ಕಪಿಲ್ ಶರ್ಮಾ ಶೋ ಹಾಗೂ ಇತರ ಕಾಮಿಡಿ ಶೋಗಳ ಹೋಸ್ಟ್ ಆದ ರೇಶಲ್ ‌ರಾವ್ ‌ಯಾರಿಗೆ ತಾನೇ ನೆನಪಿಲ್ಲ? ಹೌದು, ಆಕೆ ಅಂಥ ಬ್ಯೂಟಿ ಗ್ಲಾಮರಸ್‌! ಈಕೆ ಮದುವೆಯಾಗಿ ತಾಯಿ ಆದದ್ದೇ ತಡ, ಆಗಿನಿಂದ ಆಕೆ ಪೋಸ್ಟ್ ಪಾರ್ಟಮ್ ಗೆ ಬಲಿ ಆಗಿದ್ದಾಳೆ. ಹೆರಿಗೆಯಿಂದ ಹೆಚ್ಚಿರುವ ತನ್ನ ದೇಹ ತೂಕದಿಂದಾಗಿ, ಹಿಂದಿನಂತೆ ತಾನು ಬಳುಕುವ ಬಳ್ಳಿಯ ಹಾಗೆ ವೇದಿಕೆ ಮೇಲೆ ನುಲಿಯಲಾರೆ, ಮಾಡ್‌ ಡ್ರೆಸೆಸ್‌ ಧರಿಸಲಾರೆ ಎನ್ನುತ್ತಾಳೆ. ರೇಶಲ್‌, ಇದಕ್ಕಾಗಿ ಇಷ್ಟೊಂದು ಟೆನ್ಶನ್‌ ಯಾಕೆ? ಅನಾದಿ ಕಾಲದಿಂದಲೂ ಹಲವಾರು ನಾಯಕಿಯರು ತಾಯಿ ಆದ ನಂತರ ತಮ್ಮ ಅದೇ ಹಳೇ ಛವಿ ಉಳಿಸಿಕೊಂಡಿದ್ದಾರೆ, ನಿನ್ನದೂ ಸರಿ ಹೋದೀತು, ಎನ್ನುತ್ತಾರೆ ಹಿತೈಷಿಗಳು!

Katreena-ke-pati-ki-baaho-me

ಕತ್ರೀನಾಳ ಪತಿಯ ಬಾಹುಗಳಲ್ಲಿ ತೃಪ್ತೀ

`ಅನಿಮಲ್’ ಚಿತ್ರದ ಭಾಭಿ ನಂ.2 ತೃಪ್ತೀ  ಡಿಮ್ರಿ, ಇದೀಗ ಕನ್ನಡದ ರಶ್ಮಿಕಾಳನ್ನು ಹಿಂದಿಕ್ಕಿ ನ್ಯಾಶನಲ್ ಕ್ರಶ್‌ ಎನಿಸಿದ್ದಾಳೆ! 29ರ ಹರೆಯದ ಈ ತೃಪ್ತೀ, ಉತ್ತರಾಖಂಡ ರಾಜ್ಯದ ಗಢಾಲ ಮೂಲದವಳು. `ಅನಿಮಲ್’ ಚಿತ್ರದಲ್ಲಿ ಈಕೆ ನಿಭಾಯಿಸಿದಂಥ ಬೋಲ್ಡ್ ಸೀನ್ಸ್ ಎಂಥ ಎಸ್ಟಾಬ್ಲಿಶ್ಡ್ ನಟಿಯೂ ಮಾಡಲಾರಳು! ಮುಂದೆ ಬಾಲಿವುಡ್‌ ಈಕೆಯನ್ನು ಕೇವಲ ಬಿಚ್ಚಮ್ಮನಾಗಿ ನಡೆಸಿಕೊಳ್ಳುತ್ತದೋ ಅಥವಾ ಈಕೆಯ ಅಸಲಿ ಪ್ರತಿಭೆಗೆ ಅವಕಾಶ ಕೊಡುತ್ತದೋ, ಕಾಲವೇ ನಿರ್ಣಯಿಸಬೇಕು. ಸದ್ಯಕ್ಕಂತೂ ತೃಪ್ತೀ ಈಗ ವಿಕ್ಕಿ ಕೌಶ್‌ ನ ಬಾಹುಗಳಲ್ಲಿ ಬಳುಕುತ್ತಿದ್ದಾಳೆ. ಅಯ್ಯೋ….! ಕತ್ರೀನಾಳ ಗತಿ ಏನು? ಅಂತೆಲ್ಲ ಚಿಂತಿಸಬೇಡಿ, ಇದು ರಿಯಲ್ ಅಲ್ಲ, ರೀಲ್ ಮಾತ್ರ! `ಮೇರೆ ಮೆಹಬೂಬ್‌ ಮೇರೆ ಸನಂ’ ಹೊಸ ಚಿತ್ರದಲ್ಲಿ ವಿಕ್ಕಿಗೆ ನಾಯಕಿಯಾಗಿ ತೃಪ್ತೀ ಮೆರೆಯಲಿದ್ದಾಳೆ.

Thoda-naraaj-hain-Karan

ಕರಣ್ಗೆ ಈಗೇಕೆ ಇಂಥ ಕೋಪ?

`ಕಾಫಿ ವಿತ್‌ ಕರಣ್‌’ ನೆನೆಪಿದೆಯಲ್ಲವೇ? ಇದರಲ್ಲಿ ದೀಪಿಕಾ ರಣವೀರ್‌ ಎಪಿಸೋಡ್‌ ಬಂದಾಗಿನಿಂದ ಇದು ಪೂರ್ತಿ ಹೋಪ್‌ ಲೆಸ್ ಆಗಿದೆ. FB‌ನಲ್ಲಿ ಟ್ರೋಲಿಗರು ಕೇವಲ ಈ ಎಪಿಸೋಡ್‌ ನ್ನು ಮಾತ್ರ ಟೀಕಿಸದೆ, ಕರಣ್‌ ನ ಲೈಂಗಿಕತೆ, ಆತನ ಪಾಲನೆಯ ಕುರಿತಾಗಿಯೂ ಬಾಯಿಗೆ ಬಂದಂತೆ ಕೀಟಲೆ ಮಾಡುತ್ತಿದ್ದಾರೆ. ಕರಣ್‌ ಇಂಥ ಟ್ರೋಲಿಗರನ್ನು ವಾಚಾಮಗೋಚರವಾಗಿ ಬೈಯುತ್ತಾ, ನನ್ನ ಬಗ್ಗೆ ಹೀಗೆಲ್ಲ ಮಾತನಾಡಲು ನಿಮಗೇನು ಹಕ್ಕಿದೆ ಎಂದು ಗುಡುಗಿದ್ದಾನೆ. ಅಂದಹಾಗೆ ಟ್ರೋಲಿಗರಿಗೆ ಪತ್ರಿಕಾ ಸಾಹಿತ್ಯದಂಥ ಗಂಭೀರ ಬರವಣಿಗೆ ಬರುವಂತಿದ್ದರೆ ಅದರ ಕಥೆಯೇ ಬೇರೆ ಆಗುತ್ತಿತ್ತು, ಇಂಥವರ ಕ್ಷುಲ್ಲಕ ಮಾತುಗಳಗೆ ಮಹತ್ವ ಕೊಡಬೇಡ ಕರಣ್‌, ಎನ್ನುತ್ತಿದ್ದಾರೆ ಅವನ ಹಿತೈಷಿಗಳು.

OTT-par-film-ko-milti-hai-pahchan

OTT ಯಲ್ಲಿ ಸಿನಿಮಾಗೆ ಸಿಗಲಿದೆ ಸರಿಯಾದ ಐಡೆಂಟಿಟಿ

ಈಕೆ ಹಿಂದಿಯ ಸಂಜನಾ, ನಟಿಸಿರುವುದು ಬಲು ಕಡಿಮೆ ಚಿತ್ರಗಳು. ಈಕೆಯ ಮುಂದಿನ ಚಿತ್ರಗಳಲ್ಲಿ `ಧಕ್‌ ಧಕ್‌’ ಬಿಟ್ಟರೆ ಹೇಳಿಕೊಳ್ಳುವಂಥ ಬೇರೆ ಯಾವ ಪ್ರಾಜೆಕ್ಟೂ ಇಲ್ಲ. ಸದ್ಯಕ್ಕಂತೂ ಈಕೆ `ಕಡಕ್‌ ಸಿಂಗ್‌’ ಚಿತ್ರದ ಕುರಿತಾಗಿ ಚರ್ಚೆಯಲ್ಲಿದ್ದಾಳೆ. OTTಯಲ್ಲಿ ಬಂದಿದ್ದ ಈ ಚಿತ್ರದ ಪೂರ್ತಿ ಪಂಕಜ್‌ ತ್ರಿಪಾಠಿ ಹರಡಿಕೊಂಡಿದ್ದಾನೆ. ಸಿಕ್ಕಿದ ಅವಕಾಶವನ್ನು ಸಂಜನಾ ಚೆನ್ನಾಗಿ ಬಳಸಿಕೊಂಡಿದ್ದಾಳೆ. ಥಿಯೇಟರ್‌ ಗಿಂತಲೂ ಚಿತ್ರಗಳು OTTಯಲ್ಲಿ ರಿಲೀಸ್‌ ಆಗುವುದು ಬೆಟರ್‌ ಎನ್ನುತ್ತಾಳೆ ಈಕೆ. ಬಾಕ್ಸ್ ಆಫೀಸ್‌ ಒತ್ತಡದಿಂದಾಗಿ ಚಿತ್ರಗಳು ಥಿಯೇಟರ್‌ ನಲ್ಲಿ ಸರಿಯಾದ ಮೆಸೇಜ್‌ ನೀಡಲಾರ, ಆದರೆ OTTಯಲ್ಲಿ ಆ ಟೆನ್ಶನ್‌ ಇಲ್ಲ ಎನ್ನುತ್ತಾಳೆ. ಅಲ್ಲಿ ಪ್ರತಿ ಹೊಸ ಚಿತ್ರ ಎರಡೇ ದಿನಗಳಲ್ಲಿ ತಾನು ಟೊಳ್ಳು ಅಥವಾ ಗಟ್ಟಿ ಎಂಬುದನ್ನು ನಿರೂಪಿಸಿಕೊಳ್ಳ ಬೇಕಾಗುತ್ತದೆ. ಆದರೆ  ಚಿತ್ರಕ್ಕೆ ಸಲ್ಲಬೇಕಾದ ಪೂರ್ತಿ ಕ್ರೆಡಿಟ್‌ ನ್ನು OTT ಕೊಟ್ಟೇ ಕೊಡುತ್ತದೆ! ಇದೆಲ್ಲ ಸರಿ ಕಣಮ್ಮ, ಆದರೆ ಈ ರೀತಿ ಪ್ರೂವ್ ಮಾಡಿಕೊಳ್ಳಲು ಕೈಯಲ್ಲಂತೂ ಚಿತ್ರ ಇರಬೇಕಲ್ಲವೇ?

Dhere-Dhere-Safalta-Mili

ಅಂತೂ ನಿಧಾನವಾಗಿ ಯಶಸ್ಸು ದಕ್ಕಿತು

`ದಬಂಗ್‌’ ಚಿತ್ರದಿಂದ ಸಾನ್ಯಾ ಅಂತೂ ಕೊನೆಗೆ ಯಶಸ್ಸಿನ ಮೆಟ್ಟಿಲನ್ನು ಏರಿಯೇಬಿಟ್ಟಳು! ಬಧಾಯಿ ಹೋ, ಪಗ್ಲೆಟ್‌, ಸ್ಯಾಂ ಬಹಾದ್ದೂರ್‌ ಮುಂತಾದ ಚಿತ್ರಗಳು ಸಾನ್ಯಾಳ ಯಶಸ್ವಿನ ಕಥೆ ಹೇಳುತ್ತವೆ. ಇಲ್ಲಿನ ಮುಖ್ಯ ಪ್ಲಸ್‌ ಪಾಯಿಂಟ್‌ ಎಂದರೆ, ಸಾನ್ಯಾ ಇವೆಲ್ಲವನ್ನೂ ಯಾವುದೇ ಗಾಡ್‌ ಫಾದರ್‌ ನೆರವಿಲ್ಲದೇ ಸ್ವಪ್ರಯತ್ನದಿಂದ ಸಾಧಿಸಿದ್ದು! ಸಾನ್ಯಾಳ ನಟನೆಯಲ್ಲಿನ ಕ್ಯೂಟ್‌ ನೆಸ್‌, ಅವಳನ್ನು ಇತರ ನಾಯಕಿಯರಿಗಿಂತ ವಿಭಿನ್ನ ಆಗಿಸಿದೆ. ವೆಲ್ ‌ಡನ್‌ ಸಾನ್ಯಾ!

Hindi-nirmataon-ke-hath

ಹಿಂದಿ ನಿರ್ಮಾಪಕರ ಕೈಗೆ ಎಟುಕದ ಬಾಬಿ

`ಅನಿಮಲ್’ ಚಿತ್ರ ಬಾಬಿ ಡಿಯೋಲ್ ‌ನ ರೀಎಂಟ್ರಿಗೆ ಬಲವಾದ ದಮ್ ಕೊಟ್ಟಿದೆ. ಇಡೀ ಚಿತ್ರದಲ್ಲಿ ಕೇವಲ ಹತ್ತೇ ನಿಮಿಷಗಳಲ್ಲಿ ಕಾಣಿಸಿಕೊಂಡರೂ, ಬಾಬಿ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲೂ ಮಿಂಚಿದ್ದೇ ಮಿಂಚಿದ್ದು! ಇವನ ಅಣ್ಣ ಸನಿ ಡಿಯೋಲ್ ‌ಸಹ ತಾರಾ ಸಿಂಗಲ್ ಆಗಿ `ಗದರ್‌’ನಲ್ಲಿ ಭಾರಿ ಸಿಕ್ಸರ್‌ ಬಾರಿಸಿದ್ದಾನೆ. ಬಾಬಿ ವಿಲನ್‌ ಆಗಿ ಬಾಕ್ಸ್ ಆಫೀಸ್‌ ಚಮಕಾಯಿಸಿಬಿಟ್ಟ! ಬಾಲಿವುಡ್‌ ನಿರ್ಮಾಪಕರು ನಿದ್ದೆಯಿಂದ ಎಚ್ಚೆತ್ತು. ಈತನನ್ನು ತಮ್ಮ ಮುಂದಿನ ಚಿತ್ರಕ್ಕೆ ಬುಕ್‌ ಮಾಡುವ ಮೊದಲೇ, ದಕ್ಷಿಣದ ಮಂದಿ ಇವನನ್ನು ಹೊತ್ತೊಯ್ದರು. ತೆಲುಗು ತಮಿಳಲ್ಲಿ ತಯಾರಾಗುತ್ತಿರು `ಕಂಗುಲಾ’ ಚಿತ್ರದಲ್ಲಿ ಬಾಬಿ ಮತ್ತೆ ವಿಲನ್‌ ಆಗಿ ಮೆರೆಯಲಿದ್ದಾನೆ. ಇಷ್ಟು ಮಾತ್ರವಲ್ಲ, OTTಯ ದೊಡ್ಡ ಪ್ಲೇಯರ್ಸ್‌ ಸಹ ಈತನ `ಪೆಂಟ್‌ ಹೌಸ್‌’ ಚಿತ್ರ ರಿಲೀಸ್‌ ಮಾಡಲು ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ. ರೀ ಎಂಟ್ರಿ ಅಂದ್ರೆ ಹೀಗಿರಬೇಕಲ್ಲವೇ? ಬಾಕ್ಸ್ ಆಫೀಸಿನಲ್ಲಿ ತೋಪಾದ ಸ್ಟಾರ್‌ ಕಿಡ್ಸ್ ಚಿತ್ರ ಹಿಂದಿಯ ಘಟಾನುಘಟಿ ಸ್ಟಾರ್‌ ಗಳ ಕಿಡ್ಸ್ ಎಲ್ಲಾ ಸೇರಿ ನಟಿಸಿದ `ದಿ ಆರ್ಚಿಸ್‌’ ಚಿತ್ರ, ಆಯಾ ಕಿಡ್ಸ್ ನ ಹೆತ್ತವರಿಗೆ ಇಷ್ಟವಾಯಿತೇ ಹೊರತು ಯಾವ ಪ್ರೇಕ್ಷಕರಿಗೂ ಅಲ್ಲ. ಇದರ ಕಥೆಯ ತಲೆಬಾಲ ಯಾರಿಗೂ ಎಟುಕಲಿಲ್ಲ, ಈ ಕಿಡ್ಸ್ ನಟನೆಯೂ ಅಷ್ಟೇ ಹಸಿ ಬಿಸಿಯಾಗಿದೆ. ಬಚ್ಚನ್‌, ಖಾನ್‌, ಕಪೂರ್‌ ನ ಎಲ್ಲಾ ಕಿಡ್ಸ್ ಇದರಲ್ಲಿ ತುಂಬಿಹೋಗಿದ್ದರು. ತೀರಾ ದುರ್ಬಲ ಎಳೆಯ ಕಥೆ, ಸಂಭಾಷಣೆ, ನಿರ್ದೇಶನ ಇತ್ಯಾದಿಗಳು ಬಲು ಕುಂಟುತ್ತಾ ಸಾಗುತ್ತವೆ. ಇದು OTTಯಲ್ಲಿ ಬಿಡುಗಡೆ ಕಂಡದ್ದೇ ಇದರ ಭಾಗ್ಯ, ಹೀಗಾಗಿ ಪ್ರೇಕ್ಷಕರು ರಿಮೋಟ್‌ ಕೈಗೆತ್ತಿಕೊಂಡು ಅರ್ಧ ಗಂಟೆಯಲ್ಲಿ ಇಡೀ ಚಿತ್ರ ಫಾರ್ವರ್ಡ್ ಮಾಡುತ್ತಾ, ಅಂತೂ ನೋಡಿ ಮುಗಿಸಿದರು. ಇದೇನಾದರೂ ಥಿಯೇಟರ್‌ ಗೆ ಬಂದಿದ್ದರೆ, ಕಾಸು ಕೊಟ್ಟು ಟಿಕೆಟ್‌ ಕೊಂಡ ತಪ್ಪಿಗೆ ಕೂರಬೇಕಾದ ಪ್ರೇಕ್ಷಕರು, ತಮ್ಮ ತಲೆ ಕೂದಲು ಕಿತ್ತುಕೊಳ್ಳುತ್ತಿದ್ದರಷ್ಟೆ. ಈ ಟ್ರೆಂಡ್‌ ಹೀಗೇ ಮುಂದುವರಿದರೆ, ಸ್ಟಾರ್‌ ಕಿಡ್ಸ್ ಚಿತ್ರಕ್ಕೆ ಮುಂದೆ ಯಾವ ನಿರ್ಮಾಪಕನೂ ಸಿಗಲಾರ!

Kitna-tikega-yah-rishta

ಸಂಬಂಧ ಉಳಿಯುವುದೇ?

ಬಾಲಿವುಡ್‌ ನ ಮದುವೆ, ಸಂಬಂಧಗಳು ಫೆವಿಕಾಲ್ ‌ನ ಅಂಟಿನಂತೆ ಗಟ್ಟಿಯಾಗಿ ಉಳಿಯಾರ! ಅಂಕಿತಾ ಲೋಖಂಡೆ ಹಾಗೂ ವಿಕ್ಕಿ ಜೈನ್‌ ಇತ್ತೀಚೆಗೆ ಈ ಮಾತನ್ನು ಬಲು ಆಳವಾಗಿ ಫೀಲ್ ಮಾಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಸೀಸನ್ನಿನ ಹಿಂದಿಯ `ಬಿಗ್‌ ಬಾಸ್’ ನಲ್ಲಿ ಇದನ್ನು ಇವರು ಪ್ರೂವ್ ‌ಮಾಡುತ್ತಿದ್ದಾರೆ. ತನ್ನತ್ತ ವಿಕ್ಕಿಯ ವರ್ತನೆ ಈ ಭಾವನೆ ಹೆಚ್ಚಿಸಿದೆ ಎನ್ನುತ್ತಾಳೆ ಅಂಕಿತಾ. ತಾನು ಅವನಿಗೆ ಪತ್ನಿಯೇ…. ಗುಲಾಮಳೇ? ಎಂಬ ಶಂಕೆ ಮೂಡಿಸುತ್ತಿದೆಯಂತೆ. ಅತ್ತ ವಿಕ್ಕಿ ಸಹ ಈಕೆ ಬಲು ದುರಹಂಕಾರದಿಂದ ವರ್ತಿಸುತ್ತಿದ್ದಾಳೆ ಅಂತಾನೆ. ಒಟ್ಟಾರೆ ತಾತ್ಪರ್ಯ, ಹೆಣ್ಣು ಎಷ್ಟೇ ಯಶಸ್ವೀ ಎನಿಸಿದರೂ ಗಂಡಿನ `ಅಹಂ’ ಮುಂದೆ ಮಂಡಿ ಊರಬೇಕಾಗುತ್ತದೆ. ನಮಗಂತೂ ಈ ಸಂಬಂಧ ನೂಲಿನ ಬೇಲಿಯಾಗಿ ತೋರುತ್ತಿದೆ, ಮುಂದಿನ ಊಹಾಪೋಹಗಳು ನಿಮಗೇ ಬಿಟ್ಟದ್ದು!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ