ಮೈನಾ, ಮಾಸ್ತಿ ಗುಡಿ, ಸಂಜು ವೆಡ್ಸ್ ಗೀತಾದಂಥ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ನಾಗಶೇಖರ್ ಇದೀಗ ನಾಯಕನಾಗಿ ನಟಿಸುತ್ತಿದ್ದಾರೆ, ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್ ಚಿತ್ರದ
ಮೂಲಕ ನಾಗಶೇಖರ್ ಬಹಳ ದಿನಗಳ ನಂತರ ತೆರೆಮೇಲೆ ಬರುತ್ತಿದ್ದಾರೆ, ಹಾಸ್ಯ ಕಲಾವಿದನಾಗೇ ಚಿತ್ರರಂಗಕ್ಕೆ ಬಂದವರು. ತನ್ನ ಶೀರ್ಷಿಕೆಯ ಮೂಲಕವೇ ಹೊಸ ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ ಜಿಯಾ ಉಲ್ಲಾ ಖಾನ್ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ,

ಕಳೆದ ನವೆಂಬರ್ ೧೧ರಂದು ನಾಗಶೇಖರ್ ಅವರ ಹುಟ್ಟು ಹಬ್ಬ, ಅದೇ ದಿನ ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್ ಚಿತ್ರದ ಮುಹೂರ್ತ ನೆರವೇರಿದೆ, ಆರ್.ಆರ್. ನಗರದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ನಾಗಶೇಖರ್ ಅವರ ತಾಯಿ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು,

ವಿ.ಎನ್. ಕಿರಣ್(ವಾಸಣ್ಣ) ಪ್ರೆಸೆಂಟ್ ಮಾಡುತ್ತಿರುವ ಈ ಚಿತ್ರಕ್ಕೆ ನಾಗರ, ಎ ರಾಮ್ ಚಿರು ಪ್ರೊಡಕ್ಷನ್ ಹೌಸ್ ಮೂಲಕ ರಾಮ್ ಚಿರು ಅವರು ಬಂಡವಾಳ ಹೂಡುತ್ತಿದ್ದಾರೆ, ನವೆಂಬರ್ ೧೫ರಿಂದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರೊಂದಿಗೆ ನಾಗಶೇಖರ್ ಅವರೂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು ಜತೆಗೆ ಸಂಗೀತ ನಿರ್ದೇಶಕನಾಗಿಯೂ ಕೆಲಸ ಮಾಡುತ್ತಿದ್ದಾರೆ, ಚಿತ್ರದ ಉಳಿದ ತಾಂತ್ರಿಕವರ್ಗ ಹಾಗೂ ಕಲಾವಿದರ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಮಾಹಿತಿ ನೀಡಲಿದೆ.





