ಶರತ್ ಚಂದ್ರ

ನಿನ್ನೆ ಸಾಲು ಮರದ ತಿಮ್ಮಕ್ಕನ ಅಗಲಿಕೆ ಹಾಗೂ ಆಕೆಯ ನಿಸ್ವಾರ್ಥ ಸೇವೆ ಯ ಕುರಿತು ಅನೇಕ ಸೆಲೆಬ್ರಿಟಿ ಗಳು ಸಂತಾಪ ಸೂಚಿಸಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು.ವಿಶೇಷ ವೆಂದರೆ ಆಂಧ್ರ ಪ್ರದೇಶ ದ ಉಪ ಮುಖ್ಯ ಮಂತ್ರಿ ಹಾಗೂ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ತಮ್ಮ ಖಾತೆ ಯಲ್ಲಿ ಸಾಲು ಮರದ ತಿಮ್ಮಕ್ಕ ನ ಕುರಿತು ಪೋಸ್ಟ್ ಹಾಕಿ ಎಲ್ಲರ ಮೆಚ್ಚುಗೆ ಗೆ ಪಾತ್ರರಾಗಿದ್ದಾರೆ .ಅವರು ಬರೆದ ಪೋಸ್ಟ್ ನ ತಾತ್ಪರ್ಯ ಈ ಕೆಳಗಿನ ನಂತಿದೆ.

1000761411

ಆಂಧ್ರ ಪ್ರದೇಶದಲ್ಲಿ, ಪರಿಸರವನ್ನು ರಕ್ಷಿಸುವುದಾಗಿ ಪ್ರಮಾಣ ಮಾಡಿದವರು ಮರಗಳನ್ನು ನಿರ್ದಯವಾಗಿ ಕಡಿದು, ಅರಣ್ಯಗಳನ್ನು ನಾಶಮಾಡಿ, ನಮ್ಮ ಪ್ರಮುಖ ಪರಿಸರ ಸಂಪನ್ಮೂಲಗಳನ್ನು ಸ್ವಾರ್ಥಕ್ಕಾಗಿ ಅಕ್ರಮವಾಗಿ ಸಾಗಾಣಿಕೆ ಮಾಡಲು ಅವಕಾಶ ಕಲ್ಪಿಸಿದುದನ್ನು ನಾವು ನೋಡಿದ್ದೇವೆ.ಅದೇ ಇನ್ನೊಂದು ಕಡೆ ಪ್ರಕೃತಿಗೆ ಸಂಪೂರ್ಣವಾಗಿ ಸಮರ್ಪಿತವಾದ ಬದುಕು ನಡೆಸಿದ ವಿನಯಶೀಲ ವ್ಯಕ್ತಿ ಇದ್ದರು “ವೃಕ್ಷ ಮಾತೆ ” ಎಂದು ಎಲ್ಲರೂ ಗೌರವಿಸುವ ಸಾಲುಮರದ ತಿಮ್ಮಕ್ಕ.

ಕರ್ನಾಟಕದ ಒಂದು ಸಣ್ಣ ಗ್ರಾಮದಿಂದ ಬಂದ ತಿಮ್ಮಕ್ಕ ಮತ್ತು ಅವರ ಗಂಡ, ಅವರಿಗೆ ಸಂತಾನವಾಗದೆ ಇದ್ದಾಗ ಜೀವನದ ನಿಜವಾದ ಗುರಿಯನ್ನು ಕಂಡುಕೊಂಡರು. ಅವರು ಹಸಿರು ಸಂತತಿಯನ್ನು ಬೆಳಸುವ ಆಯ್ಕೆ ಮಾಡಿಕೊಂಡರು. ಪ್ರೀತಿ ಮತ್ತು ದೈನಂದಿನ ಪರಿಶ್ರಮದಿಂದ, ಅವರು ಜಗತ್ತಿಗೆ ಮರಗಳನ್ನು ಉಡುಗೊರೆಯಾಗಿ ನೀಡಿದ್ದಾರೆ — 8,000ಕ್ಕೂ ಹೆಚ್ಚು ಮರಗಳನ್ನು, ಅದರಲ್ಲಿ 375 ಅಲದ ಮರಗಳನ್ನು ನೆಟ್ಟು ಬೆಳೆಸಿದರು. ಅವರು ಅಧಿಕಾರ ಅಥವಾ ಐಶ್ವರ್ಯಕ್ಕಾಗಿ ಬದುಕಲಿಲ್ಲ.

1000761409

114 ವರ್ಷದ ವಯಸ್ಸಿನಲ್ಲಿ, ಪ್ರಕೃತಿಯ ಈ ಮಹಾನ್ ರಕ್ಷಕಿ ನಮ್ಮನ್ನು ಅಗಲಿದ್ದಾರೆ. ಅವರ ಜೀವನವು ನಿಜವಾದ ಜನಸೇವಗೆ ಪಾಠವಾಗಿದೆ. ಜನಸೇವೆ ಯ ಪರವಾಗಿ, ನಾನು ಮಹಾನ್ ಸಾಲುಮರದ ತಿಮ್ಮಕ್ಕ ಅವರಿಗೆ ನನ್ನ ಆಳವಾದ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ.

ನಾವು ಮರಗಳ ತಾಯಿಯನ್ನು ಕಳೆದುಕೊಂಡಿದ್ದೇವೆ, ಆದರೆ ಅವರ ಆದರ್ಶ ಮಯ ಸೇವೆ ನಮ್ಮೆಲ್ಲರಿಗೂ ಪರಿಸರ ಸಂರಕ್ಷಣೆಯ ಕಡೆ ಕೆಲಸ ಮಾಡಲು, ನಮ್ಮ ಸಮುದಾಯಗಳಲ್ಲಿ ಮರಗಳನ್ನು ನೆಡಲು, ಮತ್ತು ನಮ್ಮ ಭೂಮಿಗೆ ಅತ್ಯಂತ ಅಗತ್ಯವಾದ ಜವಾಬ್ದಾರಿಯುತ ನಾಗರಿಕರಾಗಲು ಸ್ಪೂರ್ತಿಯಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ