ಶರತ್ ಚಂದ್ರ

ಮಲಯಾಳಂನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ಟಾರ್ ನಟರ ಚಿತ್ರಗಳಿಗಿಂತ ಒಳ್ಳೆ ಕಂಟೆಂಟ್ ಇರುವ ಚಿತ್ರಗಳು ಸೂಪರ್ ಹಿಟ್ ಆಗುತ್ತಿದ್ದೂ, ಕೋಟಿಗಟ್ಟಲೆ ಗಳಿಕೆ ಪಡೆಯುತ್ತಿದೆ. ವಾರಗಳ ಹಿಂದೆ ಬಿಡುಗಡೆಯಾದ ' ಲೋಕ:

ಚಿತ್ರ 200 ಕೋಟಿ ಕ್ಲಬ್ ಸೇರಿದೆ.

1000682118

ಅಂತಹ ಸ್ಟಾರ್ ಕಾಸ್ಟ್ ಇಲ್ಲದ ಈ ಚಿತ್ರದ ಹೀರೋಯಿನ್ ಕಲ್ಯಾಣಿ ಪ್ರಿಯದರ್ಶನ್ ಬಿಟ್ಟರೆ ಯಾರು ಅಂತಹ ಜನಪ್ರಿಯತೆ ಹೊಂದಿರುವರು ತಾರಾ ಬಳಗ ಚಿತ್ರದಲ್ಲಿ ಇರಲಿಲ್ಲ.

ಸುಮಾರು ಮೂವತ್ತು ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಚಿತ್ರ ದಕ್ಷಿಣದ ಎಲ್ಲ ಭಾಷೆಗಳಲ್ಲಿ ಬಂಪರ್ ಬೆಲೆ ತೆಗೆದಿದೆ.

1000682116

ಮಲಯಾಳಂನ ಯಂಗ್ ಸೂಪರ್ ಸ್ಟಾರ್ ದುಲ್ಖರ್ ಸಲ್ಮಾನ್ ನಿರ್ಮಿಸಿರುವ ಈ ಚಿತ್ರವನ್ನು ಜನರು ಅದ್ಭುತವಾಗಿ ಸ್ವೀಕರಿಸಿದ್ದಾರೆ.

ಲೇಡಿ ಸೂಪರ್ ಹೀರೋ ಪಾತ್ರದಲ್ಲಿ ನಟಿಸಿರುವ ಕಲ್ಯಾಣಿ ಪ್ರಿಯದರ್ಶನ್ ಅಭಿನಯಕ್ಕೆ ಚಿತ್ರ ರಸಿಕರು ಫಿದಾ  ಅಗಿದ್ದಾರೆ. ಹಾಗೆ ನೋಡುವುದಾದರೆ ಇಡೀ ಚಿತ್ರವನ್ನು ತನ್ನ ಹೆಗಲಿನ ಮೇಲೆ ಹಾಕಿಕೊಂಡು ಸಿನಿಮಾದ ಯಶಸ್ಸಿಗೆ ಕಲ್ಯಾಣಿ ಪ್ರಿಯದರ್ಶನ್ ಕಾರಣರಾಗಿದ್ದಾರೆ.

1000682114

ಅಲ್ಲಿಗೆ ನಾಯಕಿ ಪ್ರಧಾನ ಚಿತ್ರವೊಂದು 200 ಕೋಟಿ ಕ್ಲಬ್ಬಿಗೆ ಸೇರಿರೋದು ವಿಶೇಷ.

ಪ್ರಿಯದರ್ಶಿನಿ ಈ ಹಿಂದೆ ತೆಲುಗು ತಮಿಳು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದು, ಆಕೆಗೆ ಅಂತಹ ಮಹತ್ವದ ಪಾತ್ರ ಸಿಕ್ಕಿರಲಿಲ್ಲ.

1000682112

ತೆಲುಗು ಚಿತ್ರ 'ಹಲೋ 'ಮೂಲಕ ಕೆರಿಯರ್ ಆರಂಭಿಸಿದ ಕಲ್ಯಾಣಿಗೆ ಪ್ರಥಮ ಚಿತ್ರಕ್ಕೆ Filmfare Best Female debut ಪ್ರಶಸ್ತಿ ದಕ್ಕಿತ್ತು

ಈ ಹಿಂದೆ ದುಲ್ಖರ್ ಸಲ್ಮಾನ್ ಜೊತೆ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದ ಕಲ್ಯಾಣಿ ಅವರದೇ ನಿರ್ಮಾಣದ ಲೋಕ: ಚಿತ್ರದಲ್ಲಿ ನಟಿಸಿ ಬ್ಲಾಕ್ ಬಸ್ಟರ್ ಮೂವಿ ನೀಡಿದ್ದಾರೆ.

ಅಂದಹಾಗೆ ಈ ಚಿತ್ರದ ವಿತರಣೆಯನ್ನು ಕರ್ನಾಟಕದಲ್ಲಿ ರಾಜ್ ಬಿ ಶೆಟ್ಟಿ ಮಾಡಿದ್ದಾರೆ.ಈ ಹಿಂದೆ ರಾಜ್ ಬಿ ಶೆಟ್ಟಿ ಅವರ 'ಸೋ ಫ್ರಮ್ ಸೋ 'ಚಿತ್ರದ ಮಲಯಾಳಂ ಅವತರಣಿಕೆಯನ್ನು ದುಲ್ಖರ್ ಸಲ್ಮಾನ್ ಕೇರಳದಲ್ಲಿ ಬಿಡುಗಡೆ ಮಾಡಿದ್ದು ಲಾಭ ಮಾಡಿಕೊಂಡಿದ್ದರು.

ಸದ್ಯಕ್ಕೆ ಮಲಯಾಳಂ ಚಿತ್ರವನ್ನು ಕರ್ನಾಟಕದಲ್ಲಿ ತಮ್ಮ 'ಲೈಟರ್ ಬುದ್ಧ' ಮೂಲಕ ಬಿಡುಗಡೆ ಮಾಡಿರುವ ರಾಜ್ ಬಿ ಶೆಟ್ಟಿ ಲೋಕ: ಚಿತ್ರ ಹಂಚಿಕೆ ಮಾಡಿ ಲಾಭದಲಿದ್ದಾರೆ.

ಒಟ್ಟಿನಲ್ಲಿ ಇತ್ತೀಚೆಗೆ ಕಡಿಮೆ ಬಜೆಟ್ ನ ಒಳ್ಳೆ ಕಂಟೆಂಟ್ ಇರುವ ಚಿತ್ರಗಳು ಹಾಕಿದ ಬಂಡವಾಳಕ್ಕಿಂತ ಮೂರರಿಂದ 10 ಪಟ್ಟು ಅಧಿಕ ಗಳಿಕೆ  ಗಳಿಸುತ್ತಿರುವುದು,ಇಂತಹ ವಿಭಿನ್ನ ಚಿತ್ರಗಳನ್ನು ನಿರ್ಮಿಸುವ ಸಿನಿಮಾ ಮಂದಿಗೆ ಪ್ರೆರೇಪಣೆ ನೀಡುತ್ತಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ