- ರಾಘವೇಂದ್ರ ಅಡಿಗ ಎಚ್ಚೆನ್.

ರಿಷಬ್ ಶೆಟ್ಟಿ ಅವರ ‘ಕಾಂತಾರ’ ದೇಶದಾದ್ಯಂತ ಸದ್ದು ಮಾಡಿದ್ದಂತೆ, ಅದರ ಹಿಂಬಾಲಕ ಕಲಾವಿದರು ಮತ್ತು ತಾಂತ್ರಿಕ ಕಕ್ಷೆಯವರಿಗೂ ಅದರಿಂದ ದೊಡ್ಡ ಗುರುತಿನೆದ್ದಿತು. ಈ ಚಿತ್ರದಲ್ಲಿ ಗೀತ ರಚನೆಕಾರರಾಗಿದ್ದ ಮಂಗಳೂರಿನ ನ್ಯಾಯವಾದಿ ಶಶಿರಾಜ್ ಕಾವೂರು, ಈಗ ತಮ್ಮದೇ ಕಥೆ ಮತ್ತು ದೃಷ್ಟಿಕೋನದೊಂದಿಗೆ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಲು ಮುಂದಾಗಿದ್ದಾರೆ.
ವೃತ್ತಿಯಲ್ಲಿ ನ್ಯಾಯವಾದಿಯಾಗಿರುವ ಶಶಿರಾಜ್ ಕಾವೂರು, ಸಾಹಿತ್ಯ–ಸಿನಿಮಾ ಲೋಕದ ಮೇಲೂ ಸಮಾನ ಆಸಕ್ತಿ ಹೊಂದಿದ್ದಾರೆ. ಹಲವು ತುಳು ಚಿತ್ರಗಳಿಗೆ ಗೀತ ರಚನೆ ಮಾಡಿದ ಅವರು, ‘ಕಾಂತಾರ’ ಮತ್ತು ‘ಕಾಂತಾರ: ಚಾಪ್ಟರ್ 1’ ಚಿತ್ರಗಳ ಜನಪ್ರಿಯ ಹಾಡುಗಳಾದ “ವರಾಹ ರೂಪಂ” ಹಾಗೂ “ಗೊತ್ತಿಲ್ಲಾ ಶಿವನೇ ಭಕ್ತಿದಾರಿಯು” ಹಾಡುಗಳನ್ನು ರಚಿಸಿ ಗಮನ ಸೆಳೆದಿದ್ದರು.
ಈಗ ಮೊದಲ ಬಾರಿಗೆ ನಿರ್ದೇಶಕರಾಗಿ ಅವರು ಕೈಗೆತ್ತಿಕೊಂಡಿರುವ ಹೊಸ ಕನ್ನಡ ಚಿತ್ರವೆಂದರೆ ‘ವಾದಿರಾಜ ವಾಲಗ ಮಂಡಳಿ’. ಕಥೆ, ಚಿತ್ರಕಥೆ, ಸಂಭಾಷಣೆ—ಎಲ್ಲವನ್ನೂ ಸ್ವತಃ ಶಶಿರಾಜ್ ಕಾವೂರು ಬರೆಯಿದ್ದು, ಈ ಚಿತ್ರವನ್ನು ಎಂ.ಎನ್.ಆರ್ ಪ್ರೊಡಕ್ಷನ್ ನಿರ್ಮಿಸುತ್ತಿದೆ.
ತುಳುನಾಡಿನಲ್ಲಿ ಧಾರಾವಾಹಿ ಮತ್ತು ಸಿನೆಮಾ ನಿರ್ಮಾಣಕ್ಕೆ ಹೆಸರುವಾಸಿಯಾದ ಎಂ.ಎನ್.ಆರ್ ಪ್ರೊಡಕ್ಷನ್, ಜೋಗುಳ ಮೆಗಾ ಧಾರಾವಾಹಿ ಹಾಗೂ ‘ಗಲಾಟೆ’ ಸಿನಿಮಾದ ನಂತರ ಮತ್ತೆ ಹೊಸ ಸಂരംഭಕ್ಕೆ ಕೈ ಹಾಕಿದೆ. ಸಂಸ್ಥೆ ತುಳುಭಾಷೆ ಉತ್ತೇಜಿಸುವ ನಿಟ್ಟಿನಲ್ಲಿ ‘ಡಾಕ್ಟ್ರಾ.. ಭಟ್ರಾ?’ ಚಿತ್ರವನ್ನೂ ನಿರ್ಮಿಸುತ್ತಿದೆ.
‘ವಾದಿರಾಜ ವಾಲಗ ಮಂಡಳಿ’ ಸಿನಿಮಾ ಸಂಪೂರ್ಣ ಹಾಸ್ಯ ಪ್ರಧಾನವಾಗಿದ್ದು, ಸಮಾಜಕ್ಕೆ ಅರ್ಥಪೂರ್ಣ ಸಂದೇಶವನ್ನೂ ಒಳಗೊಂಡಿದೆ. ಈ ಚಿತ್ರದಲ್ಲಿ ಕಾಂತಾರ ಖ್ಯಾತಿಯ ಕಲಾವಿದರು ನವೀನ್ ಡಿ ಪಡೀಲ್, ಲಕ್ಷ್ಮಣ ಕುಮಾರ್ ಮಲ್ಲೂರು, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್ ಹಾಗೂ ಮೈಮ್ ರಾಮದಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ತಾಂತ್ರಿಕ ತಂಡದಲ್ಲಿ ಕ್ಯಾಮರಾಮನ್ ಚಂದ್ರಶೇಖರನ್, ಸಂಕಲನ ನಿತಿನ್ ಶೆಟ್ಟಿ ಹಾಗೂ ಕಲಾ ನಿರ್ದೇಶನ ರಾಜೇಶ್ ಬಂದ್ಯೋಡ್ ನಿರ್ವಹಿಸಲಿದ್ದಾರೆ. ಸಂಗೀತ ಮಣಿಕಾಂತ ಕದ್ರಿ ಅವರದ್ದು. ಸಹ ನಿರ್ಮಾಪಕರಾಗಿ ಜಯಪ್ರಕಾಶ ತುಂಬೆ ಮತ್ತು ಕಾರ್ಯಕಾರಿ ನಿರ್ಮಾಪಕರಾಗಿ ಸಂತೋಷ್ ಶೆಟ್ಟಿ ಕಾರ್ಯನಿರ್ವಹಿಸಲಿದ್ದಾರೆ.
ಚಿತ್ರದ ಚಿತ್ರೀಕರಣ ಕಾಸರಗೋಡು, ಮಂಗಳೂರು, ಉಡುಪಿ, ಕುಂದಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಲಿದೆ.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶಶಿರಾಜ್ ಕಾವೂರು, “ಕನ್ನಡ ಸಿನಿಮಾವನ್ನು ನಿರ್ದೇಶಿಸುವುದು ನನ್ನ ಹಳೆಯ ಕನಸು. ನಾಟಕ ಮತ್ತು ತುಳು ಸಿನಿಮಾಗಳ ಮೂಲಕ ಪಡೆದ ಅನುಭವ ಈಗ ಉಪಯೋಗವಾಗುತ್ತಿದೆ. ಡಿಸೆಂಬರ್ 3ರಿಂದ 40 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ನಿರ್ದೇಶಕರಾಗಿ ಮೊದಲ ಅನುಭವ, ಇದು ನನಗೆ ದೊಡ್ಡ ಸವಾಲು” ಎಂದರು.
ನಟ ನವೀನ್ ಡಿ ಪಡೀಲ್ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾ, “ನಮ್ಮ ತಂಡದ ಹಲವು ವರ್ಷಗಳ ಕನಸು ಇದೀಗ ನನಸಾಗುತ್ತಿದೆ. ಹೊಸ ನಿರ್ದೇಶಕ ಕನ್ನಡ ಚಿತ್ರರಂಗಕ್ಕೆ ಬರೋದು ಬಹಳ ಒಳ್ಳೆಯ ಬೆಳವಣಿಗೆ” ಎಂದರು.

 

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ