ನಾವೆಲ್ಲಾ ಇನ್ನೂ ಶಾಲೆಯಲ್ಲಿ ಓದುತ್ತಿದ್ದಾಗ ಏಪ್ರಿಲ್- 10 ಬಂತೆಂದರೆ ಒಂದು ರೀತಿಯ ಭಯ ಮತ್ತು ಆತಂಕ. ಹಿಂದಿನ ದಿನ ರಾತ್ರಿಯೆಲ್ಲಾ ನಿದ್ದೆಯೇ ಬಾರದೇ ಅಲ್ಲೇ ಹಾಸಿಗೆಯಲ್ಲಿ ಒದ್ದಾಡಿ ಬಿದ್ದಾಡಿ ಅರೇ ಬರೇ ನಿದ್ದೇ ಮಾಡಿ ಬೆಳಗ್ಗೆ ಸೂರ್ಯ ಉದಯಿಸುತ್ತಿದ್ದಂತೆಯೇ, ಬೇಗ ಬೇಗ ಎದ್ದು ಸ್ನಾನ ಸಂಧ್ಯಾವಂದನೆ ಮುಗಿಸಿ ದೇವರ ಸಮಸ್ಕಾರ ಮಾಡುವಾಗ ಎಂದಿನದ್ದಕ್ಕಿಂತಲೂ ಒಂದು ಚೂರು ವಿಶೇಷ ಅಸ್ಥೆಯಿಂದ ಮತ್ತು ಒಂದು ಹೆಚ್ಚಿನ ನಮಸ್ಕಾರ ಮಾಡುತ್ತಾ ದೇವರೇ, ಒಳ್ಳೆದು ಮಾಡಪ್ಪಾ, ಇವತ್ತು ಒಳ್ಳೆಯ ಮಾರ್ಕ್ಸ್ ಬಂದಿರಲಪ್ಪಾ ಅಂತ ಕೇಳ್ಕೊಳ್ಳೊ ದಿವಸ. ಹಾಂ!! ಇಷ್ಟೆಲ್ಲಾ ಪೀಠಿಕೆ ಹಾಕಿದ್ಮೇಲೆ ನೀವೂ ಸಹಾ ನಿಮ್ಮ ಬಾಲ್ಯದ ದಿನಗಳ ಪರೀಕ್ಷೆಯ ಫಲಿತಾಂಶದ ದಿನದ ನೆನಪಿನ ಅಂಗಳಕ್ಕೆ ಜಾರಿ ಹೋಗ್ತಾ ಇದ್ದೀರಿ ಅಲ್ವಾ?

april10

ನಾನು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುವಾಗ ಓಹೋ ಎಂದು ಹೇಳಿಕೊಳ್ಳುವಷ್ಟಿಲ್ಲದಿದ್ದರೂ ತರಗತಿಯಲ್ಲಿ ಮೊದಲ ಮೂರನೇ ರ್ಯಾಂಕಿನಲ್ಲಿ ಇರುತ್ತಿದ್ದನಾದರೂ ಪರೀಕ್ಷೆಯ ಫಲಿತಾಂಶದ ದಿನ ಒಂದು ರೀತಿಯ ಆತಂಕಕ್ಕೆ ಈಡು ಮಾಡುತ್ತಿತ್ತು. ಮನೆಯಲ್ಲಿ ತಂದೆ ತಾಯಿಯರು ಇಷ್ಟೇ ಅಂಕಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯ ನೇರವಾಗಿ ಮಾಡದೇ ಹೋದರೂ, ಪರೋಕ್ಷವಾಗಿ ಗಣಿತ ಮತ್ತು ವಿಜ್ಣಾನ ವಿಷಯದ ಅಂಕಗಳತ್ತಲೇ ಹರಿಯುತ್ತಿತ್ತು ಅವರ ಚಿತ್ತ. .

ಏಪ್ರಿಲ್ -9ನೇ ತಾರೀಖೇ ಅಮ್ಮಾ ಕೊಬ್ಬರಿ ಮಿಠಾಯಿ ಇಲ್ವೇ 7ಕಪ್ ಸ್ವೀಟ್, ಬಾದುಷಾ ಅಥವಾ ಗಟ್ಟಿಯಾದ ಮೈಸೂರ್ ಪಾಕ್ ತಯಾರಿಸಿ ಡಬ್ಬಿಯಲ್ಲಿ ಹಾಕಿ ಪರೀಕ್ಷೆ ಫಲಿತಾಂಶ ಬರಲಿ ಎಲ್ಲರಿಗೂ ಹಂಚೋಣ ಎಂದು ಸ್ಟೀಲ್ ಡಬ್ಬಿಯಲ್ಲಿ ಹಾಕಿ ಮೇಲೆ ಎತ್ತಿಟ್ಟಿರುತ್ತಿದ್ದರು. ಬಿಇಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅಪ್ಪಾನೂ ಸಹಾ ಅಂದು ದೈಹಿಕವಾಗಿ ಕೆಲಸದ ಜಾಗದಲ್ಲಿದ್ದರೂ ಮಾನಸಿಕವಾಗಿ ನನ್ನ ಫಲಿತಾಂಶದ ಕರೆಗಾಗಿಯೇ ಕಾಯುತ್ತಿದ್ದದ್ದು ನನಗೆ ಗೊತ್ತಿಲ್ಲದ ವಿಷವೇನಾಗಿರಲಿಲ್ಲ. ಅಕಸ್ಮಾತ್ ಗಣಿತದಲ್ಲಿ ಕಡಿಮೆ ಅಂಕ ಬಂದ್ರೇ ಅಪ್ಪ ಅಮ್ಮನಿಗೆ ಹೇಗಪ್ಪಾ ಮುಖ ತೋರಿಸುವುದು ಎನ್ನುವ ಭಯ ಬೇರೆ ಕಾಡುತ್ತಿತ್ತು.

result3

ಸರಿ ಆದದ್ದಾಗಲಿ ಗೋವಿಂದನ ದಯೆ ನಮಗಿರಲಿ ಎಂದು ಬೆಳಿಗ್ಗೆ ದೇವರಿಗೆ ಕೈ ಮುಗಿದು ಎಂದಿನಂತೆ ಅಪ್ಪ ಅಮ್ಮನ ಕಾಲಿಗೆ ನಮಸ್ಕಾರ ಮಾಡಿ ಅವರ ಆಶೀರ್ವಾದ ಪಡೆದುಕೊಂಡು ( ಅಪ್ಪಾ ಅಮ್ಮ ಜೀವಂತ ಇರುವವರೆಗೂ ಪಾಲಿಸಿಕೊಂಡು ಬಂದಿದ್ದ ಪದ್ದತಿ) ಅಮ್ಮಾ ಮಾಡಿದ್ದ ತಿಂಡಿಯನ್ನು ಒಲ್ಲದ ಮನಸ್ಸಿನಿಂದಲೇ ತಿಂದು ಶಾಲೆಗೆ ಹೋರಡುತ್ತಿದ್ದೆ. ದಾರಿಯಲ್ಲಿ ಸಿಗುವ ಸ್ನೇಹಿತರು ನೀನು ಬಿಡು ಮಗಾ ಪಾಸ್ ಆಗಿರ್ತೀಯಾ, ನಮ್ಮ ಕಥೆ ಹೇಳು ಎಂದಾಗ, ಸುಮ್ಮನೆ ದೇಶಾವರಿ ನಗೆ ಬೀರುತ್ತಿದ್ದನಾದರೂ, ಮನಸ್ಸಿನೊಳಗೆ ಎದೆ ಝಲ್ ಎನ್ನುತ್ತಿದ್ದಂದ್ದಂತೂ ಸುಳ್ಳಲ್ಲ.

result4

ಅದು 80ರ ದಶಕ ನಾನಾಗ 5ನೇ ತರಗತಿಯ ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿದ್ದೆ. ಅದೇ ಗುಂಗಿನಲ್ಲಿ ಶಾಲೆಗೆ ಹೋಗಿ ನಮ್ಮ ತರಗತಿಯಲ್ಲಿ ಕುಳಿತುಕೊಂಡ ಸ್ವಲ್ಪ ಹೊತ್ತಿನಲ್ಲಿಯೇ ನಮ್ಮ ವಿಮಲ ಮಿಸ್ ಅಂಕಪಟ್ಟಿಗಳನ್ನು ಹಿಡಿದುಕೊಂಡು ಬರುತ್ತಿರುವುದನ್ನು ನೋಡುತ್ತಿದ್ದರೇ ಎದೆಯ ಬಡಿತ ಇನ್ನೂ ಜೋರಾಗಿಯೇ ಬಡಿಯುತ್ತಿತ್ತು. ಅವರು ತರಗತಿಗೆ ಬಂದ ಕೂಡಲೇ ಎಲ್ಲರೂ ಎದ್ದು ನಿಂತು ಒಟ್ಟಾಗಿ ನಮಸ್ತೇ ಟೀಚರ್.. ಎಂದು ಹೇಳಿದರೆ, ಅದಕ್ಕೆ ಪ್ರತಿಯಾಗಿ ನಮಸ್ತೇ ಮಕ್ಕಳಾ ಎಂದು ಪ್ರತಿವಂದಿಸಿ ಹೂಂ.. ಕೂತ್ಕೊಳ್ಳಿ ಎಂದು ಹೇಳಿ ಅಂಕ ಪಟ್ಟಿಗಳನ್ನು ಹಿಡಿದು, ವಿಮಲ ಫಸ್ಟ್ ರ್ಯಾಂಕ್, ಕೃಷ್ಣಮೂರ್ತಿ ಸೆಕೆಂಡ್ ರ್ಯಾಂಕ್, ಶ್ರೀಕಂಠ ಮೂರನೇ ರ್ಯಾಂಕ್, ಜಯಶ್ರೀ ನಾಲ್ಕನೇ ರ್ಯಾಂಕ್, ಕನಕಮ್ಮಾ ಐದನೇ ರ್ಯಾಂಕ್ ಎಂದು ಮೊದಲ ಹತ್ತು ರ್ಯಾಂಕುಗಳನ್ನು ಪಡೆದ ಹೆಸರುಗಳನ್ನು ಜೋರಾಗಿ ಹೇಳಿ ಎಲ್ಲರಿಗೂ ಅಂಕಪಟ್ಟಿಗಳನ್ನು ಕೊಟ್ಟು ಜೂನ್ ಒಂದನೇ ತಾರೀಖು ಶಾಲೆ ಆರಂಭವಾಗುತ್ತದೆ ಆಗ ಮತ್ತೆ ಭೇಟಿಯಾಗೋಣ ಎಂದು ಹೇಳಿ ಎಲ್ಲರಿಗೂ ಶುಭವಾಗಲಿ ಎಂದು ಹರಸಿ ಹೋದರು 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ