ಗೆಳೆತನ ವರ್ಣಿಸಲು ಪದಗಳೇ ಸಾಲವು!

ಭಾರತೀಯ ಚಿತ್ರರಂಗದಲ್ಲಿ ಗೆಳೆತನದ ಕುರಿತು ಎಂತೆಂಥ ಘಟಾನುಘಟಿ ಹಾಡುಗಳು ಬಂದು ಹೋಗಿವೆಯೋ....? `ಕುಚಿಕು... ಕುಚಿಕು... ನೀನು ಚಡ್ಡಿ ದೋಸ್ತು ಕಣೊ....' `ಕಾಲವನ್ನು ತಡೆಯೋರೂ ಯಾರೂ ಇಲ್ಲ.... ನಿನ್ನಿಂದ ನನ್ನ ಬೇರೆ ಮಾಡಲು ಆಗೋಲ್ಲ,' ತರಹವೇ ಬಾಲಿವುಡ್‌ ನ `ಯೇ ದೋಸ್ತಿ..... ಹಮ್ ನಹೀ ತೋಡೇಂಗೆ......' ಇತ್ಯಾದಿ ಹಾಡುಗಳ ವರ್ಣನೆ ಜನಮಾನಸದಲ್ಲಿ ಅಜರಾಮರವಾಗಿ ಉಳಿದಿದೆ. ಇಂಥ ಒಂದು ಅವಿನಾಭಾವ ಸಂಬಂಧದ ಗೆಳೆತನ ಇಂದಿನ ಯಾಂತ್ರಿಕ, ಕಮರ್ಷಿಯಲ್, ಸ್ಪರ್ಧಾತ್ಮಕ ಯುಗದಲ್ಲಿ ಇರಲು ಸಾಧ್ಯವೇ ಎನಿಸುತ್ತದೆ! ಇಂದು ಜನ ತಮ್ಮ ಮನೆ, ಅಂಗಡಿ, ಪೇ ಪ್ಯಾಕೇಜ್‌, ದೊಡ್ಡ ಅಪಾರ್ಟ್‌ ಮೆಂಟ್‌, ದೊಡ್ಡ ಕಾರುಗಳ ಹಿಂದೆ ಓಡುತ್ತಿರುವಾಗ, ದೋಸ್ತಿ ಬಗ್ಗೆ ನಿಜಕ್ಕೂ ತಲೆ ಕೆಡಿಸಿಕೊಳ್ಳುವವರೂ ಉಂಟೆ? ಇಂಥ ಹಾಡುಗಳು ಇಂದಿನ ಜನರ ಮನಸ್ಸಿಗೆ ನಾಟುವುದೇ?

ಈ ಸಮಸ್ಯೆ ಕೇವಲ ಭೌತಿಕ ಸುಖದ ಹಿಂದೆ ಓಡುವ ಕುರುಡು ಪೀಳಿಗೆಯ ಕಾರಣದಿಂದಲ್ಲ, ಈ ಸಮಸ್ಯೆ ಹುಟ್ಟಿದ್ದೇ ಮೊಬೈಲ್‌, ಟಿವಿ, ಕಂಪ್ಯೂಟರ್‌ ಸ್ಕ್ರೀನ್‌ ಗಳ ಮೇಲೆ ಕೆಲವು ಕ್ಷಣಗಳಿಗಾಗಿ ಮಿಂಚಿ ಮರೆಯಾಗುವ, ಆಳವಾಗಿ ಮನದಲ್ಲಿ ಬೇರೂರಲಾಗದ, ಸದಾ ಓಡುತ್ತಿರುವ ಪದ ಪುಂಜಗಳಿಂದಾಗಿ!

ಶತಮಾನಗಳ ಹಿಂದೆ ಸಾಮಾನ್ಯ ಮಾನವರಿಗೆ ಓದಲು ಪದಗಳೇ ಸಿಗುತ್ತಿರಲಿಲ್ಲ, ಆಗ ಕೇವಲ ಕೇಳಿಸಿಕೊಳ್ಳುವುದು ಮಾತ್ರ ಇತ್ತು. ರಾಜ ಮತ್ತು ಧರ್ಮದ ದಲ್ಲಾಳಿಗಳು ಅವನ್ನು ಮತ್ತೆ ಮತ್ತೆ ಹೇಳಿಕೊಳ್ಳಲು ಒತ್ತಾಯಿಸುತ್ತಿದ್ದರು, ಆಗ ಮಾತ್ರ ಮಾಮೂಲಿ ಜನರ ಬುದ್ಧಿಗೆ ಅದು ಎಟುಕುತ್ತಿತ್ತು. ಅದರ ಅರ್ಥ ಒಂದಿಷ್ಟು ಹೊಳೆಯುತ್ತಿತ್ತು. ಅದರ ಹಿಂದೆ ಎಂಥ ಷಡ್ಯಂತ್ರ ಅಡಗಿತ್ತೋ ಅಥವಾ ಸರಸವೇ, ಆ ಪದಗಳು ನಮ್ಮ ಜೀವನದ ಅಭಿನ್ನ ಅಂಗವಾದವು.

ಪ್ರತಿ ಧರ್ಮ ಬೋಧಿಸುವುದೆಂದರೆ, 4-5 ಸಲ ಹೇಳಿದ ವಾಕ್ಯವನ್ನೇ ಹೇಳಿಸಿ, ಇವತ್ತಿಗೂ ಅದನ್ನೇ ಪ್ರಾಕ್ಟೀಸ್‌ ಮಾಡಿಸುತ್ತಾರೆ. ಅಂತೂ ಆಧುನಿಕ ಪ್ರಿಂಟಿಂಗ್‌ ಪ್ರೆಸ್‌ ಬಂದು, ಪದಗಳು ಅಚ್ಚಾಗ ತೊಡಗಿದಾಗ, ಈ ಪದಗಳು ಮತ್ತೆ ಮತ್ತೆ ಹೇಳಲ್ಪಡದೆ, ಬುದ್ಧಿಗೆ ನಾಟತೊಡಗಿತು. ಜನ ಇದನ್ನು ಸಲೀಸಾಗಿ ಫಾಲೋ ಮಾಡತೊಡಗಿದರು. ಹೀಗೆ ಹೇಳಿದ್ದನ್ನೇ ಹೇಳಿ ಉರುಹಚ್ಚುವ ಅಭ್ಯಾಸ ಕ್ರಮೇಣ ಕಡಿಮೆ ಆಗತೊಡಗಿತು. ಇಂಟರ್‌ ನೆಟ್‌ ಬಂದ ಮೇಲಂತೂ ಆಡಳಿತದ ಮಂದಿ, ಧರ್ಮಾಂಧರಿಗೆ ಹೊಸ ಜೀವ ನೀಡಿತು. ಅವರು ಸಹ ಮತ್ತೆ ತಮ್ಮ ಪದಗಳನ್ನು ಹೇಳುತ್ತಾ, ಹೇಳಿದ್ದನ್ನೇ ಹೇಳತೊಡಗಿದರು. ಬರೆದು ಕೊಟ್ಟಿದ್ದೇ ಆದರೂ, ಅದನ್ನು ಬೇಗ ಬೇಗ ಓದಿ ಗ್ರಹಿಸುವಷ್ಟರಲ್ಲಿ, ಸ್ಕ್ರೀನ್‌ ನಿಂದ ಅದು ಮಾಯವಾಗುತ್ತಿತ್ತು.

ಈ ಚುನಾವಣೆಗಳನ್ನೇ ಗಮನಿಸಿ. ನರೇಂದ್ರ ಮೋದಿಯವರ ಫೋಟೋ ಬೀದಿ ಬೀದಿಗಳಲ್ಲೂ ರಾರಾಜಿಸುತ್ತಿದೆ, ಆದರೆ ಅವರ ಕೆಲಸದ ಬಗ್ಗೆ ಅದು ಏನೂ ಹೇಳುತ್ತಿಲ್ಲ. ಅವರು ಹೇಳಿದ್ದನ್ನೇ ಹೇಳುವುದೆಂದರೆ, ನಾವು ಇಷ್ಟೆಲ್ಲ ಮಾಡಿದ್ದೇವೆ, ಅಷ್ಟೆಲ್ಲ ಮಾಡಿದ್ದೇವೆ ಅಂತ. ಇವೆಲ್ಲ ಕ್ಷಣಗಳಲ್ಲಿ ಮರೆತೇ ಹೋಗುತ್ತವೆ. ಮೋದಿ ಅಥವಾ ರಾಹುಲ್ ‌ಗಾಂಧಿ ಇರಲಿ, ಸಾಮಾನ್ಯ ಜನರ ಹೃದಯ ಗೆಲ್ಲುವಂಥ ದೋಸ್ತಿ ಹೊಂದುವತ್ತಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ