ಸರಸ್ವತಿ*
ಕಲ್ಲೂರ್ ಸಿನಿಮಾಸ್, ಪೆನ್ ಎನ್ ಪೇಪರ್ ಸ್ಟುಡಿಯೋಸ್ ಹಾಗೂ ಸ್ಕ್ರೀನ್ ಫಸ್ಟ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಶಾಂತ್ ಕಲ್ಲೂರು ನಿರ್ಮಿಸಿರುವ, ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿರುವ ಹಾಗೂ ಪ್ರತಾಪ್ ಗಂಧರ್ವ ನಿರ್ದೇಶನದ” Congratulations ಬ್ರದರ್” ಚಿತ್ರ
ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ರಾಜ್ಯದ ಯುವಜನತೆಯ ಮನಗೆದ್ದು, 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ, ಈ ಸಂತಸವನ್ನು ಹಂಚಿಕೊಳ್ಳಲು ಹಾಗೂ ಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ಸ್ಮರಣ ಫಲಕ ವಿತರಿಸುವ ಕಾರ್ಯಕ್ರಮ ನಡೆಯಿತು.
ಚಿತ್ರದಲ್ಲಿ ನಟಿಸಿರುವ ಹಿರಿಯ ನಟ ಶಶಿಕುಮಾರ್ ಅವರು ಚಿತ್ರತಂಡಕ್ಕೆ ಫಲಕ ವಿತರಣೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ನಿರ್ಮಾಪಕ ಪ್ರಶಾಂತ್ ಕಲ್ಲೂರು ಮಾತನಾಡುತ್ತಾ, ನಮ್ಮ ಚಿತ್ರ “Congratulations ಬ್ರದರ್” ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಸಿಗುತ್ತಿರುವ ಈ ಗೆಲುವಿಗೆ ಇಡೀ ಚಿತ್ರತಂಡ ಹಾಕಿದ ಎಫರ್ಟ್ ಹಾಗೂ ಮಾಧ್ಯಮ ನೀಡಿದ ಸಪೋರ್ಟ್ ಕಾರಣ, ಜನ ನಮ್ಮ ಚಿತ್ರವನ್ನು ಇಷ್ಟಪಟ್ಟು ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಇನ್ನೂ ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡುವ ಯೋಜನೆಯಿದೆ ಎಂದರು.
ನಂತರ ಹರಿ ಸಂತೋಷ್ ಮಾತನಾಡಿ ಚಿತ್ರದ ಈ ಗೆಲುವಿಗೆ ಎಲ್ಲರ ಪರಿಶ್ರಮವೇ ಕಾರಣ, ನಾವು ಪ್ರತಿ ಜಿಲ್ಲೆಗಳಿಗೂ ಭೇಟಿ ನೀಡಿ ಬಂದಿದ್ದರಿಂದ ಈ ಚಿತ್ರ ಕರ್ನಾಟಕದ ಜನರ ಮನ, ಮನೆಗಳನ್ನು ತಲುಪಿದೆ ಎಂದು ಹೇಳಿದರು.
ವಿತರಕ ಕೆ.ಮುನೀಂದ್ರ ಮಾತನಾಡುತ್ತಾ, ನಮ್ಮ ಎಂ.ಪಿ ಫಿಲಂಸ್ ಮೂಲಕ ರಿಲೀಸಾದ ಮೊದಲ ಚಿತ್ರವೇ ಜನರ ಮನ ಗೆದ್ದು ಯಶಸ್ವಿ ಪ್ರದರ್ಶನ ಕಾಣುವ ಜತೆಗೆ 25 ದಿನಗಳನ್ನೂ ಪೂರೈಸಿರುವುದು ನಮಗೆಲ್ಲ ಖುಷಿ ನೀಡಿದೆ. ಹೊಸ ನಿರ್ಮಾಪಕರಿಗೆ ಹೆಚ್ಚಿನ ಹೊರೆಯಾಗದಂತೆ ಚಿತ್ರಗಳನ್ನು ನಾವು ರಿಲೀಸ್ ಮಾಡಿಕೊಡುತ್ತೇವೆ. ಚಿತ್ರರಂಗ ಹೆಚ್ಚಿನ ರೀತಿಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ನಂತರ ಚಿತ್ರದ ನಿರ್ದೇಶಕ ಪ್ರತಾಪ್ ಗಂಧರ್ವ, ನಾಯಕ ರಕ್ಷಿತ್ ನಾಗ್, ನಾಯಕಿ ಸಂಜನಾ ಚಿತ್ರದ ಯಶಸ್ಸಿನ ಕುರಿತಂತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.





