- ರಾಘವೇಂದ್ರ ಅಡಿಗ ಎಚ್ಚೆನ್.

ಅಶ್ವಿನಿ ಪ್ರೊಡಕ್ಷನ್ಸ್ ಬೆಂಗಳೂರ ಅವರ ಸ್ವಾಮಿ ಶರಣಂ ಅಯ್ಯಪ್ಪನ ಕುರಿತಾದ ಭಕ್ತಿಪ್ರಧಾನ ಕನ್ನಡ ಚಲನಚಿತ್ರ ’ಮಣಿಕಂಠ’ ಚಲನಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮೀಪುರಂನ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಜರುಗಿತು.
ಮೂರು ದಶಕಗಳ ನಂತರ ’ಮಣಿಕಂಠ’ ಹೆಸರಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ಮುಹೂರ್ತಕ್ಕೆ ಶುಭ ಹಾರೈಸಲು ಕಾಶಿಯಿಂದ ಸಾಕ್ಷಾತ್ ಎಂಟು ನಾಗಸಾಧುಗಳು ಆಗಮಿಸಿದ್ದು ವಿಶೇಷವಾಗಿತ್ತು.

FB_IMG_1764393170622

ಸಂತೋಷ್ ಸಿಂಹ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಜೊತೆಗೆ ನಾಯಕನಾಗಿ ನಟಿಸುತ್ತಿದ್ದಾರೆ. ಹಾಗೂ ಇವರ ಇಬ್ಬರು ಮಕ್ಕಳು ಬಣ್ಣ ಹಚ್ಚುತ್ತಿದ್ದಾರೆ. ಒಂದು ರೀತಿಯಲ್ಲಿ ಇಡೀ ಕುಟುಂಬ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಪೂಜೆ ನಂತರ ಮಾತನಾಡಿದ ನಿರ್ದೇಶಕರು ಮಣಿಕಂಠನು ಪ್ರತಿಯೊಬ್ಬರ ಜೀವನದಲ್ಲಿ ಆವರಿಸಿಕೊಂಡು ಪವಾಡ ಮಾಡಿದ್ದಾನೆ. ಅದನ್ನು ಅನುಭವಿಸಿದಾಗ ಮಾತ್ರ ತಿಳಿಯುತ್ತದೆ. ಹುಡುಕುತ್ತಾ ಹೋದರೆ ಮುಗಿಯುವುದಿಲ್ಲ. ಇಪ್ಪತ್ತೈದು ವರ್ಷ ದೊಡ್ಡಪಾದಕ್ಕೆ ಹೋಗಿ ಭಕ್ತಿಯಿಂದ ಸ್ವಾಮಿ ದರ್ಶನ ಮಾಡಿದ್ದೇನೆ.

FB_IMG_1764393245945

ನನ್ನ ಬದುಕಲ್ಲಿ ನಡೆದ ಸತ್ಯ ಘಟನೆಗಳು, ಸ್ವಾಮಿಯ ಪವಾಡಗಳನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಅಲ್ಲದೆ ತಾಯಿ ಸೆಂಟಿಮೆಂಟ್, ಪ್ರೀತಿ ಎಲ್ಲವು ತುಂಬಿಕೊಂಡಿರುತ್ತದೆ.
ಹೆಣ್ಣು ಮಕ್ಕಳು ಋತುಮತಿ ಆದ ತರುವಾಯ ಹೋಗದೆ ಇದ್ದಾಗ ಅವರ ಯಾತನೆಗಳು, ಭಕ್ತರಿಗೆ ಕರಪುಸ್ವಾಮಿ ಬಗ್ಗೆ ತಿಳಿಯದ ಸಂಗತಿಗಳು. ಕೆಲವು ತೊಂದರೆಗೆ ಮಾಲಾಧಾರಿಗಳು ಸಿಲುಕಿಕೊಂಡಾಗ ಹೇಗೆ ಕರಪುಸ್ವಾಮಿ ಕಾಪಾಡುತ್ತಾರೆ.  ಪಾರಿವಾಳದ ಪವಾಡ ಹೀಗೆ ಹಲವು ವಿಷಯಗಳು ಬರುತ್ತವೆ.  ಗ್ರಾಫಿಕ್ಸ್ ಬಳಸದೆ ನೈಜ ಪವಾಡಗಳನ್ನು ತೋರಿಸಲಾಗುತ್ತದೆ ಎಂದು ನಿರ್ದೇಶಕ ಸಂತೋಷ್ ಸಿಂಹ ಮಾಹಿತಿ ಹಂಚಿಕೊಂಡರು.

FB_IMG_1764393138121

ಟೈಟಲ್ ರೋಲ್‌ದಲ್ಲಿ ಗುರು ಜೀವನ್‌ಸಿಂಹ, ವೇದನೆ ಪಾಡುವ ಪಾತ್ರದಲ್ಲಿ ತನುಶ್ರೀ ಸಿಂಹ, ತಾಯಿಯಾಗಿ ಬಿ ಎಸ್ ಮಂಜುಳಾ, ವೈಷ್ಣವಿ. ಎಸ್.ಡಿ, ಶರತ್.ಎಸ್.ಎಂ, ಲೋಕೇಶ ವಿದ್ಯಾಧರ, ಮಮತಾ, ಶಿವಣ್ಣ ಮೊದಲಾದವರು ಅಭಿನಯಿಸಲಿದ್ದಾರೆ. ಚೇತನ್‌ಕುಮಾರ್ ಸಾಹಿತ್ಯದ ಐದು ಗೀತೆಗಳಿಗೆ ಸ್ವರೂಪ್.ಆರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ-ಸಂಕಲನ ವರ್ಷಿತ್.ಎಸ್.ಎನ್, ಸಾಹಸ ಗಣೇಶ್, ಕಲೆ ಶರತ್ ಎಸ್ ಎಂ, ವರ್ಣಾಲಂಕಾರ

FB_IMG_1764393278669

ನಾರಾಯಣಸ್ವಾಮಿ, ಪಿಆರ್‌ಓ ಚಂದ್ರಶೇಖರ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಅಶ್ವಿನಿ ಸಂತೋಷ್ ಸಿಂಹ ನಿರ್ಮಾಪಕರು ಆಗಿದ್ದಾರೆ. ಬೆಂಗಳೂರು, ಶಬರಿಮಲೆ, ಪಂಪ, ದೊಡ್ಡಪಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ನಿರ್ಮಾಪಕಿ ಅಶ್ವಿನಿ ಹೇಳಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ