ಸರಸ್ವತಿ*

ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡು ದಾಖಲೆ ನಿರ್ಮಿಸಿರುವುದ್ದಲ್ಲದೆ, 100 ಕ್ಕೂ ಹೆಚ್ಚಿನ ಬಂಗಾರದ ಪದಕಗಳನ್ನು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗಳಿಸಿರುವ, ಭಾರತದ ಪ್ರಮುಖ ಪ್ರಶಸ್ತಿಗಳಾದ ಮಿಸ್ಟರ್ ಇಂಡಿಯಾ, ಭಾರತ ಶ್ರೀ, ಭಾರತ ಶ್ರೇಷ್ಠ ಹಾಗೂ ಕರ್ನಾಟಕದ ಪ್ರಮುಖ ಪ್ರಶಸ್ತಿ ಕರ್ನಾಟಕ ಶ್ರೇಷ್ಠ, ಕರ್ನಾಟಕ ಶ್ರೀ ಸೇರಿದಂತೆ ಏಕಲವ್ಯ ಪ್ರಶಸ್ತಿಯನ್ನು ಪಡೆದುಕೊಂಡಿರುವ ಜಿಮ್ ರವಿ ಅವರು ಭಾರತ ತಂಡದ ನಾಯಕ ಹಾಗೂ ಕೋಚ್ ಆಗಿ ಕೂಡ ಸೇವೆ ಸಲ್ಲಿಸಿದ್ದಾರೆ.

prashasthi

ಸಮಾಜಮುಖಿ ಕಾರ್ಯಗಳಲ್ಲೂ ಗುರುತಿಸಿಕೊಂಡಿರುವ ಜಿಮ್ ರವಿ, ದಕ್ಷಿಣ ಭಾರತದ ಹೆಸರಾಂತ ನಟರೂ ಹೌದು. ಅಷ್ಟೇ ಅಲ್ಲದೇ ಅಮೇರಿಕಾ, ಆಸ್ಟ್ರೇಲಿಯಾ, ಇಟಲಿ, ಸ್ಪೇನ್, ಟರ್ಕಿ, ಜರ್ಮನಿ, ಜಪಾನ್, ಫಿಲಿಪೈನ್ಸ್, ಫ್ರಾನ್ಸ್ ಮುಂತಾದ ದೇಶಗಳಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿರುವ ಜಿಮ್ ರವಿ ವಿದೇಶಗಳಲ್ಲೂ ಕೂಡ ಸಾಕಷ್ಟು ಪ್ರಶಸ್ತಿ ಪಡೆದು ಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ರವಿ ಜಿಮ್ ಅನ್ನು ನಡೆಸುತ್ತಿರುವ ಜಿಮ್ ರವಿ ಅವರು ಇವರೆಗೂ ಒಂದು ಲಕ್ಷ ಎಂಭತ್ತು ಸಾವಿರ ಜನರಿಗೆ ಟ್ರೈನಿಂಗ್ ನೀಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿರುವ ಹೆಮ್ಮೆಯ ಕನ್ನಡ ಸಂಘ ದುಬೈ, ಯು.ಎ.ಇ ಅವರು ರವಿ ಅವರಿಗೆ “ವಿಶ್ವ ಶ್ರೇಷ್ಠ ಕ್ರೀಡಾ ಪ್ರಶಸ್ತಿ 2025 ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪೂಜ್ಯ ನಂಜಾವಧೂತ ಸ್ವಾಮಿಗಳು, ಮಾಜಿ ಸಂಸದ ಪ್ರತಾಪ್ ಸಿಂಹ, ನಟ ಕೋಮಲ್, ಮಾಜಿ ಸಂಸದ ಮುನಿಸ್ವಾಮಿ, ನಿರ್ಮಾಪಕ ಶಂಕರ್ ಗೌಡ ಹಾಗೂ ದುಬೈ ಕನ್ನಡ ಸಂಘದ ಅಧ್ಯಕ್ಷರಾದ ವರದರಾಜೇ ಗೌಡ ಮುಂತಾದವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ