ಹೊಸ ಚಾನೆಲ್ ಜೀ ಪವರ್ ಫಿಕ್ಷನ್ ಶೋ ಗಳು ಹಾಗು 'ಹಳ್ಳಿ ಪವರ್' ಎಂಬ ನಾನ್-ಫಿಕ್ಷನ್ ಶೋ ನಿಂದ ಈಗಾಗಲೇ ಜನರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಅಕುಲ್ ಬಾಲಾಜಿ ನಡೆಸಿಕೊಡುತ್ತಿರುವ 'ಹಳ್ಳಿ ಪವರ್' ಈಗ ಅಂತಿಮ ಘಟ್ಟ ತಲುಪಿದ್ದು, ಬಹುನಿರೀಕ್ಷಿತ ಫಿನಾಲೆ ಎಪಿಸೋಡ್‌ಗಳು ಡಿಸೆಂಬರ್ 27 ಮತ್ತು 28 ರಂದು ರಾತ್ರಿ 8:30 ರಿಂದ 10:30ರವರೆಗೆ ಜೀ ಪವರ್‌ನಲ್ಲಿ ಪ್ರಸಾರವಾಗಲಿದ್ದು, 'ಹಳ್ಳಿ ಪವರ್' ಸೀಸನ್ 1ರ ವಿಜೇತೆ ಯಾರು ಎಂಬ ವೀಕ್ಷಕರ ಪ್ರಶ್ನೆಗೆ ಉತ್ತರ ಸಿಗಲಿದೆ.
ಹಳ್ಳಿ ಪವರ್ ಒಂದು ವಿಭಿನ್ನ ಶೋ ಆಗಿದ್ದು ಇಲ್ಲಿ ಸಿಟಿಯಲ್ಲಿ ಬೆಳೆದ ಯುವತಿಯರು ತಮ್ಮ ಸಿಟಿ ಲೈಫ್ ಕಂಫರ್ಟ್ ನ ತ್ಯಜಿಸಿ ಹಳ್ಳಿ ಗೆ ಬಂದು ಹಳ್ಳಿ ಜೀವನವನ್ನು ಸಾಗಿಸುವುದಾಗಿತ್ತು. ಇಡೀ ಸೀಸನ್‌ನಲ್ಲಿ ಸ್ಪರ್ಧಿಗಳು ಹಳ್ಳಿ ಜೀವನದ ದಿನನಿತ್ಯದ ಕೆಲಸಗಳನ್ನು ಮಾಡುವುದರ ಜೊತೆಗೆ ಫಿಸಿಕಲ್ ಟಾಸ್ಕ್ಸ್ ಈ ಶೋ ನ ಮತ್ತೊಂದು ಹೈಲೈಟ್. ವ್ಯವಸಾಯ, ಜಾನುವಾರುಗಳ ಪೋಷಣೆ, ಪಾಲನೆ, ಹೀಗೆ ಹಳ್ಳಿ ಜನರು ಮಾಡುವ ಪ್ರತಿಯೊಂದು ಕೆಲಸವನ್ನು ಟಾಸ್ಕ್ ರೂಪದಲ್ಲಿ 'ಹಳ್ಳಿ ಪವರ್' ಸ್ಪರ್ಧಿಗಳಿಗೆ ನೀಡಲಾಗಿತ್ತು. ಇನ್ನು ಈ ರಿಯಾಲಿಟಿ ಶೋ ಉತ್ತರ ಕರ್ನಾಟಕದ ಸಂಗೊಳ್ಳಿಯಲ್ಲಿ ನಡೆದಿದೆ. ಹಳ್ಳಿ ಸೊಗಡು, ಅಕುಲ್ ಬಾಲಾಜಿ ಅವರ ನಿರೂಪಣೆ, ಸ್ಪರ್ಧಿಗಳ ಛಲ ಇವೆಲ್ಲವೂ 'ಹಳ್ಳಿ ಪವರ್' ಶೋ ಯಶಸ್ವಿಯಾಗಲು ಕಾರಣವಾಯ್ತು.
ಈ ರಿಯಾಲಿಟಿ ಶೋನಲ್ಲಿ ರಗಡ್ ರಶ್ಮಿ, ಸಕ್ಕತ್ ಸೋನಿಯಾ, ಘಾಟಿ ಗಾನವಿ, ಮಿಲ್ಕಿ ಬ್ಯೂಟಿ ಮೋನಿಷಾ ಹಾಗೂ ಮಣ್ಣಿನ ಮಗಳು ಫರೀನ್ ಫಿನಾಲಿಸ್ಟ್‌ಗಳಾಗಿ ಹೊರಹೊಮ್ಮಿದ್ದಾರೆ. ಇವರ ಶ್ರಮ, ಸಾಧನೆ ಮತ್ತು ದೃಢತೆ ಇವರನ್ನು ಫಿನಾಲೆಯ ಹಂತಕ್ಕೆ ತಲುಪಿಸಿದ್ದು, ಸೀಸನ್ 1ರ ಕಿರೀಟವನ್ನು ಯಾರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಉತ್ತರ ಇದೆ ಶನಿವಾರ ಮತ್ತು ಭಾನುವಾರ ದೊರೆಯಲಿದೆ.





