ರಾಘವೇಂದ್ರ ಅಡಿಗ ಎಚ್ಚೆನ್.

‘ಕೆಂಪು ಹಳದಿ ಹಸಿರು’ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಸಮಾರಂಭವು ಇತ್ತೀಚೆಗೆ ನಡೆಯಿತು. ಸನ್‌ರೈಸ್ ಎಂಟರ್‌ಟೈನ್‌ಮೆಂಟ್ ಅಂಡ್ ಫಿಲಂಸ್ ಬ್ಯಾನರ್ ಮೂಲಕ ಪ್ರಸಾದ್‌ ಕುಮಾರ್ ನಾಯ್ಕ್ ನಿರ್ಮಿಸುತ್ತಿರುವ ಈ ಚಿತರವನ್ನು ಮಣಿ ಕಾರ್ತಿಕೇಯನ್‍ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಒಂದು ತುಳು ಚಿತ್ರವನ್ನು ನಿರ್ದೇಶನ ಮಾಡಿ ಅನುಭವವಿರುವ ಮಣಿ, ಇದೇ ಮೊದಲ ಬಾರಿಗೆ ಕನ್ನಡ ಚಿತ್ರನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ’ಸ್ಟಾಪ್, ಥಿಂಕ್ ಅಂಡ್ ಪ್ರೊಸೀಡ್ ಇನ್ ಲೈಫ್’ ಎಂಬ ಅರ್ಥಪೂರ್ಣ ಅಡಿಬರಹ ಇರಲಿದೆ.  ಚಿತ್ರವನ್ನು ಡಿಸೆಂಬರ್ 5 ರಂದು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

flowers
ನಿರ್ಮಾಪಕ ಪ್ರಸಾದ್ ಕುಮಾರ್ ನಾಯ್ಯ್ ಬಂಡವಾಳ ಹಾಕಿದ್ದು ಪ್ರಸಾದ್ ಈರ್ಲಾ ಮತ್ತು ಹರೀಸ್ ಧಾಸ್ಮಾನ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ನಿರ್ದೇಶಕ ಮಣಿ ಎಜೆ ಕಾರ್ತಿಕೆಯನ್ ಮಾತನಾಡಿ ವಿಭಿನ್ನ ಚಿತ್ರವನ್ನು ಕೆಂಪು ಹಳದಿ ಹಸಿರು ಚಿತ್ರದ ಮೂಲಕ ತೆರೆಗೆ ಕಟ್ಟಿಕೊಡಲಾಗಿದೆ, ಚಿತ್ರದ ಕಥೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುವ ವಿಶ್ವಾಸವಿದೆ, ಈ ಹಿಂದೆ ತಾವು ತುಳು ಚಿತ್ರ ಮಾಡಿದ್ದೆ. ಕನ್ನಡದಲ್ಲಿ ಹೊಸದು ಎಂದರು
ನಿರ್ಮಾಪಕ ಪ್ರಸಾದ್ ಕುಮಾರ್ ನಾಯ್ಕ್ ಮಾತನಾಡಿ ನಿರ್ದೇಶಕರು ಹೇಳಿದ ಇಷ್ಟವಾಯಿತು ಚಿತ್ರ ನಿರ್ಮಾಣ ಮಾಡಿದ್ದೇವೆ ಎಂದರು

flowers1

ನಾಯಕ ಶ್ರೀಯನ್ ದೀಪಕ್ ಮಾತನಾಡಿ ಹೊಸತನದಿಂದ ಕೂಡಿದ ಪಾತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದರೆ ಕಲಾವಿದೆ ಶೈಲಶ್ರೀ ಮೂಲ್ಕಿ, ಹಾಸ್ಯ ಕಲಾವಿದ ಅರವಿಂದ್ ಬೋಳಾರ್ ಸೇರಿದಂಎತ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.

flowers2

ಈ ಚಿತ್ರದಲ್ಲಿ ಶ್ರೀಹನ್‌ ದೀಪಕ್ ನಾಯಕನಾಗಿ ಅಭಿನಯಿಸಿದರೆ, ದಿವ್ಯಾ ಸುರೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಅರವಿಂದ್ ಬೋಳಾರ್, ’ಒಂದು ಮೊಟ್ಟೆಯ ಕಥೆ’ಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಶೈಲಾಶ್ರೀ ಮುಲ್ಕಿ, ಚಿಂದೋಡಿ ವಿಜಯ್‌ಕುಮಾರ್, ಶ್ರೀಜನ್, ಮೀನಾಕ್ಷಿ ಹರ್ತಿ, ಮಾನಸ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಮಂಜುನಾಥ್‍ ನಾಯಕ್‍ ಛಾಯಾಗ್ರಹಣ ಮತ್ತು ಮುಂಬೈ ಮೂಲದ ವಿಕಾಶ್‍ ವಿಶ್ವಕರ್ಮ ಸಂಗೀತ ಸಂಯೋಜಿಸಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ