ಶರತ್ ಚಂದ್ರ
ಕಾಂತಾರ ಚಾಪ್ಟರ್ 1 ಚಿತ್ರದಲ್ಲಿ ನಟಿಸಿದ ಒಂದಷ್ಟು ಪಾತ್ರಗಳು ಈಗಲೂ ಜನ ಮಾನಸದಲ್ಲಿ ಅಚ್ಚಳಿಯದೆ ನಿಂತಿದೆ. ಅಂತಹ ಒಂದು ಪೋಷಕ ಪಾತ್ರ ಎಂದರೆ ಮಲಯಾಳಂ ಖ್ಯಾತ ನಟ ಪದ್ಮಶ್ರೀ ಜಯರಾಮ್ ಮಾಡಿರುವ ಕುಲಶೇಖರ ಪಾತ್ರ. ಜಯರಾಮ್ ಏನೇ ಮಾಡಲಿ ಅದನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ
ಈ ಹಿಂದೆ ಶಿವರಾಜ್ ಕುಮಾರ್ ನಟಿಸಿರುವ ಘೋಸ್ಟ್ ಚಿತ್ರದಲ್ಲಿ ಪೋಷಕ ಪಾತ್ರವನ್ನು ಮಾಡಿದ್ದು ಸ್ವತಹ ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡಿದ್ದರು.
ಡಬ್ಬಿಂಗ್ ಸಮಯದಲ್ಲಿ ತೆಗೆದಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾಗ ಇವರ ಕನ್ನಡ ಪ್ರೇಮ ಹಾಗೂ ವೃತ್ತಿಯ ಮೇಲೆ ಇರುವ passion ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.
ಜಯರಾಮ್ ಒಬ್ಬ ಉತ್ತಮ ಗಾಯಕ ಕೂಡ. ಪ್ರತೀ ವರ್ಷ ಭಾರತದ ಪ್ರಸಿದ್ಧ ಜ್ಯುವೆಲ್ಲರಿ ಸಂಸ್ಥೆ ನವರಾತ್ರಿ ಸಂಭ್ರಮವನ್ನು ಸಂಸ್ಥೆಯ ಜಾಹೀರಾತಿಗೆ ಬ್ರಾಂಡ್ ಅಂಬಾಸಿಡರ್ ಆಗಿರುವ ನಟ ನಟಿಯರನ್ನು ರೂಪದರ್ಶಿಗಳನ್ನು ಆಹ್ವಾನಿಸಿ ಅದ್ದೂರಿಯಾಗಿ ಆಚರಿಸುತ್ತಾರೆ.
ಈ ಕಾರ್ಯಕ್ರಮದಲ್ಲಿ ಕನ್ನಡದ ಜನತೆಗೆ ಕಾಂತಾರ ಚಾಪ್ಟರ್ 1 ಚಿತ್ರದ ರಾಜಶೇಖರ ಪಾತ್ರ ಮಾಡಿರುವ ಜಯರಾಮ್ ತನ್ನ ನಟನೆಗೆ ಕನ್ನಡ ಜನತೆ ತೋರಿಸಿದ ಪ್ರೀತಿಗೆ ಕನ್ನಡ ಜನತೆಯನ್ನು ಕೊಂಡಾಡಿ ಅವರಿಗೆ ಒಂದು ಹಾಡನ್ನು ಸಮರ್ಪಿಸಿದ್ದಾರೆ.
ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಿರುವ ಬಂಧನ ಚಿತ್ರದ ಜನಪ್ರಿಯ ಹಾಡು ನೂರೊಂದು ನೆನಪು ಹಾಡನ್ನು ಶ್ರುತಿಭದ್ಧವಾಗಿ ಹಾಡಿ ಅಲ್ಲಿ ನೆರೆದಿರುವ ಶಿವಾಜಿ ಪ್ರಭು,ಅಜಯ್ ದೇವಗನ್, ಟಬು ಅಕ್ಷಯ್ ಕುಮಾರ್ ಮುಂತಾದ ಸೆಲೆಬ್ರಿಟಿಗಳ ಮನ ಗೆದ್ದಿದ್ದಾರೆ.
ಈ ಹಾಡಿನಲ್ಲಿ ಓಪನಿಂಗ್ ಹಮ್ಮಿಂಗ್ ಅಂತೂ ನಿಜಕ್ಕೂ ಸುಂದರವಾಗಿ ಮೂಡಿ ಬಂದಿತ್ತು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜಯರಾಮ್ ಅವರ ಕನ್ನಡ ಪ್ರೇಮವನ್ನು ಕೊಂಡಾಡಿದ್ದಾರೆ.
ಎರಡು ವರ್ಷಗಳ ಹಿಂದೆ ಜಯರಾಮ್ ಅವರು ಇದೇ ಜುವೆಲ್ಲರಿ ಸಂಸ್ಥೆ ಆಯೋಜಿಸಿದ್ದ ನವರಾತ್ರಿ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರ ಬೊಂಬೆ ಹೇಳುತೈತೆ ಹಾಡು ಹಾಡಿ ಅಪ್ಪು ಗೆ ಟ್ರಿಬ್ಯೂಟ್ ನೀಡಿ ಜನಮನ ಗೆದ್ದಿದ್ದರು.