– ರಾಘವೇಂದ್ರ ಅಡಿಗ ಎಚ್ಚೆನ್.
ಗ್ರಾಮೀಣ ಕಥೆಯನ್ನು ಒಳಗೊಂಡ ಮೈ ನೇಮ್ ಈಸ್ ಕೆಡಿ ಚಿತ್ರ ತೆರೆಗೆ ಸಿದ್ಧವಾಗಿದೆ. ಸದ್ಯ ಚಿತ್ರತಂಡ, ಟ್ರೇಲರ್ ರಿಲೀಸ್ ಮಾಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಬಾ.ಮ.ಹರೀಶ್ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಕೆ.ಜೆ. ಚಿಕ್ಕು ಮೈ ನೇಮ್ ಇಸ್ ಕೆಡಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕನಕನಹಳ್ಳಿ ದಾಸೇಗೌಡರ ಮಗ ಎಂಬುದನ್ನು ಚಿಕ್ಕದಾಗಿ ಕೆಡಿ ಎಂದು ಹೆಸರನ್ನು ಇಡಲಾಗಿದೆ. ಗ್ರಾಮೀಣ ಭಾಗದ ಹಿನ್ನೆಲೆಯಲ್ಲಿ ಚಿತ್ರದ ಕಥೆ ಸಾಗಲಿದೆ.

ಅಮ್ಮನನ್ನು ಉಳಿಸಿಕೊಳ್ಳುವ ಏಳನೇ ತರಗತಿ ಓದುತ್ತಿರುವ ಮಗ ಶಾಸಕನ ಬಳಿ ಸಹಾಯ ನಿರೀಕ್ಷಿಸುತ್ತಾನೆ. ಆದರೆ ಆತ ಅವಮಾನ ಮಾಡುತ್ತಾನೆ. ಇದರಿಂದ ಕುಪಿತಕೊಂಡು, ಮುಂದೆ ತಾನೂ ಎಂಎಲ್‌ಎ ಆಗಬೇಕೆಂದು ಪಣ ತೊಡುತ್ತಾನೆ. ಅದಕ್ಕಾಗಿ ಯಾವ ರೀತಿಯ

ಸವಾಲುಗಳನ್ನು ಎದಿರಿಸುತ್ತಾನೆ. ಅಂತಿಮವಾಗಿ ತನ್ನ ಹಾದಿಯಲ್ಲಿ ಯಶಸ್ಸು ಗಳಿಸುತ್ತಾನಾ ಎಂಬುದೇ ಚಿತ್ರದ ಸಾರಾಂಶವಾಗಿದೆ. ಕಾಮಿಡಿ, ಡ್ರಾಮಾ ಜಾನರ್‌ನಲ್ಲಿ ಸಿನಿಮಾದ ಸ್ಟೋರಿ ಸಾಗುತ್ತದೆ.

ಆರ್ಯನ್ ವೆಂಕಟೇಶ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವ ಜತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಭವಾನಿ ನಾಯಕಿಯಾಗಿ ಬಣ್ಣಹಚ್ಚಿದ್ದು, ಉಳಿದಂತೆ ಹೊನ್ನವಳ್ಳಿ ಕೃಷ್ಣ, ಗಿರೀಶ್ ಜತ್ತಿ, ವಿಶ್ವ, ಅರಸು, ಸುಪ್ರೀತ್ ಕಾಟಿ, ರೋಹಿಣಿ, ಮುಂತಾದವರು ತಾರಾಗಣದಲ್ಲಿದ್ದಾರೆ. ಎಸ್‌ಎಸ್‌ಬಿ ಪ್ರೊಡಕ್ಷನ್ ಬ್ಯಾನರ್‌ನಲ್ಲಿಡಿ.ವೆಂಕಟೇಶ್ ಚಿತ್ರ ನಿರ್ಮಾಣ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಪುನೀತ್ ರಂಗನಾಥ್, ಮನು ದೇವನಹಳ್ಳಿ ಸಾಹಿತ್ಯದ ಗೀತೆಗಳಿಗೆ ಹಿತನ್ ಹಾಸನ್ ಸಂಗೀತ ಸಂಯೋಜಿಸಿದ್ದಾರೆ.

ಸಂತೋಷ ಪಂಡಿ ಛಾಯಾಗ್ರಹಣ, ಕಿರಣ್ ಕುಮಾರ್ ಸಂಕಲನ, ಗಣೇಶ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಕನಕಪುರ, ಹೆಸರುಘಟ್ಟ, ಆನೇಕಲ್, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿ ಡಿಸೆಂಬರ್‌ನಲ್ಲಿ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.





