- ರಾಘವೇಂದ್ರ ಅಡಿಗ ಎಚ್ಚೆನ್.
ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಮೂವಿ ಸೈನಿಕ ತೆರೆಕಂಡು ಬರೋಬ್ಬರಿ 23 ವರ್ಷಗಳಾಯ್ತು. ಎರಡು ದಶಕಗಳ ನಂತ್ರ, ಸೈನಿಕ ಸೀಕ್ವೆಲ್ ಸಿನಿಮಾ ಬರೋದು ಪಕ್ಕಾ ಆಗಿದೆ. ಇಷ್ಟಕ್ಕೂ ಸಿ. ಪಿ. ಯೋಗೇಶ್ವರ್ ಈ ಬಾರಿ ಯಾರನ್ನ ಹೀರೋ ಮಾಡ್ತಿದ್ದಾರೆ..? ಹೇಗಿರಲಿದೆ ಸಿನಿಮಾ ಅನ್ನೋದ್ರ ಕಂಪ್ಲೀಟ್ ಕಹಾನಿ ನಿಮಗಾಗಿ ಕಾಯ್ತಿದೆ. ನೋಡ್ಕೊಂಡ್ ಬನ್ನಿ.
ಯೆಸ್.. 2002ರಲ್ಲಿ ತೆರೆಕಂಡ ಸೈನಿಕ ಸಿನಿಮಾ, ನಮ್ಮ ಕನ್ನಡ ಚಿತ್ರರಂಗ ಇರೋವರೆಗೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಚಿತ್ರಗಳ ಸಾಲಿನಲ್ಲಿದೆ. ಅದಕ್ಕೆ ಕಾರಣ ಚಿತ್ರದ ಕಥೆ, ಪಾತ್ರಗಳು ಹಾಗೂ ಮೇಕಿಂಗ್. ಸಿ ಪಿ ಯೋಗೇಶ್ವರ್, ಸಾಕ್ಷಿ ಶಿವಾನಂದ್, ದೊಡ್ಡಣ್ಣ, ಟೆನ್ನಿಸ್ ಕೃಷ್ಣ ಮುಖ್ಯ ಭೂಮಿಕೆಯಲ್ಲಿದ್ದ ಈ ಸಿನಿಮಾ ಹಳ್ಳಿ ಹೈದನೊಬ್ಬ ಸೈನಿಕನಾಗಿ ದೇಶ ಕಾಯುವ ಪೇಟ್ರಿಯಾಟಿಕ್ ಕಥಾನಕ ಹೊಂದಿತ್ತು.
ಸೈನಿಕರ ಕುಟುಂಬಸ್ಥರು ಅವರನ್ನ ಬಿಟ್ಟಿರಲು ಆಗದೆ ಅನುಭವಿಸುವ ಮಾನಸಿಕ ವೇದನೆ. ಗಡಿಭಾಗಗಳಲ್ಲಿ ಸೈನಿಕರು ಎದುರಿಸೋ ರಿಯಲ್ ಚಾಲೆಂಜಸ್, ನಂತ್ರ ಅವರು ಬದುಕಿದ್ದಾರೋ ಅಥ್ವಾ ಸತ್ತಿ್ದ್ದಾರೋ ಅನ್ನೋದು ಕೂಡ ಗೊತ್ತಾಗದೆ ಇರೋ ಅಂತಹ ಅದೆಷ್ಟೋ ನಿದರ್ಶನಗಳು ಇಂದಿಗೂ ಇತಿಹಾಸದ ಪುಟಗಳಲ್ಲಿ ಉಳಿದು ಹೋಗಿವೆ. ಅದೇ ರೀತಿ, ಆಪರೇಷನ್ ಒಂದರಲ್ಲಿ ಗಾಯಗೊಂಡು, ಬದುಕುಳಿದು ತನ್ನೂರಿಗೆ ಬರುವ ಸೈನಿಕ.. ಆತನ ಊರಲ್ಲಿ ಆತನದ್ದೇ ಪ್ರತಿಮೆ ಇಟ್ಟು ಗೌರವ ಸಮರ್ಪಿಸೋ ಜನರು.. ಅದನ್ನು ಕಂಡು ನೊಂದುಕೊಳ್ಳುವ ಜೀವ.. ಹೀಗೆ ಸೈನಿಕ ಚಿತ್ರದ ಕಥೆ ಸಿಕ್ಕಾಪಟ್ಟೆ ರೋಚಕ, ರೋಮಾಂಚಕ ಹಾಗೂ ಭಾವುಕ.
Hq720ಕೆ ಕಲ್ಯಾಣ್ ಸಾಹಿತ್ಯದ ಹಾಡುಗಳು ಹಿಂದೆ, ಮುಂದೆ, ಎಂದೆಂದೂ ನೋಡುಗರ ಕಣ್ಮನ ತಣಿಸುತ್ತವೆ. ದೇವ ಸಂಗೀತ ಸಂಯೋಜಿಸಿದ್ದ ಆಲ್ಬಮ್‌ನಲ್ಲಿ ಸೋಲ್ಜರ್ ಸೋಲ್ಜರ್ ಸಾಂಗ್, ಮಳೆ ಬಿಲ್ಲೆ ಮಳೆ ಬಿಲ್ಲೆ, ಜೈ ಹಿಂದ್.. ಹೀಗೆ ಎಲ್ಲಾ ಸಾಂಗ್ಸ್ ಇಂದಿಗೂ ಪದೇ ಪದೆ ಕೇಳಬೇಕೆನಿಸುತ್ತೆ. ಅಂದಹಾಗೆ ಸೈನಿಕ ದೇಶಪ್ರೇಮ ಹೆಚ್ಚಿಸೋ ಅಂತಹ ಪೇಟ್ರಿಯಾಟಿಕ್ ಮೂವಿಗಳ ಸಾಲಿನಲ್ಲಿ ಸಿಪಿವೈಗೆ ಎಲ್ಲಿಲ್ಲದ ನೇಮು, ಫೇಮು ತಂದುಕೊಟ್ಟಿತ್ತು. ಅದಾದ ಬಳಿಕ ಚಿತ್ರರಂಗದಿಂದ ದೂರ ಉಳಿದ ಸಿಪಿವೈ, ರಾಜಕಾರಣದಲ್ಲಿ ತೊಡಗಿಸಿಕೊಂಡರು.
2016ರಲ್ಲಿ ಇದೇ ಸಿಪಿ ಯೋಗೇಶ್ವರ್ ಸೈನಿಕ-2 ಸಿನಿಮಾ ಮಾಡೋಕೆ ತಯಾರಿ ನಡೆಸಿದ್ರು. ಆದ್ರೆ ಅದು ಕಾರಣಾಂತರಗಳಿಂದ ಆಗಿರಲಿಲ್ಲ. ಆದ್ರೀಗ ತಮ್ಮ ಬಹುದಿನದ ಕನಸನ್ನು ಮಗನ ಮೂಲಕ ನನಸು ಮಾಡಿಕೊಳ್ಳುವ ಮನಸ್ಸು ಮಾಡಿದ್ದಾರೆ. ಹೌದು.. ತಮ್ಮ ಎರಡನೇ ಪತ್ನಿ ಶೀಲಾ ಯೋಗೇಶ್ವರ್ ಮಗ ಧ್ಯಾನ್ ಯೋಗೇಶ್ವರ್‌ನ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಲಾಂಚ್ ಮಾಡಲು ಹೊರಟಿದ್ದಾರೆ.
ಮೊನಾಲಿಸಾ ಧ್ಯಾನ್ ರೀತಿ ಈ ಸಿಪಿವೈ ಮಗ ಧ್ಯಾನ್ ಕೂಡ ಸಖತ್ ಹ್ಯಾಂಡ್ಸಮ್ ಆಗಿದ್ದು, ಹೈಟು, ವೆಯ್ಟು, ಕಲರ್, ಖದರ್ ಎಲ್ಲಾ ಆ್ಯಂಗಲ್‌ನಿಂದ ಹೀರೋ ಮೆಟೀರಿಯಲ್. ಅಮ್ಮನಂತೆ ಸಖತ್ ಫಿಟ್ನೆಸ್ ಫ್ರೀಕ್ ಆಗಿರೋ ಧ್ಯಾನ್, ಕುದುರೆ ಸವಾರಿ, ಮಾರ್ಷಲ್ ಆರ್ಟ್ಸ್, ಡ್ಯಾನ್ಸ್ ಎಲ್ಲವೂ ಸಿನಿಮಾಗಾಗಿ ಬಹಳ ವರ್ಷಗಳಿಂದಲೇ ಕಲಿಯುತ್ತಿದ್ದಾರಂತೆ. ಅಲ್ಲದೆ, ಆಗಾಗ ಕೃಷಿಕನಂತೆ ಗದ್ದೆಗೂ ಇಳಿಯೂ ಧ್ಯಾನ್, ರೈತನ ಕಷ್ಟ ಸುಖಗಳನ್ನ ಹತ್ತಿರದಿಂದ ನೋಡಿದ್ದಾರೆ. ಸಾಕಷ್ಟು ವಿಡಿಯೋಗಳಲ್ಲಿ ರೈತನಂತೆಯೂ ಕಾಣಸಿಗ್ತಾರೆ.
ಇನ್ನು ಜಿಮ್‌ನಲ್ಲಿ ಪ್ರತೀ ದಿನ ಸಿಕ್ಕಾಪಟ್ಟೆ ಬೆವರು ಹರಿಸುತ್ತಿರೋ ಧ್ಯಾನ್, ಸೈನಿಕ-2 ಸಿನಿಮಾದಲ್ಲಿ ಈ ಹಿಂದೆ ಅಪ್ಪ ಸೋಲ್ಜರ್ ಆಗಿ ಮಿಂಚಿದಂತೆ ತಾನೂ ಸಾಲಿಡ್ ಸೋಲ್ಜರ್ ಆಗಿ ದೇಶಪ್ರೇಮದ ಕಿಚ್ಚ ಹೊತ್ತಿಸಲಿದ್ದಾರೆ. ನವಿರಾದ ಪ್ರೇಮಕಥೆಯ ಜೊತೆ ಜೊತೆಗೆ ನೈಜ ಘಟನೆಗಳನ್ನ ಆಧರಿಸಿದ ಸೈನಿಕರೊಬ್ಬರ ಕಥೆಯನ್ನ ಸಿನಿಮಾ ಮಾಡೋಕೆ ಮುಂದಾಗಿರೋ ಸಿಪಿವೈ ಮಗನ ಮೂಲಕ ಮತ್ತೆ ಸೈನಿಕನನ್ನ ಪ್ರೇಕ್ಷಕರ ಮುಂದೆ ತರಲಿದ್ದಾರೆ.
ಫೈನಲ್ ಇಯರ್ ಡಿಗ್ರಿ ವ್ಯಾಸಂಗ ಮಾಡ್ತಿರೋ ಧ್ಯಾನ್, ಪದವಿ ಪಡೆದು ಹೀರೋ ಆಗಲಿದ್ದಾರಂತೆ. ಸಿನಿಮಾ ರಂಗದಲ್ಲಿ ಹೀರೋ ಆಗಿ ನೆಲೆ ನಿಲ್ಲುವ ಭರವಸೆಯನ್ನ ಕಲಿಕೆಯ ದಿನಗಳಲ್ಲೇ ಮೂಡಿಸಿರೋ ಸಿಪಿ ಯೋಗೇಶ್ವರ್ ಮಗ ಧ್ಯಾನ್, ಸದ್ಯದಲ್ಲೇ ಸೈನಿಕ-2 ಅಪ್ಡೇಟ್ಸ್ ಜೊತೆ ತಂದೆಯ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳಲಿದ್ದಾರೆ. ವೆಲ್ಕಮ್ ಟು ಸ್ಯಾಂಡಲ್‌ವುಡ್ ಧ್ಯಾನ್.