ಮದುವೆ ನಂತರ ಕೆರಿಯರ್ಮತ್ತು ನಿಮ್ಮ ಪರ್ಸನಲ್ ಲೈಫ್ಜೊತೆ ಪರ್ಫೆಕ್ಟ್ ಹೊಂದಾಣಿಕೆ ಬಯಸುವಿರಾದರೆ, ಸಲಹೆಗಳತ್ತ ಅಗತ್ಯ ಗಮನ ಕೊಡಿ......!

ವರ್ಕ್‌ಫ್ಯಾಮಿಲಿ ಲೈಫ್‌ ಬ್ಯಾಲೆನ್ಸ್ ಮಾಡುವುದು, ಎಂಥ ಹೆಣ್ಣಿಗಾದರೂ ಇಂದು ಎಲ್ಲಕ್ಕಿಂತ ದೊಡ್ಡ ಚಾಲೆಂಜ್‌ ಆಗಿದೆ. ಏಕೆಂದರೆ ಕೌಟುಂಬಿಕ ಜೀವನದಲ್ಲಿ ಆದರ್ಶ ಸೊಸೆ ಎನಿಸುವುದರೊಂದಿಗೆ ವರ್ಕ್‌ ಪ್ಲೇಸ್‌ ನಲ್ಲಿ ಬೆಸ್ಟ್ ಪ್ರೊಫೆಶನ್‌ ಎನಿಸುವುದು ಸುಲಭ ಸಾಧ್ಯವಲ್ಲ. ಇವೆರಡನ್ನೂ ಬ್ಯಾಲೆನ್ಸ್ ಮಾಡುವುದು ಈಝಿ ಟ್ಯಾಸ್ಕ್ ಅಲ್ಲ, ಅದರಲ್ಲೂ ಕುಟುಂಬದವರ ಸಪೋರ್ಟ್‌ ಇಲ್ಲದಿದ್ದರೆ ಬಲು ಕಷ್ಟ. ಹೀಗಾಗಿ ನವ ವಧುವಿಗೆ ಆಫೀಸಿನಲ್ಲಿ ಒಬ್ಬರು ಬಾಸ್‌ ಆದರೆ, ಮನೆಯಲ್ಲಿ ಅತ್ತೆಯೇ ಬಾಸ್‌! ಹೀಗಿರುವಾಗ ಎರಡೂ ಕಡೆ ಆಕೆ ಹೊಂದಾಣಿಕೆ ಸಾಧಿಸುವುದು ಹೇಗೆ ಎಂದು ನೋಡೋಣ.

ಕುಟುಂಬಕ್ಕೆ ಮೊದಲ ಆದ್ಯತೆ ಇದೀಗ ತಾನೇ ನಿಮ್ಮ ಮದುವೆ ಆಗಿದೆ, ಹೀಗಾಗಿ ನಿಮ್ಮ ಹೊಸ ಮನೆಯಲ್ಲಿ ಮೊದಲಿನಿಂದಲೇ ಎಲ್ಲಾ ಸಂಬಂಧಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂಬುದನ್ನು ನೀವು ಚೆನ್ನಾಗಿ ಗಮನಿಸಿಕೊಳ್ಳಿ. ಈ ಸಂಬಂಧ ಮಧುರ ಆಗುವುದು ಕೇವಲ ನಿಮ್ಮ ಆದರ್ಶ ವ್ಯವಹಾರದಿಂದ. ನೀವು ನಿಮ್ಮ ಹೊಸ ಮನೆಗೆ ಮೊದಲ ಆದ್ಯತೆ ಕೊಟ್ಟಾಗ ಮಾತ್ರ ಇದು ಸಾಧ್ಯವಾಗುತ್ತದೆ. ಇದಕ್ಕಾಗಿ ನೀವು ಅತ್ತೆ ಮನೆಯವರೊಂದಿಗೆ ಹೆಚ್ಚು ಸಮಯ ಕಳೆಯುವಂತಾಗಬೇಕು. ಅವರ ಅಭ್ಯಾಸಗಳನ್ನು ಗಮನಿಸಿ, ಅವರ ಮಾತುಗಳನ್ನು ಅರ್ಥ ಮಾಡಿಕೊಳ್ಳಿ, ನಂತರ ನಿಮ್ಮ ಉತ್ತರ ಹಂಚಿಕೊಳ್ಳಿ.

ಮನೆಯಲ್ಲಿ ಯಾವ ಸಮಯಕ್ಕೆ ಯಾವ ಕೆಲಸ ಆಗಬೇಕು, ಅದರ ಅನುಸಾರ ನಿಮ್ಮನ್ನು ನೀವು ಅಡ್ಜಸ್ಟ್ ಮಾಡಿಕೊಳ್ಳಲು ಯತ್ನಿಸಿ. ಇದಕ್ಕಾಗಿ ನೀವು ಸಂಗಾತಿಯ ಫುಲ್ ಸಪೋರ್ಟ್‌ ಪಡೆಯಿರಿ. ಆಗ ಮಾತ್ರ ನಿಮಗೆ ಆರಂಭದಿಂದಲೇ ಎಲ್ಲಾ ವಿಷಯಗಳನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳಲು, ಅದನ್ನು ಬ್ಯಾಲೆನ್ಸ್ ಮಾಡಲು ತೊಂದರೆ ಆಗದು. ನೀವು ಮನಃಪೂರ್ವಕವಾಗಿ ಅತ್ತೆಮನೆಯವರನ್ನು ನಿಮ್ಮವರೆಂದೇ ಸ್ವೀಕರಿಸಿದಾಗ ಮಾತ್ರ, ಅವರಿಗಾಗಿ ಎಲ್ಲವನ್ನೂ ಬೆಸ್ಟ್ ಆಗಿ ಮಾಡಲು ಯತ್ನಿಸಿದಾಗ ಮಾತ್ರ, ನೀವು ಮನೆ ಮತ್ತು ಆಫೀಸ್‌ ಎರಡೂ ಕಡೆ ಬ್ಯಾಲೆನ್ಸ್ ವಹಿಸಲು ಸಾಧ್ಯವಾಗುತ್ತದೆ ಎಂದು ನೆನಪಿಡಿ.

ಆಫೀಸಿನಲ್ಲಿ ತಡ ಮಾಡಿಕೊಳ್ಳಬೇಡಿ

ಮದುವೆ ಆಗಿದೆ ಎಂದ ಮೇಲೆ ನೀವು ಮನೆಯತ್ತ ಹೆಚ್ಚಿನ ನಿಗಾ ವಹಿಸಲೇಬೇಕಾಗುತ್ತದೆ. ಇದರ ಅರ್ಥ ನೀವು ಆಫೀಸಿಗೆ ಆದ್ಯತೆ ಕೊಡಲೇ ಬಾರದು ಅಂತಲ್ಲ. ಮದುವೆಯಾದ ಹೊಸತರಲ್ಲಿ, ಆಫೀಸಿನ ಹಿರಿ ಅಧಿಕಾರಿಗಳೊಂದಿಗೆ ಮಾತನಾಡಿ, ಆಫೀಸ್‌ ವೇಳೆ ಮುಗಿದ ಮೇಲೂ ನೀವು ಆಫೀಸಿನಲ್ಲೇ ಉಳಿಯಬೇಕಾದಂಥ ಕೆಲಸ ಅಂಟಿಸಬೇಡಿ ಎಂದು ವಿನಂತಿಸಿಕೊಳ್ಳಿ. ಆದರೆ ಆಫೀಸ್ ವೇಳೆಯಲ್ಲಿ, ಅದರ ಎಲ್ಲಾ ಜವಾಬ್ದಾರಿಗಳನ್ನೂ ಪ್ರಾಮಾಣಿಕವಾಗಿ ನಿರ್ವಹಿಸುವೆ ಎಂದು ಭರವಸೆ ನೀಡಿ.

ಇದರಿಂದ ಬಾಸ್‌ ನಿಮ್ಮ ಮಾತನ್ನು ಖಂಡಿತಾ ಒಪ್ಪುತ್ತಾರೆ. ಹೀಗಾಗಿ ಈ ಕ್ರಮದಿಂದ ನೀವು ಮನೆ ಆಫೀಸ್‌ ನಡುವೆ ಬ್ಯಾಲೆನ್ಸ್ ನಿರ್ವಹಿಸಲು ಸುಲಭವಾಗುತ್ತದೆ. ಹೀಗಾಗಿ ಮದುವೆಯಾದ ಹೊಸತರಲ್ಲಿ 1-2 ವರ್ಷ, ಆಫೀಸ್‌ ನ್ನು ಆಫೀಸ್‌ ನಲ್ಲೇ ಬಿಟ್ಟು ಬರುವುದರಲ್ಲಿಯೇ ನಿಮ್ಮ ವಿವೇಕ ಅಡಗಿದೆ. ಹಾಗಿದ್ದಾಗ ಮಾತ್ರ ನಿಮ್ಮ ಹೊಸ ಸಂಬಂಧದಲ್ಲಿ ಮಾಧುರ್ಯ ಕಾಪಾಡಿಕೊಳ್ಳಲು ಸಾಧ್ಯ. ಇದನ್ನು ನಿರ್ಲಕ್ಷಿಸಿದರೆ ಮುಂದೆ ನೀವು ಕೌಟುಂಬಿಕವಾಗಿ ಇದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ