ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ ದೇವರಕೊಂಡ ರಿಲೇಶನ್ಶಿಪ್, ಡೇಟಿಂಗ್ ಕುರಿತು ಹಲವು ಸುದ್ದಿಗಳು ಇಷ್ಟು ದಿನ ಹರಿದಾಡಿದ್ದವು. ಇದೀಗ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.
ಕನ್ನಡದ ಕಿರಿಕ್ ಬ್ಯೂಟಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ತೆಲುಗಿನ ರೌಡಿಬಾಯ್ ವಿಜಯ್ ದೇವರಕೊಂಡ ಅವರ ಪ್ರೇಮಕಥೆ ಹೊಸೆದೆನಲ್ಲ. ಈ ಜೋಡಿ ತಾವು ಪ್ರೀತಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ, ಇದೀಗ, ಈ ಜೋಡಿ ತಮ್ಮ ಪ್ರೀತಿಗೆ ಎಂಗೇಜ್ಮೆಂಟ್ ಮುದ್ರೆ ಒತ್ತಿದ್ದಾರೆ.ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಇದೀಗ ದೊಡ್ಡ ಸಪ್ರೈಸ್ ಸಿಕ್ಕಿದೆ. ವಿಜಯ್ ಮತ್ತು ರಶ್ಮಿಕಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೈದರಾಬಾದ್ನ ದೇವರಕೊಂಡ ನಿವಾಸದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ರಶ್ಮಿಕಾ ಹಾಗೂ ವಿಜಯ್ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವರದಿಗಳ ಪ್ರಕಾರ ನಿಶ್ವಿತಾರ್ಥ ನೆರವೇರಿದ್ದು, ಮುಂದಿನ ವರ್ಷ ಫೆಬ್ರವರಿಯಲ್ಲಿ ವಿಜಯ್-ರಶ್ಮಿಕಾ ಜೋಡಿ ಮದುವೆಯಾಗಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಫೆಬ್ರವರಿ ಕೊನೆಯಲ್ಲಿ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ ಎಂದೂ ಹೇಳಲಾಗುತ್ತಿದೆ.2017ರಲ್ಲಿ ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಿಶ್ಚಿತಾರ್ಥವಾಗಿತ್ತು. ಕಾರಣಾಂತರಗಳಿಂದ ಇಬ್ಬರ ಮದುವೆ ಮುರಿದುಬಿತ್ತು. ರಶ್ಮಿಕಾ ಮಂದಣ್ಣ ಟಾಲಿವುಡ್ಗೆ ಕಾಲಿಟ್ಟ ದಿನದಿಂದ ವಿಜಯ್ ದೇವರಕೊಂಡ ಜೊತೆ ಅವರ ಹೆಸರು ತಳುಕು ಹಾಕಿಕೊಂಡಿತ್ತು. ‘ಗೀತಾ ಗೋವಿಂದಂ’ ಸಿನಿಮಾ ಇಬ್ಬರ ವೃತ್ತಿ ಬದುಕಿಗೆ ಏಳಿಗೆ ಕೊಟ್ಟಿದ್ದಷ್ಟೇ ಅಲ್ಲ, ವೈಯಕ್ತಿಕ ಬದುಕಲ್ಲೂ ಬೆಳಕು ಚೆಲ್ಲಿತ್ತು.
ಮೊದಲು ಸ್ನೇಹಿತರು ಎಂದುಕೊಂಡು ಸುತ್ತಾಡುತ್ತಿದ್ದ ಈ ಜೋಡಿ, ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದ ಪೋಸ್ಟ್ಗಳು ಇಬ್ಬರ ಪ್ರೀತಿ ಪ್ರೇಮಕ್ಕೆ ಸಾಕ್ಷಿಯಂತಿದ್ದವು. ಆದರೆ ಈ ಬಗ್ಗೆ ಬಹಿರಂಗವಾಗಿ ಹೇಳದ ರಶ್ಮಿಕಾ ಮತ್ತು ವಿಜಯ್ ಸದ್ದಿಲ್ಲದೇ ನಿಶ್ಚತಾರ್ಥ ಮಾಡಿಕೊಂಡು ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ ಎನ್ನಲಾಗಿದೆ.