದರಲ್ಲಿ ಅಸಲಿ ಪಾರ್ಟ್ನರ್ ಶಿಪ್‌ಪ್ರೀ ವೆಡ್ಡಿಂಗ್ ಶೂಟ್ ನಿಮ್ಮ ಬಯಕೆಯ ಅನುಸಾರ ಇರಲಿ. ಇದಕ್ಕಾಗಿ ನಿಮ್ಮಿಬ್ಬರ ಅತಿ ಫ್ರೆಂಡ್ಲಿ ಕ್ಲೋಸ್ ಆದ ಫೋಟೋಗ್ರಾಫರ್ ಆರಿಸಿ. ಈ ಶೂಟ್ ನಲ್ಲಿ ಸಂಗಾತಿಗಳು ಅತಿ ರೊಮ್ಯಾಂಟಿಕ್ ಮೂಡ್ ನಲ್ಲಿ ಬೆಸೆಯುವುದರಿಂದ, ಅಪರಿಚಿತ ಫೋಟೋಗ್ರಾಫರ್ ಆ ದೃಶ್ಯಗಳ ಅನಗತ್ಯ ಲಾಭ ಪಡೆಯಲು ಯತ್ನಿಸಬಾರದು. ನಿಮಗೆ ಬೇಕಾದ ಲೊಕೇಶನ್ಸ್ ಮೊದಲೇ ಆರಿಸಿಕೊಳ್ಳಿ, ಕೊನೇ ಘಳಿಗೆಯಲ್ಲಿ ಕ್ಯಾಮೆರಾಮನ್ ಕೈ ಕೊಟ್ಟರೆ, ಬದಲಿ ವ್ಯವಸ್ಥೆಯೂ ಇರಲಿ. ಫೋಟೋಗ್ರಾಫರ್ ಬಳಿ ನೀವು ಇಂತಿಂಥದ್ದೇ ಪೋಸ್ ಗಳಿರಬೇಕು ಎಂದು ಮೊದಲೇ ಹೇಳಿಬಿಡಿ. ಇದರಿಂದ ನೀವು ಬಯಸಿದಂಥ ಶೂಟ್ ರೆಡಿ ಆಗುತ್ತದೆ. ಕಡಿಮೆ ಬಜೆಟ್ ಶೂಟ್ ಪ್ಲಾನ್ ಎಷ್ಟೋ ದೊಡ್ಡ ಕುಟುಂಬಗಳಲ್ಲಿ ಈಗಲೂ ಪ್ರೀ ವೆಡ್ಡಿಂಗ್ ಶೂಟ್ ಗೆ ಅನುಮತಿ ಇಲ್ಲ. ಮದುವೆಗೆ ಇದು ಅಗತ್ಯ ಭಾಗವಲ್ಲ ಎಂದೇ ವಾದಿಸುತ್ತಾರೆ. ಹೀಗಾಗಿ ಇದನ್ನು ಲೋ ಬಜೆಟ್ ನಲ್ಲೇ ನೀವು ಪ್ಲಾನ್ ಮಾಡಿ, ಆಗ ಕೆಲಸ ಸಲೀಸಲಾಗುತ್ತದೆ. ಫೋಟೋಗ್ರಫಿ ಬಿಟ್ಟು ಆಗುವ ಇತರ ಹೆಚ್ಚುವರಿ ಖರ್ಚುಗಳೆಂದರೆ ಡ್ರೆಸ್, ಮೇಕಪ್, ಲೊಕೇಶನ್, ಹೋಗಿ ಬರುವ ಖರ್ಚು, ಊಟತಿಂಡಿ ಇತ್ಯಾದಿ. ಇದರಿಂದ ಸಹಜವಾಗಿಯೇ ಖರ್ಚು ಹೆಚ್ಚುತ್ತದೆ. ಪ್ರತಿ ನಗರದಲ್ಲೂ ಇಂಥದ್ದಕ್ಕೆಂದೇ ವಿಶೇಷ ಜಾಗ ಇರುತ್ತದೆ. ನೀವು ದೂರದ ಊರಿಗೆ ಹೋಗುವ ಬದಲು, ಇದ್ದೂರಿನಲ್ಲೇ ಅರೇಂಜ್ ಮಾಡಿಕೊಳ್ಳುವುದು ಲೇಸು. ಇದಕ್ಕೆ ಅನುಸಾರವಾಗಿ, ಡ್ರೆಸ್‌ಮೇಕಪ್ ಖರ್ಚು ಸಹ ಎಷ್ಟೋ ಕಡಿಮೆ ಆಗುತ್ತದೆ.

ನಿಮ್ಮ ಬಜೆಟ್ ಹಾಗೂ ಫೈನಲ್ ರಿಸಲ್ಟ್ ಹೇಗಿರಬೇಕು ಎಂಬುದನ್ನು ಫೋಟೋಗ್ರಾಫರ್ ಜೊತೆ ಮೊದಲೇ ಚರ್ಚಿಸಿ. ಯಾರದ್ದೋ ಫೋಟೋ ನೋಡಿ, ನೀವೇನೋ ಪ್ಲಾನ್ ಮಾಡಬೇಡಿ. ನಿಮ್ಮದೇ ಪ್ಲಾನಿಂಗ್ ಹೊಸ ತರಹ ಇರಲಿ. ಆಗ FBನಲ್ಲಿ ಫೋಟೋ ನೋಡಿದರು ನಿಮ್ಮನ್ನು ಹೊಗಳುವಂತಿರಬೇಕು! ಮದುವೆಯ ಬಜೆಟ್ ಮೊದಲೇ ದೊಡ್ಡದು, ಹೀಗಿರುವಾಗ ಇದನ್ನು ಮತ್ತೊಂದು ಹೊರೆ ಮಾಡಬೇಡಿ. ಇದರ ಬಗ್ಗೆ ಖರ್ಚು ವೆಚ್ಚದ ವೆಕ್ಕ ಮೊದಲೇ ಸೀರಿಯಸ್ ಆಗಿ ನೋಡಿಕೊಳ್ಳಿ. ಡಿಸೈನರ್ ಯಾ ಸ್ಪೆಷಲ್ ಡ್ರೆಸೆಸ್ ಖರೀದಿಸುವ ಬದಲು, ರೆಂಟ್ ನಲ್ಲಿ ಪಡೆದರೆ, ಬಜೆಟ್ ಎಷ್ಟೋ ಅಗ್ಗ ಆದೀತು.





