- ರಾಘವೇಂದ್ರ ಅಡಿಗ ಎಚ್ಚೆನ್.

‘ಫಾದರ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಅಮೃತಾ ಅಯ್ಯಂಗಾರ್  ಅವರು ನಟಿಸಿದ್ದಾರೆ. ಪ್ರಕಾಶ್ ರಾಜ್ ಕೂಡ ಪ್ರಮುಖ ಪಾತ್ರದಲ್ಲಿ ಇದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ನಡೆದಿದೆ. ಈ ವೇಳೆ ಅಮೃತಾ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಅಮೃತಾ ಅವರು ಈ ಸಿನಿಮಾ ಒಪ್ಪಿಕೊಳ್ಳಲು ಡಾರ್ಲಿಂಗ್ ಕೃಷ್ಣ ಅವರು ಕಾರಣ. ಕೃಷ್ಣ ಅವರಿಗೆ ಕಥೆ ಇಷ್ಟ ಆಗಿದ್ದರಿಂದ ಅಮೃತಾಗೆ ಸಜೆಸ್ಟ್ ಮಾಡಿದ್ದರು. ಆ ಸಂಗತಿಯನ್ನು ಅಮೃತಾ ಅವರು ವೇದಿಕೆಯಲ್ಲಿ ನೆನಪು ಮಾಡಿಕೊಂಡರು. ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಕೈ ಕೊಟ್ಟು ಹೋಗುವ ಹುಡುಗಿಯ ಪಾತ್ರವನ್ನು ಅಮೃತಾ ಅಯ್ಯಂಗಾರ್ ಮಾಡಿದ್ದರು. ಆದರೆ ‘ಫಾದರ್’ ಸಿನಿಮಾದಲ್ಲಿ ಆ ರೀತಿ ಆಗಲ್ಲ ಎಂದು ಅಮೃತಾ ಹೇಳಿದ್ದಾರೆ. ‘ಬಿಟ್ಟು ಹೋಗುವ ಪಾತ್ರಗಳನ್ನು ಆದಷ್ಟು ಬ್ರೇಕ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರನ್ನು ನಾನು ಬಿಟ್ಟು ಹೋಗಲ್ಲ’ ಎಂದು ಅಮೃತಾ ಅಯ್ಯಂಗಾರ್ ಅವರು ಹೇಳಿದ್ದಾರೆ.

images (2) (2)

ಡಾರ್ಲಿಂಗ್ ಕೃಷ್ಣ ಕಳೆದ ಕೆಲ ವರ್ಷಗಳಿಂದ ಗಮನ ಸೆಳೆಯುವ ಸಿನಿಮಾಗಳನ್ನು ಮಾಡುತ್ತಾ ಬರುತ್ತಿದ್ದಾರೆ. ‘ಕೌಸಲ್ಯ ಸುಪ್ರಬಾ ರಾಮ’, ‘ಬ್ರಾಟ್’ ಇನ್ನೂ ಕೆಲ ಒಳ್ಳೆಯ ಸಿನಿಮಾಗಳನ್ನು ಡಾರ್ಲಿಂಗ್ ಕೃಷ್ಣ ಮಾಡುತ್ತಾ ಬರುತ್ತಿದ್ದಾರೆ. ಇದೀಗ ‘ಫಾದರ್’ ಹೆಸರಿನ ಭಿನ್ನ ರೀತಿಯ ಸಿನಿಮಾನಲ್ಲಿ ನಟಿಸಿದ್ದಾರೆ. ಪ್ರಕಾಶ್ ರೈ ಅವರು ಸಿನಿಮಾನಲ್ಲಿ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿರುವ ಡಾರ್ಲಿಂಗ್ ಕೃಷ್ಣ, ‘ಫಾದರ್’ ಸಿನಿಮಾ ಬಹಳ ಭಿನ್ನವಾದ ಆದರೆ ಮನಸ್ಸಿಗೆ ತಾಗುವ ಸಿನಿಮಾ, ಬಹಳ ವರ್ಷಗಳ ಕಾಲ ಈ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಲಿದೆ’ ಎಂದಿದ್ದಾರೆ.
ಆರ್.ಸಿ. ಸ್ಟುಡಿಯೋಸ್ ನಿರ್ಮಾಣದ ʼಫಾದರ್ʼ ಚಿತ್ರ ಇದೀಗ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ತಯಾರಿಯಲ್ಲಿರುವ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ.ʼಫಾದರ್ʼ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ, ʼಲವ್ ಮಾಕ್ಟೇಲ್ʼ ಜೋಡಿ ಇಲ್ಲೂ ಒಂದಾಗಿದೆ. ಡಾರ್ಲಿಂಗ್ ಕೃಷ್ಣ ಅವರ ಜತೆ ಅಮೃತಾ ಅಯ್ಯಂಗಾರ್ ಇದ್ದಾರೆ ಎನ್ನುವುದು ಮತ್ತೊಂದು ಸ್ಪೆಷಲ್. ಇವರೊಂದಿಗೆ ಅನೇಕ ನುರಿತ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅಲ್ಲಿಗೆ ʼಫಾದರ್ʼ ಸಿನಿಮಾದ ಕುತೂಹಲ ಮತ್ತಷ್ಟು ಹೆಚ್ಚಿದೆ.
ಇಲ್ಲಿ ಸಕ್ಸಸ್‌ಫುಲ್ ನಟ, ನಟಿಯರು ಒಂದೇ ಫ್ರೇಮ್ ನಲ್ಲಿದ್ದಾರೆಂದ ಮೇಲೆ ಆ ನಿರೀಕ್ಷೆ ಮತ್ತಷ್ಟು ಹೆಚ್ಚಿರುವುದು ಸುಳ್ಳಲ್ಲ. ಇದೊಂದು ನಿರೀಕ್ಷೆಯ ಸಿನಿಮಾ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಸಿನಿಮಾ ಸಾಕಷ್ಟು ಕುತೂಹಲ ಹೊಂದಿದೆ. ಅದಕ್ಕೆ ಕಾರಣ ಕಥೆ ಮತ್ತು ಪಾತ್ರಗಳು.
ಆರ್.ಚಂದ್ರು ಅವರಿಗೆ ಎಮೋಷನಲ್ ಕಂಟೆಟ್ ಸಿನಿಮಾಗಳ ಮೇಲೆ ಹೆಚ್ಚು ಒಲವು. ಚಂದ್ರು ಅವರ ನಿರ್ಮಾಣದ ಚಿತ್ರಗಳಿಗೆ ಅವರದೆ ಆದ ಅಭಿಮಾನಿ ಬಳಗ ಇದೆ. ʼಫಾದರ್ʼ ಕೂಡ ಅವರ ನಿರೀಕ್ಷೆಯನ್ನು ಹೆಚ್ಚಿಸಿದೆ ಮೈಸೂರು, ಧರ್ಮಸ್ಥಳ, ಮಂಗಳೂರು, ಬೆಂಗಳೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾಗೆ ವಾರಣಾಸಿಯಲ್ಲೂ ಚಿತ್ರೀಕರಣವಾಗಿದೆ.
ಎಲ್ಲರ ಮನಸ್ಸಿಗೆ ಹತ್ತಿರವಾಗುವ ಕಥೆ ʼಫಾದರ್ʼ ನೊಳಗಿದೆ. ಮುಂಬೈನ ಖ್ಯಾತ ಉದ್ಯಮಿ ಆನಂದ್ ಪಂಡಿತ್ ಅರ್ಪಿಸುವ, ಅಲಂಕಾರ್ ಪಾಂಡ್ಯನ್ ಅವರ ಸಹಯೋಗದಲ್ಲಿ ಆರ್.ಸಿ. ಸ್ಟುಡಿಯೋಸ್ ಈ ಸಿನಿಮಾ ನಿರ್ಮಿಸಿದರೆ, ರಾಜ್‍ ಮೋಹನ್‍ ನಿರ್ದೇಶನ ಮಾಡಿದ್ದಾರೆ. ಸುಜ್ಞಾನ್ ಛಾಯಾಗ್ರಹಣವಿದೆ. ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ʼಫಾದರ್ʼ ಚಿತ್ರಕ್ಕಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ