ಅಮೆರಿಕಾದ ಕೆಂಟುಕಿಯಲ್ಲಿ ಕಾರ್ಗೋ ವಿಮಾನ ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ಪತನವಾಗಿದೆ. ಟೇಕಾಫ್  ಆಗುತ್ತಿದ್ದಂತೆ, ವಿಮಾನಕ್ಕೆ  ಬೆಂಕಿ ಹೊತ್ತಿಕೊಂಡು ಪತನವಾಗಿದೆ. ಬೆಂಕಿ ಉಂಡೆಗಳೊಂದಿಗೆ ವಿಮಾನ ಸ್ಪೋಟವಾಗಿದೆ.  ಈ ಕಾರ್ಗೋ ವಿಮಾನ ಪತನದಿಂದಾಗಿ 7 ಮಂದಿ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ.

ಕೆಂಟುಕಿ ರಾಜ್ಯದ ಲೂಸಿವಿಲ್ಲೆ ಮೊಹಮ್ಮದ್ ಅಲಿ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಿಂದ ವಿಮಾನ ಟೇಕಾಫ್ ಆಗಿತ್ತು.  ಹೋನೋಲುಲುಗೆ ವಿಮಾನ ಹೊರಟಿತ್ತು.ವಿಮಾನದ ಎಡಭಾಗದ ರೆಕ್ಕೆ, ವಿಮಾನದ ಹಿಂಭಾಗಕ್ಕೆ ಬೆಂಕಿ ಬಿದ್ದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.  ವಿಮಾನ ಟೇಕಾಫ್ ಆದ ಬಳಿಕ ಬೆಂಕಿ ಹೊತ್ತಿಕೊಂಡು ಸ್ಪೋಟವಾಗಿದೆ. ವಿಮಾನ ಪತನದ ಸ್ಥಳದಲ್ಲಿದ್ದವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ