ಈಶಾ ಗುಪ್ತಾ ಇತ್ತೀಚೆಗೆ ತಿಳಿಸಿದ್ದೇನೆಂದರೆ, ಆಕೆ 2017ರಲ್ಲಿ ತನ್ನ ಗರ್ಭಕೋಶದ ಅಂಡಗಳನ್ನು ಫ್ರೀಝ್ ಮಾಡಿಸಿದ್ದಳಂತೆ. ಅವಳ ಫೋಕಸ್‌ ಆಗ ಕೇವಲ ಕೆರಿಯರ್‌ ಕಡೆ ಮಾತ್ರ ಇತ್ತು. ಇದಾದ ಹಲವು ವರ್ಷಗಳ ನಂತರ ಆಕೆ ಸ್ಪಾಸ್ಪ್ಯಾನಿಷ್‌ ಬಿಸ್‌ ನೆಸ್‌ ಮ್ಯಾನ್‌ ಮ್ಯಾನ್ಯುಯೆಲ್ ‌ಜೊತೆ ಮದುವೆಯಾದಳು. ಇದು ನಿಜಕ್ಕೂ ಅವಳ ವಿವೇಕಯುತ ನಡೆ ಆಗಿತ್ತು. ಇತ್ತೀಚಿನ  ಹುಡುಗಿಯರು ತಮ್ಮ ಕೆರಿಯರ್‌ ಕಡೆ ಮಾತ್ರ ಫೋಕಸ್‌ ಮಾಡುತ್ತಾ, ಇಂಥ ಸೂಕ್ಷ್ಮ ವಿಷಯ ಕಡೆಗಣಿಸುತ್ತಾರೆ. ಅವರೂ ಹೀಗೆ ಮಾಡುವುದೇ ಲೇಸು. ಧರ್ಮಾಂಧ ಕಂದಾಚಾರಿಗಳು ಇದನ್ನು ಒಪ್ಪದೆ ಇರಬಹುದು, ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ನಿರ್ಧಾರದಂತೆ ನಿಮ್ಮ ಭವಿಷ್ಯ ಇರಲಿ!

Alia-ki-parenting

ಆಲಿಯಾಳ ಪೇರೆಂಟಿಂಗ್

ಮಗು ರಾಹಾ ಹುಟ್ಟಿದ ನಂತರ ಆಲಿಯಾ 100% ತಾಯ್ತನದಲ್ಲಿ ಬಿಝಿ ಆಗಿಹೋಗಿದ್ದಾಳೆ, ಆಕೆ ಬಾಲಿವುಡ್‌ ನ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವುದು ಅತಿ ಅಪರೂಪವಾಗಿದೆ. ಸದಾ ತನ್ನ ಮಗು ಜೊತೆ ಮಗ್ನಳಾದ ಆಲಿಯಾಳಿಗೆ ಈಗ ಸಿನಿಲೋಕ ಸೆಕೆಂಡ್ ಚಾಯ್ಸ್ ಆಗಿದೆ. ಪತ್ರಕರ್ತರು ಅಂತೂ ಇಂತೂ ಈಕೆಯನ್ನು ಅಲ್ಪವಿರಾಮದಲ್ಲೇ ಮಾತನಾಡಿಸಿದಾಗ, ನಾನು ನನ್ನ ಮಗಳನ್ನು ಸ್ವಾವಲಂಬಿ ಆಗಿಸಿದ ನಂತರವೇ ಸಿನಿಮಾ ಬಗ್ಗೆ ಯೋಚಿಸುತ್ತೇನೆ, ಅಂತಾಳೆ. ಅವಳು ಯಾವುದಾದರೂ ವಾದ್ಯಯಂತ್ರದಲ್ಲಿ ನಿಪುಣಳಾಗುವಂತೆ ಬೆಳೆಸುತ್ತೇನೆ, ಜೊತೆಗೆ ಸ್ಪೋರ್ಸ್ ನಲ್ಲೂ ಮುಂದಿರುವಂತೆ ಪ್ರೋತ್ಸಾಹಿಸುತ್ತೇನೆ. ನಾನು ಬಾಲಿವುಡ್‌ ಗೆ ಅತಿ ಚಿಕ್ಕ ವಯಸ್ಸಿನಲ್ಲೇ ಎಂಟ್ರಿ ಪಡೆದುಕೊಂಡ. ನನ್ನ ಮಗಳಿಗೆ ಆ ಕಷ್ಟ ಬಾರದಂತೆ ನೋಡಿಕೊಳ್ಳುತ್ತೇನೆ ಅಂತಾಳೆ. ವಾಹ್‌, ಆಲಿಯಾ…. ಪೇರೆಂಟಿಂಗ್‌ ಅಂದ್ರೆ ಹೀಗಿರಬೇಕು!

Ashutosh-ko-aur-kaam-milne-ki-ummed

ಆಶುತೋಷ್ಗೆ ಹೆಚ್ಚಿದ ಉತ್ಸಾಹ

ಸಿನಿಮಾದ ಜೊತೆ ಜೊತೆಯಲ್ಲೇ OTTಯಲ್ಲೂ ತಮ್ಮ ಪ್ರತಿಭೆಯಿಂದ ಮಿಂಚಬಲ್ಲ ಕಲಾವಿದರು ಬಲು ಕಡಿಮೆ. ಆಶುತೋಷ್‌ರಾಣಾ ಅಂಥವರಲ್ಲಿ ಒಬ್ಬರು. OTTಯಲ್ಲಿ `ಖಾಕಿ, ರಣನೀತಿ, ಅರಣ್ಯಕ್‌’ ನಂಥ ಸೀರೀಸ್‌ ನಲ್ಲಿ ತನ್ನ ಭಾರಿ ಕಾಂತಿಕೆಯಿಂದ ಮಿಂಚುತ್ತಿರುವ ಆಶು, ಇತರ ಕಲಾವಿದರೂ ಎಚ್ಚರಿಕೆಯಿಂದ ಮುಂದುವರಿಯಲಿ ಎಂದು ಬಯಸುತ್ತಾನೆ. ತನಗೆ ಮುಂದೂ ಹೆಚ್ಚಿನ ಕೆಲಸ ಸಿಗಲಿದೆ ಎಂಬ ಉತ್ಸಾಹದಲ್ಲಿದ್ದಾನೆ. ವೈವಿಧ್ಯಮಯ ವಿಭಿನ್ನ ಪಾತ್ರಗಳಲ್ಲಿ ಈತನನ್ನು ಕಾಣಲು ಅಭಿಮಾನಿಗಳೂ ಅಷ್ಟೇ ಉತ್ಸಾಹಿತರಾಗಿದ್ದಾರೆ.

Disha-ne-to-than-liya-low

ದಿಶಾ ತಳೆದ ದೃಢ ನಿರ್ಧಾರ

ದಿಶಾ ಪಟಾನಿಯ ಮಾರ್ಶಲ್ ಆರ್ಟ್‌ ನ ಟ್ರೇನಿಂಗ್‌ ವಿಡಿಯೋ ನೋಡಿದವರೆಲ್ಲ ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯ ಸೂಚಿಸಿದ್ದಾರೆ! ದಿಶಾಳ ಮೂಮೆಂಟ್ಸ್ ಅಷ್ಟು ಜೋರಾಗಿದೆ. ತನ್ನ ಫಿಂಗರ್‌, ಬಾಡಿ ಮೇಂಟೆನೆನ್ಸ್ ನಿಂದ ಆಕೆ ಈಗಾಗಲೇ ಅಭಿಮಾನಿಗಳನ್ನು ಹೆಚ್ಚಿಸಿಕೊಂಡಿದ್ದಾಳೆ. ಆದರೆ ಮಾರ್ಶಲ್ ಆರ್ಟಿಸ್ಟ್ ಆದನಂತರ, ಈಕೆಯನ್ನು `ಆ್ಯಕ್ಷನ್‌ ಕ್ವೀನ್‌’ ಎಂಬುದರಲ್ಲಿ ಎರಡು ಮಾತಿಲ್ಲ. `ಯೋದ್ಧಾ’ ಚಿತ್ರದ ನಂತರ ಈಗ ಈಗ ಬಿಗ್‌ ಬಜೆಟ್‌ ನ `ಕಲ್ಕಿ’ ಚಿತ್ರದಲ್ಲಿ ಮಿಂಚುತ್ತಿದ್ದಾಳೆ. ಹುರಿಗಟ್ಟಿದ ಮೈಕಟ್ಟು ಅಂದ್ರೆ ದಿಶಾ ಹಾಗಿರಬೇಕು!

Tujhe-mirchi-lagi-to-main-kya-karu

ನಮಗೆ ಯಾರದೇನು ಹಂಗು?

ಕೆಲವು ದಿನಗಳ ಹಿಂದೆ ಸೈಫೀನಾ (ಸೈಫ್‌ ಕರೀನಾ) ದಂಪತಿ, ವರದಿಗಾರರ ಮುಂದೆ ದಿಢೀರ್‌ ಸಂದರ್ಶನಕ್ಕೆ ನಿಂತಿದ್ದರು. ಆಕಸ್ಮಿಕವಾಗಿ ರೊಮ್ಯಾಂಟಿಕ್‌ ಮೂಡ್‌ ಗಿಳಿದ ಇವರು, ಕ್ಯಾಮೆರಾ ಮುಂದೆಯೇ ಕಿಸ್‌ ಮಾಡಿಕೊಂಡರು. ಕೈ ತಟ್ಟಿದ ಪ್ರೆಸ್‌ ನವರು, ತಕ್ಷಣ ಈ ಚಿತ್ರವನ್ನು ಎಲ್ಲೆಡೆ ವೈರಲ್ ಮಾಡಿದರು. ಸಂಸ್ಕಾರಿ ಸಮಾಜದ ಪಾರುಪತ್ತೇದಾರರು ಇದನ್ನು ತೀಕ್ಷ್ಣವಾಗಿ ವಿರೋಧಿಸುತ್ತಾ, 2 ಮಕ್ಕಳ ಪಾಲಕರಾದ ಇವರಿಗೆ ಅಷ್ಟು ಮಾತ್ರ ಜ್ಞಾನವೆಲ್ಲಿ, ಬೆಡ್‌ ರೂಂ ಇಲ್ಲವೇ ಎಂದೆಲ್ಲ ಟ್ರೋಲ್ ‌ಮಾಡಿದರು. ಆದರೆ ಈ ದಂಪತಿ ಯಾವುದಕ್ಕೂ ಕ್ಯಾರೇ ಅನ್ನದೇ ತಮ್ಮ ಪಾಡಿಗೆ ತಾವಿದ್ದರು. ಇದರಿಂದ ನೆಟ್ಟಿಗರ ಆಕ್ರೋಶ ಮುಗಿಲು ಮುಟ್ಟಿತು. ದಂಪತಿಗಳಾದ ನಾವು ಒಂದು ಕ್ಷಣ ಮೈಮರೆತರೆ ತಪ್ಪೇನು…. ಎಂಬಂತೆ ಇವರು ಯಾರದೇನು ಹಂಗು ಎಂಬಂತೆ ಡೋಂಟ್‌ ಕೇರ್‌ ಎನ್ನುತ್ತಿದ್ದಾರೆ!

Cinema-ka-cunavi-bukhar

ಸಿನಿಮಾಗೂ ಬಂದ ಚುನಾವಣೆಯ ಜ್ವರ

ಯಾವ ಸ್ಪೀಡಿನಲ್ಲಿ ಆರ್ಟಿಕಲ್ 370 ಹಾಗೂ ಬಾರ್ ಕೋಟ್‌ ಏರ್‌ ಸ್ಟ್ರೈಕ್‌ ಕುರಿತಾಗಿ ಚಿತ್ರಗಳು, OTT ಸೀರೀಸ್‌ ರೆಡಿಯಾಗಿ ಬಂದಿವೆ ಇದರಿಂದ ಬಾಲಿವುಡ್‌ ಸಿನಿಮಾಗಳ ಮೇಲೂ ಚುನಾವಣೆಯ ದಟ್ಟ ಪ್ರಭಾವ ಎಷ್ಟು ಜೋರಾಗಿದೆ ಎಂದು ತಿಳಿಯುತ್ತದೆ. ಕೆಲವರಂತೂ ಇಂಥ ಸಿನಿಮಾಗಳನ್ನು ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳೆಂದೇ ಟೀಕಿಸುತ್ತಿದ್ದಾರೆ. ವೀಕ್ಷಕರಂತೂ ಇದರಿಂದ ಯಾವ ವಿಧದಲ್ಲೂ ಪ್ರಭಾವಿತರಾಗಿಲ್ಲ. ಇತ್ತೀಚೆಗೆ ಬಂದ `ರಣನೀತಿ’ OTT ಸೀರೀಸ್‌ ಗೆ ಹೇಳಿಕೊಳ್ಳುವಂಥ ಯಾ ಸ್ಪೆಷಲ್ ರೇಟಿಂಗೂ ಸಿಕ್ಕಿಲ್ಲ. ವೀಕ್ಷಕರಿಗೆ ಇದು ಕೇವಲ ಟೈಂಪಾಸ್‌ ಆಯಿತಷ್ಟೆ. ಇದರಲ್ಲಿ ಹೇಳಿಕೊಳ್ಳುವಂಥ ಮೆಸೇಜೂ ಇರಲಿಲ್ಲ ಅಥವಾ ವಿಶೇಷ ಕಥಾಹಂದರ ಇರಲಿಲ್ಲ. ಆಶುತೋಷ್‌ ರಾಣಾ ಹಾಗೂ ಜಿಮ್ಮಿ ಶೇರ್‌ ಗಿಲ್ ರ ಭುಜದ ಮೇಲೆ ಇಡೀ ಸೀರೀಸ್‌ ನ ಹೊರೆ ಹೊರಿಸಲಾಗಿತ್ತು.

Heeramandi-se-nikla-Heera

ಹೀರಾಮಂಡಿಯ ಅಸಲಿ ವಜ್ರ

ಸೋನಾಕ್ಷಿ ಸಿನ್ಹಾಳ ಕೆರಿಯರ್‌ ಬಹುತೇಕ ಉಸಿರುಬಿಟ್ಟಿತು ಎನ್ನುವ ಸಂದರ್ಭದಲ್ಲಿ, ಸಂಜಯ್‌ ಲೀಲಾ ಬನ್ಸಾಲಿಯವರ `ಹೀರಾಮಂಡಿ’ ಆಕೆಗೆ ಬಹುತೇಕ ಮರುಜೀವ ನೀಡಿತು. ಫರೀದನ್‌ ಹಾಗೂ ರೆಹಾನಾರ ಪಾತ್ರಗಳಲ್ಲಿ ಈಕೆ ಜೀವ ತುಂಬಿದಳು. ಈ ಪಾತ್ರಗಳು ತುಸು ಗ್ರೇ ಶೇಡ್‌ ನಲ್ಲಿದ್ದರೂ, ಸೋನಾಳಿಗೆ ಚೆನ್ನಾಗಿ ಒಪ್ಪುತ್ತಿದೆ. ಬಹುಶಃ ಇದಾದ ಮೇಲೆ ಬೇರೆ ನಿರ್ದೇಶಕರ ದೃಷ್ಟಿ ಇವಳತ್ತ ಹರಿಯಬಹುದು. ಆಗ ಮಾತ್ರ ಇವಳ ಕೆರಿಯರ್‌ ಗ್ರಾಫ್‌ ಮತ್ತೆ ಚಿಗುರೀತು!

Chandu-bana-champion

ಚಾಂಪಿಯನ್ಆದ ಚಂದು!

ಕಾರ್ತಿಕ್‌ ನ ಹಿಂದಿನ ಚಿತ್ರಗಳಾದ `ಶಹರದಾ, ಸತ್ಯ ಪ್ರೇಮ್ ಕೀ ಕಥಾ’ ಏನೇನೂ ಕಮಾಲ್ ಮಾಡಲಿಲ್ಲ. ಈಗ ಈತನಿಗೆ ನಿರ್ದೇಶಕ ಕಬೀರ್‌ ಖಾನ್‌ ರ ಜೊತೆ ಸಿಕ್ಕಿದೆ. ಇವರಿಬ್ಬರೂ ಕೂಡಿ `ಚಂದೂ ಚಾಂಪಿಯನ್‌’ ಚಿತ್ರ ಮಾಡುತ್ತಿದ್ದು, ಕಾರ್ತಿಕ್ ಇದರಲ್ಲಿ ಪ್ಯಾರಾಲಿಂಪಿಕ್‌ ಗೋಲ್ಡ್ ಮೆಡಲಿಸ್ಟ್ ನ ಪಾತ್ರ ನಿರ್ವಹಿಸುತ್ತಿದ್ದಾನೆ. ಸುದ್ದಿಗಾರರ ಪ್ರಕಾರ ಈ ಬಯೋಪಿಕ್‌ ಚಿತ್ರ, ಪ್ಯಾರಾಲಿಂಪಿಕ್‌ ಗೋಲ್ಡ್ ಮೆಡಲಿಸ್ಟ್ ಮುರಳಿಕಾಂತ್‌ಪೇಟಕರ್‌ ಅವರ ಜೀವನಾಧಾರಿತವಂತೆ. ಹಿಂದಿನ ಹಲವು ಬಯೋಪಿಕ್‌ ಚಿತ್ರಗಳು ತೋಪಾಗಿವೆ, ಹಾಗಿರುವಾಗ ಈ ಚಂದು ಬಾಕ್ಸ್ ಆಫೀಸಿನ ಚಾಂಪಿಯನ್‌ ಆಗ್ತಾನಾ….? ಕಾದು ನೋಡಿ!

film-1

ಹೀರಾಮಂಡಿ ಚಿತ್ರ ಸೈ ಎನಿಸದೇ?

ಸಂಜಯ್‌ ಲೀಲಾ ಭನ್ಸಾಲಿ ಹಿಂದಿನಿಂದಲೂ ತಮ್ಮ ಅತಿ ಭವ್ಯವಾದ ಸೆಟ್ಸ್ ಗೆ ಖ್ಯಾತರು. ಅವರ ಇತ್ತೀಚಿನ ಚಿತ್ರಗಳಂತೂ ಮಾಮೂಲಿ ಮಾಸ್‌ ಪ್ರೇಕ್ಷಕನ ಲೆವೆಲ್ ‌ಗೆ ಮೀರಿದ್ದು. ಸಂಜಯ್‌ ರಂಥ ಚಿತ್ರ ನಿರ್ಮಾಪಕರು ಅದೇಕೋ ಗೊತ್ತಿಲ್ಲ, ಇಂದಿನ ಆಧುನಿಕ ಯುವ ಪೀಳಿಗೆಯನ್ನು ಎಷ್ಟೋ ದಶಕಗಳ ಹಿಂದಿನ ಲೋಕಕ್ಕೆ ಕರೆದೊಯ್ಯ ಬಯಸಿದ್ದಾರೆ. ಇವರ ಇತ್ತೀಚಿನ OTTಯ ನೆಟ್‌ ಫ್ಲಿಕ್ಸ್ ಚಿತ್ರ `ಹೀರಾಮಂಡಿ’ ಅಂದಿನ ಬ್ರಿಟಿಷರ ಕಾಲದ ಆಡಳಿತದಲ್ಲಿ ಒಂದು ಕೋಠಿಯ ವೇಶ್ಯೆಯರ ಸುತ್ತಾ ಸುತ್ತುವ ಕಥೆಯಾಗಿದೆ. ಆ ಕಾಲದಲ್ಲಿ ಇಂದಿನ ಲಾಹೋರ್‌ ಬಳಿಯ ಟಕ್ಸಾಲಿ ಗೇಟ್‌ ನ ಬಳಿಯ ಒಂದು ಮೊಹಲ್ಲ ಹೀರಾಮಂಡಿ ಆಗಿತ್ತು. ಬ್ರಿಟಿಷರ ದರ್ಬಾರಿನಲ್ಲಿ ಇದನ್ನು ರೆಡ್‌ ವೈಟ್‌ ಏರಿಯಾ ಎಂದು ಘೋಷಿಸಲಾಯಿತು. ಈ ಚಿತ್ರಕ್ಕೆ ರೋಸಿ ಕೆಲವು ಪಾಕಿಸ್ತಾನಿಗಳು ಸಿಡಿಸಿಡಿ ಎಂದು ಕೆಂಡ ಕಾರುತ್ತಿದ್ದಾರೆ. ಅದೇಕೆ ಎಂಬ ಕಾರಣ ಗೊತ್ತಾಗುತ್ತಿಲ್ಲ. ಹೆಂಗಳೆಯರ ಅಸಹಾಯಕ ಸ್ಥಿತಿಯನ್ನು ಸಮಾಜದ ಎದುರು ನೇರ ಹೇಳಬೇಕಿದ್ದರೆ, ಸಂಜಯ್‌ ಮಹಾಶಯ ಅದನ್ನು ಇಂದಿನ ಮುಂಬೈನ ಕಾಮಾಟಿಪುರದತ್ತ ಕೇಂದ್ರೀಕರಿಸಬಹುದಾಗಿತ್ತಲ್ಲಾ….?

film-2

ಡಬ್ಬಾಸಿ ನಟನೆ ಜೊತೆಗೆ ಚಿತ್ರ ಬೇಕಾರ್‌!

ರಿಲೀಸ್‌ ಆದ ಮೊದಲ ದಿನವೇ `ರುಸ್ಲಾನ್‌’ ಚಿತ್ರದ ಉಸಿರು ನಿಂತುಹೋಯಿತು. ಹೇಗೋ ದೊಡ್ಡ ಮನಸ್ಸು ಮಾಡಿ ಚಿತ್ರಮಂದಿರಕ್ಕೆ ಬಂದಿದ್ದ ಪ್ರೇಕ್ಷಕರು, ಚೂಯಿಂಗ್‌ ಗಮ್ ನಂತೆ ಎಳೆಯಾಗಿರುವ ಚಿತ್ರ, ಅದರ ನಾಯಕ ಆಯುಷ್‌ ಶರ್ಮಾಗೆ ಬಾಯಿತುಂಬ ಶಾಪ ಹಾಕಿದರು! ಒಂದಿಷ್ಟೂ ನೋಡಿಸಿಕೊಳ್ಳದ ಚಿತ್ರಕಥೆ, ಆಯುಷ್‌ ನ ಡಬ್ಬಾಸಿ ನಟನೆ ಕಂಡು ಜನ ಥಿಯೇಟರಿನಲ್ಲಿ ಮೈ ಪರಚಿಕೊಳ್ಳುತ್ತಿದ್ದರು. ಆಯುಷ್‌ ಇದ್ದಬದ್ಧ ಧೈರ್ಯವನ್ನೆಲ್ಲ ಬಳಸಿ, ತಂಗಿ ಗಂಡ ಸಲ್ಮಾನ್‌ ನ ಬ್ಯಾನರ್‌ ನಿಂದ ಹೊರಬಂದು ಒಂದು ಚಿತ್ರ ಮಾಡಿದ್ದ. ಖಂಡಿತಾ ಈ ಚಿತ್ರದಿಂದ ತಾನೊಬ್ಬ ದೊಡ್ಡ ಹೀರೋ ಆಗುತ್ತೇನೆ ಎಂದು ಕನಸು ಕಾಣುತ್ತಿದ್ದ. ಆದರೆ ಪರಿಣಾಮ ಮಾತ್ರ ಸೊನ್ನೆ! ಹೀರೋ ಆಗುವ ಕನಸು ಕಂಡರೆ ಸಾಲದು, ಅದಕ್ಕಾಗಿ ನಟನೆಯಲ್ಲಿ ದಮ್ ಇರಬೇಕು, ನಾಯಕತ್ವ ನಿರ್ವಹಿಸುವ ಛಾತಿ ಇರಬೇಕೆಂದು ಯಾರಾದರೂ ಈ ಮಹಾಶಯನಿಗೆ ತಿಳಿ ಹೇಳಿದರೆ ಎಷ್ಟೋ ಮೇಲು!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ