- ರಾಘವೇಂದ್ರ ಅಡಿಗ ಎಚ್ಚೆನ್.

ಜನಪ್ರಿಯ ಕನ್ನಡ ಧಾರಾವಾಹಿ ಶ್ರೀರಸ್ತು ಶುಭಮಸ್ತು ವೀಕ್ಷಕರ ಮನದಲ್ಲಿ ಭಾರೀ ಪ್ರಭಾವ ಬಿಟ್ಟಿದೆ. ಸೀರಿಯಲ್‌ನಲ್ಲಿ ತುಳಸಿಯ ಮಗ ಸಮರ್ಥ್ ಪಾತ್ರಧಾರಿ, ನಟನೆ ಮತ್ತು ನಗುವಿನಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸದ್ಯ ಈ ಧಾರಾವಾಹಿ ಕೊನೆಗಾಣಿಸಿದೆ, ಆದರೆ ವೀಕ್ಷಕರ ನೆನಪಿನಲ್ಲಿ ಸೀರಿಯಲ್‌ ಇನ್ನೂ ಹಚ್ಚ ಹಸಿರಾಗಿದೆ.
ಇತ್ತೀಚೆಗೆ, ಸೀರಿಯಲ್‌ನಲ್ಲಿ ಸಮರ್ಥ್ ಪಾತ್ರಧಾರಿ ನಟ ದರ್ಶಿತ್ ಗೌಡ ನಿಜಜೀವನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಶಾಸ್ತ್ರೋಸ್ತವಾಗಿ ನಡೆದ ಈ ಮದುವೆಗೆ ಧಾರಾವಾಹಿ ತಂಡದ ನಟಿ ಸುಧಾರಾಣಿ, ನಟಿ ಸ್ವಪ್ನ ದೀಕ್ಷಿತ್‌, ಅರ್ಜುನ್‌ ಯೋಗಿ ಮತ್ತು ಹಿರಿಯ ನಟ ವೆಂಕಟ್‌ ರಾವ್ ಸೇರಿದಂತೆ ಹಲವು ಕಲಾವಿದರು ಹಾಜರಾಗಿ ಶುಭ ಹಾರೈಸಿದರು.
ಅಭಿಮಾನಿಗಳು ಈಗ ಧಾರಾವಾಹಿ ಪಾತ್ರಗಳ ನೆನಪು ಹಾಗೂ ನಿಜ ಜೀವನದ ಸಂತೋಷವನ್ನು ಒಟ್ಟಾಗಿ ಹಂಚಿಕೊಂಡಿದ್ದಾರೆ. ದರ್ಶಿತ್ ಗೌಡರ ವೈವಾಹಿಕ ಜೀವನಕ್ಕೆ ಶುಭವಾಗಲಿ ಎಂದು ಅಭಿಮಾನಿಗಳ ಆಶംസಗಳು ಹರಿಯುತ್ತಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ