ಸರಸ್ವತಿ ಜಾಗೀರ್ದಾರ್*

ನಟಿ ರಚಿತಾರಾಮ್ ಅವರು ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ‌ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ರಚಿತಾರಾಮ್ ಅಭಿನಯದ “ಲ್ಯಾಂಡ್ ಲಾರ್ಡ್” ಚಿತ್ರದ ರಚಿತಾ ರಾಮ್ ಅವರ ಅವರ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಲಾಯಿತು.

ಕೆ.ವಿ. ಸತ್ಯಪ್ರಕಾಶ್, ಹೇಮಂತ್ ಗೌಡ ಕೆ.ಎಸ್. ಅವರ ನಿರ್ಮಾಣದ, ಜಡೇಶ್ ಕೆ.ಹಂಪಿ ಅವರ ನಿರ್ದೇಶನದ ‘ಲ್ಯಾಂಡ್ ಲಾರ್ಡ್’ ಚಿತ್ರದಲ್ಲಿ ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದು ರಚಿತಾರಾಮ್ ನಾಯಕಿ ಪಾತ್ರ ನಿರ್ವಹಿಸಿದ್ದಾರೆ.

birthday 1

ಈ ಸಂದರ್ಭದಲ್ಲಿ ನಟಿ ರಚಿತಾರಾಮ್ ಮಾತನಾಡುತ್ತಾ, ಈ ವರ್ಷದ ಬರ್ತ್ ಡೇ ನನಗೆ ತುಂಬಾ ಸ್ಪೆಷಲ್. “ಲ್ಯಾಂಡ್ ಲಾರ್ಡ್” ಚಿತ್ರತಂಡದ ಕಡೆಯಿಂದ ಈ ಟೀಸರ್ ನನಗೆ ಸರ್ ಪ್ರೈಸ್ ‌ಗಿಫ್ಟ್. ಇದೊಂದು ವಿಭಿನ್ನ ಪಾತ್ರ ಎಂದು ಹೇಳಿದರು.

ನಿರ್ದೇಶಕ ಜಡೇಶ್ ಕೆ ಹಂಪಿ ಮಾತನಾಡಿ, ಇಂಥಹ ಪಾತ್ರವನ್ನು ರಚಿತಾರಾಮ್ ಅವರು ಒಪ್ಪುತ್ತಾರಾ? ಎಂಬ ಆತಂಕವಿತ್ತು. ಅವರು ಒಪ್ಪಿಕೊಂಡು ಅಭಿನಯಿಸಿದ್ದು ತುಂಬಾ ಸಂತೋಷ. “ಕೂಲಿ” ಚಿತ್ರದಲ್ಲಿ ಕಲ್ಯಾಣಿಯಾಗಿ ನಟಿಸಿದ್ದರು. ಅದಕ್ಕಿಂತ ಬೇರೆ ಥರದಲ್ಲಿ ಈ ಪಾತ್ರ ಮೂಡಿ ಬಂದಿದೆ. ಇದರಲ್ಲಿ ಅವರು ಚಿನ್ನಮ್ಮ ಆಗಿದ್ದಾರೆ ಎಂದು ಹೇಳಿದರು.

birthday 2

ನಿರ್ಮಾಪಕ ಕೆ.ವಿ. ಸತ್ಯಪ್ರಕಾಶ್ ಮಾತನಾಡಿ, ನಮ್ಮ ಚಿತ್ರದಲ್ಲಿ ರಚಿತಾರಾಮ್ ಅವರು ಅದ್ಭುತ ಪಾತ್ರ ನಿರ್ವಹಿಸಿದ್ದಾರೆ. ಅವರು ರಾಷ್ಟ್ರಪ್ರಶಸ್ತಿ ಪಡೆಯುವ ಮಟ್ಟಕ್ಜೆ ಬೆಳೆಯಲಿ. ಇದು ನೈಜ ಘಟನೆಯನ್ನು ಆಧರಿಸಿ ನಿರ್ಮಿಸಿದ ಚಿತ್ರ. ಈ ಚಿತ್ರದ ಅಭಿನಯಕ್ಕೆ ರಚಿತಾರಾಮ್ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಸಿಗುತ್ತದೆ ಎಂದು ಹೇಳಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ