ದಿನೇಶ್ಆಶಾ ದಂಪತಿಗೆ ಬಹು ಕಾಲದಿಂದ ಮಕ್ಕಳಿರಲಿಲ್ಲ. ದಿನೇಶನ ತಮ್ಮ ಅಭಿಷೇಕನನ್ನೇ ಆಶಾ ಮಗನಂತೆ ಆದರಿಸುತ್ತಿದ್ದಳು. ಮುಂದೆ ಅಭಿಷೇಕ್ಅಂಬಿಕಾಳನ್ನು ಮದುವೆಯಾದಾಗ, ಓರಗಿತ್ತಿಯರು ಹೊಂದಿಕೊಂಡು ಚೆನ್ನಾಗಿದ್ದರು. ಮುಂದೆ ಇಬ್ಬರಿಗೂ ಒಟ್ಟಿಗೆ ಹೆರಿಗೆಯಾದಾಗ ಆಶಾ ತನ್ನ ಮಗುವನ್ನು ಕಳೆದುಕೊಂಡಳು. ನಂತರ ಅವಳು ಅಭಿಷೇಕನ ಮಗುವಿಗೆ ಮಮತಾಮಯಿ ತಾಯಿಯಾದದ್ದು ಹೇಗೆ....?

ಅಭಿಷೇಕನ ಓದು ನಗರ ಪ್ರದೇಶದಲ್ಲಿ ಮುಂದುವರಿದಿತ್ತು. ದೇವಸ್ಥಾನಕ್ಕೆ ಹೋದಾಗ ಅಂಬಿಕಾ ಕೂಡಾ ತನ್ನ ಗೆಳತಿಯರೊಂದಿಗೆ ಅಲ್ಲಿಗೆ ಬಂದಿದ್ದಳು. ತುಂಬಾ ಆತಂಕದಲ್ಲಿ ಇದ್ದಳು.

ಗೆಳತಿಯರ ಮೂಲಕ ಅಭಿಷೇಕ್‌ ಕೂಡಾ ಅದೇ ಊರಿನ ಪಕ್ಕದ ಗ್ರಾಮದವನು ಅಂತ ತಿಳಿಯಿತು. ತನ್ನ ತಂದೆಗೆ ಔಷಧಿ ಕಳುಹಿಸಬೇಕಿತ್ತು. ಬಸ್‌ ನಲ್ಲಿ ಕಳಿಸೋಣಾ ಎಂದರೆ ಆ ಹಳ್ಳಿಗೆ ಬಸ್‌ ಸಂಪರ್ಕವಿರಲಿಲ್ಲ. ಅಭಿಷೇಕನನ್ನು ಭೇಟಿಯಾದ ಅಂಬಿಕಾ, ``ರೀ ಅಭಿಷೇಕ್‌ ನಿಮ್ಮಿಂದ ಒಂದು ಸಹಾಯವಾಗಬೇಕಿತ್ತು,'' ಎಂದು ಕೇಳಿಕೊಂಡಳು.

``ಅದೇನು ಹೇಳಿ ಅಂಬಿಕಾ,'' ಎಂದ.

``ನನ್ನ ತಂದೆಗೆ ಔಷಧಿಯನ್ನು ಕೊಡಬೇಕು. ಆದರೆ ನನಗೆ ಮಹತ್ವದ ಪರೀಕ್ಷೆ ಇರುವುದರಿಂದ ಊರಿಗೆ ಹೋಗಿ ನನ್ನ ತಂದೆಗೆ ಔಷಧಿಯನ್ನು ತಲುಪಿಸಲು ಆಗುತ್ತಿಲ್ಲ,'' ಎಂದಳು.

``ನನ್ನ ಪರೀಕ್ಷೆ ಮುಗಿದಿದೆ. ನಾನು ನಾಳೆ ಊರಿಗೆ ಹೋಗುವುದಿದೆ,'' ಎಂದು ಅಭಿಷೇಕ್‌ ಹೇಳಿದಾಗ ಅಂಬಿಕಾಳ ಮುಖದಲ್ಲಿ ಇದ್ದ ಆತಂಕ ದೂರವಾಗಿ ತುಂಬಾ ಖುಷಿಯಾಯಿತು.

ಅಂಬಿಕಾ ಅಭಿಷೇಕ್‌ ಗೆ ಥ್ಯಾಂಕ್ಸ್ ಹೇಳುವಷ್ಟರಲ್ಲಿ ಪಾನಿಪೂರಿ ಅಂಗಡಿ ಬಂದಿತು. ಬೈಕ್‌ ನಿಲ್ಲಿಸು ಅಂತ ಅಭಿಷೇಕ್‌ ಗೆ ಅಂಬಿಕಾ ಹೇಳಿದಳು.

ತಮ್ಮಿಬ್ಬರ ಮೊದಲ ಪರಿಚಯದ ಬಗ್ಗೆ ನೆನಪನ್ನು ಮೆಲುಕು ಹಾಕಿದರು.

ತಕ್ಷಣವೇ ಅಭಿಷೇಕ್‌ ಗೆ ಕರೆಬಂದಿತು.

``ಅಮ್ಮಾ ಹೇಳು..... ಅಣ್ಣ ಹೇಗಿದ್ದಾರೆ. ಹೊತ್ತಿಗೆ ಸರಿಯಾಗಿ ಮಾತ್ರೆ ತೆಗೆದುಕೊಳ್ಳಲು ಹೇಳಿ ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಪರೀಕ್ಷೆ ಮುಗಿಸಿಕೊಂಡು ಮುಂದಿನ ತಿಂಗಳು ಊರಿಗೆ ಬರುತ್ತೇನೆ. ಸರಿ ಅಮ್ಮಾ....'' ಎಂದು ಕರೆ ಸ್ಥಗಿತಗೊಳಿಸಿದ.

``ಅರೇ ಅಭಿಷೇಕ್‌..... ನೀನು ಬೆಳೆದಿರುವುದು ನಿನ್ನ ಅಣ್ಣ ದಿನೇಶ್‌, ಅತ್ತಿಗೆ ಆಶಾ ಆಶ್ರಯದಲ್ಲಿ ಅಲ್ವಾ.....?''

``ಹೌದು.....''

``ಹಾಗಾದ್ರೆ ಫೋನ್‌ ಕರೆ ಬಂದಾಗ ಅತ್ತಿಗೆ ಎನ್ನುವ ಬದಲು ಅಮ್ಮಾ.... ಎಂದು ಹೇಳಿದಿಯಲ್ಲ ಅದಕ್ಕೆ ಕೇಳಿದೆ.''

``ನನ್ನ ಪಾಲಿಗೆ ನನ್ನ ಅಣ್ಣ ಅತ್ತಿಗೆ ನನಗೆ ತಾಯಿ ತಂದೆ ಇದ್ದಂತೆ. ಆದ್ದರಿಂದ ನನ್ನ ಅತ್ತಿಗೆಯನ್ನು ನಾನು ಅಮ್ಮ ಎಂದು ಕರೆಯುವುದು.''

``ಇನ್ನೊಂದು ಮಾತು, ತಪ್ಪಾಗಿ ತಿಳಿಯಬೇಡ. ಅವರಿಗೆ ಮಕ್ಕಳಿಲ್ಲವಂತೆ.... ಹೌದಾ ಅಭಿಷೇಕ್‌......?''

``ಹೌದು.... ಅಂಬಿಕಾ ನನ್ನ ಅಣ್ಣನಿಗೆ ಮಕ್ಕಳಾಗಿಲ್ಲ. ಹೌದು ಏನಿವತ್ತು ನನ್ನ ಮನೆಯ ವಿಷಯ ತುಂಬಾ ಕೇಳುತ್ತಿರುವೆ. ನಿನಗೆ ನನ್ನ ಮನೆಯ ಪರಿಸ್ಥಿತಿಯ ಬಗ್ಗೆ ನಿನಗೆ ಕಾಳಜಿ ಇದೆ ತಾನೇ?'' ಕೇಳಿದ.

``ಅಭಿಷೇಕ್‌, ಇನ್ನೂ ಸಮಯ ವ್ಯರ್ಥ ಮಾಡಿ ಪ್ರಯೋಜನವಿಲ್ಲ. ನಮ್ಮ ಪ್ರೀತಿಯ ಬಗ್ಗೆ ನಿಮ್ಮ ಮನೆಯಲ್ಲಿ ಹೇಳಿರುವೆಯಾ.....?'' ಅಂಬಿಕಾ ನಾಚುತ್ತಾ ಕೇಳಿದಳು. ಹೀಗೆ ಅವರ ಮಾತು ಸಾಗಿತ್ತು.

ಅತ್ತ ಊರಿನಲ್ಲಿ...... ``ರೀ....ರೀ.....''

``ಹೇಳು ಆಶಾ.....''

``ನನ್ನ ಮೈದುನ ಅಭಿಷೇಕ್‌ ಮುಂದಿನ ವಾರ ಬರುತ್ತೇನೆ ಎಂದು ಹೇಳಿದ್ದಾನೆ ರೀ.....''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ