– ರಾಘವೇಂದ್ರ ಅಡಿಗ ಎಚ್ಚೆನ್.

ಭಾರತದಲ್ಲಿ ಹಾಲಿವುಡ್ ಸಿನಿಮಾಗಳ ನಿರ್ಮಾಣ ತೀರಾ ಕಮ್ಮಿ, ಈ ಹಿಂದೆ ಒಂದಷ್ಟು ಪ್ರಯತ್ನಗಳು ನಡೆದಿವೆ. ಮೂಲತಃ ಒಬ್ಬ ಕನ್ನಡಿಗನಾದ ನಾಗವೇಣಿ ಸಂತೋಷ ಅವರು ಇಂಥ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ. “ಜೀರೋ ಟು ಒನ್”  ಎಂಬ ಮೋಟಿವೇಶನ್ ಜಾನರ್ ಚಿತ್ರವನ್ನು ಇಂಗ್ಲೀಷ್, ಹಿಂದಿ, ಕನ್ನಡ  ಸೇರಿದಂತೆ 5 ಭಾಷೆಯಲ್ಲಿ ಚಿತ್ರೀಕರಿಸಲು ಮುಂದಾಗಿದ್ದಾರೆ. ಈ ಚಿತ್ರದ ಪ್ರಥಮ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು.

Messenger_creation_50AD7A4C-9D60-4C55-A2F4-6AA28DB9656E

ಎ.ಯು. ಮೂವೀಸ್ ಮೂಲಕ ನಾಗವೇಣಿ ಸಂತೋಷ ಅವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ  ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

Messenger_creation_DDFD6271-DCFF-4B74-AF4E-914C4B460FE7

ಮೊಟ್ಟಮೊದಲ ಬಾರಿಗೆ ನಾಗವೇಣಿ ಸಂತೋಷ ಅವರೇ ಚಿತ್ರದ ನಾಯಕನಾಗಿಯೂ ಸಹ ನಟಿಸುತ್ತಿದ್ದು, ನಾಯಕಿಯಾಗಿ  ರಕ್ಷಿತಾ ಗೌಡ, ‌ಮನೀಷಾ ಭಟ್  ಅಲ್ಲದೆ ಸುಮಾ, ನಕ್ಷತ್ರ, ರಿತ್ವಿಕಾ ಉಳಿದ ತಾರಾಗಣದಲ್ಲಿದ್ದಾರೆ. ವೆಂಕಟೇಶ ನಾಕಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲಗು ಹೀಗೆ 5  ಭಾಷೆಗಳಲ್ಲಿ ಜೀರೋ ಟು ಒನ್ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ಕಂ ನಿರ್ದೇಶಕ ನಾಗವೇಣಿ ಸಂತೋಷ,  “ಇದು ನನ್ನ 13ವರ್ಷಗಳ ಕನಸು, ಒಬ್ಬ ಕನ್ನಡಿಗನಾಗಿ ಹಾಲಿವುಡ್ ಸಿನಿಮಾ ನಿರ್ದೇಶಿಸುವ ಪ್ರಯತ್ನದಲ್ಲಿದ್ದೇನೆ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗ್ತಿದೆ. ಇದೊಂದು ಮೋಟಿವೇಶನಲ್ ಚಿತ್ರವಾಗಿದ್ದು, 5 ವಿಭಿನ್ನ ಭಾಷೆಗಳಲ್ಲಿ ಮಾಡುತ್ತಿದ್ದೇವೆ. ಅನುಭವಿ ನಿರ್ದೇಶಕರ, ತಂತ್ರಜ್ಞರ ಪ್ರೇರೇಪಣೆ ಪಡೆದು ಈ ಚಿತ್ರ ಮಾಡುತ್ತಿದ್ದೇವೆ. ಸಧ್ಯದಲ್ಲೇ ಚಿತ್ರದ ಮುಹೂರ್ತ ನಡೆಸಿ, ಶೂಟಿಂಗ್ ಪ್ರಾರಂಭಿಸುತ್ತಿದ್ದೇವೆ. ಬೆಂಗಳೂರು ಅಲ್ಲದೆ ವಿದೇಶಗಳಲ್ಲಿ ಚಿತ್ರೀಕರಿಸುವ ಯೋಜನೆಯಿದೆ. ಸದ್ಯದಲ್ಲೇ  ಉಳಿದ ತಂತ್ರಜ್ಞರನ್ನು ಪರಿಚಯಿಸಲಿದ್ದೇವೆ ಎಂದು ಹೇಳಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ