ರಾಘವೇಂದ್ರ ಅಡಿಗ ಎಚ್ಚೆನ್.

ಸಾಮಾಜಿಕ ಸಂದೇಶ ಸಾರುವ ಚಿತ್ರದಲ್ಲಿ, *ಲಕ್ಷ್ಮಣ್ ದಾಸ್, ಸುನಿಲ್, ಗ್ನಾನ ಪ್ರಕಾಶ್, ಪ್ರಮುಖ ಪಾತ್ರ,* ಮಹಿಳಾ ಪಾತ್ರಧಾರಿಗಳು *ಶಾರದಮ್ಮ, ಸತ್ಯ ರಾಮದಾಸ್, ನಯನ, ತೀರ್ಥ,* ಬಾಲನಟಿಯಾಗಿ  *ತ್ರಿಷಿಕಾ, ನಟಿಸಿದ್ದಾರೆ.*
*ಶ್ರೀನಿಧಿ ಕಂಬೈನ್ಸ್* ಅಡಿಯಲ್ಲಿ ಶ್ರೀಮತಿ *ಜಯಂತಿ ಜಿ.* ರವರು ನಿರ್ಮಾಪಕರು ಮತ್ತು *ಮುನಿನಾರಾಯಣ.*

IMG-20251121-WA0022

ಸಹ ನಿರ್ಮಾಪಕರಾಗಿ ನಿರ್ಮಾಣ ಮಾಡಿರುವ ಹೊಸ ಪ್ರತಿಭೆಗಳ *’ಋಣ’* ಸಿನಿಮಾ ಪೋಸ್ಟರ್ ಬಿಡುಗಡೆ ಇತ್ತೀಚೆಗೆ ಬೆಂಗಳೂರಿನ ಕೆಂಗೇರಿಉಪನಗರದ ಅದ್ದೂರಿ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಿದೆ. *ಸಾಲೋಮಾನ್ ಜಿ.* *ನಿರ್ದೇಶನದ* ಈ ಚಿತ್ರದಲ್ಲಿ *ಲಕ್ಷ್ಮಣ್ ದಾಸ್* ಹಾಗೂ *ಸುನೀಲ್* ಪ್ರಮುಖ ಪಾತ್ರ ನಿರ್ವಹಣಿಸುತ್ತಿದ್ದಾರೆ.
ಸಮಾಜದಲ್ಲಿನ ಜಾತಿ ಮತ್ತು ವರ್ಗಗಳ ಸಂಘರ್ಷದ ಸುತ್ತ ಹೆಣೆದ ಕಥೆ ಇದಾಗಿದ್ದು. ಪ್ರೀತಿ ಎಲ್ಲಕ್ಕಿಂತ ಮಿಗಿಲು ಎಂದು ಸಂದೇಶ ಸಾರುವ ಚಿತ್ರವಾಗಿದೆ.

IMG-20251120-WA0017

*ಜಯಂತಿ ಸೇವಾ ಸಮಿತಿ ಟ್ರಸ್ಟ್* ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಅದ್ದೂರಿ ಕಾರ್ಯಕ್ರಮದಲ್ಲಿ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಸಿನಿಮಾ ಕುರಿತು ಮಾಹಿತಿ ನೀಡಿದರು. ಚಿತ್ರೀಕರಣ ಬಹುತೇಕ ಅಂತ್ಯವಾಗಿದ್ದು. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ಸೆನ್ಸಾರ್ ಪಾಸಾಗಿ ತೆರೆಗೆ ಬರಲಿದೆ ಎಂದು ಹೇಳಿದರು.

IMG-20251121-WA0021

ಈ ಹಿಂದೆ *ಜೈ ಗದಾಕೇಸರಿ* ಚಿತ್ರದಲ್ಲಿ ಖಳನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಲಕ್ಷ್ಮಣ್ ದಾಸ್ ಈ ಚಿತ್ರದ ನಾಯಕರಾಗಿ ಮತ್ತು ಸಹಾಯ ನಿರ್ಮಾಪಕರು ಕೂಡ ಹೌದು ಜೊತೆಗೆ ಪ್ರಮುಖ ನಾಯಕ ನಟ ಆಗಿ ಕಾಣಿಸಿಕೊಂಡಿದ್ದಾರೆ. ಚೋರ್ ಬಜಾರ್ (ಖಳನಾಯಕ) ಚಿತ್ರ ಇದೀಗ ಅವರು ಅಭಿನಯಿಸಿದ ಚಿತ್ರದ ಪೈಕಿ ಬಿಡುಗಡೆಗೆ ಸಿದ್ಧವಾಗಿದೆ. ಇದರೊಡನೆ ಕುಲವಧು, ಸುಬ್ಬಲಕ್ಷ್ಮಿ ಸಂಸಾರ, ಸಿಂಧೂರ, ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಮೊದಲಾದ ಧಾರಾವಾಹಿಯಲ್ಲಿ ಸಹ ಕಲಾವಿದನಾಗಿ ಅಭಿನಯಿಸಿದ್ದಾರೆ.

IMG-20251121-WA0019

*ಕ್ಲಾರೆನ್ಸ್ ಅಲೆನ್ ಟ್ರಾಷ್ಟ* ಸಂಗೀತ ನೀಡಿರುವ ಈ ಚಿತ್ರಕ್ಕೆ *ಸುನೀಲ್ ಕೆ.ಆರ್.ಎಸ್* ಛಾಯಾಗ್ರಹಣ ಜೊತೆಗೆ ಸಹಾಯನಿರ್ಮಾಪಕರು. *ಮಂಜುನಾಥ್ ಕಪ್ಸೆ,* ಚಿತ್ರಕ್ಕೆ ಸಾಹಿತ್ಯ ಒದಗಿಸಿದ್ದಾರೆ.
ಮೂಗನ ಸೇಡು ಸೇರಿದಂತೆ ಅನೇಕ ಚಿತ್ರಗಳಲ್ಲಿ ಬಾಲ ಕಲಾವಿದರಾಗಿ ಅಭಿನಯಿಸಿದ
*ದೊಂಬರ ಕೃಷ್ಣ ಸುರೇಶ್, ಮತ್ತು ಸತೀಶ್ ಕೃಷ್ಣ,* ರವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರೊಡನೆ *ರಾಮರಾವ್,* ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ