ನಟ ಚಂದನ್ ಕುಮಾರ್ ಪ್ರಥಮ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಫ್ಲರ್ಟ್  ನವೆಂಬರ್ 28ರಂದು  ರಾಜ್ಯಾದ್ಯಂತ  ತೆರೆಕಾಣಲಿದೆ.

ಚಂದನ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳೋ ಜತೆಗೆ ನಾಯಕನಾಗೂ ನಟಿಸಿದ್ದಾರೆ. ಎವರೆಸ್ಟ್ ಪಿಕ್ಚರ್ಸ್ ಮೂಲಕ  ನಿರ್ಮಾಣ ಸಹ ಮಾಡಿದ್ದಾರೆ.  ಎ ಪ್ಯೂರ್ ಡವ್ ಸ್ಟೋರಿ ಎಂಬ ಅಡಿಬರಹ ಫ್ಲರ್ಟ್ ಚಿತ್ರಕ್ಕಿದ್ದು, ನಿಮಿಕಾ ರತ್ನಾಕರ್, ಅಕ್ಷತಾ ಬೋಪಣ್ಣ  ನಾಯಕಿಯರಾಗಿ ನಟಿಸಿದ್ದಾರೆ.

1000773634

ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಹಾಡಿರುವ   ನೀ ನನ್ನ ಜೀವ ಎಂಬ ಫ್ರೆಂಡ್ ಶಿಪ್ ಸಾಂಗ್ ವೈರಲ್ ಆಗಿ ನಿರೀಕ್ಷೆ ಹುಟ್ಟಿಸಿದೆ.

ಇದೊಂದು ರೋಮ್ ಕಾಮ್ ಚಿತ್ರವಾದರೂ ಫ್ರೆಂಡ್ ಶಿಪ್, ಲವ್, ಹೀಗೆ ಎಲ್ಲಾ ಎಂಟರ್ ಟೈನಿಂಗ್ ಎಲಿಮೆಂಟ್ಸ್ ಇದೆ. ಫ್ಲರ್ಟ್ ಎಂದರೆ ಬರೀ ಚುಡಾಯಿಸುವುದು ಎಂದರ್ಥವಲ್ಲ. ಗಾಢವಾದ ಪ್ರೀತಿಯನ್ನೂ ಸಹ ಫ್ಲರ್ಟ್ ಎಂದೇ ಕರೆಯುತ್ತಾರೆ. ಎಲ್ಲರ ಡವ್ ನಲ್ಲೂ ಒಂದೊಂದು ಲವ್ ಇರುತ್ತದೆ. ಚಿತ್ರದಲ್ಲಿ ಎಲ್ಲ ಪಾತ್ರಗಳಿಗೂ ವ್ಯಾಲ್ಯೂ ಇದ್ದು, ರೋಮ್ ಕಾಮ್ ಜತೆಗೆ ಸೈಕೋ ಕ್ಯಾರೆಕ್ಟರ್ ಕೂಡ ಚಿತ್ರದಲ್ಲಿದೆ.

1000773640

ಸುದೀಪ್ ಅವರ ಹಾಡಿಗೆ ನಕುಲ್ ಅಭಯಂಕರ್ ಮ್ಯೂಸಿಕ್ ಮಾಡಿದ್ದು, ಜಸ್ಸಿ ಗಿಫ್ಟ್  ಉಳಿದ 3  ಹಾಡುಗಳ ಜತೆಗೆ ಹಿನ್ನೆಲೆ ಸಂಗೀತವನ್ನೂ ಒದಗಿಸಿದ್ದಾರೆ. ಹೆಚ್.ಸಿ. ವೇಣು ಅವ ಛಾಯಾಗ್ರಹಣ ಚಿತ್ರಕ್ಕಿದೆ.

1000773631

ಹಿರಿಯನಟ ಅವಿನಾಶ್, ನಟಿ ಶೃತಿ, ಸಾಧು ಕೋಕಿಲ,  ಗಿರೀಶ್ ಶಿವಣ್ಣ, ವಿನಯ್ ಗೌಡ

ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ