ಪ್ರ : ನನಗೆ ನೇಲ್ ಪಾಲಿಶ್ ಲೇಪಿಸಿಕೊಳ್ಳುವುದು ಬಹಳ ಇಷ್ಟವಾಗುತ್ತದೆ. ಆದರೆ ಅದು ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ. ಹೆಚ್ಚು ದಿನಗಳ ಕಾಲ ನೇಲ್ ಪಾಲಿಶ್ ಉಳಿಯುವಂತೆ ಏನು ಮಾಡಬೇಕು ಹೇಳಿ.
ಉ : ಹಲವು ಬಣ್ಣಗಳಲ್ಲಿ ಲಭ್ಯವಿರುವ ನೇಲ್ ಪಾಲಿಶ್ ನ್ನು ಕೈಗಳನ್ನು ಸುಂದರಗೊಳಿಸಲು ಬಳಸಲಾಗುತ್ತದೆ. ಆದರೆ ಎಷ್ಟೋ ಸಲ ನೇಲ್ ಪಾಲಿಶ್ ಲೇಪಿಸಿಕೊಂಡ ಬಳಿಕ ನೀರಿಗೆ ಸಂಬಂಧಪಟ್ಟ ಕೆಲಸ ಮಾಡಿದರೆ, ನೇಲ್ ಪಾಲಿಶ್ ಹೊರಟುಹೋಗುತ್ತದೆ. ಅದು ಒಮ್ಮೆಲೆ ಹೋಗದೆ ಸ್ವಲ್ಪ ಸ್ವಲ್ಪ ಹೊರಟು ಹೋಗಿ ಅಸಹ್ಯವಾಗಿ ಕಂಡುಬರುತ್ತದೆ. ಇಂತಹ ಸ್ಥಿತಿಯಲ್ಲಿ ಪರ್ಮನೆಂಟ್ ಗುಡ್ ಲುಕಿಂಗ್ ಮಾಡಿಸಿಕೊಳ್ಳಬಹುದು. ಜೆಲ್ ನೇಲ್ ಪಾಲಿಶ್ 10 ದಿನಗಳಿಂದ 3 ವಾರಗಳ ತನಕ ಉಳಿಯುತ್ತದೆ.
ಪ್ರ : ನನ್ನ ಸ್ಕಿನ್ ಆಯ್ಲಿ ಆಗಿರುತ್ತದೆ. ಬೇಸಿಗೆಯಲ್ಲಿ ಅದು ಇನ್ನಷ್ಟು ಆಯ್ಲಿ ಆಗುತ್ತದೆ. ಜೊತೆಗೆ ಮುಖದ ಪೋರ್ಸ್ ದೊಡ್ಡದಾಗುತ್ತದೆ. ನನಗೆ ಹೋಮ್ ಮೇಡ್ ಸ್ಕಿನ್ ಟೋನರ್ ಬಗ್ಗೆ ಮಾಹಿತಿ ಕೊಡಿ.
ಉ : ಟೊಮೇಟೊ ಹಾಗೂ ಜೇನುತುಪ್ಪದ ಮುಖಾಂತರ ಹೋಮ್ ಮೇಡ್ ಸ್ಕಿನ್ ಟೋನರ್ ಸಿದ್ಧಪಡಿಸಿಕೊಳ್ಳಬಹುದು. ತಾಜಾ ಟೊಮೇಟೊ ರಸ ತೆಗೆದುಕೊಂಡು ಅದರಲ್ಲಿ ಅಷ್ಟೇ ಪ್ರಮಾಣದ ಜೇನುತುಪ್ಪ ಬೆರೆಸಿಕೊಂಡು ದಟ್ಟ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಮುಖದ ಮೇಲೆ ಲೇಪಿಸಿಕೊಂಡು 20 ನಿಮಿಷಗಳ ಬಳಿಕ ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ. ಈ ಹೋಮ್ ಮೇಡ್ ಸ್ಕಿನ್ ಟೋನರ್ ನಿಮ್ಮ ಆಯ್ಲಿ ಸ್ಕಿನ್ ಗೆ ವರದಾನವಾಗಿ ಪರಿಣಮಿಸುತ್ತದೆ. ಇದು ಮೊಡವೆ, ಬೊಕ್ಕೆಗಳನ್ನು ಕಡಿಮೆ ಮಾಡಲು ಕೂಡ ನೆರವಾಗುತ್ತದೆ. ವಾರದಲ್ಲಿ 2-3 ಬಾರಿ ಈ ಪ್ರಯೋಗ ಮಾಡಿ.
ಪ್ರ : ನನ್ನ ಮುಖದ ಚರ್ಮಕ್ಕೆ ಹೋಲಿಸಿದರೆ ನನ್ನ ಕತ್ತಿನ ಬಣ್ಣ ಹೆಚ್ಚು ಡಾರ್ಕ್ ಆಗಿರುವಂತೆ ಕಂಡುಬರುತ್ತದೆ. ಇದನ್ನು ಸರಿಪಡಿಸಲು ಯಾವುದಾದರೂ ಉಪಾಯ ಸೂಚಿಸಿ.
ಉ : ಕುತ್ತಿಗೆಯ ಕಪ್ಪು ಛಾಯೆ ಮುಖದ ಸೌಂದರ್ಯವನ್ನು ಹಾಳುಗೆಡಹುತ್ತದೆ. ಹೀಗೇಕಾಗುತ್ತದೆ ಎಂದರೆ, ನೀವು ಮುಖದ ಬಗೆಗಷ್ಟೇ ಹೆಚ್ಚು ಗಮನಕೊಟ್ಟು ಕುತ್ತಿಗೆಯನ್ನು ಮರೆತುಬಿಡುತ್ತೀರಿ. ಕುತ್ತಿಗೆಯ ಚರ್ಮಕ್ಕೆ ಹೊಳಪು ಕೊಡಲು ಓಟ್ ಸ್ಕ್ರಬ್ ಲೇಪಿಸಿ. 3-4 ಚಮಚ ಓಟ್ಸ್ ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಅತ್ಯುತ್ತಮ ಪರಿಣಾಮಕ್ಕಾಗಿ ಅದರಲ್ಲಿ 2 ಚಮಚ ಟೊಮೇಟೊ ತಿರುಳು ಸೇರಿಸಿ. ಈ ಪೇಸ್ಟ್ ನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಕುತ್ತಿಗೆಯ ಮೇಲೆ ಲೇಪಿಸಿ. 1 ವಾರದಲ್ಲಿ 2-3 ಸಲ ಈ ಪೇಸ್ಟ್ ಲೇಪಿಸಿದರೆ ವ್ಯತ್ಯಾಸ ನಿಮಗೇ ಗೋಚರಿಸುತ್ತದೆ.
ಪ್ರ : ನಾನು ಒಂದು ವರ್ಷ ಮೊದಲು ಹೇರ್ ಬಾಂಡಿಂಗ್ ಮಾಡಿಸಿದೆ. ಈಗ ನನ್ನ ಕೂದಲು ಪುನಃ ಡ್ರೖೈ ಆಗಲು ಶುರುವಾಗಿದೆ. ಎಷ್ಟು ಸಲ ಹೇರ್ ರೀಬಾಂಡಿಂಗ್ ಮಾಡಿಸಬಹುದು ತಿಳಿಸಿ.
ಉ : ಇತ್ತೀಚೆಗೆ ಜಪಾನಿ ಥರ್ಮ್ ಪ್ರಕ್ರಿಯೆ ಸ್ರೇಟ್ ನಿಂಗ್ ಕೂದಲುಗಳನ್ನು ಬಿಡಿಸುವ ಎಲ್ಲಕ್ಕೂ ಸುಲಭ ವಿಧಾನ. ಅದನ್ನು ರೀಬಾಂಡಿಂಗ್ ಎಂದು ಕರೆಯಲಾಗುತ್ತದೆ. ಪರಿಪೂರ್ಣ ರೀಬಾಂಡಿಂಗ್ ಪ್ರಕ್ರಿಯೆಯ ಪ್ರಭಾವ 1 ವರ್ಷದ ತನಕ ಇರುತ್ತದೆ. ಅದರ ಪ್ರಭಾವವನ್ನು ಹೊಸದಾಗಿ ಬೆಳೆದ ಕೂದಲಿನ ಮೇಲೂ ಕಾಣಬಹುದಾಗಿದೆ. ಇದು ಕೂದಲನ್ನು ಸುಧಾರಿಸುವ ಪರಿಣಾಮಕಾರಿ ವಿಧಾನವಾಗಿದೆ.
ಪ್ರ : ನಾನು ಎಂದೂ ಅಪ್ಪರ್ ಲಿಪ್ಸ್ ಮಾಡಿಸಿಕೊಂಡಿಲ್ಲ. ಅದನ್ನು ಮಾಡಿಸಿಕೊಳ್ಳುವ ಸುರಕ್ಷಿತ ವಿಧಾನ ಯಾವುದು?
ಉ : ಲಿಪ್ ಹೇರ್ ನ್ನು ನಿವಾರಿಸುವುದು ಸ್ವಲ್ಪ ನೋವುದಾಯಕವಾಗಿರುತ್ತದೆ. ಆದರೆ ಅದನ್ನು ನಿವಾರಿಸುವುದು ಅತ್ಯವಶ್ಯ. ಒಂದು ವೇಳೆ ಅದನ್ನು ನಿವಾರಿಸದಿದ್ದರೆ ಮುಖದ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮಗೆ ಅಪ್ಪರ್ ಲಿಪ್ಸ್ ಮಾಡಿಸಿಕೊಳ್ಳುವಾಗ ನೋವಿನ ಅನುಭವ ಆಗುತ್ತಿದ್ದರೆ, ಕೆಲವು ಮನೆ ಉಪಾಯ ಅನುಸರಿಸಬಹುದು. 2 ನಿಂಬೆಹಣ್ಣಿನ ರಸ ಹಿಂಡಿಕೊಂಡು ಅದರಲ್ಲಿ ಸ್ವಲ್ಪ ನೀರು ಹಾಗೂ ಸಕ್ಕರೆ ಮಿಶ್ರಣ ಮಾಡಿಕೊಳ್ಳಿ. ಅದು ತೆಳ್ಳಗಾಗುವ ತನಕ ಹಾಗೆಯೇ ಕಲಕುತ್ತಾ ಇರಿ. ಬಳಿಕ ಅದನ್ನು ತುಟಿಗಳ ಮೇಲೆ ಲೇಪಿಸಿಕೊಳ್ಳಿ. 15 ನಿಮಿಷ ಬಿಟ್ಟು ಮುಖನನ್ನು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
ಪ್ರ : ನನ್ನದು ಗೋಧಿ ವರ್ಣ. ನನ್ನ ಮುಖದಲ್ಲಿ ಮೊಡವೆಯ ಕಪ್ಪು ಕಲೆಗಳಿವೆ. ಅವನ್ನು ಹೋಗಲಾಡಿಸಲು ಯಾವುದಾದರೂ ಮನೆ ಮದ್ದು ತಿಳಿಸಿ.
ಉ : ಒಂದು ವೇಳೆ ಕಲೆಗಳು ಗಂಭೀರವಾಗಿದ್ದು, ತುಂಬಾ ವರ್ಷಗಳಿಂದ ಉಳಿದಿದ್ದರೆ, ಅವನ್ನು ಹೋಗಲಾಡಿಸಲು ಯಾರಾದರೂ ತಜ್ಞರ ಸಲಹೆಯ ಅಗತ್ಯವಿದೆ. ಮುಖದ ಕಲೆಗಳನ್ನು ಹೋಗಲಾಡಿಸಲು ಆ್ಯಪಲ್ ವಿನಿಗರ್ ಮಾಸ್ಕ್ ಬಳಸಬಹುದು. ಇದರಲ್ಲಿ ಆ್ಯಂಟಿ ಬಯಾಟಿಕ್ಸ್ ಗುಣವಿರುತ್ತದೆ. ಅದು ಮೊಡವೆಗಳನ್ನು ನಿವಾರಿಸುತ್ತದೆ. ಅದರಲ್ಲಿ ಆ್ಯಂಟಿ ಇನಫ್ಲೇಮೆಟರಿ ಅಂಶ ಕೇವಲ ಮೊಡವೆಗಳ ಊತವನ್ನಷ್ಟೇ ಕಡಿಮೆ ಮಾಡುವುದಿಲ್ಲ. ಕೆಂಪಗಾಗಿರುವುದನ್ನು ತಿಳಿವರ್ಣಕ್ಕೆ ತರುತ್ತದೆ. ಅದರಿಂದ ತ್ವಚೆ ಸ್ವಲ್ಪ ಶುಷ್ಕಗೊಳ್ಳುತ್ತದೆ. ಹಾಗಾಗಿ ಲೇಪನದ ಬಳಿಕ ತಕ್ಷಣವೇ ಮಾಯಿಶ್ಚರೈಸರ್ ಹಚ್ಚಿ. 1 ಚಮಚ ಆ್ಯಪಲ್ ವಿನಿಗರ್, 2 ಚಮಚ ಜೇನುತುಪ್ಪ ಅಗತ್ಯಕ್ಕೆ ಅನುಸಾರ ನೀರು ಸೇರಿಸಿ ಚೆನ್ನಾಗಿ ಕಲಸಿ. ಈಗ ಈ ಮಿಶ್ರಣವನ್ನು ಹತ್ತಿಯ ಸಹಾಯದಿಂದ ಮೊಡವೆಗಳ ಕಲೆಗಳ ಮೇಲೆ ಲೇಪಿಸಿ 10-15 ನಿಮಿಷಗಳ ಕಾಲ ಹಾಗೆಯೇ ಇರಿಸಿ ನಂತರ ತೊಳೆಯಿರಿ. ಇದನ್ನು ನೀವು ಪ್ರತಿದಿನ ಅಥವಾ ಎರಡು ದಿನಕ್ಕೊಮ್ಮೆ ಅನುಸರಿಸಬಹುದು.





