ಸರಸ್ವತಿ*

ವೀರ ಸಿಂಹ ರೆಡ್ಡಿ ಸೂಪರ್ ಸಕ್ಸಸ್ ಬಳಿಕ ಬಾಲಯ್ಯ ನಿರ್ದೇಶಕ ಗೋಪಿಚಂದ್ ಮಲಿನೇನಿ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಸದ್ಯ ರಾಮ್ ಚರಣ್ ಗೆ ಪೆದ್ದಿ ಚಿತ್ರ ನಿರ್ಮಾಣ ಮಾಡುತ್ತಿರುವ ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಚಿತ್ರತಂಡ ನಾಯಕಿಯನ್ನು ಪರಿಚಯಿಸಿದೆ.

ಬಾಲಕೃಷ್ಣಗೆ ಜೋಡಿಯಾಗಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಸಾಥ್ ಕೊಡುತ್ತಿದ್ದಾರೆ. ಇಂದು‌ ನಯನ್ ಬರ್ತಡೇ ವಿಶೇಷವಾಗಿ ಚಿತ್ರತಂಡ ಸ್ಪೆಷಲ್ ವಿಡಿಯೋ ಮೂಲಕ ಅವರನ್ನು ಸ್ವಾಗತಿಸಿದೆ. ಅಂದಹಾಗೇ ಸಿಂಹ, ಜೈ ಸಿಂಹ ಮತ್ತು ಶ್ರೀ ರಾಮ ರಾಜ್ಯಂ ಚಿತ್ರಗಳ ಬಳಿಕ ನಾಲ್ಕನೇ ಬಾರಿಗೆ ಬಾಲಯ್ಯ ಹಾಗೂ ನಯನತಾರಾ ಒಂದಾಗುತ್ತಿದ್ದಾರೆ. ಈ ಯಶಸ್ವಿ ಜೋಡಿಯನ್ನು ಮತ್ತೊಮ್ಮೆ ತೆರೆಯ ಮೇಲೆ ನೋಡಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.

balaiah1

ಗೋಪಿಚಂದ್ ಮೆಲನೇನಿ ಅವರು ಈ ಬಾರಿ ಐತಿಹಾಸಿಕ ಕಥೆಯನ್ನು ಹೇಳೋದಿಕ್ಕೆ ಹೊರಟಿದ್ದಾರೆ. ಕಮರ್ಷಿಯಲ್ ಹಿಟ್ ಕೊಟ್ಟಿರುವ ಬಾಲಯ್ಯ ಅವರನ್ನು ಹೊಸ ಗೆಟಪ್‌ನಲ್ಲಿ ಪ್ರೇಕ್ಷಕರಿಗೆ ತೋರಿಸಲು ಯೋಜನೆ ಹಾಕಿಕೊಂಡಿದ್ದಾರೆ. ಬಹಳ ಅದ್ದೂರಿಯಾಗಿ ಚಿತ್ರ ನಿರ್ಮಾಣವಾಗಲಿದ್ದು, ಶೀಘ್ರದಲ್ಲೇ ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ