ಇಂದಿನ ಸ್ಪರ್ಧಾತ್ಮಕ ಪುರುಷ ಪ್ರಪಂಚದ ಉದ್ದಿಮೆಗಳ ನಡುವೆ, ಫಾರ್ಮಾಸಿಟಿಕ್ಸ್ ನಂತಹ, ಅದರಲ್ಲೂ ಆಯುರ್ವೇದದ ಅತ್ಯುತ್ತಮ ಉತ್ಪನ್ನಗಳನ್ನು ಭಾರತೀಯ ಸಮಾಜಕ್ಕೆ ಕೊಡುಗೆಯಾಗಿ ನೀಡಿರುವ ವೆಂಕಟ ಫಾರ್ಮಾಸಿಟಿಕ್ಸ್ ಒಡತಿ ಪದ್ಮಿನಿ ಶ್ರೀನಿವಾಸ್ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ.......?

ಪದ್ಮಿನಿ ಶ್ರೀನಿವಾಸ್‌ ಎಂ. ಫಾರ್ಮಾ (ಫಾರ್ಮಾಸಿಟಿಕ್ಸ್) ದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಆಯುರ್ವೇದ ಔಷಧಿಗಳ ಉತ್ಪಾದನೆಯಲ್ಲಿ 23 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ.

ಇವರ ತಂದೆಯವರು ಉದ್ದಿಮೆದಾರರಾಗಿದ್ದು, ಡಯಾಗ್ನೋಸ್ಟಿಕ್‌ ಕಿಟ್‌ ಗಳನ್ನು ತಯಾರು ಮಾಡುತ್ತಿದ್ದರು. ಆ ಉದ್ದಿಮೆಯನ್ನು ಮುಂದುವರಿಸಲು ಇವರಿಗೆ ಫಾರ್ಮಸಿ ವಿದ್ಯಾಭ್ಯಾಸ ಮಾಡಿಸಿದ್ದರು. ಆದರೆ ಮದುವೆಯಾದ ನಂತರ ತಂದೆಯ ಪ್ರೇರಣೆ ಮತ್ತು ಪತಿಯ ಉತ್ತೇಜನದಿಂದಾಗಿ ವೆಂಕಟ ಫಾರ್ಮಾ ಸಂಸ್ಥೆಯನ್ನು ಪ್ರಾರಂಭಿಸಲಾಯಿತು.

ಆಯುರ್ವೇದ ಭಾರತದ ಪ್ರಾಚೀನ ವೈದ್ಯ ಪದ್ಧತಿಯಾಗಿದ್ದರೂ ಸಹ ಅದರಲ್ಲಿ ಹೆಚ್ಚಿನ ಸಂಶೋಧನೆ, ಅಧ್ಯಯನ, ವೈಜ್ಞಾನಿಕವಾಗಿ ತಯಾರಿಸುವಿಕೆಯ ಕೊರತೆ ಇದ್ದುದರಿಂದ ನಾನು ಆಯುರ್ವೇದ ಔಷಧಿಗಳ ತಯಾರಿಕೆಗೆ ಗಮನವಿತ್ತೆ. ಆಲೋಪತಿ ವೈದ್ಯ ಪದ್ಧತಿಯಲ್ಲಿ ಹಲವಾರು ಮಾರಕ ಕಾಯಿಲೆಗಳಿಗೆ ಔಷಧಿಗಳು ಲಭ್ಯವಾಗಿವೆ. ಆದರೆ ಅವುಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಸರಿಯಾದ ಪ್ರಮಾಣದಲ್ಲಿ ಬೆರೆಸಿ ಒಂದು ನಿರ್ದಿಷ್ಟವಾದ ರೂಪದಲ್ಲಿ ಅಂದರೆ ಮಾತ್ರೆ, ಟಾನಿಕ್‌, ಕ್ಯಾಪ್ಸೂಲ್ ಲೇಪನದ  ರೂಪದಲ್ಲಿ ರೋಗಿಗಳಿಗೆ ನೀಡಬೇಕಾಗುತ್ತದೆ, ಎನ್ನುತ್ತಾರೆ.

ಸಮಾಜಕ್ಕೆ ಹೊಸತನದ, ಉತ್ತಮ ಗುಣಮಟ್ಟದ, ಪರೀಕ್ಷಿತ ಪರಿಣಾಮಕಾರಿ ಆಯುರ್ವೇದದ ಔಷಧಿಗಳನ್ನು ನೀಡುವ ಉದ್ದೇಶದಿಂದ ವೆಂಕಟ ಫಾರ್ಮಾ ತಯಾರಿಕಾ ಸಂಸ್ಥೆಯನ್ನು ಸ್ಥಾಪಿಸಲಾಯಿತು.

ಉದ್ಯಮಗಳ ಸ್ಪರ್ಧೆ

ಸ್ಪರ್ಧೆ ಎಲ್ಲಾ ರಂಗಗಳಲ್ಲಿ ಇರುವುದು ಸಹಜ. ಸಕಾರಾತ್ಮಕ ಮನೋಭಾವದಿಂದ ಸ್ಪರ್ಧಿಸಿ, ತನ್ನದೇ ಆದ ಛಾಪು ಮೂಡಿಸುವುದು ಅಗತ್ಯ. ಈ ಕುರಿತಾಗಿ ಅವರೇ ಈ ರೀತಿ ಹೆಚ್ಚಿನ ವಿವರ ನೀಡಿದ್ದಾರೆ.

ಏಕಾಏಕಿ ಹೆಚ್ಚು ಬಂಡವಾಳ ಹೂಡುವ ಅಗತ್ಯವಿಲ್ಲ. ನಾನು 2001ರಲ್ಲಿ ಕೇವಲ 4 ಮಹಿಳಾ ಕಾರ್ಮಿಕರೊಂದಿಗೆ ಗ್ಲೂಕೋಸ್ ಪೌಡರ್‌ ರೀಪ್ಯಾಕಿಂಗ್‌ ಮಾಡುವುದರೊಂದಿಗೆ ಉದ್ದಿಮೆಯನ್ನು ಆರಂಭಿಸಿದೆ. ಹಂತ ಹಂತವಾಗಿ ಬೆಳೆದು ರಾಜ್ಯ ಮತ್ತು ಕೇಂದ್ರ ಸರ್ಕಾರ ಮಹಿಳಾ ಉದ್ದಿಮೆದಾರರಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ಪಡೆದಿರುತ್ತೇನೆ.

ನಮ್ಮ ತಯಾರಿಕಾ ಸಂಸ್ಥೆ ರಾಮನಗರದ ರಾಮದೇವರ ಬೆಟ್ಟದ ತಪ್ಪಲಿನಲ್ಲಿ ಇದ್ದು, ವಿಶಅವ ಮಟ್ಟದ ಸ್ಟಾಂಡರ್ಡ್‌ ಫೆಸಿಲಿಟಿ ಆಗಿದ್ದು, ಸುಮಾರು 70 ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಅದರಲ್ಲಿ ಶೇ.90ರಷ್ಟು ಮಹಿಳೆಯರಿದ್ದಾರೆ.

ನಾವು ಮುಖ್ಯವಾಗಿ ಹೊಸ ಔಷಧಿಗಳ ಸಂಶೋಧನೆಯಲ್ಲಿ ತೊಡಗಿರುತ್ತೇವೆ. ಹಲವಾರು ಪ್ರತಿಷ್ಠಿತ ಕಂಪನಿಯರಿಗೆ ಲೋನ್‌ ಲೈಸೆನ್ಸ್ ಅಡಿಯಲ್ಲಿ ಅವರುಗಳ ಔಷಧಿಗಳನ್ನು ತಯಾರಿಸಿ ಕೊಡುತ್ತೇವೆ.

ಹೊಸ ಬಗೆಯ ಉತ್ಪನ್ನಗಳು

ಉದ್ದಿಮೆಯ ಲಾಭ ನಷ್ಟಗಳ ಬಗ್ಗೆ ವಿವರಿಸುತ್ತಾ, ಕಂಪನಿಯ ಲಾಭ, ನಮ್ಮ ನಿಷ್ಠೆ ಮತ್ತು ಶ್ರಮದ ಮೇಲೆ ನಿರ್ಧಾರಿತವಾಗಿರುತ್ತದೆ. ಒಮ್ಮೆಲೆ ಲಾಭ ಗಳಿಸುವುದು ಕಷ್ಟ ಸಾಧ್ಯ. ತಾಳ್ಮೆ ಅತಿ ಮುಖ್ಯ.

ನಮ್ಮ ಕಂಪನಿಯಲ್ಲಿ ಕ್ಯಾನ್ಸರ್‌ ಗೆ ಸಂಬಂಧಿಸಿದ ಔಷಧಿಗಳ ಬಗ್ಗೆ ಸಂಶೋಧನೆ ಪೂರ್ಣಗೊಂಡಿದ್ದು, 2 ಔಷಧಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಅವು ಆಲ್ಯೋ ಪಾಲಿ ಹರ್ಬ್‌ ಫಾರ್ಮ್ಯುಲೇಶನ್‌ ಗಳಾಗಿದ್ದು, ಸಪೋರ್ಟಿವ್ ‌ಥೆರಪಿ ಫಾರ್ ಕ್ಯಾನ್ಸರ್‌ ಆಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ