ಗೋಲ್ಡನ್ ಕ್ವೀನ್ ಅಮೂಲ್ಯ ಸ್ಯಾಂಡಲ್ವುಡ್ಗೆ ಮತ್ತೆ ಕಂಬ್ಯಾಕ್ ಆಗಿದ್ದಾರೆ. ಹುಟ್ಟುಹಬ್ಬದ ದಿನದಂದೇ ಅಮೂಲ್ಯ ಸಿಹಿಸುದ್ದಿ ಕೊಟ್ಟಿದ್ದು, ಮಂಜು ಸ್ವರಾಜ್ ನಿರ್ದೇಶನದ ‘ಪೀಕಬೂ’ (Pekaboo Movie) ಸಿನಿಮಾದ ಮೂಲಕ ಮತ್ತೆ ಸಿನಿರಂಗಕ್ಕೆ ಎಂಟ್ರಿ ನೀಡಿದ್ದಾರೆ.
ಮದುವೆ, ಮಕ್ಕಳ ನಂತರ ನಟಿ ಅಮೂಲ್ಯ ನಟನೆಗೆ ಹಿಂದಿರುಗಿದ್ದಾರೆ. ಹುಟ್ಟುಹಬ್ಬದ ದಿನವೇ ಸಿನಿಮಾ ನಟನೆ ಬಗ್ಗೆ ಗುಡ್ನ್ಯೂಸ್ ಕೊಟ್ಟಿರುವ ಐಶು, ಮಂಜು ಸ್ವರಾಜ್ ನಿರ್ದೇಶನದ ‘ಪೀಕಬೂ’ ಸಿನಿಮಾದಲ್ಲಿ ನಟಿಸಲಿದ್ದಾರೆ.
ಈ ಹಿಂದೆ ಮಂಜು ನಿರ್ದೇಶನದ ‘ಶ್ರಾವಣಿ ಸುಬ್ರಹ್ಮಣ್ಯ’ ಸಿನಿಮಾದಲ್ಲಿ ಅಮೂಲ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ನಿನ್ನೆಯಷ್ಟೇ ಅಮೂಲ್ಯ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಚಿತ್ರತಂಡ ಬರ್ತ್ಡೇ ಉಡುಗೊರೆಯಾಗಿ ಅಮೂಲ್ಯ ಪಾತ್ರದ ಟೀಸರ್ ಬಿಡುಗಡೆ ಮಾಡಿದೆ. ಚಾರ್ಲಿ ಚಾಪ್ಲಿನ್ ಸ್ಟೈಲ್ನಲ್ಲಿ ಸ್ಟೆಪ್ ಹಾಕುತ್ತ ಎಂಟ್ರಿ ನೀಡಿರುವ, ಲೆಟ್ಸ್ ಸ್ಟಾರ್ಟ್ದ ಮ್ಯೂಜಿಕ್ ಎನ್ನುತ್ತ ಸ್ಟೆಪ್ಸ್ ಹಾಕಿದ್ದಾರೆ. ಒಂದು ನಿಮಿಷವಿರುವ ವಿಡಿಯೋದಲ್ಲಿ ಅಮೂಲ್ಯ ಕಾಮಿಡಿಯೊಂದಿಗೆ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನಾವು ನಮ್ಮವರು’ ಎಂಬ ರಿಯಾಲಿಟಿ ಶೋ ಮೂಲಕ ಅಮೂಲ್ಯ ಅದ್ದೂರಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಈ ಶೋನಲ್ಲಿ ಜಡ್ಜ್ ಆಗಿ ಅಮೂಲ್ಯ ಎಲ್ಲರ ಮನೆ ಮಾತಾಗಿದ್ದಾರೆ. ಅಷ್ಟೇ ಅಲ್ಲದೇ ಇತ್ತೀಚೆಗೆ ಮಕ್ಕಳೊಂದಿಗೆ ಸಣ್ಣ ಮಕ್ಕಳಂತೆ ತಾನು ಮಗುವಾಗಿ ಆಟ ಆಡಿ ಎಂಜಾಯ್ ಮಾಡ್ತಿರುವ ವಿಡಿಯೋ ಹಂಚಿಕೊಂಡಿದ್ದರು.





