ಗೃಹಶೋಭಾ ಮಹಿಳಾ ಓದುಗರ ವಿಶೇಷ ಅಭಿವೃದ್ಧಿ, ವ್ಯಕ್ತಿತ್ವ ವಿಕಾಸ, ಏಳಿಗೆಗಾಗಿ ಎಂದೇ, ಡೆಲ್ಲಿ ಪ್ರೆಸ್‌ ಪ್ರಕಟಣಾ ತಂಡ, ಗೃಹಶೋಭಾ ಮಾಸಪತ್ರಿಕೆಯ ವತಿಯಿಂದ `ಕುಕಿಂಗ್‌ ಕ್ವೀನ್‌’ ಇವಂಟ್‌ ನ್ನು ಇತ್ತೀಚೆಗೆ ಬಲು ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಪ್ರಮುಖ ಪ್ರಾಯೋಜಕರು ಎಂದರೆ ಸ್ಪೈಸ್‌ ಪಾರ್ಟ್ ನರ್‌ ಎಲ್.ಜಿ ಇಂಗು, ಹೆಲ್ದಿ ಟಿಫನ್‌ ಪಾರ್ಟ್‌ ನರ್‌ ಎಕ್ಸೋ, ಪ್ಯೂರಿಟಿ ಪಾರ್ಟ್‌ ನರ್‌ ಸನ್‌ ಪ್ಯೂರ್‌ ಸನ್‌ ಫ್ಲವರ್‌ ಆಯಿಲ್‌, ಜ್ಯೂವೆಲರಿ ಪಾರ್ಟ್‌ ನರ್‌ ಸೆನ್‌ ಕೋ, ಅಸೋಸಿಯೇಟ್‌ ಸ್ಪಾನ್ಸರರ್‌ ನಂದಿನಿ ಹಾಗೂ ಮೀಡಿಯಾ ಪಾರ್ಟ್‌ ನರ್ಸ್‌ ಪ್ರಜಾಪ್ರಗತಿ ದಿನಪತ್ರಿಕೆ  ಪ್ರಗತಿ ಟಿವಿ.

ಈ ಕಾರ್ಯಕ್ರಮದ ಇಡೀ ಫೋಕಸ್‌ ಅಡುಗೆ, ಪೌಷ್ಟಿಕ ಆಹಾರ ಸೇವನೆಯ ಕುರಿತಾಗಿತ್ತು. ಕಳೆದ ತಿಂಗಳು ಸೆಪ್ಟೆಂಬರ್‌ 7 ರಂದು ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಜಿಪಿಓ ಬಳಿಯ ರಾಜಭವನ ರಸ್ತೆಯ ಹೋಟೆಲ್ ‌ಕ್ಯಾಪಿಟಲ್ ನಲ್ಲಿ ಅದ್ಧೂರಿಯಿಂದ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ  ಬಂದಿದ್ದ ಮಹಿಳಾ ಅಭ್ಯರ್ಥಿಗಳಿಂದ ಆನ್‌ ದಿ ಸ್ಪಾಟ್‌ ಅಡುಗೆ ತಯಾರಿ ಸ್ಪರ್ಧೆ ಪ್ರಮುಖ ಹೈಲೈಟ್‌ ಆಗಿತ್ತು. ನಗರದ ನೂರಾರು ಮಹಿಳೆಯರು ಅತಿ ಉತ್ಸಾಹದಿಂದ ತಮ್ಮ ಆರೋಗ್ಯ, ಪೌಷ್ಟಿಕ ಆಹಾರ, ಅಡುಗೆಯ ಸ್ಪರ್ಧೆ, ಸೆಲೆಬ್ರಿಟಿ ಶೆಫ್‌ ರಿಂದ ಅಡುಗೆ ಡೆಮೊ, ಹೆಚ್ಚಿನ ಮನರಂಜನೆ ಇತ್ಯಾದಿಗಳಿಗಾಗಿ ಇಲ್ಲಿ ಸೇರಿದ್ದರು.

Cooking_Queen_Bengaluru_Post_event-01

ನ್ಯೂಟ್ರಿಷನಿಸ್ಟ್ ಸೆಷನ್

ಮೊದಲಿಗೆ ಸಭಿಕರನ್ನು ಉದ್ದೇಶಿಸಿ ಆಹಾರತಜ್ಞೆ ಸುಮಾ ಚೇತನ್‌ ರಿಂದ ಅಮೂಲ್ಯ ಆರೋಗ್ಯದ ಟಿಪ್ಸ್ ಒದಗಿಸಲಾಯಿತು. ಫುಡ್‌ಸೈನ್ಸ್ ನಲ್ಲಿ ಪದವೀಧರೆ ಹಾಗೂ ಕ್ಲಿನಿಕಲ್ ನ್ಯೂಟ್ರಿಷನ್‌ ಡೈಟೆಟಿಕ್ಸ್ ನಲ್ಲಿ ಪಿಜಿ ಡಿಪ್ಲೊಮಾ ಹೋಲ್ಡರ್‌ ಸುಮಾ ಚೇತನ್, ಕ್ರೈಯಾ ಸುಪ್ರಾ ಆಸ್ಪತ್ರೆಗಳಲ್ಲಿ ಕನ್ಸಲ್ಟೆಂಟ್‌ ಡಯೆಟಿಷಿಯನ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Photo-02

ಹೆಣ್ಣುಮಕ್ಕಳು, ಪ್ರೌಢ ಮಹಿಳೆಯರು ಪ್ರತಿನಿತ್ಯ ಸೇವಿಸುವ ಆಹಾರ ಯಾವ ರೀತಿ ಅವರ ಗಟ್‌ ಹೆಲ್ಚ್, ಹಾರ್ಮೋನ್‌ ಇನ್‌ಫ್ಲೂಯೆನ್ಸ್, ಹೃದ್ರೋಗಗಳು, ಸರ್ವೈಕಲ್, ಬ್ರೆಸ್ಟ್ ಕ್ಯಾನ್ಸರ್‌, ಬೋನ್‌ ಹೆಲ್ತ್, ತೂಕ ನಿಯಂತ್ರಣ ಇತ್ಯಾದಿಗಳ ಮೇವಲೆ ಪ್ರಭಾವ ಬೀರುತ್ತದೆ ಎಂದು ಸವಿವರವಾಗಿ ತಿಳಿಸಿಕೊಟ್ಟರು. ಎಂಥ ಆಹಾರ ಸೇವಿಸಬೇಕು/ಬಾರದು, ಓಟ್ಸ್, ಮಿಲೆಟ್ಸ್, ಬ್ರೊಕನ್‌ ವೀಟ್‌, ಆರ್ಗ್ಯಾನಿಕ್‌ ಫುಡ್‌, ಕೊಲೆಸ್ಟ್ರಾಲ್, ಫೈಬರ್‌ ಯುಕ್ತ ಆಹಾರ, ಡ್ರೈಫ್ರೂಟ್ಸ್, ಚಿಯಾ/ಸಬ್ಜಾ ಸೀಡ್ಸ್/ಎಣ್ಣೆಯ ಬಳಕೆ ಇತ್ಯಾದಿ ಎಲ್ಲದರ ಬಗ್ಗೆ ಅಮೂಲ್ಯ ಮಾಹಿತಿ ನೀಡಿದರು. ಆ ನಂತರ ನೆರೆದಿದ್ದ ನೂರಾರು ಮಹಿಳೆಯರ ಅಸಂಖ್ಯಾತ ಸಂದೇಹಗಳನ್ನು ಸೂಕ್ತವಾಗಿ ನಿವಾರಿಸಿ, ಡಯೆಟ್‌ ಕುರಿತು ಅವರ ಜ್ಞಾನ ತಣಿಸಿದರು.

ಸೆಲೆಬ್ರಿಟಿ ಶೆಫ್ಸೆಷನ್

ಆಯುಷ್‌ ಟಿವಿ, ಉದಯ, ಸ್ಟಾರ್‌ ಸುವರ್ಣಾ ಟಿವಿ ಚಾನೆಲ್ ‌ಗಳಲ್ಲಿ ಶೆಫ್‌ ಆಗಿ ಮಿಂಚುತ್ತಿರುವ ಆಶಾರಾಣಿ ಸೋಮನಾಥ್‌, ಸುಮಾರು 400ಕ್ಕೂ ಹೆಚ್ಚು ಟಿವಿ ಆಡುಗೆ ಕಾರ್ಯಕ್ರಮಗಳಿಂದ ನಮ್ಮ ಓದುಗರಿಗೆ ಚಿರಪರಿಚಿತ. `ಬೊಂಬಾಟ್‌ ಭೋಜನ’ ಅಡುಗೆ ಕಾರ್ಯಕ್ರಮದಿಂದ ಅಪಾರ ಕೀರ್ತಿ ಪಡೆದವರು.

Photo-01

ಅಮೂಲ್ ‌ಫೇಸ್‌ ಬುಕ್‌ ಲೈವ್ ‌ಶೋನಲ್ಲಿ ಖ್ಯಾತಿ ಗಳಿಸಿ ಎರಡೆರಡು ಸಲ ಕುಕ್ಕಿಂಗ್‌ ಕ್ವೀನ್‌ ಅವಾರ್ಡ್‌ ಪಡೆದಿರುತ್ತಾರೆ. ಉಚಿತವಾಗಿ ಬಡ ಮಕ್ಕಳಿಗೆ ಟ್ಯೂಷನ್‌ ಹೇಳುವುದು ಇವರ ಹವ್ಯಾಸ. ಹಲವು ಅಡುಗೆ ಕಾರ್ಯಕ್ರಮಗಳಿಗೆ ಜಜ್‌ ಆಗಿದ್ದಾರೆ, ಉತ್ತಮ ಬ್ಲಾಗರ್‌ ಕೂಡ.

ಗೃಹಶೋಭಾ ಇವೆಂಟ್‌ನಲ್ಲಿ ಇವರು ಪ್ರೇಕ್ಷಕರಿಗಾಗಿ ಉತ್ಕೃಷ್ಟ ಪೌಷ್ಟಿಕ ರೋಟಿ ರಾಪ್‌ ಮಾಡಿ ತೋರಿಸಿದರು. ಆಲೂ ಪಲ್ಯ, ಪನೀರ್‌, ಹುಳಿಸಿಹಿ ಚಟ್ನಿ, ಸಲಾಡ್‌ ಸಮೇತ ಚಪಾತಿಯನ್ನು ರೋಲ್ ‌ಮಾಡಿ ತೋರಿಸಿಕೊಟ್ಟು, ಮಹಿಳಾ ವೃಂದದ ನೂರಾರು ಅಡುಗೆ ಸಂದೇಹಗಳನ್ನು ನಿವಾರಿಸಿದರು.

ಎಲ್.ಜಿ ಕುಕಿಂಗ್ಕ್ವೀನ್ಸ್ಪರ್ಧೆ

ಇದರ ಮುಂದಿನ ಕಾರ್ಯಕ್ರಮವಾಗಿ ಸಭೆಯಲ್ಲಿ ನೆರೆದಿದ್ದ ಹೆಂಗಳೆಯರಲ್ಲಿ ಲಕ್ಕಿ ಡ್ರಾ ಮೂಲಕ ಶೆಫ್‌ ಆಶಾ ಸೋಮನಾಥ್‌, ಅದೃಷ್ಟಶಾಲಿಗಳಾದ ಐವರು ಜೋಡಿಗಳನ್ನು ಆರಿಸಿದರು. ಅವರೆಲ್ಲರಿಗೂ ಸಾಲಾಗಿ 5 ಮೇಜು, ಇಂಡಕ್ಷನ್‌ ಸ್ಟವ್, ಉಪಾಹಾರ ತಯಾರಿಸಲು ಬೇಕಾದ ಸಕಲ ಸಾಮಗ್ರಿ, ಅದನ್ನು ಬಳಸಲು ಬೇಕಾದ ಪರಿಕರ ಎಲ್ಲಾ ಒದಗಿಸಲಾಯಿತು. ಅರ್ಧ ಗಂಟೆಯಲ್ಲಿ ಅಡುಗೆ ಮುಗಿಸಿ, ಗರಿಷ್ಠ ಪದಾರ್ಥಗಳನ್ನು ನೀಟಾಗಿ ಬಳಸಿ, ಕೌಂಟರ್‌ ನ್ನು ಯಾರು ಅತಿ ಶುಚಿಯಾಗಿ ಶುಭ್ರವಾಗಿ ಮೇಂಟೇನ್ ಮಾಡಿರುತ್ತಾರೋ, ಅಷ್ಟೇ ರುಚಿಕರವಾಗಿ ಅಡುಗೆ ತಯಾರಿಸಿ ಪರ್ಫೆಕ್ಟ್ ಪ್ರೆಸೆಂಟೇಶನ್‌ ನೀಡಿದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಘೋಷಿಸಲಾಯಿತು. ಶೆಫ್‌ ಆಶಾ ಹಾಗೂ  ನ್ಯೂಟ್ರಿಷನಿಸ್ಟ್ ಸುಮಾ ವಿಜೇತರಿಗೆ ಬಹುಮಾನ ನೀಡಿದರು.

ಯಾರು ಅದನ್ನು ಪರ್ಫೆಕ್ಟ್ ಆಗಿ, ಅತಿ ಶುಚಿರುಚಿಕರವಾಗಿ ತಯಾರಿಸಿದ್ದರೋ, ಶೆಫ್‌ ಅದನ್ನು ಟೇಸ್ಟ್ ಮಾಡಿ, ಎಲ್ಲಾ ವಿಧದಲ್ಲೂ ಸೈ ಎನಿಸಿಕೊಂಡ ರೆಸಿಪಿಗಳಿಗೆ ಬಹುಮಾನ ಘೋಷಿಸಿದರು.

ಈ ನಿಟ್ಟಿನಲ್ಲಿ ಅನನ್ಯಾ ಮತ್ತು ಕುಮುದಾ ಜೋಡಿ ತಯಾರಿಸಿದ `ಮಲ್ಟಿಗ್ರೇನ್‌ ಪ್ಯಾನ್‌ ಕೇಕ್‌’ಗೆ ಪ್ರಥಮ ಬಹುಮಾನ, ಸವಿತಾ ಕಿರಣ್‌ ಪ್ರತಿಭಾ ಶ್ರೀನಿವಾಸ್‌ ತಯಾರಿಸಿದ `ರಾಗಿ ಕೋಕೋನಟ್‌ ಗಾರಿಗೆ’ಗೆ ದ್ವಿತೀಯ ಬಹುಮಾನ, ದೀಪಾಶ್ರೀ ಧಾತ್ರಿ ತಯಾರಿಸಿದ `ರಾಗಿ ರವೆ ಕಟ್ಲೆಟ್‌’ಗೆ ತೃತೀಯ ಬಹುಮಾನ ಹಾಗೂ ಕೆ.ಪ್ರಭಾ/ಸಮೀರಾ  ಆಶಾ/ರಾಧಿಕಾ ಜೋಡಿಗೆ ಸಮಾಧಾನಕರ ಬಹುಮಾನಗಳು ದೊರಕಿದವು.

ಎಕ್ಸೋ ಹೆಲ್ದಿ ಟಿಫನ್ಕುಕಿಂಗ್ಕ್ವೀನ್

ಇದೇ ತರಹ ಲಕ್ಕಿ ಡಿಪ್‌ ಮೂಲಕ ಐವರು ತಾಯಂದಿರನ್ನು ಫಟಾಫಟ್‌ ನಿಮಿಷಗಳಲ್ಲಿ ಮಕ್ಕಳಿಗಾಗಿ ಪೌಷ್ಟಿಕ ಉಪಾಹಾರ ತಯಾರಿಸುವ ಸ್ಪರ್ಧೆಗೆ ಆರಿಸಲಾಯಿತು. ಇದರಲ್ಲಿ ಕ್ರಮವಾಗಿ ಸಯೀದಾ ಮುನೀರಾ ತಯಾರಿಸಿದೆ `ಶ್ಯಾವಿಗೆ ಉಪ್ಪಿಟ್ಟು’ ಪ್ರಥಮ, ಎ.ಎಸ್‌. ಅಶ್ವಿನಿ ತಯಾರಿಸಿದ `ರಾಗಿ-ಗೋಧಿ-ಅಕ್ಕಿ ಹಿಟ್ಟಿನ ಪ್ಯಾನ್‌ ಕೇಕ್‌’ಗೆ ದ್ವಿತೀಯ, ಪೂರ್ಣಿಮಾ ತಯಾರಿಸಿದ `ಹೆಲ್ಡಿ ಮಲ್ಟಿ ವೆಜ್‌ ಶ್ಯಾವಿಗೆ’ಗೆ ತೃತೀಯ ಹಾಗೂ ಕೆ.ಕೆ. ಶಾಂತಾ/ಕೆ. ರೋಶಿನಿ ತಯಾರಿಸಿದ ಮಲ್ಟಿಗ್ರೇನ್‌ ನ್ಯೂಟ್ರಿಶನ್‌ ರಾಪ್‌’  `ಅಕ್ಕಿ ರೊಟ್ಟಿ’ಗೆ ಸಮಾಧಾನಕರ ಬಹುಮಾನಗಳು ದೊರಕಿದವು.

ಗೇಮಿಂಗ್ಸೆಷನ್

ಇಡೀ ಕಾರ್ಯಕ್ರಮದ ನಿರೂಪಣೆ ಮಾಡುತ್ತಾ ಆ್ಯಂಕರ್‌ ಸಮೀರಾ ಖಾನ್‌, ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳಾಮಣಿಗಳಿಗೆ ಅತ್ಯಂತ ರೋಚಕ ಮನರಂಜನೆ ಒದಗಿಸಿದರು. ಬಗೆಬಗೆಯ ಹಾಡು, ನೃತ್ಯಗಳಲ್ಲಿ ಪಾಲ್ಗೊಂಡ ಹೆಂಗಸರು ಉತ್ಸಾಹದಿಂದ ನಕ್ಕು ನಲಿದಾಡಿದರು. ಪ್ರತಿಯೊಂದು ಸೆಷನ್‌ ನಡೆಯುತ್ತಿದ್ದಂತೆ, ಅದಕ್ಕೆ ಸಂಬಂಧಿಸಿದ ಹಾಗೂ ಮನರಂಜನೆ ಕುರಿತಾದ ಅನೇಕ ರಸಪ್ರಶ್ನೆಗಳನ್ನು ಸಭಿಕರಿಗೆ ಕೇಳಿದರು. ಸೂಕ್ತವಾಗಿ ಬೇಗ ಉತ್ತರಿಸಿದ ಹೆಂಗಸರಿಗೆ ಅತ್ಯಾಕರ್ಷಕ ಬಹುಮಾನಗಳನ್ನು ಗೃಹಶೋಭಾ ಸಿಬ್ಬಂದಿ ಆನ್‌ ದಿ ಸ್ಪಾಟ್‌ ವಿತರಿಸಿದರು.

ಇಷ್ಟೆಲ್ಲಾ ಕಾರ್ಯಕ್ರಮ ಮುಗಿಸಿಕೊಂಡು, ಇವೆಂಟ್‌ ಗೆ ಬಂದಿದ್ದ ಹೆಂಗಸರು, ಅತ್ಯುತ್ತಮ ಪೌಷ್ಟಿಕ ಆಹಾರ ಸೇವಿಸಿ, ಪ್ರತಿಯೊಬ್ಬರೂ ಅಪಾರ ಉಡುಗೊರೆ ತುಂಬಿದ್ದ ಗುಡೀ ಬ್ಯಾಗ್‌ ನ್ನು ಪಡೆದು, ಸಂತೋಷದಿಂದ ವಿದಾಯ ಕೋರಿದರು. ಒಟ್ಟಾರೆ ಗೃಹಶೋಭಾ ಕುಕಿಂಗ್‌ ಕ್ವೀನ್‌ ಇವೆಂಟ್‌ ಗೆ ಬಂದಿದ್ದ ಹೆಂಗಸರೆಲ್ಲರೂ ಇದನ್ನು ಬಹಳ ಎಂಜಾಯ್‌ ಮಾಡಿದರು. ಇವೆಂಟ್‌ ಬಹಳ ಯಶಸ್ವಿಯಾಗಿ ನೆರವೇರಿತು!

ಪ್ರತಿನಿಧಿ

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ