ಹೊತ್ತು ಹುಟ್ಟುವ ಮುನ್ನವೇ ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸುಟ್ಟು ಭಸ್ಮವಾದ ಸೀಬರ್ಡ್​​ ಬಸ್​ ದುರಂತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 7ಕ್ಕೇರಿದೆ. ಹಿರಿಯೂರು ಬಳಿಯ ಜವನಗೊಂಡನಹಳ್ಳಿಯಲ್ಲಿ ಕಂಟೈನರ್​ ಟ್ರಕ್​ ಡಿಕ್ಕಿ ಹೊಡೆದ ರಭಸಕ್ಕೆ ಸುಟ್ಟು ಕರಕಲಾದ ಬಸ್​​​​​​ನಿಂದ ಉಳಿದುಕೊಂಡಿದ್ದ ಬಸ್​ ಚಾಲಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಬೆಂಕಿಯ ಜ್ವಾಲೆಯಲ್ಲಿ ಭಾಗಶಃ ಬೆಂದುಹೋಗಿದ್ದ ಬಸ್​ ಚಾಲಕ ಮಹಮ್ಮದ್​ ರಫಿ ಹುಬ್ಬಳ್ಳಿಯ ಕಿಮ್ಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಘಟನೆಯಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡು ನರಳಾಡುತ್ತಿದ್ದ. ಗುರುವಾರ ರಾತ್ರಿ ಆತನಿಗೆ ಆಪರೇಷನ್ ಮಾಡಲಾಗಿತ್ತು. ಗುರುವಾರ ಮುಂಜಾನೆ ಘಟನೆ ನಡೆದ ಬಳಿಕ ಬಸ್​​​ ಅಪಘಾತಕ್ಕೀಡಾಗಿದ್ದು ಹೇಗೆ ಅನ್ನೋದನ್ನ ಮಾಧ್ಯಮಗಳಿಗೆ ವಿವರವಾಗಿ ಹೇಳಿದ್ದ. ದುರಾದೃಷ್ಟವಶಾತ್​​​ ಕೊಟ್ಟ ಚಿಕಿತ್ಸೆ ಫಲಕಾರಿ ಆಗಲೇ ಇಲ್ಲ. ಶುಕ್ರವಾರ ಬೆಳಗ್ಗೆ ಆತ ಅಸುನೀಗಿದ್ದಾನೆ.

ಮೃತರ ಮೃತದೇಹ ಗುರುತಿಸಲು DNA ಟೆಸ್ಟ್ : ಇದರ ಮಧ್ಯೆ ಬಸ್​ ದುರಂತದಲ್ಲಿ ಸುಟ್ಟು ಕರಕಲಾಗಿರುವ ಮೃತದೇಹಗಳ ಡಿಎನ್​ಎ ಪರೀಕ್ಷೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ಮೃತರಾದ ನವ್ಯಾ, ಮಾನಸಾ, ರಶ್ಮಿ, ಬಿಂದು ಹಾಗೂ ಗ್ರೀಯಾ ಅವರ DNA ಟೆಸ್ಟ್ ಮಾಡಬೇಕಿದೆ. ಅಗ್ನಿ ಅವಘಡದಲ್ಲಿ ಸುಟ್ಟು ಕರಕಲಾಗಿರುವ ಮೃತದೇಹಗಳನ್ನು ಗುರುತಿಸಲು ಸಾಧ್ಯವಾಗದ ಹಿನ್ನೆಲೆ DNA ಟೆಸ್ಟ್ ಮಾಡಲಾಗುತ್ತಿದೆ. ಡಿಎನ್​ಎ ಪರೀಕ್ಷೆಗಾಗಿ ಮೃತರ ತಂದೆ-ತಾಯಿ, ಸಹೋದರ-ಸಹೋದರಿಯರ ಬ್ಲಡ್​​​​​ ಸ್ಯಾಂಪಲ್ ಪಡೆದಿರುವ ಜಿಲ್ಲಾಸ್ಪತ್ರೆಯ ವೈದ್ಯರು ಹುಬ್ಬಳ್ಳಿಗೆ ಕಳುಹಿಸಲಿದ್ದಾರೆ. DNA ಪರೀಕ್ಷೆಯ ವರದಿ ಬಂದ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಆದ್ರೆ, 3 ದಿನಗಳ ಬಳಿಕ DNA ವರದಿ ಬರುವ ನಿರೀಕ್ಷೆ ಇದೆ.

DNA ಟೆಸ್ಟ್ ಹೇಗೆ..? : ದೇಹ ಗುರುತಿಸಲಾರದಷ್ಟು ಹಾನಿಗೊಳಗಾದಾಗ ಗುರುತು ಪತ್ತೆಗೆ DNA ಪರೀಕ್ಷೆ ಮಾಡಲಾಗುತ್ತದೆ. ವಿಧಿ ವಿಜ್ಞಾನ ತಜ್ಞರಿಂದ DNA ಪರೀಕ್ಷೆ ನಡೆಯುತ್ತದೆ. ಬೆಂಕಿ ಅವಘಡದಲ್ಲೂ ಉಳಿಯುವ ಹಲ್ಲು, ಎಲುಬು, ಸುಟ್ಟ ಮಾಂಸದ ತುಂಡುಗಳು, ಬಟ್ಟೆಯಲ್ಲಿನ ಸಂಗ್ರಹಿತ ರಕ್ತದ ಕಲೆಗಳಿಂದ DNA ಪತ್ತೆ ಮಾಡಲಾಗುತ್ತದೆ. ವೈಜ್ಞಾನಿಕ ವಿಧಾನದ ಮೂಲಕ DNA ಸಂಗ್ರಹಣೆ, ಸಾಗಾಟ ಮಾಡಲಾಗುತ್ತೆ. ಇನ್ನು ವಿಶೇಷವಾಗಿ ಮೈಟೋಕಾಂಡ್ರೀಯಾ DNA ಜೆಚ್ಚು ಬೆಂಕಿಯನ್ನು ತಡೆಯುತ್ತದೆ. ಹೀಗಾಗಿ PCR, STR ಟೆಸ್ಟ್ ಮೂಲಕ DNA ವಿಶ್ಲೇಷಣೆ ಮಾಡಲಾಗುತ್ತದೆ. ಇವು ವಿಫಲವಾದರೆ mt DNA ಟೆಸ್ಟ್ ಹೆಚ್ಚು ಪರಿಣಾಮಕಾರಿಯಾಗಿದೆ. ತಜ್ಞರ ಪರಿಶೀಲನೆಯ ನಂತರ ಮಾತ್ರ ಕಾನೂನು ಪ್ರಕಾರ ಗುರುತು ಘೋಷಣೆ ಮಾಡಲಾಗುತ್ತೆ. ಬೆಂಕಿ ಅವಘಡದಲ್ಲಿ 800c ತಾಪಮಾನ ಉಂಟಾದರೆ DNAಗೆ ಹಾನಿ ಆಗಿರುತ್ತದೆ. ಇನ್ನು ಇಂಧನ ಹಾಗೂ ರಾಸಾಯನಿಕಗಳಿಂದ‌ ಡಿಎನ್​​ಎ ಪರೀಕ್ಷೆಗೆ ಅಡ್ಡಿ ಸಾಧ್ಯತೆಗಳಿವೆ. ಹಾಗಾಗಿ, ಸೀಬರ್ಡ್​​ ದುರಂತದಲ್ಲಿ ಮೃತಪಟ್ಟವರ ಹಲ್ಲು, ಗಟ್ಟಿಯಾದ ಎಲುಬುಗಳಿಂದ ಉಪಯುಕ್ತ ಡಿಎನ್ಎ ಲಭ್ಯವಾಗಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ