ರಾಘವೇಂದ್ರ ಅಡಿಗ ಎಚ್ಚೆನ್.

ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಫೋನ್ ಹ್ಯಾಕ್ ಮಾಡಿದ್ದ ಬಿಹಾರ ಮೂಲದ ವಿಕಾಸ್ ಕುಮಾರ್ ಎಂಬ ವಂಚಕನನ್ನು ಬೆಂಗಳೂರು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ವಿಕಾಸ್ ಕುಮಾರ್ ಎಂಬ ವಂಚಕನನ್ನು ಬಂಧಿಸಿರುವುದಾಗಿ ಸಿಟಿ ಪೊಲೀಸ್ ಕಮಿಷನರ್ ಸುಮರ್ ಸಿಂಗ್ ತಿಳಿಸಿದ್ದಾರೆ.

“ದೂರುದಾರರು ಬೇಗ ದೂರು ಕೊಟ್ಟಿದ್ದರಿಂದ ಗೋಲ್ಡನ್ ಅವರ್‌ ವರ್ಕ್ ಆಯ್ತು. ಯಾರೇ ಇರಲಿ, ಸೈಬರ್ ವಂಚನೆಗೆ ತಕ್ಷಣ ದೂರು ಕೊಟ್ಟರೆ ಒತ್ತೆ ಆಗುತ್ತೆ,”
ಎಂದು ಕಮಿಷನರ್ ಹೇಳಿದರು.

ಗೋಲ್ಡನ್ ಅವರ್ ಎಂದರೆ ಸೈಬರ್ ಕ್ರೈಂ ಪ್ರಕರಣಗಳಲ್ಲಿ ಮೊದಲ ಆರು ಗಂಟೆಗಳೊಳಗೆ ಕ್ರಮ ಕೈಗೊಳ್ಳುವ ಸಮಯ, ಅದರಲ್ಲಿ ಕ್ರಮ ಕೈಗೊಂಡಿದ್ದರಿಂದಲೇ ಆರೋಪಿಯನ್ನು ಶೀಘ್ರವಾಗಿ ಬಂಧಿಸಲು ಸಾಧ್ಯವಾಯಿತು ಎಂದಿದ್ದಾರೆ.

ಈ ಪ್ರಕರಣದ ನಂತರ ನಟ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದು, “ಸೈಬರ್ ಕ್ರೈಂ ಬಗ್ಗೆ ಸಿನಿಮಾ ಮಾಡಲು ಆರ್‌.ಚಂದ್ರು ನಿರ್ದೇಶನದಲ್ಲಿ ಕಥೆ ಮಾಡ್ಕೊಂಡಿದ್ದೆವು. ಆದರೆ ನಿಜಜೀವನದಲ್ಲೇ ಆಗಿಬಿಟ್ಟಿತು! ಪ್ರಿಯಾಂಕ ಅಣ್ಣಾ, ನಿಮ್ಮ ಫೋನ್ ಹ್ಯಾಕ್ ಆಗಿದೆ ಅಂತ ಹೇಳಿದ್ರು. ಗೋಲ್ಡನ್ ಅವರ್‌ನಲ್ಲಿ ಈ ಕೇಸ್ ಆಯ್ತು,” ಎಂದು ಹೇಳಿದರು.

“ಬುದ್ದಿವಂತ ಅನ್ನೋರೆ ನಿಜವಾದ ದಡ್ಡರು! ದಡ್ಡರ ಥರ ಇರೋರೆ ನಿಜವಾದ ಬುದ್ದಿವಂತರು,”
ಎಂದು ತಮ್ಮ ವಿಶಿಷ್ಟ ಶೈಲಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ