ಅಪೂರ್ಣ ಜ್ಞಾನ ನೀಡುವ ಮೊಬೈಲ್

ಸೋಶಿಯಲ್ ಮೀಡಿಯಾ ಇಂದು ಸಾಮಾನ್ಯ ಜನರನ್ನು ಅದರಲ್ಲೂ ಹೆಣ್ಣುಮಕ್ಕಳು, ಪ್ರೌಢರನ್ನು ದಾರಿ ತಪ್ಪಿಸುತ್ತಿದೆ. ತಾವು ಮೊಬೈಲ್ ‌ಸ್ಕ್ರೀನ್‌ ನಲ್ಲಿ ನೋಡುತ್ತಿರುವುದೆಲ್ಲ ಅಪ್ಪಟ ಸತ್ಯ ಎಂದೇ ಅವರು ಭಾವಿಸುತ್ತಾರೆ. ಅದುವೇ ವೇದವಾಕ್ಯ, ಅದುವೇ ಧರ್ಮಾದೀಶ ಎಂಬ ಭ್ರಮೆಯಲ್ಲಿದ್ದಾರೆ. ಇಂಥ ಮೆಸೇಜ್‌ ಗಳನ್ನು ಇವರಿಗೆ ಕಳಿಸಿದರು ಅದು ಎಷ್ಟು ಸತ್ಯ ಎಂದು ಚಿಂತಿಸುವುದಿಲ್ಲ. ಅವರು ಇವರದೇ ಆಲೋಚನೆಯವರೇ, ವರ್ಗದವರೇ, ಹಿತಚಿಂತಕರೇ.... ಒಂದೂ ಗೊತ್ತಿಲ್ಲ. ಸೋಶಿಯಲ್ ಮೀಡಿಯ ಇಂದು ಕೋಟ್ಯಂತರ ಮಂದಿಯನ್ನು ಮುಟ್ಟುತ್ತಿರಬಹುದು, ನಿಮ್ಮನ್ನು ನಂಬಿದವರು ನಿಮ್ಮ ಮೆಸೇಜ್‌ ಫಾಲೋ ಮಾಡಬಹುದಷ್ಟೆ.

ಸೋಶಿಯಲ್ ಮೀಡಿಯಾದ ಸೋಜಿಗವೆಂದರೆ ಯಾರೂ ಅದನ್ನು ಎಡಿಟ್‌ ಮಾಡುವುದಿಲ್ಲ, ಸರಿ/ತಪ್ಪು ಪರೀಕ್ಷಿಸುವುದಿಲ್ಲ. ಕಮೆಂಟ್ಸ್ ರೂಪದಲ್ಲಿ ಬೈಗುಳದ ಮಳೆ ಸುರಿಸಬಹುದು. ಸೋಶಿಯಲ್ ಮೀಡಿಯಾವನ್ನು ಮಾಹಿತಿಯ ಮೂಲಾಧಾರ ಎಂದುಕೊಳ್ಳುವುದು ಮಹಾ ತಪ್ಪು. ಇದು ದಿಶಾಹೀನ, ಭ್ರಾಮಕ, ಸುಳ್ಳು, ಗೊಂದಲಗಳ ಗೂಡವಾಗಿದೆ. ಇದು ನೀಡುತ್ತಿರುವ ಮಾಹಿತಿ ಎಲ್ಲಾ ಅಪೂರ್ಣ!

ಇದರ ಪರಿಣಾಮವಾಗಿ ಸಂಪಾದಿಸುವ ಸುಶಿಕ್ಷಿತ ಹೆಂಗಸರೂ ಸಹ ಬದಲಾಗುತ್ತಿರುವ ಸಮಾಜದ ಕುರಿತಾಗಿ ಏನೂ ಅರಿತುಕೊಳ್ಳುತ್ತಿಲ್ಲ, ಆ ಬಗ್ಗೆ ಹೇಳುತ್ತಿಲ್ಲ, ಅಥವಾ ಏನೂ ಮಾಡಲಾಗುತ್ತಿಲ್ಲ. ಏಕೆಂದರೆ ಇವರಿಗೆ ಸಿಗುತ್ತಿರುವ ಇಂಥ ಪ್ರತಿ ಮಾಹಿತಿಯೂ ಅಪೂರ್ಣ! ಯಾರಿಗೆ ಯಾವುದರ ಬಗ್ಗೆ ಸರಿಯಾಗಿ ಗೊತ್ತಿಲ್ಲವೋ ಅಂಥವರು ಕಳಿಸಿದ್ದನ್ನೇ ಇವರು ನಂಬುತ್ತಿದ್ದಾರೆ. ಎಲ್ಲಾ ಪ್ಲಾಟ್‌ ಫಾರ್ಮ್ ಗಳಲ್ಲೂ ನೀವು ಪದೇ ಪದೇ ಅಂಥದ್ದೇ ಪೋಸ್ಟ್ ನೋಡಬಹುದು, ಇದನ್ನೇ ಎಲ್ಲರೂ ಫಾಲೋ ಮಾಡುತ್ತಾರೆ. ಎಲ್ಲಿ ಹೆಂಗಸರ ಹಕ್ಕಿನ ಕುರಿತಾಗಿ ವಿಷಯ ಬರುತ್ತದೋ, ಅದು ತಂತಾನೇ ಅಡಗಿ ಹೋಗುತ್ತದೆ. ಏಕೆಂದರೆ ಅಂಥವನ್ನು ಯಾರೂ ಫಾರ್ವರ್ಡ್ ಮಾಡುವುದಿಲ್ಲ. ಹೆಂಗಸರ ಸಮಸ್ಯೆಗಳು ಒಂದೆರಡಲ್ಲ. ಇಂದಿಗೂ ಸ್ತ್ರೀ ಭ್ರೂಣ ಹತ್ಯೆ ನಿಂತಿಲ್ಲ, ಹುಟ್ಟಿದ ಹೆಣ್ಣು ಮಗು ಭಯದಲ್ಲೇ ಬದುಕಬೇಕು. ಅವಳಿಗೆ ಗುಡ್‌ ಟಚ್‌ ಬ್ಯಾಡ್‌ ಟಚ್‌ ಗಳ ಬಗ್ಗೆ ಹೇಳಿ ಹೇಳಿ ಭಯಪಡಿಸುತ್ತಾರೆ. ಅವಳಿಗೆ ಮೊಬೈಲ್ ‌ನೀಡಿ ಕಾರ್ಟೂನ್‌, ಸಿನಿಮಾ ಸಾಗರದ ಮಧ್ಯೆ ದೂಡಲಾಗುತ್ತದೆ. ಹೊರಗೆ ನಡೆಯುವ ವೈಲೆನ್ಸ್ ಸೀನ್ಸ್ ನೋಡಿ ನೋಡಿ ಅವಳು ಸದಾ ಭಯಪಡುತ್ತಾಳೆ. ಪ್ರತಿ ಕ್ಷಣ ಅವಳು ಅತ್ತಿತ್ತ ಸುಳಿಯದಂತೆ ಮನೆಯಲ್ಲಿ ಸರ್ಪಗಾವಲಿರುತ್ತದೆ. ಹೊರಗಿನ ಪ್ರಾಪಂಚಿಕ ಜೀವನ ಹೇಗಿರುತ್ತದೆ ಎಂಬ ಕಲ್ಪನೆಯೇ ಅವಳಿಗಿರುವುದಿಲ್ಲ.

ನಮ್ಮ ಪಠ್ಯ ಪುಸ್ತಕಗಳು ಇತ್ತೀಚೆಗೆ ಬಿಲ್ ‌ಕುಲ್ ‌ಖಾಲಿ ಅಥವಾ ಭಗವಾ ಪಬ್ಲಿಸಿಟಿಯ ಮೂಲ ಆಗಿವೆ. ಅದರಿಂದ ನಾವು ಬದುಕು ಕಲೆ ಕಲಿಯಲು ಸಾಧ್ಯವಿಲ್ಲ. ಮನೆಗಳಲ್ಲಿ ಮೊಬೈಲ್‌ಸೋಶಿಯಲ್ ಮೀಡಿಯಾ ಕಾರಣ ಪರಸ್ಪರ ಮಾತುಕಥೆಯೇ ನಡೆಯುತ್ತಿಲ್ಲ. ಅಪರಿಚಿತರ ರೀಲ್ಸ್ ಹಾಗೂ ಅರೆಬರೆ ಮಾಹಿತಿಗಳ ಪೋಸ್ಟ್ ಗಳಿಂದಾಗಿ, ಮನೆ ಮಂದಿ ಹೇಗೆ ವಾಸಿಸುತ್ತಿದ್ದಾರೆ, ಏನು ಯೋಚಿಸುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಒಂದೂ ತಿಳಿಯುತ್ತಿಲ್ಲ. ಈ ಮಾತುರಹಿತ ವಾತಾವರಣ ಮನೆಗಳನ್ನು ವಿವಾದದ ಜಡವಾಗಿಸಿದೆ. ಯಾರೂ ಪರಸ್ಪರರನ್ನು ಅರಿಯಲು ಯತ್ನಿಸುತ್ತಿಲ್ಲ. ಏಕೆಂದರೆ ಮೊಬೈಲ್ ‌ನಲ್ಲಿ ಕಂಡವರೊಂದಿಗೆ ಮಾತಿನಲ್ಲೇ ಕಾಲ ಕಳೆಯುತ್ತದೆ. ಅದರಿಂದ ಜೀವನಕ್ಕೆ ಲಾಭವಿದೆಯೇ? ಇಲ್ಲ. ಕೇವಲ ಟೈಂಪಾಸ್‌.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ