ಗುಬ್ಬಿವಾಣಿ ಟ್ರಸ್ಟ್ ಆಯೋಜನೆಯಲ್ಲಿ ನಡೆದ ಈ ವರ್ಷದ “ಅವಳ ಹೆಜ್ಜೆ ಕಿರುಚಿತ್ರೋತ್ಸವ” ಕ್ಕೆ ಅಗಾಧ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹ ದೊರೆತಿದೆ. ಇದೀಗ ಮೂರನೇ ಪ್ರದರ್ಶನವನ್ನು ಬೆಂಗಳೂರಿನ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಭಾನುವಾರ  ಅಂದರೆ, ಸೆಪ್ಟೆಂಬರ್ 21 ರಂದು ಬೆಳಗ್ಗೆ ಏರ್ಪಡಿಸಲಾಗಿದೆ.

ಈ ಚಿತ್ರಗಳು ಪ್ರತ್ಯೇಕವಾಗಿ ಮಹಿಳೆಯರಿಗೆಂದೇ ಏರ್ಪಡಿಸಿದ್ದ ಅವಳ ಹೆಜ್ಜೆ ಕಿರುಚಿತ್ರೋತ್ಸವ ಸ್ಪರ್ಧೆಯಲ್ಲಿ ಆಯ್ಧ ಚಿತ್ರಗಳಾಗಿದ್ದು, ವಿಭಿನ್ನ ಅಭಿವ್ಯಕ್ತಿ, ದೃಷ್ಟಿಕೋನಗಳನ್ನು ನಿರೂಪಿಸುತ್ತವೆ. ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಚಿತ್ರ ಪ್ರದರ್ಶನ ನಡೆಯಲಿದೆ.

ಕಾರ್ಯಕ್ರಮವನ್ನು ಶಾಂತಲಾ ದಾಮ್ಲೆ ಉದ್ಘಾಟಿಸಲಿದ್ದು, 10:15 ಕ್ಕೆ ಸತ್ಯ ಪ್ರಮೋದ ಎಂ.ಎಸ್ ನಿರ್ದೇಶನದ ‘ಆನ್ ಲೈನ್’ (2025), 10:35ಕ್ಕೆ ಮಾನಸ ಯು ಶರ್ಮ ನಿರ್ದೇಶನದ ‘ಸೊಲೋ ಟ್ರಾವೆಲ್ಲರ್’ (2023), 10:45ಕ್ಕೆ ತೃಪ್ತಿ ಕುಲಕರ್ಣಿ ನಿರ್ದೇಶನದ ‘ಹೌ ಆರ್ ಯು?’ (2023), 11:05ಕ್ಕೆ ಮಂದಾರ ಬಟ್ಟಲಹಳ್ಳಿ ನಿರ್ದೇಶನದ ‘ದಿ ಲಾಸ್ಟ್ ಹ್ಯಾಪಿ ಕಸ್ಟಮರ್’ (2024), 11:25ಕ್ಕೆ  ಚಂದನಾ ನಾಗ್ ನಿರ್ದೇಶನದ ‘ಉಭಯ’ (2024), 11:35ಕ್ಕೆ ಕ್ಷಮಾ ಅಂಬೆಕಲ್ಲು ನಿರ್ದೇಶನದ ‘ಪುಷ್ಪ’ (2024), 11:55ಕ್ಕೆ ಕವಿತಾ ಬಿ ನಾಯಕ್ ನಿರ್ದೇಶನದ ‘ಗ್ಲೀ’ (2023), 12:05 ಕ್ಕೆ ಸಿಂಚನಾ ಶೈಲೇಶ್ ನಿರ್ದೇಶನದ ‘ಕೇಕ್ ವಾಕ್’ (2025), 12:20ಕ್ಕೆ ಪ್ರಶ್ನೋತ್ತರ, ಪ್ರೇಕ್ಷಕರ ಪ್ರತಿಕ್ರಿಯೆ ಕಾರ್ಯಕ್ರಮ ನಡೆಯಲಿದೆ.ಸ್ಥಳ : ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ, 6, 9ನೇ ಮುಖ್ಯ ರಸ್ತೆ, ಬನಶಂಕರಿ ಎರಡನೇ ಹಂತ, ಬೆಂಗಳೂರು

ಪ್ರವೇಶ ಉಚಿತವಾಗಿದ್ದು, https://forms.gle/cnaqyXPrMemTBuk27 ಈ ಲಿಂಕ್ ಮೂಲಕ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ 88677 47236 ಸಂಪರ್ಕಿಸಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ