– ರಾಘವೇಂದ್ರ ಅಡಿಗ ಎಚ್ಚೆನ್.
ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 114 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯ ಹಿನ್ನೆಲೆ, ಕಳೆದ 10 ದಿನಗಳಿಂದ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ಸಮಸ್ಯೆಯಿಂದಾಗಿ ಚಿಕಿತ್ಸೆಗೆ ಸ್ಪಂದಿಸದೇ ಇಂದು 10:45ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ವೃಕ್ಷಗಳನ್ನೇ ತಮ್ಮ ಮಕ್ಕಳನ್ನಾಗಿ ಕಂಡ ವೃಕ್ಷಮಾತೆ ನಿಧನಕ್ಕೆ ಎಲ್ಲೆಡೆ ಸಂತಾಪ ವ್ಯಕ್ತವಾಗಿದೆ. ಕನ್ನಡ ಚಿತ್ರರಂಗದ ತಾರೆಯರೂ ಕಂಬನಿ ಮಿಡಿದಿದ್ದಾರೆ.
ರಮ್ಯಾ: ನಟಿ ರಮ್ಯಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್ನಲ್ಲಿ, ತಿಮ್ಮಕ್ಕ ಅವರು ಮರದ ಬಳಿ ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. ಅದರ ಮೇಲೆ ಮರ ಮತ್ತು ಪಾರಿವಾಳದ ಸಿಂಬಲ್ ಇದೆ.
ವಿನಯ್ ರಾಜ್ಕುಮಾರ್: ನಟ ವಿನಯ್ ರಾಜ್ಕುಮಾರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್ನಲ್ಲಿ, ಪೋಸ್ಟರ್ ಹಂಚಿಕೊಂಡಿದ್ದಾರೆ. ಅದರ ಮೇಲೆ, ಮರಗಳ ಮಹಾತಾಯಿ, ಪದ್ಮಶ್ರೀ ಸಾಲುಮರದ ತಿಮ್ಮಕ್ಕ (1911 -1925), ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದುಕೊಂಡಿದ್ದಾರೆ.
ಯುವ ರಾಜ್ಕುಮಾರ್: ನಟ ಯುವ ರಾಜ್ಕುಮಾರ್ ಕೂಡಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್ನಲ್ಲಿ, ಇದೇ ಪೋಸ್ಟರ್ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.
ರಕ್ಷಿತಾ: ನಟಿ ರಕ್ಷಿತಾ ಅವರು ತಿಮ್ಮಕ್ಕ ಅವರ ಫೋಟೋ ಹಂಚಿಕೊಂಡು, 114ನೇ ವಯಸ್ಸಿಗೆ ಕೊನೆಯುಸಿರೆಳೆದ ಸಾಲುಮರದ ತಿಮ್ಮಕ್ಕ (ಕೈಮುಗಿಯುವ ಎಮೋಜಿಯಪಂದಿಗೆ) ಎಂದು ಬರೆದುಕೊಂಡಿದ್ದಾರೆ.
ಶ್ರೀಮುತ್ತು ಸಿನಿಮಾಸ್: ಚಲನಚಿತ್ರ ನಿರ್ಮಾಣ ಸಂಸ್ಥೆ ಶ್ರೀಮುತ್ತು ಸಿನಿಮಾಸ್ ತಿಮ್ಮಕ್ಕ ಅವರ ಫೋಟೋ ಹಂಚಿಕೊಂಡು, ”ನಮ್ಮ ನಾಡಿನ ಹಸಿರಿನಲ್ಲಿ ನಿಮ್ಮ ಹೆಸರು ಎಂದಿಗೂ ಶಾಶ್ವತ” ಎಂದು ಬರೆದುಕೊಂಡಿದೆ.





