ಆರೋಗ್ಯಕರವಾದ ಒಂದಿಷ್ಟು ವಿದೇಶೀ ವ್ಯಂಜನಗಳನ್ನು ತಯಾರಿಸುವ ಬಗ್ಗೆ ವಿವರವಾಗಿ ತಿಳಿಯೋಣವೇ......?

ಕೊರಿಯಾಂಡರ್ಚಿಲೀ ಸ್ಪಿನಾಚ್ಫ್ರೀಟರ್ಸ್

ಸಾಮಗ್ರಿ : 2 ಕಂತೆ ಶುಚಿಗೊಳಿಸಿ ಹೆಚ್ಚಿಟ್ಟ ಪಾಲಕ್‌ ಸೊಪ್ಪು, 1 ಕಪ್‌ ಕಡಲೆಹಿಟ್ಟು, ಅರ್ಧರ್ಧ ಕಪ್‌ ಅಕ್ಕಿಹಿಟ್ಟು ಹುಳಿಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸಿನ ಪೇಸ್ಟ್, ಕೊ.ಸೊಪ್ಪು/ಪುದೀನಾ ಪೇಸ್ಟ್, ಅರಿಶಿನ, ಓಮ, ಕರಿಯಲು ಎಣ್ಣೆ.

ವಿಧಾನ : ಮೊದಲು ಬಾಣಲೆಯಲ್ಲಿ (ಮಂದ ಉರಿಯಲ್ಲಿ) ಎಣ್ಣೆ ಕಾಯಲು ಬಿಡಿ. ಒಂದು ಬೇಸನ್‌ ಗೆ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿಕೊಳ್ಳಿ. ಇದಕ್ಕೆ ತುಸು ನೀರು ಬೆರೆಸಿಕೊಂಡು, ಪಕೋಡ ಮಿಶ್ರಣದ ಹದಕ್ಕೆ ಕಲಸಿಕೊಳ್ಳಿ. ಎಣ್ಣೆ ಬಿಸಿಯಾದಾಗ, ಅದರಿಂದ 2 ಚಮಚ ತೆಗೆದು ಮಿಶ್ರಣಕ್ಕೆ ಬೆರೆಸಿ, ಗೊಟಾಯಿಸಿ. ನಂತರ ಈ ಮಿಶ್ರಣದಿಂದ ಪ್ರತಿ ಸಲ ತುಸುವೇ ಹಿಟ್ಟು ತೆಗೆದುಕೊಳ್ಳುತ್ತಾ ಎಂದಿನಂತೆ ಪಕೋಡ ತಯಾರಿಸಿ. ಹೊಂಬಣ್ಣ ಬಂದ ಇವನ್ನು ಟಿಶ್ಯು ಪೇಪರ್‌ ಮೇಲೆ ಹರಡಿರಿ. ನಂತರ ಚಿತ್ರದಲ್ಲಿರುವಂತೆ ಬಗೆಬಗೆ ಚಟ್ನಿಗಳೊಂದಿಗೆ ಸವಿಯಲು ಕೊಡಿ.

ಈವ್ನಿಂಗ್ಪಾರ್ಟಿಗಳಿಗೆ ಹೊಸ ಬಗೆಯ ಸ್ಟಾರ್ಟರ್ಸ್ಬೇಕೆನಿಸಿದರೆ ಇದನ್ನೇಕೆ ನೀವು ಟ್ರೈ ಮಾಡಿ ನೋಡಬಾರದು....?

potato-salsa

ಪೊಟೇಟೋ ಸಾಲ್ಸಾ

ಸಾಮಗ್ರಿ :  4-5 ಆಲೂಗಡ್ಡೆ, ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಎಲ್.ಜಿ ಇಂಗು, ಓರಿಗ್ಯಾನೋ, ಕಸೂರಿಮೇಥಿ, ನೈಲಾನ್‌ ಎಳ್ಳು, ಮೆಯೋನೀಸ್‌.

ವಿಧಾನ : ಸಿಪ್ಪೆ ಹೆರೆದ ಆಲೂಗಳನ್ನು ಉದ್ದುದ್ದಕ್ಕೆ ಹೆಚ್ಚಿಕೊಂಡು, ಲಘುವಾಗಿ ಬೇಯಿಸಿಕೊಳ್ಳಿ. ನಂತರ ಅದರ ನೀರು ಬಸಿದು ಗಾಳಿಗೆ ಆರಲು ಬಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಎಲ್.ಜಿ ಇಂಗು, ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಒಂದೊಂದಾಗಿ ಹಾಕಿ ಬಾಡಿಸಿ. ಇದಕ್ಕೆ ಬೆಂದ ಆಲೂ ಸೇರಿಸಿ 2 ನಿಮಿಷ ಬಾಡಿಸಿ ಕೆಳಗಿಳಿಸಿ. ನಂತರ ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ ಇದನ್ನಿರಿಸಿ, 180 ಡಿಗ್ರಿ ಶಾಖದಲ್ಲಿ ಹದನಾಗಿ ಬೇಕ್‌ ಮಾಡಿ. ನಂತರ ಇವನ್ನು ಹೊರತೆಗೆದು, ಇದರ ಮೇಲೆ ಮೆಯೋನೀಸ್‌ ಸಿಂಪಡಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ. ಟೊಮೇಟೊ ಸಾಸ್‌ ಜೊತೆ ಸ್ಟಾರ್ಟರ್‌ ಆಗಿ ಊಟಕ್ಕೆ ಮೊದಲು ಸವಿಯಲು ಕೊಡಿ.

ಸಂಜೆ ವೇಳೆ ಮಳೆ ಬರುತ್ತಿರುವಾಗ ಇಂಥ ಸೊಗಸಾದ ಗ್ರಿಲ್ಡ್ ರೆಸಿಪಿಗಳಿದ್ದರೆ, ಎಂಥ  ಬೊಂಬಾಟ್ಅಲ್ಲವೇ.....?

Mushroom-kurkure

ಗರಿಗರಿ ಮಶ್ರೂಮ್

ಸಾಮಗ್ರಿ : 10-12 ಅಣಬೆ, ಒಂದಿಷ್ಟು ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ, ಅರ್ಧ ಕಪ್‌ ಮೈದಾ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ವೈಟ್‌ ಪೆಪ್ಪರ್‌, ಎಲ್.ಜಿ ಇಂಗು, ತುರಿದ ಚೀಸ್‌, ಬ್ರೆಡ್‌ ಕ್ರಂಬ್ಸ್, ಆರಾರೂಟ್‌, ಅಲಂಕರಿಸಲು ನಿಮ್ಮ ಅಚ್ಚುಮೆಚ್ಚಿನ ಸಲಾಡ್‌.

ವಿಧಾನ : ಮೊದಲು ಅಣಬೆ ಹಾಗೂ ಕ್ಯಾಪ್ಸಿಕಂ ಸಣ್ಣದಾಗಿ ಹೆಚ್ಚಿಡಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಪಕೋಡ ಹದಕ್ಕೆ ಮಿಶ್ರಣ ಕಲಸಿಡಿ. ಮೈದಾಗೆ ಆರಾರೂಟ್‌, ತುಸು ಉಪ್ಪು, ಮೆಣಸು, ಎಲ್.ಜಿ ಇಂಗು ಸೇರಿಸಿ ಬೋಂಡ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಕಲಸಿಡಿ. ಮಿಶ್ರಣದಿಂದ ಸಣ್ಣದಾಗಿ ಉಂಡೆ ತೆಗೆದುಕೊಂಡು, ಸುರುಳಿ ಮಾಡಿ, ಮೈದಾ ಮಿಶ್ರಣದಲ್ಲಿ ಅದ್ದಿಕೊಂಡು, ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಬರುವಂತೆ ಕರಿಯಿರಿ. ಚಿತ್ರದಲ್ಲಿರುವಂತೆ ಸಲಾಡ್‌ ಜೊತೆ ಗಾರ್ನಿಶ್‌ ಮಾಡಿ, ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ