ಗೆಳೆತನ ವರ್ಣಿಸಲು ಪದಗಳೇ ಸಾಲವು!
ಭಾರತೀಯ ಚಿತ್ರರಂಗದಲ್ಲಿ ಗೆಳೆತನದ ಕುರಿತು ಎಂತೆಂಥ ಘಟಾನುಘಟಿ ಹಾಡುಗಳು ಬಂದು ಹೋಗಿವೆಯೋ….? `ಕುಚಿಕು… ಕುಚಿಕು… ನೀನು ಚಡ್ಡಿ ದೋಸ್ತು ಕಣೊ….’ `ಕಾಲವನ್ನು ತಡೆಯೋರೂ ಯಾರೂ ಇಲ್ಲ…. ನಿನ್ನಿಂದ ನನ್ನ ಬೇರೆ ಮಾಡಲು ಆಗೋಲ್ಲ,’ ತರಹವೇ ಬಾಲಿವುಡ್ ನ `ಯೇ ದೋಸ್ತಿ….. ಹಮ್ ನಹೀ ತೋಡೇಂಗೆ……’ ಇತ್ಯಾದಿ ಹಾಡುಗಳ ವರ್ಣನೆ ಜನಮಾನಸದಲ್ಲಿ ಅಜರಾಮರವಾಗಿ ಉಳಿದಿದೆ. ಇಂಥ ಒಂದು ಅವಿನಾಭಾವ ಸಂಬಂಧದ ಗೆಳೆತನ ಇಂದಿನ ಯಾಂತ್ರಿಕ, ಕಮರ್ಷಿಯಲ್, ಸ್ಪರ್ಧಾತ್ಮಕ ಯುಗದಲ್ಲಿ ಇರಲು ಸಾಧ್ಯವೇ ಎನಿಸುತ್ತದೆ! ಇಂದು ಜನ ತಮ್ಮ ಮನೆ, ಅಂಗಡಿ, ಪೇ ಪ್ಯಾಕೇಜ್, ದೊಡ್ಡ ಅಪಾರ್ಟ್ ಮೆಂಟ್, ದೊಡ್ಡ ಕಾರುಗಳ ಹಿಂದೆ ಓಡುತ್ತಿರುವಾಗ, ದೋಸ್ತಿ ಬಗ್ಗೆ ನಿಜಕ್ಕೂ ತಲೆ ಕೆಡಿಸಿಕೊಳ್ಳುವವರೂ ಉಂಟೆ? ಇಂಥ ಹಾಡುಗಳು ಇಂದಿನ ಜನರ ಮನಸ್ಸಿಗೆ ನಾಟುವುದೇ?
ಈ ಸಮಸ್ಯೆ ಕೇವಲ ಭೌತಿಕ ಸುಖದ ಹಿಂದೆ ಓಡುವ ಕುರುಡು ಪೀಳಿಗೆಯ ಕಾರಣದಿಂದಲ್ಲ, ಈ ಸಮಸ್ಯೆ ಹುಟ್ಟಿದ್ದೇ ಮೊಬೈಲ್, ಟಿವಿ, ಕಂಪ್ಯೂಟರ್ ಸ್ಕ್ರೀನ್ ಗಳ ಮೇಲೆ ಕೆಲವು ಕ್ಷಣಗಳಿಗಾಗಿ ಮಿಂಚಿ ಮರೆಯಾಗುವ, ಆಳವಾಗಿ ಮನದಲ್ಲಿ ಬೇರೂರಲಾಗದ, ಸದಾ ಓಡುತ್ತಿರುವ ಪದ ಪುಂಜಗಳಿಂದಾಗಿ!
ಶತಮಾನಗಳ ಹಿಂದೆ ಸಾಮಾನ್ಯ ಮಾನವರಿಗೆ ಓದಲು ಪದಗಳೇ ಸಿಗುತ್ತಿರಲಿಲ್ಲ, ಆಗ ಕೇವಲ ಕೇಳಿಸಿಕೊಳ್ಳುವುದು ಮಾತ್ರ ಇತ್ತು. ರಾಜ ಮತ್ತು ಧರ್ಮದ ದಲ್ಲಾಳಿಗಳು ಅವನ್ನು ಮತ್ತೆ ಮತ್ತೆ ಹೇಳಿಕೊಳ್ಳಲು ಒತ್ತಾಯಿಸುತ್ತಿದ್ದರು, ಆಗ ಮಾತ್ರ ಮಾಮೂಲಿ ಜನರ ಬುದ್ಧಿಗೆ ಅದು ಎಟುಕುತ್ತಿತ್ತು. ಅದರ ಅರ್ಥ ಒಂದಿಷ್ಟು ಹೊಳೆಯುತ್ತಿತ್ತು. ಅದರ ಹಿಂದೆ ಎಂಥ ಷಡ್ಯಂತ್ರ ಅಡಗಿತ್ತೋ ಅಥವಾ ಸರಸವೇ, ಆ ಪದಗಳು ನಮ್ಮ ಜೀವನದ ಅಭಿನ್ನ ಅಂಗವಾದವು.
ಪ್ರತಿ ಧರ್ಮ ಬೋಧಿಸುವುದೆಂದರೆ, 4-5 ಸಲ ಹೇಳಿದ ವಾಕ್ಯವನ್ನೇ ಹೇಳಿಸಿ, ಇವತ್ತಿಗೂ ಅದನ್ನೇ ಪ್ರಾಕ್ಟೀಸ್ ಮಾಡಿಸುತ್ತಾರೆ. ಅಂತೂ ಆಧುನಿಕ ಪ್ರಿಂಟಿಂಗ್ ಪ್ರೆಸ್ ಬಂದು, ಪದಗಳು ಅಚ್ಚಾಗ ತೊಡಗಿದಾಗ, ಈ ಪದಗಳು ಮತ್ತೆ ಮತ್ತೆ ಹೇಳಲ್ಪಡದೆ, ಬುದ್ಧಿಗೆ ನಾಟತೊಡಗಿತು. ಜನ ಇದನ್ನು ಸಲೀಸಾಗಿ ಫಾಲೋ ಮಾಡತೊಡಗಿದರು. ಹೀಗೆ ಹೇಳಿದ್ದನ್ನೇ ಹೇಳಿ ಉರುಹಚ್ಚುವ ಅಭ್ಯಾಸ ಕ್ರಮೇಣ ಕಡಿಮೆ ಆಗತೊಡಗಿತು. ಇಂಟರ್ ನೆಟ್ ಬಂದ ಮೇಲಂತೂ ಆಡಳಿತದ ಮಂದಿ, ಧರ್ಮಾಂಧರಿಗೆ ಹೊಸ ಜೀವ ನೀಡಿತು. ಅವರು ಸಹ ಮತ್ತೆ ತಮ್ಮ ಪದಗಳನ್ನು ಹೇಳುತ್ತಾ, ಹೇಳಿದ್ದನ್ನೇ ಹೇಳತೊಡಗಿದರು. ಬರೆದು ಕೊಟ್ಟಿದ್ದೇ ಆದರೂ, ಅದನ್ನು ಬೇಗ ಬೇಗ ಓದಿ ಗ್ರಹಿಸುವಷ್ಟರಲ್ಲಿ, ಸ್ಕ್ರೀನ್ ನಿಂದ ಅದು ಮಾಯವಾಗುತ್ತಿತ್ತು.
ಈ ಚುನಾವಣೆಗಳನ್ನೇ ಗಮನಿಸಿ. ನರೇಂದ್ರ ಮೋದಿಯವರ ಫೋಟೋ ಬೀದಿ ಬೀದಿಗಳಲ್ಲೂ ರಾರಾಜಿಸುತ್ತಿದೆ, ಆದರೆ ಅವರ ಕೆಲಸದ ಬಗ್ಗೆ ಅದು ಏನೂ ಹೇಳುತ್ತಿಲ್ಲ. ಅವರು ಹೇಳಿದ್ದನ್ನೇ ಹೇಳುವುದೆಂದರೆ, ನಾವು ಇಷ್ಟೆಲ್ಲ ಮಾಡಿದ್ದೇವೆ, ಅಷ್ಟೆಲ್ಲ ಮಾಡಿದ್ದೇವೆ ಅಂತ. ಇವೆಲ್ಲ ಕ್ಷಣಗಳಲ್ಲಿ ಮರೆತೇ ಹೋಗುತ್ತವೆ. ಮೋದಿ ಅಥವಾ ರಾಹುಲ್ ಗಾಂಧಿ ಇರಲಿ, ಸಾಮಾನ್ಯ ಜನರ ಹೃದಯ ಗೆಲ್ಲುವಂಥ ದೋಸ್ತಿ ಹೊಂದುವತ್ತಿಲ್ಲ.
ಅವರುಗಳು ಅಧಿಕಾರದ ಓಟದಲ್ಲಿ ಇಂದು ಮತದಾರರ ಜೊತೆ ಓಡುತ್ತಿದ್ದಾರೆ. ಚುನಾವಣೆ ನಂತರ ಅವರು ಮತದಾರರನ್ನು ದಬಾಯಿಸಿ, ಅವರ ಮೇಲೆ ತಮ್ಮ ಶಕ್ತಿ ಪ್ರದರ್ಶನದ ಮಹಲುಗಳನ್ನು ನಿರ್ಮಿಸುತ್ತಾರೆ.
ಇಂಥ ವಾತಾವರಣದಲ್ಲಿ ದೋಸ್ತಿ ಎಲ್ಲಿಂದ ಬದುಕುಳಿದೀತು? ಗೆಳೆಯರು ಎನಿಸಿದವರಿಗೆ 50 ಪದಗಳ ಒಂದು ಪತ್ರ ಬರೆಯಲಿಕ್ಕೂ ಯಾರಿಗೂ ಪುರಸತ್ತಿಲ್ಲ. ವಾಟ್ಸಪ್ ಮೆಸೇಜ್ ಮೂಲಕ ಸಾವಿರಾರು ಮಂದಿಗೆ ಗುಡ್ ಮಾರ್ನಿಂಗ್ ಹೇಳಿದ ಮಾತ್ರಕ್ಕೆ ಅದು ದೋಸ್ತಿ ಆಗೋಲ್ಲ. ಸತ್ತ ಮಂದಿ ಬಳಿ ಇರುವ ಫೋನಿಗೂ ಸಹ ಇಂಥವು ಬರುತ್ತದೆ, ಏಕೆಂದರೆ ಕಳುಹಿಸುವವರು ಮೋದಿ ಯಾ ರಾಹುಲ್ ರಂಥ ದೋಸ್ತುಗಳೇ! ವಿಮಾನದಲ್ಲಿ ಕುಳಿತ ಸಹಪ್ರಯಾಣಿಕರು ಹಾಯ್ ಹಲೋ ಸಹ ಹೇಳಲಾಗದಂಥ ಘನ ದೋಸ್ತಿ, ಈ ಮೊಬೈಲ್ ದೋಸ್ತಿ!
ದೋಸ್ತಿ ವ್ಯಕ್ತಪಡಿಸಲು ಉತ್ತಮ ಪದಗಳು ಬೇಕು. ಈ ಪದಗಳು ಬುದ್ಧಿಯಲ್ಲಿ ಅಚ್ಚಾಗಿದ್ದು, ಮನಸ್ಸುಗಳ ಮೂಲಕ ನಾಲಿಗೆಗೆ ಇಳಿದು, ಪೆನ್ ನಿಂದ ಹೊರಬರುತ್ತವೆ. ಇಂಥ ಅಮೂಲ್ಯ ಪದಗಳ ಪತ್ರಗಳನ್ನು ವರ್ಷಗಟ್ಟಲೆ ಕಾಯ್ದಿರಿಸಬಹುದು. `ಶೋಲೆ’ ಚಿತ್ರದ `ಏ ದೋಸ್ತಿ….’ ಹಾಡಿನಲ್ಲಿ ನಟಿಸಿದ್ದ ಅಮಿತಾಭ್ ಬಚ್ಚನ್ ಧರ್ಮೇಂದ್ರ, ಕಥೆಯ ಪ್ರಕಾರ ವಿದ್ಯಾವಂತರೋ ಅಲ್ಲವೋ ತಿಳಿಯದು. ಆದರೆ ಅವರು ತಮ್ಮ ಗಂಭೀರ ನಟನೆಯ ಆ್ಯಕ್ಷನ್ ನಿಂದ ದೋಸ್ತಿ ನಿಭಾಯಿಸಿದರು, ವಾಟ್ಸ್ ಆ್ಯಪ್/FBನಲ್ಲಿ `ಫ್ರೆಂಡ್’ ಎಂದಲ್ಲ. ಅವರಿಬ್ಬರೂ ಜೊತೆ ಜೊತೆಗೆ ಕೆಲಸ ಮಾಡಿದರು, ಊಟ ಮಾಡಿ, ಒಂದೇ ಕಡೆ ಮಲಗಿ, ಒಟ್ಟೊಟ್ಟಿಗೆ ಕಷ್ಟಸುಖ ಎದುರಿಸಿದರು. ಕಷ್ಟಸುಖದಲ್ಲಿ ಸದಾ ಜೊತೆ ನೀಡುವವರೇ ನಿಜವಾದ ದೋಸ್ತಿಗಳು. `ಸಂಗಂ’ ಚಿತ್ರದಲ್ಲಿ ರಾಜಕಪೂರ್ ಗೆ, ರಾಜೇಂದ್ರ ಕುಮಾರ್‌ನನ್ನು ತನ್ನ ಹನೀಮೂನ್ ಗೆ ವಿಧಿಯಿಲ್ಲದೆ ಬರುವಂತೆ ಮಾಡುವಷ್ಟು ಗಟ್ಟಿಯಾದ ಗೆಳೆತನವದು.
`ಪ್ರೇಮ’ ಎಂದರೆ ಇಲ್ಲಿ ವೈಜಯಂತಿ ಮಾಲಾ, ಮದುವೆಗೆ ಮುಂಚೆ ರಾಜೇಂದ್ರ ತನಗೆ ಬರೆದಿದ್ದ ಪತ್ರಗಳನ್ನು, ನಂತರ ಜೋಪಾನವಾಗಿ ಎತ್ತಿರಿಸಿಕೊಳ್ಳುವಂಥದ್ದು. `ದೋಸ್ತಿ’ ಎಂದರೆ ರಾಜೇಂದ್ರನದು, ತನ್ನ ಗೆಳೆಯ ಮಾಜಿ ಪ್ರೇಯಸಿ ಇದೀಗ ದಂಪತಿಗಳು, ಅವರ ವಿವಾಹ ಉಳಿಯಲಿ ಎಂದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುವಂಥದ್ದು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಥ ದೋಸ್ತಿ ಕಾಣಸಿಗಲು ಸಾಧ್ಯವೇ? ಇದಕ್ಕೆ ಕಾರಣ ಭೌತಿಕ ಸುಖದ ಹಿಂದೆ ಓಡುತ್ತಿರುವ ಜನ ಅಲ್ಲ, ಬರೆ ಶಬ್ದಗಳ ಅಭಾವದ ಕಾರಣ ಹೀಗಾಗುತ್ತಿದೆ. ಜನ ತಮ್ಮ ಸಂಗಡಿಗರಿಗೆ 4 ಸಾಲು ಪ್ರೀತಿಯಿಂದ, ತಮ್ಮ ಮನದಾಳದ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಲಾರರು. ಇಲ್ಲಿನ ಪ್ರತಿ ಸಂಬಂಧ ಸ್ಕ್ರೀನ್ ಮೇಲೆ ಮೂಡಿದ ಪದಗಳ ಹಾಗೆ, ಇಲ್ಲಿ ಕೆಲವು ಕ್ಷಣಗಳ ನಂತರ ಮತ್ತೇನೋ ಪದಗಳ ಕಾಣಿಸಿಕೊಳ್ಳುತ್ತವೆ. ಅದೇ ಕ್ಷಣಗಳಲ್ಲಿ ಇನ್ನಾರೋ ನಮ್ಮ ಜೀವನದಲ್ಲಿ ಬಂದಿರುತ್ತಾರೆ. ಹೀಗಾಗಿ ಹಿಂದಿನ ಪದ, ಮಾತು, ಸೀನ್, ಜನರನ್ನು ನೀವು ಮರೆತೇಬಿಡುವಂತೆ ಆಗಿಹೋಗುತ್ತದೆ.
ಧರ್ಮದಿಂದ ದಾರಿ ತಪ್ಪುವುದು ಸುಲಭ
ನಮ್ಮ ಹೆಣ್ಣುಮಕ್ಕಳಿಗೆ ಬಾಲ್ಯದಿಂದ ಹೇಳುವ ಒಂದೇ ಮಾತು ಅಂದ್ರೆ, ಪೂಜೆ ಪುನಸ್ಕಾರ, ವ್ರತನೇಮ, ಪ್ರಾರ್ಥನೆಗಳಿಂದ ಮಾತ್ರ ಹಣಕಾಸಿನ ಸುಖ ಲಭ್ಯ. ಬಾಲ್ಯದಿಂದ ಈ ಮಾತನ್ನು ಕೇಳಿ ಕೇಳಿ ಬೆಳೆದ ಅವರು, ಮುಂದೆ ವ್ರತ, ಉಪವಾಸ, ಗುಡಿಗೋಪುರದ, ತೀರ್ಥಯಾತ್ರೆ ಅನ್ನುವುದರಲ್ಲಿ ಕಳೆದುಬಿಡುತ್ತಾರೆ. ಇದರಿಂದ ಉತ್ತಮ ಅಂಕ ಸಿಗುತ್ತದೆ, ಸೌಂದರ್ಯ ಇಮ್ಮಡಿಸುತ್ತದೆ, ಉತ್ತಮ ಸಂಗಾತಿ ದೊರೆತು ಶ್ರೀಮಂತಳಾಗಬಹುದು ಎಂದೇ ಹೇಳುತ್ತಿರುತ್ತಾರೆ. ಬಾಲ್ಯದಲ್ಲಿ ಕಲಿತದ್ದನ್ನು ಮರೆಯಲು ಸಾಧ್ಯವೇ?
ಇಂದಿನ ಆಧುನಿಕ ತಂತ್ರಜ್ಞಾನದ ಸೋಶಿಯಲ್ ಮೀಡಿಯಾ, ಹೆಂಗಸರನ್ನು ಇಂಥ ಮರುಳು ಮಾತುಗಳಿಂದ ಚೆನ್ನಾಗಿ ಬ್ರೇನ್ ವಾಶ್ ಮಾಡುತ್ತವೆ, ಇದರಲ್ಲಿ ಚಮತ್ಕಾರಗಳ ಮಳೆ ಸುರಿಸಲಾಗುತ್ತದೆ. ಬಹುತೇಕ ಮೋಟಿವೇಶನ್ ವಿಡಿಯೋಗಳು ಹೇಗಿರುತ್ತವೆ ಎಂದರೆ, ಈ 7 ಕೆಲಸ ಮಾಡಿ, ನಿಮ್ಮ ಜೀವನ ಸುಖಮಯ ಆಗಿಬಿಡುತ್ತದೆ ಅಂತ. ಈ 7 ಕೆಲಸಗಳಲ್ಲಿ ಪರಿಶ್ರಮ ಸತ್ಯ, ತರ್ಕ ಏನೂ ಇರುವುದಿಲ್ಲ. ಪೂಜೆ ವ್ರತ ಮಾಡುತ್ತಲೇ ಮೆಸೇಜ್ ಸಹ ಕಳುಹಿಸುತ್ತಿರುತ್ತಾರೆ. ಇಂಥ ವಿಡಿಯೋಗಳಲ್ಲಿ ಮೈ ತುಂಬಾ ಚಿನ್ನದ ಒಡವೆ ಹೇರಿಕೊಂಡ ಯಂಗ್‌ಯುವತಿಯರ ಪರಿಕ್ರಮ ಮಾಡುತ್ತಿರುವಂತೆ ಕಂಡುಬರುತ್ತಾರೆ. ಇವರುಗಳ ಮೆಸೇಜ್ ಗಳಲ್ಲಿ ಏನು ಸಿಗಲಿದೆಯೋ ಅದು ಆಕಸ್ಮಿಕವಾಗಿ ಸಿಗಬೇಕಷ್ಟೆ ಎಂದಿರುತ್ತಾರೆ.
ಇದರ ಲಾಭವನ್ನು ಬೇರೆ ತರಹದ ಕಿಲಾಡಿಗಳು ಪಡೆಯುತ್ತಿರುತ್ತಾರೆ. ಮೊದಲನೆ ಬಗೆಯವರು ಧರ್ಮವನ್ನು ನೇರವಾಗಿ ಮಾರಾಟ ಮಾಡುತ್ತಾ, ದಾನ ದಕ್ಷಿಣೆ, ಹಣ ಗಿಟ್ಟಿಸುತ್ತಾರೆ. 2ನೇ ವರ್ಗದವರು, ಹೂಡಿಕೆಗಳ ಮೇಲೆ ಭಾರಿ ಲಾಭದ ಆಸೆ ತೋರಿಸುತ್ತಾರೆ. ತರ್ಕ, ಲೆಕ್ಕ ಗೊತ್ತಿಲ್ಲದ ಬುದ್ಧಿ ಇಂಥವನ್ನು ಬೇಗ ನಿಜ ಎಂದೇ ಒಪ್ಪಿಕೊಳ್ಳುತ್ತವೆ. ದೆಹಲಿಯಲ್ಲಿ, ಅದರಲ್ಲೂ ವಿದ್ಯಾವಂತರೇ ಹೆಚ್ಚಿರುವ ದಕ್ಷಿಣ ದೆಹಲಿಯಲ್ಲಿ, ಕಲಿತ ಒಬ್ಬ ಯುವತಿ, ಇಂಥದ್ದೇ ಮೋಸದ ಜಾಲಕ್ಕೆ ಸಿಲುಕಿ, ಸ್ವಲ್ಪ ಹಣ ಹೂಡಿ ಹೆಚ್ಚಿನ ಲಾಭ ಪಡೆ ಎಂಬ ಪ್ರಲೋಭನೆಗೆ ಒಳಗಾಗಿ ತನ್ನ 48 ಲಕ್ಷ ರೂ. ಕಳೆದುಕೊಂಡಳು!
ಆಕೆ ಮೆಂಬರ್ ಆದ ಒಂದು ಗ್ರೂಪಿನಲ್ಲಿ ನಕಲಿ ಜನರೇ ತುಂಬಿ ಹೋಗಿದ್ದರು. ಒಂದು ತಿಂಗಳಿಗೆ ಹಣ 2 ಪಟ್ಟು, 1 ವರ್ಷಕ್ಕೆ 5-6 ಪಟ್ಟು ಹೆಚ್ಚುತ್ತದೆ ಎಂಬ ದುರಾಸೆ ತೋರುತ್ತಿದ್ದರು. ಗ್ರೂಪ್ ಮೆಂಬರ್ಸ್ ಫೇಕ್ ಚೆಕ್, ಬ್ಯಾಂಕ್ ಅಕೌಂಟ್ ತೋರಿಸುತ್ತಾ ವಂಚಿಸುತ್ತಾರೆ. ಬಾಲ್ಯದಿಂದ ಇಂಥ ಪವಾಡಗಳಲ್ಲಿ ನಂಬಿಕೆ ಇರಿಸಿಕೊಂಡಿದ್ದ ಈ ಯುವತಿ, ಅಸಲಿ ನಕಲಿಗಳಲ್ಲಿ ಭೇದ ಎಣಿಸಲಾರದೆ, ತನ್ನ ಅರ್ಧ ಕೋಟಿ ಹಣ ಕಳೆದುಕೊಂಡ ನಂತರ ಪೊಲೀಸರ ಬಳಿ ಓಡಿಬಂದಳು.
ಇಂಥ ಕಿಡಿಗೇಡಿಗಳು ವಿಶ್ವದ ಎಲ್ಲಾ ಧರ್ಮದಲ್ಲಿಯೂ ಕಂಡುಬರುತ್ತಾರೆ. ಧರ್ಮ ಎಂಬ ನಕಲಿ ಜಮೀನಲ್ಲಿ ತಮ್ಮ ಸ್ವಾರ್ಥದ ಬೆಳೆ ಬೆಳೆಸುತ್ತಾರೆ. ಪ್ರತಿ ಧರ್ಮ ಹೇಳುವುದೆಂದರೆ 1 ರೂ. ಹೂಡಿ 10 ರೂ. ಪಡೆಯಿರಿ! ಪ್ರತಿ ಧರ್ಮ ಬಾಲ್ಯದಲ್ಲಿ ಎಲ್ಲಾ ಯಶಸ್ಸಿಗೂ ದೇವರೇ ಕಾರಣ ಎಂದು ಕಲಿಸುತ್ತದೆ. ಇದು ವಿಶ್ವದ ಎಲ್ಲ ಠಕ್ಕರಿಗೂ ಮೂಲ. ಧರ್ಮದ ಹೆಸರಿನಲ್ಲಿ ತಮ್ಮದೇ ಧರ್ಮದ ದುರ್ಬಲ ಹೆಣ್ಣುಮಕ್ಕಳು ಹಾಗೂ ಬೇರೆ ಧರ್ಮದವರ ಮೇಲೆ ಮಾಡಿರುವ ಶೋಷಣೆ ಯಾವ ರಾಜರು, ಲೂಟಿಕೋರರು, ಬಡ್ಡಿ ವಸೂಲಿಗರೂ ಮಾಡಿರಲಾರರು. ಧರ್ಮದಿಂದ ಬ್ರೇನ್ ವಾಶ್ ಆದಂಥ ಜನರನ್ನು ಯಾವ ರೀತಿ ಪ್ರಲೋಭನೆಗೆ ಒಡ್ಡಬಹುದು ಎಂಬುದು ಇಂಥ ಕಿಲಾಡಿಗಳಿಗೆ ಚೆನ್ನಾಗಿ ಗೊತ್ತು. ಸೋಶಿಯಲ್ ಮೀಡಿಯಾಗಳಲ್ಲಿ ರಾತ್ರೋರಾತ್ರಿ ಲಕ್ಷಾಂತರ ರೂ.ಗಳಿಸುವಂಥ ಪೋಸ್ಟ್ ಗಳನ್ನು ಹಾಕಿ, ಅಮಾಯಕರನ್ನು ದಾರಿ ತಪ್ಪಿಸುತ್ತಾರೆ. ಇಷ್ಟು ಭಾರಿ ಮೊತ್ತದ ಹಣ ಎಲ್ಲಿಂದ ಬಂತು ಎಂದು ಆಸ್ತಿಕರು ಚಿಂತಿಸಲಿಕ್ಕೂ ಹೋಗುವುದಿಲ್ಲ. ಇಂಥ ರಹಸ್ಯವನ್ನು ಏಕೆ ಬೇರೆಯವರ ಜೊತೆ ಹಂಚಿಕೊಳ್ಳಲಾಗುತ್ತಿದೆ ಎಂದೂ ಚಿಂತಿಸಲಿಕ್ಕೆ ಹೋಗುವುದಿಲ್ಲ. ಯಾರಿಗೆ ಇದರ ಮರ್ಮ ಗೊತ್ತೋ ಅವರೇಕೆ ಹೊಸಬರನ್ನು ಹುಡುಕಿ ಇದಕ್ಕೆ ಸೇರಿಸುತ್ತಿದ್ದಾರೆ? ಅವರೇ ಏಕೆ ಎಲ್ಲಾ ಹಣ ಗಳಿಸಿ ಅಂಬಾನಿ ಅದಾನಿ ಆಗಬಾರದು?
ಮೊದಲ ದಿನದಿಂದಲೇ ಗುಪ್ತ ಅಕೌಂಟ್ ಗಳಿಗೆ ಮಾತ್ರ ಹಣ ಕಳುಹಿಸಬೇಕು ಎಂದೇಕೆ ಹೇಳುತ್ತಿದ್ದಾರೆ? ಅವರು ತಮ್ಮ ಅಸಲಿ ವಿಳಾಸ ಏಕೆ ನೀಡುವುದಿಲ್ಲ? ಗ್ರೂಪ್ ನಲ್ಲಿದ್ದ ಮೇಲೆ ಅವರೇಕೆ ತಮ್ಮ ಪೂರ್ತಿ ನಿಜನಾಮ ತಿಳಿಸುವುದಿಲ್ಲ? ಇಂಥ ಮಂದಿ ದಿನೇದಿನೇ ತಮ್ಮ ಫೋನ್ ನಂಬರ್ ಬದಲಾಯಿಸುವುದೇಕೆ? ಇಂಥ ನೂರಾರು ಪ್ರಶ್ನೆಗಳನ್ನು ಅಂಥ ಮುಗ್ಧ ಯುವತಿಯರೇಕೆ ಕೇಳುವುದಿಲ್ಲ? ಏಕೆಂದರೆ ಇಂಥ ಮುಗ್ಧರು ಬಾಲ್ಯದಿಂದಲೇ ತಮ್ಮ ವಿವೇಕ ಎಂಬ ರೆಕ್ಕೆಗಳನ್ನು ಕಳೆದುಕೊಂಡಿರುತ್ತಾರೆ, ಈಗ ಹಾರಲಾಗದೆ ಕಂಗಾಲಾಗುತ್ತಾರೆ. ಈಗ ಇಂಥ ಗಿಣಿಗಳು ಸುಲಭವಾಗಿ ಯಾವ ಗಿಡುಗಕ್ಕಾದರೂ ಬೇಟೆ ಆಗಬಹುದು.
ಮಕ್ಕಳಿಂದ ಬಾಲ್ಯ ಕಸಿಯದಿರಿ
ಅಮೆರಿಕಾದ ಒಂದು ಸರ್ವೆ ಪ್ರಕಾರ, ಅಮೆರಿಕಾದಲ್ಲಿ ಒಬ್ಬ ಯುವ ತಾಯಿ 2 ಮಕ್ಕಳ ಜೊತೆ ಮನೆಯಲ್ಲಿದ್ದರೆ, ಅವಳು ಆ ಮಕ್ಕಳ ಪಾಲನೆ ಪೋಷಣೆ, ಆರೈಕೆ, ಅಡುಗೆ, ಬಟ್ಟೆಬರೆಗಳಿಗಾಗಿ ವ್ಯಯಿಸುವ ಕಾಲವನ್ನು ಔಟ್ ಸೋರ್ಸ್ ಮಾಡಿದಾಗ, 4,500-5,200 ಡಾಲರ್ ಆಗುತ್ತದೆ ಎಂದು ತಿಳಿಸಿದೆ. ಅಮೆರಿಕಾದಲ್ಲಿ ಸರಾಸರಿ ತಿಂಗಳಿಗೆ 3,000 ಗಳಿಸುವ ಕುಟುಂಬವನ್ನು ಮಧ್ಯಮ ವರ್ಗ ಎಂದೇ ಪರಿಗಣಿಸಲಾಗುತ್ತದೆ. ಇದರ ಅರ್ಥ, ಆ ಯುವ ತಾಯಿ ಮನೆಯಲ್ಲಿ ಏನು ಮಾಡುತ್ತಾಳೋ, ಅದೇ ಕೆಲಸನ್ನು ಬೇರೆಯವರ ಮನೆಯಲ್ಲಿ ಮಾಡಿದ್ದರೆ, ಸುಲಭವಾಗಿ 4,500 ಡಾಲರ್ ಅಂದ್ರೆ ಸರಾಸರಿಗಿಂತ ಹೆಚ್ಚಿನ ಹಣವನ್ನು ಸುಲಭವಾಗಿ ಗಳಿಸಬಹುದು.
ಭಾರತದಲ್ಲೂ ಹೆಚ್ಚು ಕಡಿಮೆ ಇದೇ ಸರಾಸರಿ ಲೆಕ್ಕವೇ ಬರುತ್ತದೆ. ಹ್ಞಾಂ, ಇಲ್ಲಿ ಮನೆಗಳಲ್ಲಿ ಕೆಲಸ ಮಾಡುವ ಆಯಾಗಳ ಸಂಬಳ ಇಷ್ಟು ಹೆಚ್ಚಲ್ಲ, ಅವರ ನಖರಾಗಳು ಖಂಡಿತಾ ಹೆಚ್ಚು. ಒಂದಿಷ್ಟು ಓದು ಕಲಿತ, ಬುದ್ಧಿವಂತೆ, ಸ್ಮಾರ್ಟ್ ತಾಯಿಗೆ ಯಾವುದೇ ಪರಿಸ್ಥಿತಿಯಲ್ಲೂ, ತಾನು ತನ್ನ ಮನೆಗಾಗಿ ದುಡಿದು ಗಳಿಸುವ ಆದಾಯಕ್ಕಿಂತ, ಹೊರಗಿನ ದುಡಿಮೆಯ ಹಣ ಹೆಚ್ಚಲ್ಲ ಎಂದು ಯಾವುದೇ ಪರಿಸ್ಥಿತಿಯಲ್ಲೂ ಭಾವಿಸಬಾರದು. ಹೊರಗಿನ ಕೆಲಸದಲ್ಲಿ ಅಂಥ ಸಂತೃಪ್ತಿ, ಸಂತೋಷ ಸಿಗಲು ಸಾಧ್ಯವೇ? ಒಂದು ದೊಡ್ಡ ವಿಷಯ ಅಂದ್ರೆ, ಮನೆಗಾಗಿ ದುಡಿಯುವ ತಾಯಿಯ ಸೇಲೆ ಬಲು ಸೂಕ್ಷ್ಮವಾದದ್ದು. ಮಕ್ಕಳು ಬೆಳೆದು ಶಾಲೆಗೆ ಹೋಗತೊಡಗಿದಂತೆ, ಈ ಯುವ ತಾಯಿಗೆ ಪ್ರಮೋಶನ್ ಬದಲು ಡಿಮೋಶನ್ ಆಗುತ್ತದೆ. ಆಗ ಅವಳು ಕೇವಲ ವಾಚ್ ಮ್ಯಾನ್ ಆಗಿ ಉಳಿಯುತ್ತಾಳೆ, ಫುಲ್ ಟೈಂ ತಾಯಿ ಆಗಿ ಉಳಿಯುವುದನ್ನು ತಪ್ಪಿಸುತ್ತಾಳೆ. ಮಕ್ಕಳಿಗೆ 10 ವರ್ಷ ಆಗುವವರೆಗೂ ಅಂದ್ರೆ ತಾಯಿಗೆ 35-40 ಆಗುವವರೆಗೂ, ಅವಳು ಕೇವಲ ಶೋಪೀಸ್ ಆಗಿ ಉಳಿದುಬಿಡುತ್ತಾಳೆ.
ಮಕ್ಕಳು ದೊಡ್ಡವರಾದಂತೆ, ಪ್ರೌಢತೆಯತ್ತ ತಿರುಗುವ ಈ ತಾಯಂದಿರ ಬಳಿ, ಚೆನ್ನಾಗಿ ಅಲಂಕರಿಸಿಕೊಂಡು ಕಿಟಿ ಪಾರ್ಟಿ, ಸತ್ಸಂಗ್ ಗಳಿಗೆ ಹೋಗುವುದನ್ನು ಬಿಟ್ಟರೆ ಬೇರೆ ಆಯ್ಕೆಯೇ ಇರುವುದಿಲ್ಲ. ಇವರ ಈ ವಯಸ್ಸಿನ ಘಟ್ಟದಲ್ಲಿ, ಅತ್ತೆ ಮಾವ ಅಥವಾ ತಾಯಿ ತಂದೆಯರಿಗೆ ಇಬ್ಬರೂ ಇಂಡಿಪೆಂಡೆಂಟ್ ಆಗಿದ್ದು, ಇವರನ್ನು ನೋಡಿಕೊಳ್ಳಲು ಯಾರೂ ಬೇಕಾಗುವುದಿಲ್ಲ.
ಈ ಎಲ್ಲಾ ಸತ್ಯಾಂಶಗಳ ಹೊರತಾಗಿಯೂ, ಅಮೆರಿಕಾದಂಥ ದೇಶದಲ್ಲೂ 25% ಯುವ ತಾಯಂದಿರು ಮನೆಗಳಲ್ಲೇ ಉಳಿಯುತ್ತಾರೆ. ಕೇವಲ 7% ತಂದೆಯರು ಮಾತ್ರ ಮನೆಯಲ್ಲಿ ಉಳಿಯುತ್ತಾರೆ, ತಾಯಂದಿರು ಕೆಲಸಕ್ಕೆ ಹೋಗಿರುತ್ತಾರೆ. ಮನೆಯಲ್ಲಿ ಉಳಿಯುವ ಯುವ ತಾಯಂದಿರು ಮಾಡುವ ಕೆಲಸಕ್ಕೆ ಬೆಲೆ ಕಟ್ಟಿದರೆ, ಅದು 20 ವರ್ಷಗಳಲ್ಲಿ 10 ಲಕ್ಷ ಡಾಲರ್ ಆಗುತ್ತದೆ. ಮನೆಯ ಕುಕಿಂಗ್, ಕ್ಲೀನಿಂಗ್, ವಾಶಿಂಗ್, ಶಾಪಿಂಗ್ ಕೆಲಸಗಳು ಹೈಟೆಕ್ ಆಗಿದ್ದಾಗ, ಈ ಶಕ್ತಿಯನ್ನು ಬರ್ಬಾದ ಮಾಡಲಾಗುತ್ತದೆ ಎಂದೇ ಅರ್ಥ. ಇದನ್ನು ತುಸು ಕಲಿತ ಯುವತಿಯೂ ಮಾಡಬಲ್ಲಳು. ಇದರ ಹೊರತಾಗಿಯೂ ತಾಯಂದಿರಿಗೆ ಹೇಳಲಾಗುವುದೆಂದರೆ, ಮಕ್ಕಳ ಹೆಸರಿನಲ್ಲಿ ತಮ್ಮ ಸ್ಥಾನ, ತಮ್ಮ ಶಕ್ತಿಯನ್ನು ಸ್ವಾಹಾ ಮಾಡಬೇಕು, ಅಷ್ಟೆ.
ಈಗ ತಂದೆ ತಹ ಈ ಕೆಲಸವನ್ನು ಶೇರ್ ಮಾಡುತ್ತಿದ್ದಾನೆ, ಅಲ್ಲಿಯೂ ಸಹ ಇದೇ ಫಾರ್ಮುಲಾ ಅನ್ವಯಿಸುತ್ತದೆ. ಮಕ್ಕಳ ಮೇಲಿನ ವ್ಯಾಮೋಹ, ಮಕ್ಕಳ ಪ್ರತಿಯೊಂದು ನಗು, ಪ್ರತಿ ಹೆಜ್ಜೆಯೂ ಹೆತ್ತವರ ಜೀವನದಲ್ಲಿ ಹಿಗ್ಗನ್ನು ಹೆಚ್ಚಿಸುತ್ತದೆ. ಆದರೆ 100-150 ವರ್ಷಗಳ ಹಿಂದೆ, ಅಮೆರಿಕಾದಲ್ಲೂ ಸಹ 8-10 ಮಕ್ಕಳಾಗುವುದು ಮಾಮೂಲೇ ಆಗಿತ್ತು. ಮಕ್ಕಳ ಈ ಖುಷಿ, ಈ ಮೊದಲ ಹೆಜ್ಜೆ, ಮಕ್ಕಳ ಗುಂಪು, ಕೂಗು ಗದ್ದಲ, ಜಗಳ ಬಿಡಿಸುವುದರಲ್ಲಿ ತಾಯಿಯ ಜೀವನ ಸವೆಯುತ್ತಿತ್ತು. ಮಾನವರು ಯಾವಾಗ ಮರ ಬಿಟ್ಟು ಕೆಳೆಗಿಳಿದು ಬಂದು ಹಳ್ಳಿ, ನಗರದಲ್ಲಿ ವಾಸಿಸಲು ಆರಂಭಿಸಿದರೋ, ಆಗಿನ 5 ಸಾವಿರ ವರ್ಷಗಳವರೆಗೂ, ತಾಯಂದಿರಿಗೆ ಮಕ್ಕಳ ಕಡೆ ನಿಗಾ ವಹಿಸಲು, ಯಾವ ವಿಶೇಷ ಅವಕಾಶ ಸಿಗುತ್ತಿರಲಿಲ್ಲ.
ಇಂದು ಟೆಕ್ನಿಕ್ಸ್ ಕಾರಣ, ಮಕ್ಕಳ ಸಾಕುವಿಕೆ ಸುಲಭವಾಗಿದೆ. ಅವರ ಮೇಲಿನ ವ್ಯಾಮೋಹ ನಿಮ್ಮದೇ ಆದ ಸ್ಪೆಷಲೈಝೇಶನ್ ನ್ನು ಹಾಳು ಮಾಡಬಾರದು, ಎಂಬುದನ್ನು ಗಮನಿಸುವುದು ಮುಖ್ಯ. ಧರ್ಮಸಮಾಜದ ಜಂಜಾಟಕ್ಕೆ ಎಂದೂ ಸಿಲುಕದಿರಿ.





