ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಟ, ನಿರ್ದೇಶಕ, ನಿರ್ಮಾಪಕ ಹೇಮಂತ್ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ನಟಿ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ನಟಿ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. 2022 ರಲ್ಲಿ ನಟಿಗೆ ನಿರ್ಮಾಪಕ ಹೇಮಂತ್ನ ಪರಿಚಯವಾಗಿತ್ತು. ರಿಚ್ಚಿ ಎನ್ನುವ ಚಿತ್ರಕ್ಕೆ ನಟಿಯಾಗಿ ಆಯ್ಕೆಯಾಗಿದ್ದರು. ಈ ವೇಳೆ 2 ಲಕ್ಷ ರೂಪಾಯಿ ಸಂಭಾವನೆ ನೀಡುವುದಾಗಿ ಅಗ್ರಿಮೆಂಟ್ ಆಗಿತ್ತು ಎನ್ನಲಾಗಿದೆ.
ಅಂತೆಯೇ ಮುಂಗಡವಾಗಿ 60 ಸಾವಿರ ರೂಪಾಯಿ ಹಣವನ್ನು ಹೇಮಂತ್ ನೀಡಿದ್ದರು. ಹಣ ನೀಡಿದ ಬಳಿಕ ಸಿನಿಮಾ ಚಿತ್ರೀಕರಣ ವಿಳಂಬ ಆಗಿತ್ತು, ಅದಕ್ಕೆ ನಟಿ ಬೇಸರಗೊಂಡಿದ್ದರು. ಇನ್ನು ಶೂಟಿಂಗ್ ವೇಳೆ ಅಶ್ಲೀಲ ಬಟ್ಟೆ ತೊಡಬೇಕು, ಅಶ್ಲೀಲವಾಗಿ ನಟಿಸಬೇಕು ಎಂದು ಒತ್ತಾಯ ಮಾಡಿದ್ದರು. ಅಸಭ್ಯ ರೀತಿಯಲ್ಲಿ ನನ್ನನ್ನು ಮುಟ್ಟಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
ಅಲ್ಲದೇ ಶೂಟಿಂಗ್ ಹಿನ್ನೆಲೆಯಲ್ಲಿ ಮುಂಬೈಗೆ ಹೋಗಲಾಗಿತ್ತು. ಈ ವೇಳೆ ಅವರಿಂದ ನಾನು ಕಿರುಕುಳ ಅನುಭವಿಸಿದ್ದೇನೆ. ಅವರು ಕೇಳಿದ್ದಕ್ಕೆ ನಾನು ನಿರಾಕರಿಸಿದೆ. ಈ ವೇಳೆ ನನ್ನ ಮೇಲೆ ರೌಡಿಗಳನ್ನು ಬಿಟ್ಟು ಬೆದರಿಸಿದ್ದಾರೆ. ಚಿತ್ರೀಕರಣ ಮುಗಿದ ಬಳಿಕ ಚೆಕ್ ನೀಡಿದ್ದು, ಅದು ಬೌನ್ಸ್ ಆಗಿದೆ. ಅಲ್ಲದೇ ಸೆನ್ಸಾರ್ ಆಗದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಆರೋಪಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.





